ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್..

ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಇದೇ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಇದೇ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಹೊಸ ಫೇಸ್‌ಲಿಫ್ಟ್ ಮತ್ತೊಮ್ಮೆ ಗ್ರಾಹಕರನ್ನು ಮೋಡಿ ಮಾಡುವ ತವಕದಲ್ಲಿದೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಹೊಸ ಎಂಜಿನ್ ಅನ್ನು ವಿನ್ಯಾಸಗೊಳಿಸಿರುವುದು ಮಾರುತಿ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಪ್ರಮುಖ ಬದಲಾವಣೆಯಾಗಿದ್ದು, ಬಿಡುಗಡೆಗು ಮುನ್ನ ದೇಶದ ಪ್ರಮುಖ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವ ವೇಳೆ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿರಲಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಈ ಬಾರಿ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿವೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಯಾಜ್ ಕಾರುಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‍‌ಗಳಲ್ಲಿ ಲಭ್ಯವಿದ್ದು, ವರದಿಗಳ ಪ್ರಕಾರ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ 1.3-ಲೀಟರ್ ಡಿಸೇಲ್ ಎಂಜಿನ್ ಬದಲಾಗಿ 1.5-ಲಿಟರ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗುತ್ತಿದೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಇದರ ಜೊತೆಗೆ ಮಾರುತಿ ಸುಜುಕಿ ಸಂಸ್ಥೆಯು ಇದೇ ಮೊದಲ ಬಾರಿಗೆ ಕೆ15-ಸೀರಿಸ್ ಪೆಟ್ರೋಲ್ ಎಂಜಿನ್ ಬಳಕೆ ಮಾಡುತ್ತಿದ್ದು, ಇದು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಲ್ಲಿ ಬಳಕೆಯಾಗುತ್ತಿರುವ ಅತಿ ವಿನೂತನ ಎಂಜಿನ್ ಮಾದರಿ ಎಂದು ಹೇಳಲಾಗುತ್ತಿದೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಇದಷ್ಟೇ ಅಲ್ಲದೇ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ(ಎಸ್‌ಹೆಚ್‌ವಿಎಸ್) ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಈ ವಿನೂತನ ತಂತ್ರಜ್ಞಾನ ಪಡೆದ ಮೊದಲ ಮಾರುತಿ ಸುಜುಕಿ ಕಾರು ಇದಾಗಿರಲಿದೆ. ಜೊತೆಗೆ ಇದಕ್ಕೂ ಹೆಚ್ಚಿನ ಮಟ್ಟದ ಕೆ15-ಬಿ ಎಂಜಿನ್ ಮಾದರಿಯು ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗುತ್ತಿರುವ ಫೇಸ್‌ಲಿಫ್ಟ್ ಎರ್ಟಿಗಾ ಕಾರುಗಗಳಲ್ಲಿ ಬಳಕೆ ಮಾಡಲಾಗಿದೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಆದ್ರೆ ದೇಶಿಯ ಕೆ15-ಸೀರಿಸ್ ಅತಿವಿನೂತನ ಮಾದರಿಯಾಗಿರಲಿದ್ದು, ಸದ್ಯ ಮಾರಾಟವಾಗುತ್ತಿರುವ ಕೆ14 ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚಿನ ಪವರ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ. ಹೀಗಾಗಿ ಹೊಸ ಪೆಟ್ರೋಲ್ ಎಂಜಿನ್‌ ಮಾದರಿಯು 103-ಬಿಎಚ್‌ಪಿ ಮತ್ತು 138-ಎನ್ಎಂ ಉತ್ಪಾದಿಸಬಲ್ಲವು.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಇನ್ನು ಡಿಸೇಲ್ ಎಂಜಿನ್‌ ಉನ್ನತೀಕರಣಕ್ಕೂ ವಿಶೇಷ ಒತ್ತು ನೀಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು 1.3-ಲೀಟರ್ ಡಿಸೇಲ್ ಯುನಿಟ್ ಬದಲಾಗಿ 1.5-ಲೀಟರ್ ಎಂಜಿನ್ ಬದಲಾಯಿಸುವ ಯೋಜನೆ ಹೊಂದಿದ್ದು, ಸದ್ಯಕ್ಕೆ 1.3-ಲೀಟರ್ ಡಿಸೇಲ್ ಎಂಜಿನ್ ಮಾದರಿಯನ್ನೇ ಬಿಡುಗಡೆಗೊಳಿಸಿ ಅವುಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ(ಎಸ್‌ಹೆಚ್‌ವಿಎಸ್) ತಂತ್ರಜ್ಞಾನ ಅಳವಡಿಸಲಿದೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಇವು ಪವರ್ ಔಟ್‌ಪುಟ್ ಹೆಚ್ಚಿಸುವಲ್ಲಿ ಸಹಕರಿಸಲಿದ್ದು, ಜೊತೆಗೆ ಇಂಧನ ಕಾರ್ಯಕ್ಷಮತೆಯನ್ನು ಸಹ ಸುಧಾರಿಸಿವೆ. ಈ ಮೂಲಕ ಮಾರುಕಟ್ಟೆಯಲ್ಲಿ ಸಿಯಾಜ್ ಪ್ರಮುಖ ಎದುರಾಳಿಗಾದ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋಕ್ಸ್‌ವ್ಯಾಗನ್ ವೆಂಟೋ, ಸ್ಕೋಡಾ ಕಾರುಗಳಿವೆ ತೀವ್ರ ಪೈಪೋಟಿ ನೀಡಲಿದೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ಸಿಯಾಜ್..

ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ 8 ಲಕ್ಷದಿಂದ 12 ಲಕ್ಷದವರೆಗೆ ಲಭ್ಯವಿರುವ ಸಿಯಾಜ್ ಕಾರುಗಳು ಹೊಸದಾಗಿ ಬಿಡುಗಡೆಯಾದ ನಂತರ ಕಾರಿನ ಬೆಲೆಯು ಇನ್ನು ಅಧಿಕಗೊಳ್ಳಬಹುದು ಎಂದು ಹೇಳಲಾಗಿದ್ದು, ಹೊಸ ಸಿಯಾಜ್ ಕಾರನ್ನು ಖರೀದಿ ಮಾಡಲು ಬುಕ್ಕಿಂಗ್ ಪ್ರಕ್ರಿಯೆಯನ್ನು ಜುಲೈನಿಂದ ಶುರುವಾಗಲಿದೆ ಎಂಬ ಮಾಹಿತಿ ಇದೆ.

Most Read Articles

Kannada
Read more on maruti suzuki sedan
English summary
A new 1.5 liter petrol engine to make debut on 2018 Maruti Suzuki Ciaz.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X