ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಸ್ಟನ್ ಮಾರ್ಟಿನ್ ಸಂಸ್ಥೆಯು ತನ್ನ ಬಹುನೀರಿಕ್ಷಿತ 2019ರ ವ್ಯಾಂಟೆಜ್ ಸೂಪರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 2.95 ಕೋಟಿಗೆ ನಿಗದಿಪಡಿಸಿಲಾಗಿದೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಆಸ್ಟನ್ ಮಾರ್ಟಿನ್ ಸಂಸ್ಥಯು ಹೊಸ ವಿನ್ಯಾಸಗಳೊಂದಿಗೆ ಅಭಿವೃದ್ಧಿಪಡಿಸಲಾಗಿರುವ ವ್ಯಾಂಟೆಜ್ ಕಾರುಗಳನ್ನು ಭಾರೀ ಬದಲಾವಣೆಗಳೊಂದಿಗೆ ಹೊರ ತರುತ್ತಿದ್ದು, ಸದ್ಯ ಬಿಡುಗಡೆಯಾಗಿರುವ ವ್ಯಾಂಟೆಜ್ ಮುಂಬರುವ ಡಿಸೆಂಬರ್ ಅವಧಿಯಲ್ಲಿ ಕಾರು ವಿತರಣೆ ನಡೆಯಲಿದೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಸದ್ಯ ಹೊಸ ಕಾರು ಬಿಡುಗಡೆಗೊಳಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವ ಆಸ್ಟನ್ ಮಾರ್ಟಿನ್ ಸಂಸ್ಥೆಯು ಭಾರತದಲ್ಲಿ ಕೇವಲ 20 ವ್ಯಾಂಟೆಜ್ ಕಾರುಗಳನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಿದೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಬೆಂಗಳೂರು ಮತ್ತು ಮುಂಬೈನಲ್ಲಿ ಈಗಾಗಲೇ ಹೊಸ ಕಾರು ಖರೀದಿಗಾಗಿ ಹಲವು ಗ್ರಾಹಕರು ಮುಂಗಡ ಪಾವತಿಸಿ ಕಾರು ಪಡೆದುಕೊಳ್ಳುವ ತವಕದಲ್ಲಿದ್ದು, ಈ ಹಿಂದಿನ ಮಾದರಿಗಿಂತ ಹೊಸ ಕಾರಿನಲ್ಲಿ ಶೇ.70 ರಷ್ಟು ಬದಲಾವಣೆ ತರಲಾಗಿದೆ ಎಂದು ಹೇಳಲಾಗಿದೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ವ್ಯಾಂಟೆಜ್ ಕಾರುಗಳು ಸೂಪರ್ ಕಾರು ಮಾದರಿಗಳಲ್ಲೇ ಅತಿ ವಿನೂತನ ಎಂಜಿನ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಳವಡಿಸಲಾಗಿರುವ ಹೊಸ ಮಾದರಿಯ ಫ್ರೇಮ್‌ಗಳು ಕಾರಿನ ಲುಕ್ ಹೆಚ್ಚಿಸಿವೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಹಾಗೆಯೇ ವ್ಯಾಂಟೆಜ್ ಕಾರಿನ ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆ ತಂದಿರುವ ಆಸ್ಟನ್ ಮಾರ್ಟಿನ್ ಸಂಸ್ಥೆಯು ರೂಮಿಯರ್ ಕ್ಯಾಬಿನ್ ಮತ್ತು ಎಎಂಜಿನಿಂದ ಎರವಲು ಪಡೆಯಲಾಗಿರುವ ಹೊಸ ಸೆಂಟ್ರಲ್ ಕನ್ಸೊಲ್ ಸೌಲಭ್ಯವು ಕಾರಿನ ಐಷಾರಾಮಿತನ ಮೆರಗು ತಂದಿವೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಎಎಂಜಿಯಿಂದ ಎರವಲು ಪಡೆಯಲಾಗಿರುವ 4.0-ಲೀಟರ್(4 ಸಾವಿರ ಸಿಸಿ) ಟ್ವಿನ್ ಟರ್ಬೋ ವಿ8 ಎಂಜಿನ್ ಹೊಂದಿರುವ ವ್ಯಾಂಟೆಜ್ ಕಾರುಗಳು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 503-ಬಿಎಚ್‌ಪಿ ಮತ್ತು 685-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಪಡೆದುಕೊಳ್ಳುವ ಗುಣ ವ್ಯಾಂಟೆಜ್ ಕಾರುಗಳಿದ್ದು, ಪ್ರತಿ ಗಂಟೆಗೆ ಗರಿಷ್ಠ 315 ಕಿ.ಮಿ ಟಾಪ್ ಸ್ಪೀಡ್ ಈ ಕಾರಿನಲ್ಲಿ ನೀಡಲಾಗಿದೆ. ಹೀಗಾಗಿಯೇ ವ್ಯಾಂಟೆಜ್ ಕಾರುಗಳು ಹಲವು ವಿಶ್ವದರ್ಜೆಯ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಸೂಪರ್ ಕಾರು ಪ್ರಿಯರಿಗಾಗಿ ವಿವಿಧ ಡ್ರೈವಿಂಗ್ ಮೋಡ್‌ಗಳನ್ನು ಸಹ ನೀಡಲಾಗಿದೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ವ್ಯಾಂಟೆಜ್ ಕಾರುಗಳು ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ಟ್ರ್ಯಾಕ್ ಎಂಬ ಮೂರು ಡ್ರೈವಿಂಗ್ ಮೋಡ್ ಸೌಲಭ್ಯಗಳಿದ್ದು, ಕಾರು ಚಾಲನೆಗಾಗಿ ಅನುಕೂಲಕರವಾಗುವಂತೆ ಕಾರಿನ ಸಸ್ಷೆಷನ್ ಅನ್ನು ಕೂಡಾ ಹೋಂದಾಣಿಕೆ ಮಾಡಿಕೊಳ್ಳುವ ಅವಕಾಶ ಈ ಕಾರಿನಲ್ಲಿದೆ.

ಅವಧಿಗೂ ಮುನ್ನವೇ ಭಾರತದಲ್ಲಿ 2019ರ ಆಸ್ಟನ್ ಮಾರ್ಟಿನ್ ವ್ಯಾಂಟೆಜ್ ಬಿಡುಗಡೆ

ಒಟ್ಟಿನಲ್ಲಿ ಸೂಪರ್ ಕಾರು ಪ್ರಿಯರ ಆಕರ್ಷಣೆ ಕಾರಣವಾಗಿರುವ 2019ರ ವ್ಯಾಂಟೆಜ್ ಕಾರುಗಳು ವರ್ಷಾಂತ್ಯಕ್ಕೆ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲಿದ್ದು, ಮರ್ಸಿಡಿಸ್ ಎಎಂಜಿ ಜಿಟಿ, ಫೋರ್ಷೆ 911 ಟರ್ಬೋ ಮತ್ತು ಆಡಿ ಆರ್8 ವಿ10 ಸೂಪರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2019 Aston Martin Vantage Launched In India; Priced at Rs 2.95 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X