ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

Written By:

ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಬನೆಯಾಗುತ್ತಿದ್ದು, ಪುರುಷರನ್ನು ಆಶ್ರಯಿಸುತ್ತಿಲ್ಲ. ಹಾಗಾಗಿ ತನ್ನದೇ ಆದ ಜೀವನಶೈಲಿಯನ್ನು ನಡೆಸಲು ಸಾಮರ್ಥ್ಯವನ್ನು ಹೊಂದಿರುವ ಮಹಿಳೆಯರು ತನ್ನ ಆಯ್ಕೆ ಹೀಗೆಯೇ ಇರುಬೇಕೇಂದು ಬಯಸುತ್ತಾರೆ. ಹೀಗಾಗಿ ಮಹಿಳೆಯರಿಗಾಗಿ ಸಂಚಾರಿ ಯೋಗ್ಯ ಟಾಪ್ 10 ಹ್ಯಾಚ್‌ಬ್ಯಾಕ್ ಕಾರುಗಳನ್ನು ಡ್ರೈವ್ ಸ್ಪಾರ್ಕ್ ಪ್ರಸ್ತುತಪಡಿಸುತ್ತಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ಪುರುಷರನ್ನು ಹೋಲಿಸಿದರೆ ಮಹಿಳೆಯರ ಕಾರು ಚಾಲನೆಯಲ್ಲಿ ಹಲವು ವ್ಯತ್ಯಾಸಗಳಿರುತ್ತದೆ. ಹಾಗಾಗಿ ಹೆಚ್ಚು ಸುರಕ್ಷಿತ, ಕಡಿಮೆ ನಿರ್ವಹಣಾ ವೆಚ್ಚ, ಇಂಧನ ಉಳಿತಾಯ ಹಾಗೂ ಕಡಿಮೆ ಬಜೆಟ್ ಕಾರುಗಳನ್ನು ಮಹಿಳೆಯರು ಖರೀದಿಸಬಹುದಾಗಿದೆ. ನಗರ ಪ್ರದೇಶದಲ್ಲಿ ಭಾರಿ ವಾಹನ ದಟ್ಟಣೆಯಿರುವುದರಿಂದ ಟ್ರಾಫಿಕ್‌ಗಳಿಗೆ ಹೊಂದಿಕೆಯಾಗುವ ಸಣ್ಣ ಕಾರುಗಳನ್ನು ಆಯ್ಕೆ ಮಾಡುವುದು ಹೆಚ್ಚು ಸೂಕ್ತವೆನಿಸಬಹುದು. ಹಾಗಿದ್ದರೆ ಮಹಿಳೆಯರಿಗಾಗಿ ದೇಶದಲ್ಲಿ ಲಭ್ಯವಿರುವ ಟಾಪ್ 10 ಕಾರುಗಳ ಪಟ್ಟಿಯನ್ನು ನೋಡೋಣ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

01. ಮಾರುತಿ ಸುಜುಕಿ ಆಲ್ಟೋ

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಪರಿಷ್ಕೃತ ಆವೃತ್ತಿ ಆಲ್ಟೊ 800 ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಕಾರು ಮಾದರಿಯಾಗಿರುವುದಲ್ಲದೇ ಮಹಿಳೆಯರಿಗೂ ಸೂಕ್ತವಾಗಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ರೂ. 3.50 ಲಕ್ಷದೊಳಗಿನ ಬಜೆಟ್‌ನಲ್ಲಿ ಲಭ್ಯವಿರುವ ಮಾರುತಿ ಆಲ್ಟೊ ಲೀಟರ್‌ಗೆ 22.74 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಎಸಿ ಸೇರಿದಂತೆ ಅನೇಕ ಸೌಲಭ್ಯಗಳು ಆಲ್ಟೊದಲ್ಲಿ ಅಡಗಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

02. ಹ್ಯುಂಡೈ ಇಯಾನ್

ಮಾರುತಿಗೆ ನಿಕಟ ಪೈಪೋಟಿ ನೀಡುತ್ತಿರುವ ಹ್ಯುಂಡೈ ಇಯಾನ್ ಕಾರನ್ನು ಸಹ ಮಹಿಳೆಯರನ್ನು ಆಯ್ಕೆ ಮಾಡಬಹುದಾಗಿದೆ. ಅದ್ಭುತ ವಿನ್ಯಾಸ ಹೊಂದಿರುವ ಇಯಾನ್ ಮಹಿಳೆಯರನ್ನು ಹೆಚ್ಚು ಆಕರ್ಷಿಸಬಲ್ಲದು.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ಆಲ್ಟೊಗಿಂತಲೂ ಕೊಂಚ ದುಬಾರಿಯಾಗಿದ್ದರೂ ವೈಶಿಷ್ಟ್ಯತೆಗಳಿಗೆ ಹೆಚ್ಚಿನ ಮಹತ್ವ ನೀಡುವುದಾದರೆ ಇಯಾನ್ ಆಯ್ಕೆ ಹೆಚ್ಚು ಸೂಕ್ತವಾಗಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.4.11 ಲಕ್ಷಕ್ಕೆ ಆರಂಭಿಕ ಬೆಲೆ ಹೊಂದಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

03. ನಿಸ್ಸಾನ್ ಮೈಕ್ರಾ

ಮಹಿಳೆಯರಿಗೆ ಚಾಲನೆ ಮಾಡಲು ಅನುಕೂಲಕರವಾಗುವ ಕಾರು ಮಾದರಿಗಳಲ್ಲಿ ನಿಸ್ಸಾನ್ ಮೈಕ್ರಾ ಕೂಡಾ ಒಂದಾಗಿದ್ದು, ಅತ್ಯತ್ತಮ ಬೆಲೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಚಾಲಿತ ಮೈಕ್ರಾ 19.34 ಕಿ.ಮೀ ಲೀಟರ್ ಮೈಲೇಜ್ ನೀಡಲಿದ್ದು, ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ 140 ಏನ್ ಎಂ ತಿರುಗುಬಲದಲ್ಲಿ 76 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ಎಕ್ಸ್ ಶೋರಂ ಬೆಲೆಗಳ ಪ್ರಕಾರ ರೂ. 5.99 ಲಕ್ಷದಿಂದ ರೂ.7.23 ಲಕ್ಷಕ್ಕೆ ಖರೀದಿಸಬಹುದಾಗಿದ್ದು, ಡೀಸೆಲ್ ಎಂಜಿನ್ ಚಾಲಿತ ಮೈಕ್ರಾ ಮಾದರಿಗಳು ಪ್ರತಿ ಲೀಟರ್‌ಗೆ 23.08 ಕಿ.ಮೀ ಲೀಟರ್ ಮೈಲೇಜ್ ನೀಡಲಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

04. ಮಾರುತಿ ಸುಜುಕಿ ಸೆಲೆರಿಯೊ

ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಸೆಲೆರಿಯೊ ಕಾರುಗಳನ್ನು ಮಾರಾಟ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಈಗ ಕಂಪನಿಯು ಈ ಕಾರಿನ ಮತ್ತೊಂದು ಆವೃತಿಯಾದ ಸೆಲೆರಿಯೊ ಮುಂದುವರಿದ ಕಾರು ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

2014ರಲ್ಲಿ ಪ್ರಾರಂಭವಾದ ಬ್ರಾಂಡ್ ಸೆಲೆರಿಯೊ ಕ್ರಾಂತಿಕಾರಿ ಆಟೋ ಗೇರ್ ಶಿಫ್ಟ್(ಎಜಿಎಸ್) ತಂತ್ರಜ್ಞಾನ ಪಡೆದ ಮೊದಲ ಭಾರತೀಯ ಕಾರು ಎಂಬ ಖ್ಯಾತಿ ಪಡೆದಿದೆ. ನವೀನ ಸೆಲೆರಿಯೊ ಎಕ್ಸ್ ಕಾರಿನ ಎಲ್ಲಾ ರೂಪಾಂತರಗಳಲ್ಲಿ ಆಟೋ ಗೇರ್‌ಶಿಫ್ಟ್ ಆಯ್ಕೆಯನ್ನು ಹೊಂದಿರುತ್ತದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

05. ಟಾಟಾ ನ್ಯಾನೋ

ಎರಡು ಕಾರಣಗಳಿಂದಾಗಿ ಟಾಟಾ ನ್ಯಾನೋ ಮಹಿಳೆಯರಿಗೆ ಹೆಚ್ಚು ಸೂಕ್ತವೆನಿಸಿದೆ. ದೇಶದ ಅತಿ ಅಗ್ಗದ ಕಾರೆಂಬ ಕೀರ್ತಿಗೆ ಪಾತ್ರವಾಗಿರುವ ಟಾಟಾ ನ್ಯಾನೋ ಸಂಚಾರ ದಟ್ಟಣೆಯನ್ನು ಸುಲಭವಾಗಿ ನಿಭಾಯಿಸಬಲ್ಲದು.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ಜೊತೆಗೆ ಎರಡು ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ನ್ಯಾನೋ, ಪ್ರತಿ ಲೀಟರ್‌ಗೆ 25.4 ಕಿಲೋ ಮೀಟರ್ ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿದೆ. ಇತರ ಕಾರುಗಳಿಗೆ ಹೋಲಿಸಿದರೆ ನ್ಯಾನೋ ಉದ್ದವು ಕಿರಿದಾಗಿರುವುದರಿಂದ ಪಾರ್ಕಿಂಗ್ ಸುಲಭವಾಗಿ ಮಾಡಬಹುದಾಗಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

06. ರೆನಾಲ್ಟ್ ಕ್ವಿಡ್

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಕಾರುಗಳಲ್ಲಿ ರೆನಾಲ್ಟ್ ಕ್ವಿಡ್ ಕೂಡಾ ಉತ್ತಮ ಮಾರಾಟ ದಾಖಲಿಸುತ್ತಿದ್ದು, ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರನ ಬೇಡಿಕೆಗೆ ಅನುಗುಣವಾಗಿ ಕ್ವಿಡ್ ಸ್ಪೆಷಲ್ ಎಡಿಷನ್ ಆವೃತ್ತಿಯನ್ನು ಅಂತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ಕ್ವಿಡ್ ಕಾರುಗಳಲ್ಲಿ ಪ್ರಮುಖ ಮೂರು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮೊದಲ ಮಾದರಿಯು 0.8-ಲೀಟರ್ ಎಂಜಿನ್ ಸಾಮರ್ಥ್ಯ ಹೊಂದಿದ್ದರೆ ಎರಡನೇ ಆವೃತ್ತಿಯು 1.0-ಲೀಟರ್ ಎಂಜಿನ್ ಜೊತೆ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಮೂರನೇ ಆವೃತ್ತಿಯು 1.0-ಲೀಟರ್ ಎಂಜಿನ್ ಜೊತೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

07. ಹೋಂಡಾ ಬ್ರಿಯೋ

ಬ್ರಿಯೋ ಕಾರನ್ನು ಪರಿಚಯಿಸುವ ಮೂಲಕ ವಿನೂತನ ಮಾದರಿಯನ್ನು ಮಾರುಕಟ್ಟೆಗೆ ತಂದಿದ್ದ ಹೋಂಡಾ ಸಂಸ್ಥೆಯು ವಿಶೇಷವಾಗಿ ಭಾರತೀಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಈ ಕಾರನ್ನು ಸಿದ್ದಪಡಿಸಿದ್ದು, ಎಕ್ಸ್ ಶೋರಂ ಬೆಲೆಗಳ ಪ್ರಕಾರ 4.8 ಲಕ್ಷಕ್ಕೆ ಈ ಕಾರನ್ನು ಖರೀದಿ ಮಾಡಬಹುದಾಗಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

08. ಫೋಕ್ಸ್‌ವ್ಯಾಗನ್ ಪೊಲೊ

ಗ್ರಾಹಕರ ಬಳಕೆಗೆ ಹೆಚ್ಚು ಇಷ್ಟವಾದ ಕಾರು ಯಾವುದು ಎಂಬುವುದರ ಬಗ್ಗೆ ಇತ್ತೀಚೆಗೆ ಜೆಡಿ ಪವರ್ ನಡೆಸಿದ ಸಮೀಕ್ಷೆಯಲ್ಲಿ ಕುತೂಹಲದಾಯಕ ಫಲಿತಾಂಶ ಬಂದಿದ್ದು, ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ. 1 ಜನಪ್ರಿಯ ಕಾರು ಮಾದರಿಯಾಗಿ ಹೊರ ಹೊಮ್ಮಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ಗುಣಮಟ್ಟ, ಕಾರ್ಯಕ್ಷಮತೆ, ಕಾರಿನ ವಿನ್ಯಾಸ, ಮೈಲೇಜ್ ಮತ್ತು ಸುರಕ್ಷಾ ವಿಚಾರಗಳಲ್ಲಿ ಉತ್ತಮ ಮಾದರಿಯಾಗಿರುವ ಫೋಕ್ಸ್‌ವ್ಯಾಗನ್ ಕಾರುಗಳು ಎಕ್ಸ್ ಶೋರಂ ಪ್ರಕಾರ ರೂ.5.94 ಲಕ್ಷದಿಂದ 10.60 ಲಕ್ಷ ಬೆಲೆ ಹೊಂದಿವೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

09. ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ 800 ಮತ್ತು ಆಲ್ಟೋ ನಂತರ, ವ್ಯಾಗನ್ ಕಂಪನಿಗೆ ಕಂಪನಿಯು ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ, ಇದು ಭಾರತದಲ್ಲಿ ಪರಿಚಯಿಸಲ್ಪಟ್ಟ ನಂತರ 2 ಮಿಲಿಯನ್ ಕಾರುಗಳು ಮಾರಾಟವಾಗಿವೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

ಜೊತೆಗೆ ಮಹಿಳೆಯರಿಗೂ ಉತ್ತಮವಾಗಿರುವ ಈ ಕಾರು ಎಕ್ಸ್ ಶೋರಂ ಪ್ರಕಾರ ರೂ.4.52 ಲಕ್ಷದಿಂದ ರೂ.5.82 ಲಕ್ಷದ ತನಕ ಬೆಲೆ ಪಡೆದುಕೊಂಡಿದೆ.

ವುಮೆನ್ಸ್ ಡೇ ಸ್ಪೆಷಲ್: ಮಹಿಳೆಯರು ಇಷ್ಟಪಡಬಹುದಾದ ಟಾಪ್ 10 ಕಾರುಗಳು

10. ಫೋರ್ಡ್ ಪಿಗೊ

ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಫೋರ್ಡ್ ಫಿಗೊ ಆವೃತ್ತಿಯು ಮಹಿಳೆಯರಿಗಾಗಿ ಉತ್ತಮ ಆಯ್ಕೆಯಾಗಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದೆ.

ಜೊತೆಗೆ ದೆಹೆಲಿ ಎಕ್ಸ್‌ಶೋರಂ ಪ್ರಕಾರ ರೂ.5.20 ಲಕ್ಷದಿಂದ ರೂ.8.48 ಲಕ್ಷಕ್ಕೆ ಖರೀದಿಸಬಹುದಾಗಿದೆ.

Read more on top 10 women
English summary
Here is a list of the best cars for women in India.
Story first published: Thursday, March 8, 2018, 17:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark