10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಹಿಂದಿನ ಲೇಖನದಲ್ಲಿ ನಾವು ನಿಮಗೆ ಕೈಗಟ್ಟುವ ಬೆಲೆಯಲ್ಲಿ ದೊರೆಯುವ ಅತ್ಯುತ್ತಮ ಎಎಂಟಿ ಕಾರುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆದ್ರೆ ಇಂದು ನಾವು ನಿಮಗೆ ಭಾರತೀಯ ಮಾರುಕಟ್ಟೆಯಲ್ಲಿ 10 ಲಕ್ಷ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸೌಲಭ್ಯವುಳ್

By Rahul Ts

ಹಿಂದಿನ ಲೇಖನದಲ್ಲಿ ನಾವು ನಿಮಗೆ ಕೈಗಟ್ಟುವ ಬೆಲೆಯಲ್ಲಿ ದೊರೆಯುವ ಅತ್ಯುತ್ತಮ ಎಎಂಟಿ ಕಾರುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆದ್ರೆ ಇಂದು ನಾವು ನಿಮಗೆ ಭಾರತೀಯ ಮಾರುಕಟ್ಟೆಯಲ್ಲಿ 10 ಲಕ್ಷ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸೌಲಭ್ಯವುಳ್ಳ ಕಾರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಸದ್ಯ ದೇಶಿಯ ಮಾರುಕಟ್ಟೆ ದಿನಕ್ಕೊಂದು ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಲೇ ಇರುತ್ತವೆ. ಆದರೇ ಬಿಡುಗಡೆಯಾದ ಎಲ್ಲಾ ಕಾರುಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುವುದಿಲ್ಲ. ಅದರಲ್ಲಿ ಕೆಲವೇ ಕೆಲವು ಕಾರುಗಳು ಮಾತ್ರ ಗ್ರಾಹಕರನ್ನು ಸೆಳೆಯಬಲ್ಲವು. ಅಂತಹ ಜನಪ್ರಿಯ ಕಾರು ಮಾದರಿಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಟಾಟಾ ಟಿಯಾಗೊ

ಟಾಟಾ ಮೋಟಾರ್ಸ್ ಸಂಸ್ಥೆಯ ಹ್ಯಾಚ್‍ಬ್ಯಾಕ್ ಕಾರು ಮಾದರಿಯಾದ ಟಿಯಾಗೊ ಈಗಾಗಲೇ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಒಟ್ಟು 18 ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಆವೃತ್ತಿಯು ರೂ. 3.21 ಲಕ್ಷದಿಂದ ಶುರುವಾಗಿದ್ದು, ಡೀಸೆಲ್ ಆವೃತ್ತಿಯ ಕಾರುಗಳು ರೂ. 3.88ಲಕ್ಷದಿಂದ ಶುರುವಾಗಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಇದಲ್ಲದೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮಾದರಿಗಳಲ್ಲೂ ಲಭ್ಯವಿರುವ ಈ ಕಾರು 1199ಸಿಸಿ 3 ಸಿಲಿಂಡರ್ ರೆವಲ್ಟ್ರಾನ್ ಎಂಜಿನ್ ಪಡೆದಿದೆ. ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‍‍‍ಗೆ 23.84 ಕಿ.ಮಿ ಮೈಲೇಜ್ ನೀಡಲಿದ್ದು, ಡೀಸೆಲ್ ಆವೃತ್ತಿಯು ಪ್ರತಿಲೀಟರ್‍‍ಗೆ 27.38 ಕಿ.ಮಿ ಮೈಲೇಜನ್ನು ನೀಡುತ್ತದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಐ10 ಕಾರಿಗಿಂತ ಆಧುನಿಕ ವೈಶಿಷ್ಟ್ಯತೆಗಳನ್ನು ಪಡೆದುಕೊಂಡ ಎಲೈಟ್ ಐ20 ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರೆಯಲಿದ್ದು, ಒಟ್ಟು 10 ಮಾದರಿಗಳಲ್ಲಿ ದೊರೆಯತ್ತವೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಪೆಟ್ರೋಲ್ ಆವೃತ್ತಿಯ ಬೆಲೆಯು 6.13 ಲಕ್ಷದಿಂದ ಶುರುವಾಗಲಿದ್ದು, ಡೀಸೆಲ್ ಆವೃತ್ತಿಯು 7.54 ಲಕ್ಷದಿಂದ ಶುರುವಾಗಲಿದೆ. 1197ಸಿಸಿ 4 ಸಿಲಿಂಡರ್ ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸಿಗೆ ಜೋಡಿಸಲಾಗಿದ್ದು, ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‍‍ಗೆ 18.24 ಕಿ.ಮಿ ಮೈಲೆಜ್ ಮತ್ತು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಡೀಸೆಲ್ ಆವೃತ್ತಿಯು ಪ್ರತಿ ಲೀಟರ್‍‍ಗೆ 21.76 ಕಿ.ಮಿ ಮೈಲೇಜನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಮಾರುತಿ ಬಲೆನೊ

ಹ್ಯಾಚ್‍ಬ್ಯಾಕ್ ಕಾರು ಮಾದರಿಗಳಲ್ಲಿ ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಬಲೆನೊ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಲಭ್ಯವಿದ್ದು, 12 ವಿವಿಧ ಮಾದರಿಗಳಲ್ಲಿ ಈ ಕಾರು ದೊರೆಯಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಪೆಟ್ರೋಲ್ ಆವೃತ್ತಿಯ ಬೆಲೆಯು 5.78 ಲಕ್ಷದಿಂದ ಶುರುವಾಗಲಿದ್ದು, ಡೀಸೆಲ್ ಆವೃತ್ತಿಯು 7.35 ಲಕ್ಷದಿಂದ ಶುರುವಾಗಲಿದೆ. 1197ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯ 5 ಸ್ಪೀಡ್ ಗೇರ್‍‍ಬಾಕ್ಸ್ ಪ್ರತಿ ಲೀಟರಿಗೆ 21.1 ಕಿ.ಮಿ ಮೈಲೇಜನ್ನು ನೀಡುವುದು ಮತ್ತು ಡೀಸೆಲ್ ಆವೃತ್ತಿಯ 5 ಸ್ಪೀಡ್ ಗೇರ್‍‍ಬಾಕ್ಸ್‌ನೊಂದಿಗೆ ಪ್ರತಿ ಲೀಟರಿಗೆ 27.39 ಕಿ.ಮಿ ಮೈಲೇಜ್ ಅನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಫೋರ್ಡ್ ಇಕೊ ಸ್ಪೋರ್ಟ್

ಫೋರ್ಡ್ ಸಂಸ್ಥೆಯ ಇಕೋಸ್ಪೋರ್ಟ್ ಕಾರು ಒಟ್ಟು 10 ವಿವಿಧ ಮಾದರಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರೆಯಲಿದೆ. ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆಯು 7.31 ಲಕ್ಷ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 8.01 ಲಕ್ಷದಿಂದ ಶುರುವಾಗಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

1497ಸಿಸಿ 3 ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯು 5 ಸ್ಪೀಡ್ ಗೇರ್‍‍ಬಾಕ್ಸ್ ಪ್ರತಿ ಲೀಟರಿಗೆ 17 ಕಿ.ಮಿ ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯ 5 ಸ್ಪೀಡ್ ಗೇರ್‍‍ಬಾಕ್ಸ್ ಪ್ರತಿ ಲೀಟರಿಗೆ 23 ಕಿ.ಮಿ ಮೈಲೇಜನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಮಾರುತಿ ಸ್ವಿಫ್ಟ್

ಮಾರುತಿ ಸಂಸ್ಥೆಯ ಹ್ಯಾಚ್‍ಬ್ಯಾಕ್ ಕಾರ್ ಮಾರುತಿ ಸ್ವಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿ ಸೇರಿದಂತೆ 7 ವಿವಿಧ ಮಾದರಿಗಳಲ್ಲಿ ದೊರೆಯಲಿದೆ. ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆಯು 5.20 ಲಕ್ಷ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 6.54 ಲಕ್ಷದಿಂದ ಶುರುವಾಗಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

1197ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಪ್ರತಿ ಲೀಟರಿಗೆ 20.4 ಕಿ.ಮಿ ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ 25.2 ಕಿ.ಮಿ ಮೈಲೇಜನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಟಾಟಾ ನೆಕ್ಸಾನ್

2017ರಲ್ಲಿ ಬಿಡುಗಡೆಗೊಂಡ ಟಾಟಾ ಸಂಸ್ಥೆಯ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿ ಸೇರಿದಂತೆ ಒಟ್ಟು 10 ವಿವಿಧ ಮಾದರಿಗಳಲ್ಲಿ ದೊರೆಯಲಿದ್ದು, ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆಯು 6.41 ಲಕ್ಷ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 7.81ಲಕ್ಷದಿಂದ ಶುರುವಾಗಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

1198ಸಿಸಿ 3 ಸಿಲಿಂಡರ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸಿಗೆ ಜೋಡಿಸಲಾಗಿದೆ. ಇನ್ನು ಪ್ರತಿ ಲೀಟರ್ ಡಿಸೇಲ್‌ಗೆ 17 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಹ್ಯುಂಡೈ ಗ್ರ್ಯಾಂಡ್ ಐ10

2017ರಲ್ಲಿ ಬಿಡುಗಡೆಗೊಂಡ ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳು ಬಿಡುಗಡೆಯ ನಂತರ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲೇ 4 ವಿವಿಧ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಇದರ ಬೆಲೆಯು ಮಾರುಕಟ್ಟೆಯಲ್ಲಿ 4.55 ಲಕ್ಷದಿಂದ ಶುರುವಾಗಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಪೆಟ್ರೋಲ್ ಆವೃತ್ತಿಯು 1.2 ಲೀಟರ್ ಎಂಜಿನ್ ಹೊಂದಿದ್ದು, 82 ಬಿಹೆಚ್‍ಪಿ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 4 ಸ್ಪೀಡ್ ಆಟೊಮ್ಯಾಟಿಕ್ ಜೊತೆ 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್‌ಗೆ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಆವೃತ್ತಿಯು 1.2 ಲೀಟರ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸಿಗೆ ಜೋಡಿಸಲಾಗಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಮಾರುತಿ ಡಿಜೈರ್

ಡಿಜೈರ್ ಸೆಡಾನ್ ಆವೃತ್ತಿಯು ಮಾರುತಿ ಸಂಸ್ಥೆಯ ಮತ್ತೊಂದು ಜನಪ್ರಿಯ ಕಾರಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿ ಸೇರಿದಂತೆ ಒಟ್ಟು 14 ವಿವಿಧ ಮಾದರಿಗಳಲ್ಲಿ ದೊರೆಯಲಿದೆ. ಪೆಟ್ರೋಲ್ ಆವೃತ್ತಿಯ ಬೆಲೆಯು 5.86 ಲಕ್ಷಕ್ಕೆ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 7.25ಲಕ್ಷಕ್ಕೆ ಲಭ್ಯವಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

1197ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಪ್ರತಿ ಲೀಟರಿಗೆ 22 ಕಿಲೋಮೀಟರ್ ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ 28.4 ಕಿ.ಮಿ ಮೈಲೇಜ್ ಅನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಫೋರ್ಡ್ ಫಿಗೊ

ಫೋರ್ಡ್ ಸಂಸ್ಥೆಯ ಮತ್ತೊಂದು ಜನಪ್ರಿಯ ಕಾರಾದ ಫಿಗೊ ಕಾರ್ ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿ ಸೇರಿದಂತೆ ಒಟ್ಟು 11 ವಿವಿಧ ಮಾದರಿಗಳಲ್ಲಿ ದೊರೆಯಲಿದೆ. ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆಯು 5.19 ಲಕ್ಷ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 6.30 ಲಕ್ಷದಿಂದ ಶುರುವಾಗಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

1196ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಪ್ರತಿ ಲೀಟರಿಗೆ 18.16 ಕಿ.ಮಿ ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿದೆ 25.83 ಕಿ.ಮಿ ಮೈಲೇಜ್ ಅನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿ ಸೇರಿದಂತೆ ಒಟ್ಟು 13 ವಿವಿಧ ಮಾದರಿಗಳಲ್ಲಿ ದೊರೆಯಲಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮಾದರಿಗಳಲ್ಲಿಯೂ ಲಭ್ಯವಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಪೆಟ್ರೋಲ್ ಆವೃತ್ತಿಯ ಬೆಲೆಯು 4.92 ಲಕ್ಷ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 7.06 ಲಕ್ಷದಿಂದ ಶುರುವಾಗಲಿದೆ. 1197ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್‌ನೊಂದಿಗೆ ಪ್ರತಿ ಲೀಟರಿಗೆ 20.89 ಕಿ.ಮಿ ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್‌ನೊಂದಿಗೆ 26.80 ಕಿ.ಮಿ ಮೈಲೇಜ್ ಅನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಫೋಕ್ಸ್‌ವ್ಯಾಗನ್ ಎಮಿಯೊ

ವೋಲ್ಸ್ ವಾಗನ್ ಎಮಿಯೊ ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿ ಸೇರಿದಂತೆ ಒಟ್ಟು 13 ವಿವಿಧ ಮಾದರಿಗಳಲ್ಲಿ ದೊರೆಯಲಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮಾದರಿಗಳಲ್ಲಿಯೂ ಲಭ್ಯವಿದೆ. ಪೆಟ್ರೋಲ್ ಆವೃತ್ತಿಯ ಬೆಲೆಯು 5.50 ಲಕ್ಷ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 7.43 ಲಕ್ಷದಿಂದ ಶುರುವಾಗಲಿದ್ದು, 1198ಸಿಸಿ 3 ಸಿಲೆಂಡರ್ ಎಂಜಿನ್ ಹೊಂದಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಪೆಟ್ರೋಲ್ ಆವೃತ್ತಿಯು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಪ್ರತಿ ಲೀಟರಿಗೆ 17.83 ಕಿ.ಮಿ ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್‌ನೊಂದಿಗೆ 21.66 ಕಿ.ಮಿ ಮೈಲೇಜ್ ಅನ್ನು ನೀಡಲಿದೆ. ಅಲ್ಲದೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಡೀಸೆಲ್ ಎಂಜಿನ್ ಪ್ರತಿ ಲೀಟರ್‍‍ಗೆ 21.73 ಕಿ.ಮಿ ಮೈಲೇಜ್ ಅನ್ನು ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

ಫೋರ್ಡ್ ಆಸ್ಪೈರ್

ಫೋರ್ಡ್ ಆಸ್ಪೈರ್ ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿ ಸೇರಿದಂತೆ ಒಟ್ಟು 9 ವಿವಿಧ ಮಾದರಿಗಳಲ್ಲಿ ದೊರೆಯಲಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮಾದರಿಗಳಲ್ಲಿಯು ಲಭ್ಯವಿದೆ. ಪೆಟ್ರೋಲ್ ಆವೃತ್ತಿಯ ಬೆಲೆಯು 5.94 ಲಕ್ಷ ಮತ್ತು ಡೀಸೆಲ್ ಆವೃತ್ತಿಯ ಬೆಲೆಯು 7.44 ಲಕ್ಷದಿಂದ ಶುರುವಾಗಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ..

1196ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್‌ನೊಂದಿಗೆ ಪ್ರತಿ ಲೀಟರಿಗೆ 18.16 ಕಿ.ಮಿ ಮೈಲೇಜ್ ಮತ್ತು ಡೀಸೆಲ್ ಆವೃತ್ತಿಯು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್‌ನೊಂದಿಗೆ 25.83 ಕಿ.ಮಿ ಮೈಲೇಜ್ ಅನ್ನು ನೀಡಲಿದೆ. ಅಲ್ಲದೆ 6 ಸ್ಪೀಡ್ ಆಟೋಮ್ಯಾತಿಕ್ ಗೇರ್‍‍ಬಾಕ್ಸ್ ಡೀಸೆಲ್ ಎಂಜಿನ್ ಪ್ರತಿ ಲೀಟರ್‍‍ಗೆ 17 ಮೈಲೇಜ್ ಅನ್ನು ನೀಡಲಿದೆ.

Most Read Articles

Kannada
English summary
Best cars to buy under 10 lacs.
Story first published: Saturday, July 28, 2018, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X