TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಬಿಡುಗಡೆಗೊಂದ ಬಿಎಂಡಬ್ಲ್ಯೂ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು
ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ತಮ್ಮ ಹೊಸ ಎಂ2 ಕಾಂಪಿಟಿಷನ್ ಐಷಾರಮಿ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ಇದು ಬಿಎಂಡಬ್ಲ್ಯೂ ಸಂಸ್ಥೆಯಲ್ಲಿನ ಎಂ ವಿಭಾಗದಲ್ಲಿನ ಕಾರಿನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಕಾರು ಎನ್ನಲಾಗಿದೆ.
ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಂ2 ಕಾಂಪಿಟಿಷನ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 79.9 ಲಕ್ಷದ ಬೆಲೆಯನು ಪಡೆದುಕೊಂಡಿದ್ದು, ಈ ಬಾರಿ ಸಾಧಾರಣ ಮಾದರಿಯ ಕಾರ್ಗಿಂತಾ ಸ್ಪೋರ್ಟಿಯರ್ ವಿನ್ಯಾಸವನ್ನು ಪಡೆದುಕೊಂಡಿದೆ. ಪೂರ್ಣವಾಗಿ ಕಪ್ಪು ಥೀಮ್ ಮತ್ತು ಅಧಿಕ ಸಾಮರ್ಥ್ಯವುಳ್ಳ ಕಾರಾಗಿದೆ. ಇಂಡಿಯನ್ ಸ್ಪೆಕ್ ಎಂ2 ಕಾರು ಅಡ್ಜಸ್ಟಬಲ್ ಸ್ಪೋರ್ಟ್ಸ್ ಎಕ್ಸಾಸ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಮತ್ತೊಂದು ಕಡೆ ಎಂ2 ಕಾಂಪಿಟಿಷನ್ ಕಾರು ಒಳಭಾಗದಲ್ಲಿ ಕಾರ್ಬನ್ ಫೈಬರ್, ಅಲ್ಕಾಂಟರಾ ಮತ್ತು ಲೆಧರ್‍ನಿಂದ ಸಜ್ಜುಗೊಂಡ ಒಳಭಾಗವನು ಪಡೆದುಕೊಂಡಿದ್ದು, ಕ್ಯಾಬಿನ್‍ನ ಸುತ್ತಲೂ 'ಎಂ' ಎಂಬ ಬ್ಯಾಡ್ಜಿಂಗ್ ಅನ್ನು ಒದಗಿಸಾಗಿದೆ. ಮತ್ತು ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗು ಎಂ2 ಸ್ಪೋರ್ಟ್ಸ್ ಸೀಟ್‍ಗಳು ಕೂಡಾ ಇದೆ.
ಹೊಸ ಬಿಎಂಡಬ್ಲ್ಯೂ ಎಂ2 ಕಾಂಪಿಟಿಷನ್ ಕಾರು 3.0 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ ಎಂಜಿನ್ ಸಹಾಯದಿಂದ 405ಬಿಹೆಚ್‍ಪಿ ಮತ್ತು 550ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪದೆದಿದ್ದು, 7 ಸ್ಪೀಡ್ ಗೇರ್‍ಬಾಕ್ಸ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಬಿಎಂಡಬ್ಲ್ಯೂ ಎಂ2 ಕಾಂಪಿಟಿಷನ್ ಕಾರು ಕೇವಲ 4.2 ಸೆಕೆಂಡಿಗೆ 0 ಇಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನು ಪಡೆದಿದ್ದು, ಜೊತೆಗೆ ಗಂಟೆಗೆ 280 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಪಡೆದಿರಲಿದೆ.
ಇನ್ನು ಬಿಎಂಡಬ್ಲ್ಯೂ ಎಂ2 ಕಾಂಪಿಟಿಷನ್ ಕಾರುಗಳ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಸ್ಟ್ಯಾಂಡರ್ಡ್ 5 ಸ್ಪೋರ್ಕ್ ವೀಲ್ ಅಥವ 19 ಎಂಹಿನ್ ಕಾಂಪಿಟಿಷನ್ ವೀಲ್‍ಗಳನ್ನು ಪಡೆದುಕೊಂಡಿರಲಿದೆ.
ಇದಲ್ಲದೆ ಎಂ-ಸ್ಪೋರ್ಟ್ಸ್ ಲೆಧರ್ ಸೀಟ್ಸ್, ಆಪಲ್ ಕಾರ್‍ಪ್ಲೇ, ಹರ್ಮಾನ್ ಕಾರ್ಡನ್ ಆಡಿಯೊ ಸಿಸ್ಟಂ, ಬಿಎಂಡಬ್ಲ್ಯೂ ಆಪ್ಸ್ ಮತ್ತು ಬ್ಯುಲ್ಟ್ ಇನ್ ನ್ಯಾವಿಗೇಷನ್ ಅಳವಡಿಸಲಾಗಿದ್ದು, ಜೊತೆಗೆ ಎಂ2 ಫುಲ್ ಸೈಜ್ ಸ್ಪೇರ್ ವೀಲ್ ಅನ್ನು ಕೂಡ ಪದೆದಿರಲಿದೆ.
ಜೊತೆಗೆ ಕಾರಿನ ರೂಫ್‍ನ ಮೇಳೆ ಕಾರ್ಬನ್ ಫೈಬರ್ ಬಿಟ್ಸ್, ರಿಯರ್ ಸ್ಪಾಯ್ಲರ್, ರಿಯರ್ ಡಿಫ್ಯೂಸರ್, ಸೈಡ್ ಸ್ಕರ್ಟ್ಸ್, ಎಕ್ಸಾಸ್ಟ್ ಟಿಪ್ ಮತ್ತು ಬೂಟ್ ಲಿಡ್ ಅನ್ನು ಪಡೆದಿದ್ದು, 19 ಇಂಚಿನ ಫೊರ್ಜೆಡ್ ವೀಲ್ಸ್ ಮತ್ತು ಸುರಕ್ಷತೆಗಾಗಿ ಎಂ2 ಬ್ರೇಕಿಂಗ್ ಪ್ಯಾಕೇಜ್ ಅನ್ನು ಪಡೆದಿರಲಿದೆ.
ಬಿಎಂಡಬ್ಯೂ ಎಂ2 ಕಾಂಪಿಟಿಷನ್ ಕಾರು 5 ಬಣ್ಣಗಳಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಪೋರ್ಷೆ 718 ಕಾಯ್ಮನ್ ಎಸ್ ಮತ್ತು ಆಡಿ ಟಿಟಿ ಆರ್‍ಎಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.