ದೇಶದಲ್ಲಿನ ಈ ರಾಜ್ಯದಲ್ಲಿ ಮಾತ್ರ ಪೆಟ್ರೋಲ್‍ಗಿಂತ ಡೀಸೆಲ್‍ನ ಬೆಲೆಯೆ ಜಾಸ್ತಿಯಂತೆ

ಕಳೆದ ಮೂರು ತಿಂಗಳಿನಿಂದ ಇಂಧನಗಳ ಬೆಲೆಯಲ್ಲಿನ ಏರುಪೇರಿನ ಬಗ್ಗೆ ನಿಮಗೂ ಓದಿ ಓದಿ ಸಾಕಾಗಿರುತ್ತೆ ಅಲ್ವಾ.? ಆದ್ರೂ ಸಹ ಇಂಧನ ಬೆಲೆಗಳಲ್ಲಿ ಈ ಮಟ್ಟಿನ ಬೆಲೆ ಏರಿಕೆಯನ್ನು ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದು ಕೇಂದ್ರ ಸರ್ಕಾರಕ್ಕೆ ಅಭ್ಯಾಸವಾಗಿ ಹೋಗಿದೆ ಅಂತ ಈಗಾಗ್ಲೆ ಸಾಕಷ್ಟು ಜನ ಹೇಳಿದ್ದಾರೆ. ಎಷ್ಟು ಪ್ರತಿಭಟನೆಗಳಾದರೂ ಕೆಲ ರಾಜ್ಯ ಸರ್ಕಾರವು ತೆರಿಗೆಯನ್ನು ಕಡಿಮೆ ಮಾಡಿ ತಮ್ಮಿಂದಾದ ಮಟ್ಟಿಗೆ ತಮ್ಮ ಪ್ರಜೆಗಳಿಗೆ ಇಂಧನವನ್ನು ನೀಡುತ್ತಿದ್ದಾರೆ.

ದೇಶದಲ್ಲಿನ ಈ ಪ್ರಾಂತ್ಯದಲ್ಲಿ ಮಾತ್ರ ಪೆಟ್ರೋಲ್‍ಗಿಂತ ಡೀಸೆಲ್‍ನ ಬೆಲೆಯೆ ಜಾಸ್ತಿಯಂತೆ

ಸಾಮಾನ್ಯವಾಗಿ ಇಷ್ಟು ದಿನ ಡೀಸೆಲ್‍ನ ಬೆಲೆಗಿಂತಾ ಪೆಟ್ರೋಲ್ ಬೆಲೆಯ ಏರಿಕೆಯ ಬಗ್ಗೆ ನಾವು ತಿಳುದಿದ್ದೆವು, ಆದರೆ ಇಲ್ಲಿ ಮಾತ್ರ ಪೆಟ್ರೋಲ್ ಬೆಲೆಯು ಕಡಿಮೆಯಾಗುತ್ತಾ ಹೋದರೂ ಡೀಸೆಲ್‍ನ ಬೆಲೆಯು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. ಆ ಪ್ರದೇಶ ಯಾವುದೆಂದು ತಿಳಿಯಲು ಮುಂದಕ್ಕೆ ಓದಿ..

ದೇಶದಲ್ಲಿನ ಈ ಪ್ರಾಂತ್ಯದಲ್ಲಿ ಮಾತ್ರ ಪೆಟ್ರೋಲ್‍ಗಿಂತ ಡೀಸೆಲ್‍ನ ಬೆಲೆಯೆ ಜಾಸ್ತಿಯಂತೆ

ಒಡಿಶಾನಲ್ಲಿ ಪೆಟ್ರೋಲ್‍ಗಿಂತಾ ಡೀಸೆಲ್‍ನ ಬೆಲೆಯೆ ಹೆಚ್ಚಿದ ಕಾರಣ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಇಂದು (ಅಕ್ಟೋಬರ್ 22-2018) ರಂದು ಒಂದು ಲೀಟರ್‍‍ನ ಡೀಸೆಲ್ ರೂ. 80.40 ಮಾರಾಟವಾಗುತ್ತಿದ್ದರೆ ಇನ್ನು ಪೆಟ್ರೋಲ್ ಒಂದು ಲೀಟರ್‍‍ಗೆ ರೂ.80.27ಕ್ಕೆ ಮಾರಾಟವಾಗುತ್ತಿದೆ.

ದೇಶದಲ್ಲಿನ ಈ ಪ್ರಾಂತ್ಯದಲ್ಲಿ ಮಾತ್ರ ಪೆಟ್ರೋಲ್‍ಗಿಂತ ಡೀಸೆಲ್‍ನ ಬೆಲೆಯೆ ಜಾಸ್ತಿಯಂತೆ

ಸಾಮಾನ್ಯವಾಗಿ, ಕಡಿಮೆ ತೆರಿಗೆಗಳು, ಡೀಲರ್ ಕಮೀಷನ್‍ಗಳು ಮತ್ತು ಕಡಿಮೆ ಬೇಸ್ ಬೆಲೆಯ ಕಾರಣ ಪೆಟ್ರೋಲ್‍ದೆ ಹೋಲಿಸಿದರೆ ಡೀಸೆಲ್ ಬೆಲೆ ಕಡಿಮೆಯಾಗಿದೆ. ಆದಾಗ್ಯೂ, ಇತ್ತೀಚಿನ ತಿಂಗಳುಗಳಲ್ಲಿ, ಡೀಸೆಲ್ ಬೇಸ್ ಬೆಲೆಯು ತೈಲ ಕಂಪೆನಿಗಳ ತೆರಿಗೆಯಿಂದ ವಿಧಿಸಲ್ಪಟ್ಟಿರುವ ಬೆಲೆಯು ಸುಮಾರು ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ 5 ರೂ. ಹೆಚ್ಚಾಗಿದೆ.

ದೇಶದಲ್ಲಿನ ಈ ಪ್ರಾಂತ್ಯದಲ್ಲಿ ಮಾತ್ರ ಪೆಟ್ರೋಲ್‍ಗಿಂತ ಡೀಸೆಲ್‍ನ ಬೆಲೆಯೆ ಜಾಸ್ತಿಯಂತೆ

ಇದಲ್ಲದೆ, ರಾಜ್ಯ ಸರ್ಕಾರಗಳು ಡೀಸೆಲ್‍ಗಿಂತ ಪೆಟ್ರೋಲ್‍ಗೆ ಹೆಚ್ಚಿನ ವ್ಯಾಟ್ ಅನ್ನು ವಿಧಿಸುತ್ತಿವೆ, ಆದರೆ ಒಡಿಶಾ ಎರಡೂ ಇಂಧನಗಳ ಮೇಲೆ ಒಂದೇ ರೀತಿಯ 26 ಶೇಕಡಾ ವ್ಯಾಟ್ ಅನ್ನು ವಿಧಿಸುತ್ತರುವ ಕಾರಣ ಅಭೂತಪೂರ್ವ ಪರಿಸ್ಥಿತಿಗೆ ಇದು ಕಾರಣವಾಗಿದೆ.

ದೇಶದಲ್ಲಿನ ಈ ಪ್ರಾಂತ್ಯದಲ್ಲಿ ಮಾತ್ರ ಪೆಟ್ರೋಲ್‍ಗಿಂತ ಡೀಸೆಲ್‍ನ ಬೆಲೆಯೆ ಜಾಸ್ತಿಯಂತೆ

ಬಿಜೆಡಿ ಆಳ್ವಿಕೆಯ ರಾಜ್ಯದಲ್ಲಿ ಪರಿಸ್ಥಿತಿ ಆಡಳಿತ ಪಕ್ಷ ಮತ್ತು ಬಿಜೆಪಿಯ ನೇತೃತ್ವದ ವಿರೋಧ ಪಕ್ಷಗಳ ನಡುವಿನ ರಾಜಕೀಯ ಆರೋಪವನ್ನು ಪ್ರಚೋದಿಸಿತು. ಹೆಚ್ಚಿನ ಇಂಧನ ಬೆಲೆಗಳಿಗೆ ಕೇಂದ್ರದ ದೋಷಪೂರಿತ ನೀತಿಗಳನ್ನು ಸರಕಾರ ದೂಷಿಸಿದ್ದು, ಬಿಜೆಪಿ ಸರ್ಕಾರವು ಅಲ್ಲಿನ ರಾಜ್ಯ ಸರ್ಕಾರಕ್ಕೆ ಇಂಧನಕ್ಕೆ ಹಾಕುತ್ತಿರುವ ವ್ಯಾಟ್ ಅನ್ನು ಕಡಿಮೆ ಮಾಡಿ ಗ್ರಾಹಕರಿಗೆ ನೀಡಲು ಆದೇಶಿಸಿದೆ.

ದೇಶದಲ್ಲಿನ ಈ ಪ್ರಾಂತ್ಯದಲ್ಲಿ ಮಾತ್ರ ಪೆಟ್ರೋಲ್‍ಗಿಂತ ಡೀಸೆಲ್‍ನ ಬೆಲೆಯೆ ಜಾಸ್ತಿಯಂತೆ

'ಒಡಿಶಾ ಸ್ಥಿತಿಗೆ ಕೇಂದ್ರವೇ ಕಾರಣ'

ಪೆಟ್ರೋಲ್‌ಗಿಂತಲೂ ಡೀಸೆಲ್ ಬೆಲೆ ಏರಿಕೆ ಆಗಿರುವ ಬಗ್ಗೆ ಒಡಿಶಾದ ಹಣಕಾಸು ಸಚಿವ ಎಸ್‌.ಬಿ.ಬೆಹ್ರಾ ಅವರು ಕೇಂದ್ರವನ್ನು ದೂಷಿ ಮಾಡಿದ್ದು. ಕೇಂದ್ರ ಸರ್ಕಾರ ಹಾಗೂ ತೈಲ ಸಂಸ್ಥೆಗಳ ನಡುವೆ ಸರಿಯಾದ ಸಂವಹನ ಇಲ್ಲದೇ ಇರುವ ಕಾರಣಕ್ಕೆ ಹೀಗಾಗಿದೆ ಎಂದಿದ್ದಾರೆ.

Most Read Articles

Kannada
Read more on auto news petrol diesel
English summary
Diesel is costlier than petrol in this state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X