ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

By Praveen Sannamani

ಗೋವಾ ಪಾರ್ಟಿ ಪ್ರಿಯರ ಸ್ವರ್ಗ ಅಂದ್ರೆ ತಪ್ಪಾಗುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯಲ್ಲಿ ರುಚಿ ರುಚಿ ಮಧ್ಯ ಸಿಗುವ ಗೋವಾದಲ್ಲಿ ಕುಡಿದು ತಬ್ಬಿಬ್ಬಾಗುವ ಮಂದಿಯೇ ಹೆಚ್ಚು. ಇದೇ ಕಾರಣಕ್ಕೆ ಕಾನೂನು ಉಲ್ಲಂಘನೆ ಮಾಡುವವರ ಸಂಖ್ಯೆಗೂ ಅಲ್ಲಿ ಕಡಿಮೆಯಿಲ್ಲ. ಇದಕ್ಕಾಗಿಯೇ ಗೋವಾ ಪೊಲೀಸರು ಇದೀಗ ಹೊಸ ನಿಯಮವೊಂದನ್ನ ಜಾರಿ ಮಾಡಲು ಮುಂದಾಗಿದ್ದು, ಈ ನಿಯಮ ಉಲ್ಲಂಘನೆ ಮಾಡಿದ್ರೆ 7 ದಿನಗಳ ಕಾಲ ಜೈಲು ಕಂಬಿ ಎಣಿಸುವುದು ಗ್ಯಾರಂಟಿ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಹೌದು, ಈ ಹಿಂದೆ ಸಾರ್ವಜನಿಕವಾಗಿ ಮಧ್ಯ ಸೇವನೆ ಮಾಡುತ್ತಾ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಿರುವ ಗೋವಾ ಪೊಲೀಸರು ಇದೀಗ ವಾರಾಂತ್ಯದಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಒಂದು ವೇಳೆ ಹೊಸ ನಿಯಮಕ್ಕೆ ಗೋವಾ ಸರ್ಕಾರ ಒಪ್ಪಿಗೆ ಸೂಚಿಸಿದ್ದೇ ಆದಲ್ಲಿ ಗೋವಾ ಜೈಲುಗಳು ತುಂಬಿ ತುಳುಕುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಈಗಾಗಲೇ ಡ್ರಂಕ್ ಅಂಡ್ ಡ್ರೈವ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿರುವ ಗೋವಾ ಪೊಲೀಸರು ಭಾರೀ ಪ್ರಮಾಣದ ದಂಡವನ್ನು ವಸೂಲಿ ಮಾಡುತ್ತಿದ್ದಾರೆ. ಹೀಗಿದ್ದರೂ ಬದಲಾಗದ ಪರಿಸ್ಥಿತಿಯಲ್ಲಿ ಡ್ರಂಕ್ ಅಂಡ್ ಡ್ರೈವ್ ಆರೋಪಿಗಳ ವಿರುದ್ಧ ಜಾಮೀನು ರಹಿತು ವಾರಂಟ್ ಹೊರಡಿಸಿ ಕನಿಷ್ಠ ಒಂದು ವಾರ ಜೈಲಿಗಟ್ಟುವ ಪ್ಲ್ಯಾನ್ ಮಾಡಿದ್ದಾರೆ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಈ ಸಂಬಂಧ ಗೋವಾ ಸರ್ಕಾರಕ್ಕೆ ಮನವಿ ಮಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಮೋಟಾರ್ ವೆಹಿಕಲ್ ಆಕ್ಟ್ 1998 ತಿದ್ದುಪಡಿ ತರುವ ಡ್ರಂಕ್ ಅಂಡ್ ಡ್ರೈವ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಪೊಲೀಸ್ ಇಲಾಖೆಯ ಮನವಿಗೆ ಸಕಾರಾತ್ಮಕವಾಗಿ ಪ್ರಕ್ರಿಯೆಯಿಸಿರುವ ಗೋವಾ ಸರ್ಕಾರವು ಈ ಬಗ್ಗೆ ಸದ್ಯದಲ್ಲೇ ಹೊಸ ನಿಯಮಗಳನ್ನ ರೂಪಿಸಿ ಜಾರಿಗೊಳಿಸುವ ಸಾಧ್ಯತೆಗಳಿದ್ದು, ದುಬಾರಿ ಮೊತ್ತದ ದಂಡಕ್ಕೂ ಬಗ್ಗದ ಪ್ರವಾಸಿಗರ ವಿರುದ್ದ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಕಳೆದ ಕೆಲ ವರ್ಷಗಳಿಂದಲೇ ಡ್ರಂಕ್ ಅಂಡ್ ಡ್ರೈವ್ ವಿರುದ್ಧ ದೊಡ್ಡಅಭಿಯಾನವನ್ನೇ ಆರಂಭಿಸಿರುವ ಗೋವಾ ಪೊಲೀಸರು, ಸಾವಿರಾರು ವಾಹನ ಚಾಲಕನ್ನು ಹಿಡಿದು ದಂಡ ವಸೂಲಿ ಮಾಡಿದ್ದಾರೆ. ಹೀಗಿದ್ದರೂ ಪ್ರಕರಣಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಹೀಗಾಗಿ ದಂಡಕ್ಕೆ ಬದಲಾಗಿ ಜೈಲು ಕಂಬಿ ಎಣಿಸುವಂತೆ ಮಾಡಿದ್ರೆ ಮಾತ್ರವೇ ಈ ಸಮಸ್ಯೆ ತಗ್ಗಿಸಲು ಸಾಧ್ಯವೆಂದು ತೀರ್ಮಾನ ಮಾಡಿರುವ ಗೋವಾ ಪೊಲೀಸರು, ರಾಜ್ಯ ಸರ್ಕಾರಕ್ಕೆ ಮೋಟಾರ್ ವೆಹಿಕಲ್ ಆಕ್ಟ್ 1998ರಲ್ಲಿ ತಿದ್ದುಪಡಿ ತರುವಂತೆ ಮನವಿ ಮಾಡಿದೆ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಈ ಬಗ್ಗೆ ಮಾತನಾಡಿರುವ ಗೋವಾ ಡಿಜಿಪಿ ಮುಕ್ತೇಶ್ ಚಂದರ್ ಅವರು ಕಠಿಣ ಕಾನೂನು ಕ್ರಮಗಳು ಇಲ್ಲದ ಹಿನ್ನೆಲೆಯಲ್ಲಿ ಗೋವಾದಲ್ಲಿ ಕುಡಿದು ವಾಹನ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕಾಗಿಯೇ ಮೋಟಾರ್ ವೆಹಿಕಲ್ ಆಕ್ಟ್ 1998 ತಿದ್ದುಪಡಿ ತರುವ ಮೂಲಕ ಡ್ರಂಕ್ ಅಂಡ್ ಡ್ರೈವ್ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಗೋವಾ ಉನ್ನತ ಮೂಲಗಳಿಂದ ಸಹ ಹೊಸ ನಿಯಮ ಜಾರಿಗೊಳಿಸುವ ಬಗ್ಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಗೋವಾದಲ್ಲಿ ಕುಡಿದು ಮಾಜಾ ಮಾಡಿಬರಬಹುದು ಎಂದುಕೊಳ್ಳುತ್ತಿದ್ದ ಪ್ರವಾಸಿಗರಿಗೆ ಇದು ನುಂಗಲಾರದು ಬಿಸಿತುಪ್ಪವಾಗಲಿದೆ.

ಗೋವಾಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ- ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ 7 ದಿನ ಜೈಲ್ ಗ್ಯಾರಂಟಿ..

ಒಟ್ಟಿನಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ಗೋವಾ ಪೊಲೀಸರು ಮಹತ್ವದ ತೀರ್ಮಾನ ಕೈಗೊಳ್ಳುತ್ತಿದ್ದು, ಇದು ದೇಶದ ಇತರೆ ಮೆಟ್ರೋ ನಗರಗಳಲ್ಲೂ ಜಾರಿಗೆ ಬರಬೇಕಾದ ಅವಶ್ಯಕತೆ ಇದೆ. ಹಾಗಾದ್ರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

Most Read Articles

Kannada
Read more on traffic rules crime
English summary
Drunk and drive could result in 7 day jail term without bail in Goa – Police asks Govt to amend rule.
Story first published: Wednesday, July 25, 2018, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X