ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಕಳೆದ ಜನವರಿಯಲ್ಲಿ ಅನಾವರಣಗೊಂಡಿದ್ದ ಫೋರ್ಡ್ ಹೊಚ್ಚ ಹೊಸ ಫ್ರೀ ಸ್ಟೈಲ್ ಯುಟಿಲಿಟಿ ಕಾರು ಮಾದರಿಯನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ರೂ.5.09 ಲಕ್ಷ ನಿಗದಿಗೊಳಿಸಲಾಗಿದೆ.

By Rahul Ts

ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಮತ್ತು ಇಕೋ ಸ್ಪೋರ್ಟ್ ಕಾರು ಆವೃತ್ತಿಗಳ ಮಧ್ಯದಲ್ಲಿ ಬರುವ ಫ್ರೀ ಸ್ಟೈಲ್ ಕಾರುಗಳು ಗ್ರಾಹಕರ ಆದ್ಯತೆ ಮೇರೆಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಒಟ್ಟು ನಾಲ್ಕು ವಿವಿಧ ವೆರಿಯೆಂಟ್‌ಗಳು ಲಭ್ಯವಿದ್ದು, ಹೆಚ್ಚಿನ ಗುಣಮಟ್ಟದ ಸುರಕ್ಷಾ ಸೌಲಭ್ಯ ಹೊಂದಿರುವ ಟಾಪ್ ಎಂಡ್ ಫ್ರೀ ಸ್ಟೈಲ್ ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ. 7.89 ಲಕ್ಷ ಬೆಲೆ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..
Variant Petrol Diesel
Ambiente ₹ 509,000 ₹ 609,000
Trend ₹ 599,000 ₹ 699,000
Titanium ₹ 639,000 ₹ 735,000
Titanium+ ₹ 694,000 ₹ 789,000
ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಫೋರ್ಡ್ ನಿರ್ಮಾಣದ ಕಾರುಗಳಲ್ಲಿ ಸಾಂಪ್ರದಾಯಿಕವಾಗಿ ಕಂಡು ಬರುವ ಆ್ಯಂಬಿಯೆಂಟ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ಆವೃತ್ತಿಗಳಲ್ಲಿ ಫ್ರೀ ಸ್ಟೈಲ್ ಕಾರುಗಳು ಖರೀದಿಗೆ ಲಭ್ಯವಿರಲಿದ್ದು, ಇದರಲ್ಲಿ ಟೈಟಾನಿಯಂ ಪ್ಲಸ್ ಮಾದರಿಯು ಉನ್ನತ ಕಾರು ಆವೃತ್ತಿಯಾಗಲಿರಲಿದೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಡಿಸೈನ್ ಮತ್ತು ಸ್ಟೈಲ್

ಫೋರ್ಡ್ ಒಡೆತನದ ಕೆನೆಟಿಕ್ ಡಿಸೈನ್ ಲಾಗ್ವೆಂಜ್ ಆಧಾರದ ಮೇಲೆ ಸಿದ್ದವಾಗಿರುವ ಫೋರ್ಡ್ ಫ್ರೀ ಸ್ಟೈಲ್ ಕಾರುಗಳು ಯುಟಿಲಿಟಿ ವೆಹಿಕಲ್ ಗುಣಲಕ್ಷಣಗಳನ್ನು ಹೊಂದಿದೆ. ಈ ಮೂಲಕ ಫಿಗೊ ಕಾರಿಗಿಂತ 16ಎಂಎಂ ಹೆಚ್ಚುವರಿ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು 190ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿವೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮಹೀಂದ್ರಾ ಎಕ್ಸ್‌ಯುವಿ500ಗಿಂತ ಕೇವಲ 10ಎಂಎಂ ಕಡಿಮೆ ಕ್ಲಿಯೆರೆನ್ಸ್ ಪಡೆದಿರುವ ಫ್ರೀ ಸ್ಟೈಲ್ ಕಾರುಗಳು ಎಸ್‌ಯುವಿ ಮಾದರಿಯಲ್ಲೇ ಸಿದ್ದಗೊಂಡಿದ್ದು, 15-ಇಂಚಿನ 4 ಸ್ಪೋಕ್ ಅಲಾಯ್ ಚಕ್ರಗಳ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿಗಳಿಗೂ ಪೈಪೋಟಿ ನೀಡಬಲ್ಲದು.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಇದಲ್ಲದೇ ಸ್ಪೋಟಿ ಲುಕ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದ್ದು, ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಬಹುತೇಕ ಫಿಗೊ ಕಾರುಗಳ ಹೋಲಿಕೆ ಇದ್ದರೂ ಚಕ್ರಗಳು, ಸೈಡ್ ಗ್ರಾರ್ನಿಷ್, ಟೈಲ್ ಲ್ಯಾಂಪ್, ಗ್ರಾಫಿಕ್ಸ್ ಡಿಸೈನ್, ಒವಿಎಂಆರ್ ವಿಭಾಗದಲ್ಲಿ ಗುರುತರ ಬದಲಾವಣೆ ಹೊಂದಿವೆ. ಜೊತೆಗೆ ಸ್ಕೀಡ್ ಪ್ಲೇಟ್ ಮತ್ತು ಫ್ಲಕ್ಸ್ ಕ್ಲ್ಯಾಂಡಿಂಗ್ ಸಹ ಹೊಂದಿರಲಿವೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಫ್ರೀ ಸ್ಟೈಲ್ ಒಳವಿನ್ಯಾಸ

6.5 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ ಹೊಸ ಕಾರುಗಳು ವಿನೂತನ ಡ್ಯಾಶ್ ಬೋರ್ಡ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಫೋರ್ಡ್ ಸಿಂಕ್ 3 ಇನ್ಪೋಟೈನ್‌ಮೆಂಟ್ ಸೆಟ್ ಅಪ್ ಹೊಂದಿದೆ. ಜೊತೆಗೆ ಫಿಗೊ ಮಾದರಿಯಲ್ಲೇ 275-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಒದಗಿಸಲಾಗಿದೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಎಂಜಿನ್ ಸಾಮರ್ಥ್ಯ

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 100 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಇನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಫಿಗೊ ಹ್ಯಾಚ್‌ಬ್ಯಾಕ್‌ಗಿಂತಲೂ ಉತ್ತಮ ಮೈಲೇಜ್‌, ಪರ್ಫಾಮೆನ್ಸ್ ನೀಡಬಲ್ಲವು. ಈ ಮೂಲಕ ಬೆಸ್ಟ್ ಪರ್ಫಾಮೆನ್ಸ್ ಹೊಂದಿದ ಕಾರು ಮಾದರಿ ಇದಾಗಲಿದ್ದು, ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ಹೆಚ್ಚಿನ ಗುಣವೈಶಿಷ್ಟ್ಯತೆಗಳನ್ನು ಹೊಂದಿಕೊಂಡಿದೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಲಭ್ಯಲಿರುವ ಬಣ್ಣಗಳು

ಕೆನಾಯಿನ್ ರಿಡ್ಜ್, ಮೂನ್‌ಡಸ್ಟ್ ಸಿಲ್ವರ್, ಸ್ಮೋಕಿ ಗ್ರೇ, ವೈಟ್ ಗೊಲ್ಡ್, ಆಕ್ಸ್‌ಫರ್ಡ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಫ್ರೀ ಸ್ಟೈಲ್ ಕಾರುಗಳು ಖರೀದಿಗೆ ಲಭ್ಯವಿರಲಿವೆ.

ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರು..

ಫ್ರೀ ಸ್ಟೈಲ್ ಕಾರಿನ ಮೈಲೇಜ್

ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 19 ಕಿ.ಮೀ ಮೈಲೇಜ್ ನೀಡಲಿದ್ದು, ಡೀಸೆಲ್ ಎಂಜಿನ್ ಪ್ರೇರಿತ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 24.4 ಕಿ.ಮೀ ಮೈಲೇಜ್ ನೀಡಲಿವೆ ಎಂದು ಫೋರ್ಡ್ ಸಂಸ್ಥೆಯು ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

Most Read Articles

Kannada
Read more on ford new launches
English summary
Ford Freestyle Launched In Bangalore; Prices Start At Rs 5.09 Lakh.
Story first published: Monday, April 30, 2018, 9:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X