ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ಎಮ್‍ಜಿ ಮೋಟಾರ್ ಇಂಡಿಯಾ ಇದು SAIC ಚೀನಾದ ಅಂಗಸಂಸ್ಥೆಯಾಗಿದ್ದು ಮತ್ತು ಸರ್ಕಾರಿ-ಸ್ವಾಮ್ಯದ ವಾಹನ ತಯಾರಕ ಸಂಸ್ಥೆಯಾಗಿದೆ.

By Rahul Ts

ಎಮ್‍ಜಿ ಮೋಟಾರ್ ಇಂಡಿಯಾ ಇದು SAIC ಚೀನಾದ ಅಂಗಸಂಸ್ಥೆಯಾಗಿದ್ದು ಮತ್ತು ಸರ್ಕಾರಿ-ಸ್ವಾಮ್ಯದ ವಾಹನ ತಯಾರಕ ಸಂಸ್ಥೆಯಾಗಿದೆ. ಚೀನಾದ SAIC ಸಂಸ್ಥೆಯು ಜಿಎಮ್ ಮೋಟಾರ್ಸ್ ನೇತೃತ್ವದಲ್ಲಿ ದೇಶಿಯ ಮಾರುಕಟ್ಟೆಗೆ ತಮ್ಮ ಮೊದಲ ಬವೊಜುನ್ 350 ಎಸ್‍‍ಯುವಿ ಕಾರನ್ನು ಪರಿಚಯಿಸುವ ಯೋಜನೆಯಲ್ಲಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ಬಿಡುಗಡೆಗು ಮುನ್ನವೆ ಬವೊಜುನ್ 350 ಎಸ್‍‍ಯುವಿ ಕಾರು ಗುಜರಾತ್‍‍ನಲ್ಲಿನ ಹಲೊಲ್ ಎಂಬ ಪ್ರದೇಶದ ಬಳಿ ಸ್ಪಾಟ್ ಟೆಸ್ಟಿಂಗ್ ನಡೆಸುವ ವೇಳೆ ಕಂಡುಬಂದಿದ್ದು, 2019ರ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ತಮ್ಮ ಹೊಸ ಕಾರಿನ ಬಿಡುಗಡೆಗಾಗಿ ಸಂಸ್ಥೆಯು ದೇಶದಾತ್ಯಂತ 300 ಡೀಲರ್‍‍ಶಿಪ್ ಮತ್ತು ಸರ್ವೀಸ್ ಸೆಂಟರ್‍‍ಗಳನ್ನು ಏರ್ಪಾಡು ಮಾಡುವ ಯೋಜನೆಯಲಿದ್ದು, ಜೊತೆಗೆ ಕಾರಿನ ಬೆಲೆಯನ್ನು ಕಡಿಮೆಗೊಳಿಸಲು ಸ್ಥಳಿಕರಣವಾಗಿ ವಾಹನವನ್ನು ತಯಾರಿಸುವ ಯೋಜನೆಯಲ್ಲಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ಈಗಾಗಲೆ ಬವೊಜುನ್ 350 ಎಸ್‍‍ಯುವಿ ಕಾರು ಚೀನಾದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಭಾರತೀಯ ರಸ್ತೆಗಳಿಗೆ ಸರಿತೂಗುವ ಹಾಗೆ ಮತ್ತು ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ದೇಶಿಯ ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲಿರುವ ಬವೊಜುನ್ 350 ಎಸ್‍‍ಯುವಿ ಕಾರು 4,655ಎಮ್ಎಮ್ ಉದ್ದ, 1,835 ಅಗಲ ಮತ್ತು 1,760ಎಮ್ಎಮ್ ಎತ್ತರ ಹೊಂದಿರಲಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ವೈಶಿಷ್ಟ್ಯತೆಗಳು

ಭಾರತದಲ್ಲಿ ಬಿಡುಗಡೆಗೊಳ್ಲಲಿರುವ ಬವೊಜುನ್ 350 ಎಸ್‍‍ಯುವಿ ಕಾರು ಚೀನಾದಲ್ಲಿ ದೊರೆಯುತ್ತಿರುವ ಕಾರಿನ ವಿನ್ಯಾಸವನ್ನೆ ಹೋಲಲಿದ್ದು, ಪ್ರಾಮಿನೆಂಟ್ ಗ್ರಿಲ್, ಹೈ ಮೌಂಟೆಡ್ ಡೇ ಟೈಮ್ ರನ್ನಿಂಗ್ ಲೈಟ್ಸ್, ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಮತ್ತು ಡೀಪ್ ಕ್ಯಾರೆಕ್ಟರ್ ಅನ್ನು ಅಳವಡಿಸಲಾಗಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ಇದಲ್ಲದೆ ಈ ಕಾರು ವ್ಹೀಲ್ ಆರ್ಚೆಸ್, ಬ್ಲೇಕ್ಡ್ ಔಟ್ ಡಿ ಪಿಲ್ಲರ್ಸ್, ಮತ್ತು ವಿದ್ಯುತ್ ಸನ್‍‍‍ರೂಫ್ ಅನ್ನು ಪಡೆದುಕೊಂಡಿದ್ದು, ಕಾರಿನ ಒಳಭಾಗದಲ್ಲಿ ಲೆಧರ್ ಸೀಟ್ಸ್, ಹರ್ಮಾನ್ ಇನ್ಫೀನಿಟಿ ಸೌಂಡ್ ಸಿಸ್ಟಮ್, ಸೈಡ್ ಕರ್ಟೈನ್ ಏರ್‍‍ಬ್ಯಾಗ್ಸ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಕೂಡ ಪಡೆದುಕೊಂಡಿರಲಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ಹೊಸ ಬವೊಜುನ್ 350 ಎಸ್‍‍ಯುವಿ ಕಾರು 1.8 ಲೀಟರ್ ನ್ಯಾಚುರಲ್ಲಿ ಆಫೈರ್ಡ್ ಎಂಜಿನ್ ಮತ್ತು 1.5 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‍‍ನಲ್ಲಿ ದೊರೆಯುತಿದ್ದು, ದೇಶಕ್ಕೆ ಆಗಮಿಸುವ ಕಾರು ಫಿಯಾಟ್ ಆಧಾರಿತ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಬರಲಿದೆ ಚೀನಾ ಸಂಸ್ಥೆಯ ಮೊದಲ ಎಸ್‍‍ಯುವಿ ಕಾರು..

ಚೀನಾ ಸಂಸ್ಥೆಯ ಬವೊಜುನ್ 350 ಎಸ್‍‍ಯುವಿ ಕಾರು ರೂ. 7.71 ರಿಂದ 11.18 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಹ್ಯುಂಡೈ ಕ್ರೆಟಾ ಮಾತು ಟಾಟಾ ಹೆಚ್‍5ಎಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on gm suv
English summary
GM chinas baojun 530 suv india
Story first published: Saturday, June 23, 2018, 13:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X