ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

By Praveen Sannamani

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ಸಮಸ್ಯೆ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಪ್ರಯಾಣಿಕರು ಮತ್ತು ನಿರ್ವಾಹಕರ ಮಧ್ಯೆ ಆಗಾಗ ವಾಗ್ವಾದಗಳು ನಡೆಯುವುದನ್ನು ನಾವೆಲ್ಲಾ ನೋಡಿಯೇ ಇದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಹೊಸ ಮಾರ್ಗ ಕಂಡುಕೊಳ್ಳಲು ಮುಂದಾಗಿರುವ ಬಿಎಂಟಿಸಿ ಸಂಸ್ಥೆಯು ಸದ್ಯದಲ್ಲೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಹೌದು, ನಗದುರಹಿತ ಪ್ರಯಾಣಕ್ಕೆ ಒತ್ತು ನೀಡಲು, ಬಿಎಂಟಿಸಿ ಪ್ರತ್ಯೇಕ ಸ್ಮಾರ್ಟ್ ಕಾರ್ಡ್​ಗಳನ್ನು ಜಾರಿಗೆ ತರಲು ಯೋಚಿಸಿದ್ದು, ಮೆಟ್ರೋ ಟ್ರೈನ್​ ಮಾದರಿಯಲ್ಲೇ ರಿಯಾಯತಿ ಕೂಡ ನೀಡಲು ಚಿಂತನೆ ನಡೆಸಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟ ಅನುಕೂಲಕತೆಗಳಿದ್ದು, ನಿರ್ವಾಹಕರಿಗೂ ಚಿಲ್ಲರೆ ಕಿರಿಕಿರಿ ತಪ್ಪಲಿದೆ ಎನ್ನಬಹುದು.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಈ ಮೊದಲು ಓಪನ್ ಲೂಪ್ ಸ್ಮಾರ್ಟ್ ಕಾರ್ಡ್ ತಯಾರಿಕೆಗೆ ಬಿಎಂಟಿಸಿ ನಿರ್ಧರಿಸಿತ್ತು. ಜೊತೆಗೆ ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಪ್ರಯಾಣದ ಜೊತೆಗೆ ಶಾಪಿಂಗ್‌ಗೂ ಸ್ಮಾರ್ಟ್ ಕಾರ್ಡ್​ಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿತ್ತು.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಆದರೆ ಹೊಸ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವ ಮೊದಲೇ ಕಗ್ಗಂಟಾಗಿತ್ತು. ಇದರಿಂದ ಲೂಪ್ ಸ್ಮಾರ್ಟ್ ಕಾರ್ಡ್ ಯೋಜನೆ ಬಗ್ಗೆ ಪ್ರಯಾಣಿಕರು ಆಸಕ್ತಿ ತೊರದ ಹಿನ್ನೆಲೆಯಲ್ಲಿ ತನ್ನದೇ ಸ್ಮಾರ್ಟ್​ ಕಾರ್ಡನ್ನು ಜಾರಿಗೆ ತರಲು ಬಿಎಂಟಿಸಿ ನಿರ್ಧರಿಸಿದೆ.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಒಟ್ಟು 8 ಲಕ್ಷ ಬಸ್‌ಗಳನ್ನು ಸ್ಮಾರ್ಟ್ ಕಾರ್ಡ್ ಆಗಿ ಪರಿವರ್ತನೆ ಮಾಡಲಿರುವ ಬಿಎಂಟಿಸಿ ಸಂಸ್ಥೆಯು ಮೊದಲು ಮೊದಲ ಹಂತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್‌ ಬದಲಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಪೊನ್ನರಾಜ್ ಸುಳಿವು ನೀಡಿದ್ದಾರೆ.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಸದ್ಯ ಬಿಎಂಟಿಸಿ ಸಂಸ್ಥೆಯು 70 ವಿವಿಧ ಮಾದರಿಯ ಬಸ್ ಪಾಸ್‌ಗಳನ್ನು ವಿತರಣೆ ಮಾಡುತ್ತಿದೆ. ಇದರಲ್ಲಿ ಸಾರಿಗೆ, ಆದಾಯ, ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳಂತಹ ಸರಕಾರಿ ಇಲಾಖೆಗಳ ನೌಕರರು ಸಹ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆಯುವ ಪ್ರಯಾಣಿಕರಿದ್ದು, ಇವರುಗಳಿಗೂ ಸಹ ಹೊಸ ಯೋಜನೆಯಿಂದ ಸಾಕಷ್ಟು ಅನುಕೂಲಗಳಾಗಲಿವೆ.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಜೊತೆಗೆ ಸ್ಮಾರ್ಟ್ ವಿತರಣೆಯಿಂದಾಗಿ ಪ್ರಯಾಣಿಕರ ಸಂಖ್ಯೆಯ ನಿಖರತೆ ಸಿಗಲಿದ್ದು, ಆದಾಯ ಸೋರಿಕೆಗೂ ಕಡಿವಾಣ ಬೀಳಲಿದೆ. ಇದರೊಂದಿಗೆ ಯಾವ ಮಾರ್ಗದಲ್ಲಿ ಎಷ್ಟು ಜನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ದೊರಲಿದೆ.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಸ್ಮಾರ್ಟ್ ಕಾರ್ಡ್ ಎಲ್ಲಿ ಸಿಗಲಿವೆ?

ಮೊದಲ ಹಂತವಾಗಿ ಶಿವಾಜಿನಗರ ಹಾಗೂ ಶಾಂತಿನಗರ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭವಾಗಲಿದ್ದು, ನಂತರದ ದಿನಗಳಲ್ಲಿ ಬಿಎಂಟಿಸಿಯ ಕಚೇರಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್‌ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಮಾಡುವ ಮಾದರಿಯಲ್ಲಿ ಹಣ ನೀಡಿ ಈ ಕಾರ್ಡ್‌ ಅನ್ನು ಟಾಪ್‌ ಅಪ್‌ ಮಾಡಿಕೊಳ್ಳಬೇಕು.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಸ್ಮಾರ್ಟ್ ಆದ್ರೂ ತೊಂದರೆ ತಪ್ಪಿದಲ್ಲ..!

ನಗದುರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ ಸಂಸ್ಥೆಯು ಹೊಸ ಯೋಜನೆ ತರುತ್ತಿದೆಯಾದರೂ, ಒಂದು ಸ್ಟೇಜ್‌ನಿಂದ ಮತ್ತೊಂದು ಸ್ಟೇಜ್ ನಡುವಿನ ದರ ನಿಗದಿ ಸಂದರ್ಭದಲ್ಲಿ ಸ್ಮಾರ್ಟ್ ಕಾರ್ಡ್‌ಗಳಿಂದ ತೊಂದರೆ ಆಗುತ್ತೆ ಅನ್ನುವುದು ಕೆಲವು ಬಿಎಂಟಿಸಿ ಅಧಿಕಾರಿಗಳು ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ.

ನಗದುರಹಿತ ಪ್ರಯಾಣಕ್ಕೆ ಒತ್ತು- ಮತ್ತಷ್ಟು ಸ್ಮಾರ್ಟ್ ಆಗಲಿದೆ ಬಿಎಂಟಿಸಿ..!

ಇದಕ್ಕೆ ಕಾರಣ, ಸ್ಟೇಜ್ ನಡುವಿನ ಅಂತರ ದೂರವಿದ್ದಾಗ ದರ ನಿಗದಿ ಸರಳವವಾಗಿದ್ದರೂ ಕಡಿಮೆ ಅಂತರ ಸ್ಟೇಜ್ ನಡುವೆ ಹತ್ತಿ ಇಳಿಯುವ ಪ್ರಯಾಣಿಕರಿಗೆ ಇದು ತೊಂದರೆ ಆಗುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಪ್ರಕ್ರಿಯೆಸಿರುವ ನಿರ್ದೇಶಕ ವಿ ಪೊನ್ನರಾಜ್ ಅವರು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಸ್ಮಾರ್ಟ್ ಕಾರ್ಡ್ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದಿದ್ದಾರೆ.

Most Read Articles

Kannada
Read more on bmtc bus bengaluru
English summary
BMTC to replace 8 lakh bus passes with smart cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more