ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ 7 ಸೀಟರ್ ಹೊಂಡಾ CR-V ಕಾರು
ಹೊಂಡಾ ಸಂಸ್ಥೆಯು ತನ್ನ 7 ಆಸನವುಳ್ಳ ಸಿಆರ್-ವಿ ಕಾರನ್ನು 2018 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ್ದು, ಡೀಸೆಲ್ ಎಂಜಿನ್ ಆಯ್ಕೆ ಅನ್ನು ಕೂಡಾ ಹೊಂದಿದೆ. ಹೀಗಾಗಿ 2018ರ ದ್ವಿತಿಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.
ಹೊಂಡಾ ಸಂಸ್ಥೆಯು ತನ್ನ 7 ಆಸನವುಳ್ಳ ಸಿಆರ್-ವಿ ಕಾರನ್ನು 2018 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ್ದು, ಡೀಸೆಲ್ ಎಂಜಿನ್ ಆಯ್ಕೆ ಅನ್ನು ಕೂಡಾ ಹೊಂದಿದೆ. ಹೀಗಾಗಿ 2018ರ ದ್ವಿತಿಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

5ನೇ ತಲೆಮಾರಿನ ಸಿಆರ್-ವಿ ಕಾರು 2.4-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 181 ಬಿಹೆಚ್ ಪಿ ಮತ್ತು 240 ಎನ್ಎಂ ಟಾರ್ಕ್‌ನ್ನು ಉತ್ಪಾದಿಸುತ್ತದೆ. ಹಾಗೆಯೇ ಆಟೊಮ್ಯಾಟಿಕ್ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಹೊಂದಿದೆ.

ಹೀಗಾಗಿ ಹೊಸದಾಗಿ ಭಾರತಕ್ಕೆ ಬರಲಿರುವ ಹೊಂಡಾ ಸಿಆರ್-ವಿ ಆವೃತ್ತಿಯು 1.6 ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿರಲಿದ್ದು, 158 ಬಿಹೆಚ್ ಪಿ ಮತ್ತು 350 ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರುತ್ತದೆ.

ಹೊಸ ಡೀಸೆಲ್ ಆವೃತ್ತಿಯು ಸಿಆರ್-ವಿ ಕಾರು 9- ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನೊಂದಿಗೆ ಮುಂಭಾಗದ ಚಕ್ರಗಳಿಗೆ ಶಕ್ತಿಯನ್ನು ರವಾನಿಸಲಾಗಿದ್ದು, ಆಲ್-ವೀಲ್ಹ್ ಡ್ರೈವ್ ಆಯ್ಕೆಯನ್ನು ಪಡೆದುಕೊಂಡಿದೆ.

ಗಾತ್ರದಲ್ಲಿ ಸಿಆರ್-ವಿ ವಿಶಾಲವಾಗಿದ್ದು, 4,587ಎಂಎಂ ಉದ್ದ, 1,584ಎಂಎಂ ಅಗಲ ಮತ್ತು 1,679 ಎತ್ತರ, 2,659ಎಂಎಂ ವೀಲ್ ಬೇಸನ್ನು ಹೊಂದಿದ್ದು, ಹೊಸ ಸಿಆರ್-ವಿಯು ಹಳೇ ಮಾದರಿಗಿಂತ 58ಎಂಎಂ ಉದ್ದ, 35ಎಂಎಂ ಅಗಲ ಮತ್ತು 25ಎಂಎಂ ಎತ್ತರ ಹಾಗೆಯೇ 40ಎಂಎಂ ವೀಲ್ ಬೇಸ್, 142 ಕಿಲೋಗ್ರಾಂ ಹೆಚ್ಚುವರಿ ತೂಕವನ್ನು ಹೊಂದಿರಲಿದೆ.

ಹೊಸ ಹೋಂಡಾ ಸಿಆರ್-ವಿ ವಿನ್ಯಾಸವು ಪ್ರಸ್ತುತ ಕಾರಿನ ವಿನ್ಯಾಸದ ವಿಕಸನವಾಗಿದ್ದು, ಫ್ರಂಟ್ ಎಂಡ್ ವಿಶಾಲವಾಗಿ ಕಾಣುತ್ತದೆ. ಮತ್ತು ಹೊಸ ನಯಗೊಳಿಸಿದ ಹೆಡ್‌ಲ್ಯಾಂಪ್‌ಗಳು ಫ್ಲಾಂಕ್ ಹೊಸ ಗ್ರಿಲ್ ಅನ್ನು ಹೊಂದಿದ್ದು, ಕ್ರೋಮ್ ಬಾರ್ ಅನ್ನು ಮಧ್ಯಭಾಗದಲ್ಲಿ ರಚಿಸಲಾಗಿದೆ.

ಹಿಂದಿನ ಭಾಗವು ವಿಶಾಲವಾಗಿರುವುದನ್ನು ಕಾಣಬಹುದಾಗಿದ್ದು ಅಲಾಯ್ ಚಕ್ರಗಳನ್ನು ಕೂಡ ಹೊಂದಿದೆ. ಇನ್ನು ಕಾರು ಎಲ್- ಟೈಪಿನ ಟೈಲ್-ಲೈಟ್ ಗಳನ್ನು ಮತ್ತು ವಿಂಡ್ ಶೀಟ್ ಅನ್ನು ಹೊಂದಿದೆ.

ಇನ್ನು ಕಾರಿನ ಸೀಟ್ ಗಳು ನೋಡಲು ಸುಂದರವಾಗಿದ್ದು ಲೆದರ್ ಕೋಟ್‌ನಿಂದ ಸುತ್ತುವರೆದಿದ್ದು, ಮೂರನೇ ಸಾಲಿನಲ್ಲಿ ಅರಾಮವಾಗಿ ಕೂರಲು, ಎರಡನೇ ಸಾಲಿನ ಸೀಟ್ ಗಳನ್ನು ಮುಂದಕ್ಕೆ ಸರಿಸಬಹುದಾಗಿದೆ.

ಮನೆಯವರೊಂದಿಗೆ ಹೊರಸಂಚಾರಕ್ಕೆ ಇದು ಹೇಳಿ ಮಾಡಿಸಿರುವ ಕಾರಾಗಿದ್ದು, ಮೂರು ಸಾಲಿನ ಸೀಟಿಂಗ್ ಹಂತಗಳನ್ನು ಅಳವಡಿಸಿರುವುದು ವಿಶೇಷವಾಗಿದೆ ಎನ್ನಬಹುದು.


Click it and Unblock the Notifications








