ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ತನ್ನ ವಿನೂತನ ಕಾರು ಮಾದರಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ್ ಜೀಪ್ ಸಂಸ್ಥೆಯು ತನ್ನ ಹೊಸ ಜೀಪ್ ಕಂಪಾಸ್ ಟ್ರೈನ್ ಹ್ವಾಕ್ ಕಾರನ್ನು ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ದತೆಯನ್ನು ನಡೆಸಿದೆ.

By Rahul Ts

ತನ್ನ ವಿನೂತನ ಕಾರು ಮಾದರಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ್ ಜೀಪ್ ಸಂಸ್ಥೆಯು ತನ್ನ ಹೊಸ ಜೀಪ್ ಕಂಪಾಸ್ ಟ್ರೈನ್ ಹ್ವಾಕ್ ಕಾರನ್ನು ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ದತೆಯನ್ನು ನಡೆಸಿದ್ದು, ಇದೀಗ ಬಿಡುಗಡೆಗು ಮುನ್ನವೆ ಹೈಡ್ರೊ ಬ್ಲೂ ಬಣ್ಣದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಮೊದಲನೇಯದಾಗಿ ಈ ಕಾರಿನ ಉತ್ಪಾದನೆಯನ್ನು 2017ರ ಫಿಯೆಟ್ ಕ್ರೈಸ್ಲಾರ್ ಆಟೋಮೊಬೈಲ್ಸ್ ನೇತೃತ್ವದಲ್ಲಿ ಪುಣೆಯ ರಾಜನ್ ಗೌನ್ ಪ್ಲಾಂಟ್ ನಲ್ಲಿ ಆರಂಭಿಸಲಾಗಿತ್ತು. ಜೊತೆಗೆ ಹೈ ಎಂಡ್ ಮಾದರಿಯಾದ ಟ್ರೈಲ್ ರೇಟೆಡ್ ಕಾರುಗಳನ್ನು ಆಸ್ಟ್ರೇಲಿಯಾ ಮತ್ತು ಇನ್ನಿತರೆ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಕೂಡಾ ಮಾಡಲಾಗುತ್ತಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಇನ್ನು ಕಾರಿನ ಸ್ಪೈ ಚಿತ್ರಗಳನ್ನು ಗಮನಿಸಿದಲ್ಲಿ ಕಪ್ಪು ಡೆಕಲ್ಸ್, ರೆಡ್ ಹುಕ್ಸ್, ಅಪ್ಪರ್ ಗ್ರಿಲ್, ಫಾಗ್ ಲ್ಯಾಂಪ್ ಬೆಸೆಲ್ಸ್, ರೂಫ್ ರೈಲ್ಸ್, 17 ಇಂಚಿನ ಡ್ಯುಯಲ್ ಟೋನ್ ಆಫ್ ರೋಡ್ ಅಲಾಯ್ ವ್ಹೀಲ್ಸ್, ಕಪ್ಪನೆಯ ಜೀಪ್ ಬ್ಯಾಡ್ಜೆಸ್, ಟ್ರೈಲ್ ರೇಟೆಡ್ ಫೆಂಡರ್ ಮತ್ತು ಟ್ರೈಲ್ ಹ್ವಾಕ್ ಟೈಲ್‍‍ಗೇಟ್ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಇನ್ನು ಹೊಸ ಜೀಪ್ ಕಂಪಾಸ್ ಟ್ರೈಲ್ ಹಾವ್ಕ್ ಕಾರಿನ ಒಳಭಾಗದಲ್ಲಿ ಸೀಟ್ ಕವರ್‍‍ನ ಮೇಲೆ ಟ್ರೈಲ್‍ ಹಾವ್ಕ್ ಬ್ಯಾಡ್ಜಿಂಗ್, 8.4 ಇಂಚಿನ ಯು-ಕನೆಕ್ಟ್ ನ್ಯಾವಿಗೇಶನ್ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಕಂಪಾಸ್ ಟ್ರೈಲ್ ಹ್ವಾಕ್ ಆವೃತ್ತಿಯು ಮರುಸೃಷ್ಟಿಸಿರುವ ಬಂಪರ್ ಹಾಗು ಎತ್ತರವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, ರೆಗ್ಯುಲರ್ ಆವೃತ್ತಿಯನ್ನು ಹೋಲಿಸಿದರೆ ಈ ಕಾರು ಜೀಪ್ ನ 4x4 ಡ್ರೈವ್ ಸ್ಟ್ರೈನ್ ಅನ್ನು ಕೂಡ ಪಡೆದುಕೊಳ್ಳಲಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾರಿನ ಇಂಟೀರಿಯರ್ ವಿನ್ಯಾಸಗಳು ಕೂಡಾ ಬಹಿರಂಗವಾಗಿದ್ದು, ಸಂಪೂರ್ಣ ಕಪ್ಪು ಮತ್ತು ಕೆಂಪು ಬಣ್ಣವನ್ನು ಹೈಲೈಟ್ ಮಾಡಿರಬಹುದೆಂದು ಹೇಳಲಾಗಿದೆ. ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಗಳು ಲೆದರ್ ನಿಂದ ಸುತ್ತುವರೆದಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಇದರೊಂದಿಗೆ ಬೇರೆ ಎರಡು ಮಾದರಿಯನ್ನು ಹೋಲಿಸಿದರೆ ಜೀಪ್ ಕಾಂಪಸ್ ಟ್ರೈಲ್ ಹ್ವಾಕ್ ಹಿಲ್ ಡಿಸೆಂಟ್ ಕಂಟ್ರೋಲ್, ಸ್ಟಾಂಡರ್ಡ್ ಎಕ್ವಿಪ್ಮೆಂಟ್ ಜೊತೆಗೆ ಆರು ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹಿಂಭಾಗದಲ್ಲಿ ಪಡೆದಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಎಂಜಿನ್ ಸಾಮರ್ಥ್ಯ

ಭಾರತಕ್ಕೆ ಬರಲಿರುವ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್ ಕಾರು 2.0 ಲೀಟರ್ ಮಲ್ಟಿಜೆಟ್, ಟರ್ಬೊಚಾರ್ಜ್ಡ್ ಎಂಜಿನ್ ಸಹಾಯದಿಂದ 179ಬಿಹೆಚ್‍‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪದೆದಿದ್ದು, 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗು ಮುನ್ನವೆ ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ ಟ್ರೈಲ್ ಹ್ವಾಕ್..

ಈ ಮೂಲಕ ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರಂ ಪ್ರಕಾರ 24 ರಿಂದ 25ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಆಫ್ ರೋಡ್ ಕೌಶಲ್ಯಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ.

Most Read Articles

Kannada
Read more on jeep suv luxury cars
English summary
Hydro Blue Jeep Compass Trailhawk spotted in India.
Story first published: Wednesday, June 6, 2018, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X