ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕಳೆದ ಆಟೋ ಎಕ್ಸ್‌ಪೋದಲ್ಲಿ 2018ರ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಸಿಟಿವಿ ಸೌಲಭ್ಯದ ಎಲೈಟ್ ಐ20 ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

By Praveen Sannamani

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕಳೆದ ಆಟೋ ಎಕ್ಸ್‌ಪೋದಲ್ಲಿ 2018ರ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಸಿಟಿವಿ ಸೌಲಭ್ಯದ ಎಲೈಟ್ ಐ20 ಆವೃತ್ತಿಗಳನ್ನು ಬಿಡುಗಡೆ ಮಾಡಿರುವುದು ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಹಬ್ಬವೇ ಸರಿ...

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಎಲೈಟ್ ಐ20 ಕಾರುಗಳು ಮ್ಯಾಗ್ಮಾ ಮತ್ತು ಆಸ್ಟ್ರಾ ಎಂಬ ಎರಡು ಆವೃತ್ತಿಗಳಲ್ಲಿ ಪರಿಚಯಿಸಲಾಗಿದ್ದು, ಮ್ಯಾಗ್ಮಾ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 7.04 ಲಕ್ಷಕ್ಕೆ ಮತ್ತು ಆಸ್ಟ್ರಾ ಬೆಲೆಯನ್ನು ರೂ. 8.16 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಇದು ಮಾರುತಿ ಸುಜುಕಿ ಬಲೆನೊ ಸಿಟಿವಿಗಿಂತಲೂ ಕಡಿಮೆ ದರ ಲಭ್ಯವಾಗಿರುವುದು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಹೊಸ ನಮೂನೆಯ ಎಲೈಟ್ ಐ20 ಸಿಟಿವಿ ಬಿಡುಗಡೆ ಮಾಡಿರುವ ಹ್ಯುಂಡೈ ಸಂಸ್ಥೆಯು ಹೊಸ ಕಾರುಗಳಲ್ಲಿ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಿದ್ದು, ನ್ಯೂ ಕ್ಲ್ಯಾಡಿಂಗ್ ಮತ್ತು ಗ್ರಿಲ್‌ಗಳು ಹೊಸ ಕಾರಿನ ಲುಕ್ ಹೆಚ್ಚಿಸಿವೆ.

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಜೊತೆಗೆ ಸ್ಟೈಲಿಶ್ ಬಂಪರ್, ನ್ಯೂ ಅಲಾಯ್ ಚಕ್ರಗಳು, ದೊಡ್ಡದಾದ ಟೈಲ್‌ಲ್ಯಾಂಪ್, ನ್ಯೂ ಟೈಲ್‌ಗೇಟ್‌ಗಳು 2018ರ ಎಲೈಟ್ ಐ20 ಪ್ರಮುಖಾಂಶಗಳಾಗಿದ್ದು, ಹೊಸ ನಮೂನೆಯ ಇಂಟಿರಿಯರ್ ಮತ್ತು ಇನ್ಪೋಟೈನ್‍‌ಮೆಂಟ್ ಕೂಡಾ ಗ್ರಾಹಕರನ್ನು ಸೆಳೆಯಲಿವೆ.

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಎಲೈಟ್ ಐ20 ಸಿಟಿವಿ ಕಾರು ಮಾದರಿಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದೆ. ಜೊತೆಗೆ ಗ್ರಾಹಕರ ಬೇಡಿಕೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಆವೃತ್ತಿಯನ್ನು ಸಹ ಆಯ್ಕೆ ಮಾಡಬಹುದು.

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಇನ್ನು ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಿದ್ದ 2018ರ ಎಲೈಟ್ ಐ20 ಕಾರುಗಳು ಟರ್ಬೋ ಚಾರ್ಜ್ಡ್ ಡೀಸೆಲ್ ಸಹ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಸಿವಿಟಿ ಆವೃತ್ತಿಗೂ ಮತ್ತು 2018ರ ಹೊಸ ಆವೃತ್ತಿಗೂ ಎಂಜಿನ್ ವಿಭಾಗ ಮತ್ತು ಗೇರ್‌ಬಾಕ್ಸ್ ಸೌಲಭ್ಯದಲ್ಲಿ ಬದಲಾವಣೆ ಹೊರತು ಪಡಿಸಿ ಈ ಹಿಂದಿನ ವಿನ್ಯಾಸಗಳನ್ನೇ ಹೊಸ ಕಾರಿನಲ್ಲೂ ಮುಂದುವರಿಸಲಾಗಿದೆ.

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಹೊಸ ಕಾರಿನ ವಿಶೇಷತೆ ಏನು?

ಹೊಸ ಕಾರುಗಳ ಇಂಟಿರಿಯರ್ ಮತ್ತು ಎಕ್ಸಿಟಿರಿಯರ್ ವಿನ್ಯಾಸಗಳು ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಪೇಂಟ್, ಸ್ಪೋರ್ಟಿ ಇಂಟಿರಿಯರ್ ಡಿಸೈನ್, ಐ ಬ್ಲ್ಯೂ ಸ್ಮಾರ್ಟ್ ಫೋನ್ ಆ್ಯಪ್, ರಿರ್ ಆರ್ಮ್‌ಸ್ಟ್ ಜೊತೆ ಕಪ್ ಹೊಲ್ಡರ್ ಒಳಗೊಂಡಿದೆ.

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಹೀಗಾಗಿ ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಹೊಸ ಚಾಲನಾ ಅನುಭೂತಿ ನೀಡಲಿರುವ ಎಲೈಟ್ ಐ20 ಕಾರುಗಳು ಸಿವಿಟಿ ಕಾರಿನ ಬಣ್ಣದ ಆಯ್ಕೆಯಲ್ಲೂ ವಿಭಿನ್ನತೆ ಕಾಯ್ದುಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ದಾಖಲೆಗಳಿಗೆ ಕಾರಣವಾಗಲಿದೆ.

ಬಲೆನೊ ಸಿವಿಟಿಗಿಂತಲೂ ಕಡಿಮೆ ಬೆಲೆಯ ಎಲೈಟ್ ಐ20 ಸಿವಿಟಿ ಬಿಡುಗಡೆ

ಪ್ರಮುಖವಾಗಿ ಇದು ಬಲೆನೊ ಸಿವಿಟಿ ಮತ್ತು ಹೋಂಡಾ ಝಾ ಸಿಟಿವಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಪ್ರಿಮಿಯಂ ವೈಶಿಷ್ಟ್ಯತೆಗಳಿಂದಾಗಿ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
Read more on hyundai hatchback
English summary
Hyundai Elite i20 CVT Automatic launched.
Story first published: Tuesday, May 22, 2018, 11:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X