ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ರೋಲ್ಸ್ ರಾಯ್ಸ್ ಸಂಸ್ಥೆಯು 14 ವರ್ಷಗಳ ನಂತರ ಫ್ಯಾಂಟಮ್ ಆವೃತ್ತಿಯನ್ನು ಎಂಟನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಆವೃತ್ತಿಯ ಮೊದಲ ಕಾರು ನಿನ್ನೆ ತಡರಾತ್ರಿ ಚೆನ್ನೈ ಫೋರ್ಟ್‌ನಲ್ಲಿ ಬರಮಾಡಿಕೊಳ್ಳಲಾಗಿದೆ.

By Praveen

Recommended Video

Auto Rickshaw Explodes In Broad Daylight

ಒಂದು ಶತಮಾನಗಳಷ್ಟು ಹಳೆಯದಾದ ಐಷಾರಾಮಿ ಕಾರು ಉತ್ಪಾದನಾ ರೋಲ್ಸ್ ರಾಯ್ಸ್ ಸಂಸ್ಥೆಯು 14 ವರ್ಷಗಳ ನಂತರ ಫ್ಯಾಂಟಮ್ ಆವೃತ್ತಿಯನ್ನು ಎಂಟನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಆವೃತ್ತಿಯ ಮೊದಲ ಕಾರು ನಿನ್ನೆ ತಡರಾತ್ರಿ ಚೆನ್ನೈ ಫೋರ್ಟ್‌ನಲ್ಲಿ ಬರಮಾಡಿಕೊಳ್ಳಲಾಗಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ಇದೇ ತಿಂಗಳು 22ಕ್ಕೆ ರೋಲ್ಸ್ ರಾಯ್ಸ್ ಫ್ಯಾಂಟಮ್ 8ನೇ ಜನರೇಷನ್ ಕಾರು ಭಾರತದಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಈ ಹಿನ್ನೆಲೆ ನಿನ್ನೆ ತಡರಾತ್ರಿ ಚೆನ್ನೈಯಲ್ಲಿರುವ ಬಿಎಂಡಬ್ಲ್ಯು ಕೆಎನ್‌ಯು ಡೀಲರ್ಸ್‌ಗೆ ಹೊಸ ಕಾರನ್ನು ಆಮದು ಮಾಡಿಕೊಳ್ಳಲಾಗಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ಅರಾಮದಾಯಕ ಸವಾರಿಗೆ ಅನುಕೂಲಕರವಾಗುವಂತೆ ಹೊಸ ಕಾರು ಆವೃತ್ತಿಯನ್ನು ಅಭಿವೃದ್ಧಿ ಮಾಡಲಾಗಿದ್ದು, ಪ್ರಸುತ್ತ ಮಾದರಿಗಳಿಂತ ಶೇ.30ರಷ್ಟು ಸುಧಾರಿತ ತಂತ್ರಜ್ಞಾನ ಮತ್ತು ಹೊರ ಮತ್ತು ಒಳ ವಿನ್ಯಾಸಗಳು ಬದಲಾವಣೆಗೊಳಿಸಲಾಗಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ರೋಲ್ಸ್ ರಾಯ್ಸ್ ಫ್ಯಾಂಟಮ್ 8ರ ಇನ್ನೊಂದು ವಿಶೇಷ ಅಂದ್ರೆ ಕಾರಿನ ಪ್ರತಿಯೊಬ್ಬ ಭಾಗವು ಹ್ಯಾಂಡ್ ಮೆಡ್ ಕೌಶಲ್ಯತೆಗಳೊಂದಿಗೆ ಸಿದ್ಧಗೊಂಡಿದ್ದು, ಈ ಮೂಲಕ ಸುಪ್ರಸಿದ್ಧ ವಿನ್ಯಾಸ ಪರಂಪರೆಯನ್ನು ಮುಂದುವರಿಸಲಾಗಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ಇನ್ನು ಫ್ಯಾಂಟಮ್ 8ರ ಆವೃತ್ತಿಯಲ್ಲಿ ಪ್ಯಾಂಥಿಯಾನಾ ಗ್ರಿಲ್ ಮರುನಿರ್ಮಾಣ ಮಾಡಲಾಗಿದ್ದು, ಸ್ಪಿರಿಟ್ ಆಫ್ ಎಕ್ಸ್ಟ್ಯಾಸಿಯ ಸ್ಥಾನವನ್ನು ಅರ್ಧ ಇಂಚು ಎತ್ತರಿಸಲಾಗಿದೆ. ಜೊತೆ ಹೊಸ ಹೆಡ್‌ಲ್ಯಾಂಡ್ ಗ್ರಾಫಿಕ್ ಕೂಡಾ ಅದ್ಭುತ ವಾಗಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ಇದಲ್ಲದೇ ಫ್ರಾಸ್ಟೆಡ್ ಮತ್ತು ಹಗಲಿನ ಚಾಲನೆಯ ದೀಪಗಳು ಲೇಸರ್ ಬೆಳಕಿನ ವ್ಯವಸ್ಥೆಯೊಂದಿಗೆ ಉರಿಯುವ ವ್ಯವಸ್ಥೆ ಹೊಂದಿದ್ದು. ಇವು ರಾತ್ರಿ ವೇಳೆ 600 ಮೀಟರ್‌ಗಳಷ್ಟು ಬೆಳಕನ್ನು ಹೊರಸೂಸುತ್ತೆವೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ರೋಲ್ಸ್ ರಾಯ್ಸ್ ಹೊಸ ಆವೃತ್ತಿಯು ಫ್ಯಾಂಟಮ್‌ನಲ್ಲಿ 22 ಇಂಚಿನ ಅಲಾಯ್ ಚಕ್ರಗಳೊಂದಿಗೆ ಮಿಶ್ರಲೋಹಗಳನ್ನು ಬಳಸಿಕೊಂಡಿದ್ದು, ಸುರಕ್ಷತೆಗಾಗಿ ಪನೋರಮಿಕ್ ವೀಕ್ಷಣೆಯ 4 ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿಯೇ ಹೊಸ ಕಾರಿನ ಐಷಾರಾಮಿ ವೈಶಿಷ್ಟ್ಯತೆಗಳನ್ನು "ದ ಗ್ಯಾಲರಿ" ಎಂದು ಉಲ್ಲೇಖಿಸಲಾಗಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ಹೆಚ್ಚುವರಿಯಾಗಿ 7x3 ಹೈ ರೆಜೆಲ್ಯೂಶನ್ ಹೆಚ್‌ಡಿ ಡಿಸ್ ಫೈ, ಕ್ರಾಸ್ ಟ್ರಾಫಿಕ್ ವಾರ್ನಿಂಗ್, ಆಕ್ಟಿವ್ ಕ್ರೂಸ್ ಕಂಟ್ರೋಲರ್ ಮತ್ತು ಪ್ರತಿಹಂತದಲ್ಲೂ ಸೆನ್ಸಾರ್ ಮಾದರಿಗಳನ್ನು ಫ್ಯಾಂಟಮ್ ಹೊಸ ಕಾರಿನಲ್ಲಿ ಪರಿಚಯಿಸಲಾಗಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

6.75-ಲೀಟರ ವಿ12 ಪವರ್ ಟ್ರೈನ್ ಎಂಜಿನ್ ಹೊಂದಿರುವ ಫ್ಯಾಂಟಮ್ ಆವೃತ್ತಿಯು 563ಬಿಎಚ್‌ಪಿ ಮತ್ತು 900ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ ಝಡ್ಎಫ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದ್ದು, ಇದರ ಬೆಲೆಯು 10 ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ.

ಬಿಡುಗಡೆಗೆ ಸಿದ್ದವಾದ 8ನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಸ್ಪೆಷಲ್ ಏನು?

ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ದುಬಾರಿ ಕಾರುಗಳು ಲಭ್ಯವಿದ್ದರು 1925ರಲ್ಲಿ ಸರ್ ಹೆನ್ರಿ ರಾಯ್ಸ್ ನಿರ್ಮಿಸಿದ ಫ್ಯಾಂಟಮ್ ಆವೃತ್ತಿಯೂ ವಿಶ್ವದ ಅತ್ಯಂತ ಪ್ರಭಾವಿ ಕಾರು ಎಂದರೇ ತಪ್ಪಾಗಲಾರದು. ಈ ನಡುವೆ 8ನೇ ತಲೆ ಮಾರಿನ ರೋಲ್ಸ್ ರಾಯ್ಸ್ ಆವೃತ್ತಿಯು ಮತ್ತಷ್ಟು ಹೊಸತನದೊಂದಿಗೆ ಬಿಡುಗಡೆಯಾಗುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ.

Trending On DriveSpark Kannada:

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

Most Read Articles

Kannada
English summary
India's First Rolls-Royce Phantom VIII Arrives In Chennai.
Story first published: Friday, February 2, 2018, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X