ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

Written By:
Recommended Video - Watch Now!
India Car Stunts Caught On Camera

ಸೆಡಾನ್ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ‌ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುವ ಟೊಯೊಟೊ ನಿರ್ಮಾಣದ ವಿಯೋಸ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೀಗ ಹೊಸ ಕಾರಿನ ವಿನ್ಯಾಸಗಳ ಕುರಿತಾದ ಟೀಸರ್ ಕೂಡಾ ಬಿಡುಗಡೆ ಮಾಡಲಾಗಿದೆ.

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಜನಪ್ರಿಯ ಸಾಧಿಸಿರುವ ಇಟಿಯಾಸ್ ಆವೃತ್ತಿಗಳು ವಾಣಿಜ್ಯ ಬಳಕೆಗೆ ಬೇಡಿಕೆಯಿದ್ದು, ಇಟಿಯಾಸ್‌ಗಿಂತ ಹೆಚ್ಚಿನ ಮಟ್ಟದ ಮತ್ತು ಕರೊಲ್ಲಾ ಕಾರುಗಳಿಂತ ಕೆಳಮಟ್ಟದ ಮತ್ತೊಂದು ಸೆಡಾನ್ ಆವೃತ್ತಿಯಾದ ವಿಯೋಸ್ ಕಾರನ್ನು ಟೊಯೊಟಾ ಅಭಿವೃದ್ಧಿ ಪಡಿಸಿದೆ.

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ಟೊಯೊಟಾ ಪರಿಚಯಿಸಲು ಮುಂದಾಗಿರುವ ವಿಯೋಸ್ ಕಾರುಗಳು ಈಗಾಗಲೇ ಯುರೋಪಿನ್ ಕೆಲ ಮಾರುಕಟ್ಟೆಗಳು ಸೇರಿದಂತೆ ಚೀನಾದಲ್ಲೂ ಮಾರಾಟಕ್ಕೆ ಲಭ್ಯವಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಸೆಡಾನ್ ಕಾರುಗಳ ಬೇಡಿಕೆ ಹಿನ್ನೆಲೆ ಹೊಸ ಕಾರು ಬಿಡುಗಡೆಗೊಳಿಸುವ ಯೋಜನೆ ರೂಪಿಸಲಾಗಿದೆ.

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ವಿಯೋಸ್ ಕಾರುನ್ನು ಸಂಪೂರ್ಣವಾಗಿ ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಫೆಬ್ರುವರಿ 7ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿ ತದನಂತರವಷ್ಟೇ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ಎಂಜಿನ್ ಸಾಮರ್ಥ್ಯ

ವರದಿಗಳ ಪ್ರಕಾರ ವಿಯೋಸ್ ಕಾರು ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೋಂಡಾ ಸಿಟಿಯಂತೆ 4,420 ಎಂಎಂ ಉದ್ದವನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ಜೊತೆಗೆ ಸುಧಾರಿತ ಮಾದರಿಯ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪಾರ್ಕಿಂಗ್ ರಿರ್ ಕ್ಯಾಮೆರಾ, ಎಬಿಎಸ್, ಇಬಿಡಿ, ದೊಡ್ಡದಾದ ಬೂಟ್ ಸ್ಪೆಸ್ ಮತ್ತು ಲೆದರ್ ಕೊಟಿಂಗ್ ಸೀಟುಗಳನ್ನು ಒದಗಿಸಲಾಗಿದೆ.

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ಬೆಲೆ (ಅಂದಾಜು)

ಸುಧಾರಿತ ತಂತ್ರಜ್ಞಾನ ಪ್ರೇರಿತ ವಿಯೋಸ್ ಕಾರುಗಳ ಬೆಲೆಯು ರೂ. 9 ಲಕ್ಷದಿಂದ ರೂ. 11 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದ್ದು, ಆಟೋ ಎಕ್ಸ್ ಪೋದಲ್ಲಿ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

Trending On DriveSpark Kannada:

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಆಟೋ ಎಕ್ಸ್ ಪೋ 2018: ಭಾರತದಲ್ಲಿ ಹೊಸ ಸಂಚಲಯನ ಸೃಷ್ಟಿಸುತ್ತಾ ಟೊಯೊಟಾ ವಿಯೋಸ್?

ಡ್ರೈವ್ ಸ್ಪಾಕ್ ಅಭಿಪ್ರಾಯ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಟೊಯೊಟಾ ಸಂಸ್ಥೆಯು ಸೆಡಾನ್ ಕಾರುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಡಿಮೆ ಬೆಲೆಗಳಲ್ಲಿ ಅತ್ಯುತ್ತಮ ಕಾರು ಮಾದರಿಯಾದ ವಿಯೋಸ್ ಬಿಡುಗಡೆಗೆ ಎದುರು ನೋಡುತ್ತಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on toyota auto expo 2018
English summary
Toyota Vios Teased Ahead Of Debut; Expected Price, Key Specs, Images & More.
Story first published: Friday, February 2, 2018, 12:33 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark