ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

By Praveen
Recommended Video - Watch Now!
Ford Freestyle Walk-Around In 360

ದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗಳನ್ನು ತಗ್ಗಿಸುವ ಉದ್ದೇಶದಿಂದ ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದರು ಸಂಚಾರಿ ನಿಯಮಗಳ ಉಲ್ಲಂಘಿಸುವರರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಈ ಬಾರಿ ಹೊಸ ನಿಯಮ ಒಂದನ್ನು ಜಾರಿ ಮಾಡಲು ಮುಂದಾಗಿದೆ.

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಕಳೆದ ವರ್ಷ ಮೇ ನಲ್ಲಿ 2016ರ ಮೋಟಾರ್ ವೆಹಿಕಲ್ ಆಕ್ಟ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರವು ಸಂಚಾರಿ ನಿಯಮ ಉಲ್ಲಂಘನೆ ಮಾಡುವರರ ವಿರುದ್ಧ ಭಾರೀ ಪ್ರಮಾಣದ ದಂಡ ವಸೂಲಿ ಮಾಡಲಾಗುತ್ತಿದ್ದು, ಇದೀಗ ಮತ್ತೊಂದು ಕಠಿಣ ನಿಯಮ ಜಾರಿ ಮಾಡುವ ಮೂಲಕ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾರು ಆಕ್ಸೆಸರಿ ಖರೀದಿಸುವವರನ್ನು ದಂಡಿಸಲು ಮುಂದಾಗಿದೆ.

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಹೀಗಾಗಿ ನೀವು ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಚಿಲ್ಲರೆ ಮಾರಾಟಕ್ಕೆ ಲಭ್ಯವಿರುವ ಕಾರು ಆಕ್ಸೆಸರಿಗಳನ್ನು ಖರೀದಿಸುವುದು ಕೂಡಾ ಅಪರಾಧವಾಗಲಿದ್ದು, ಅಪ್ಪಿ ತಪ್ಪಿ ಖರೀದಿಸಿ ಸಿಕ್ಕಿಬಿದ್ರೆ ಬರೋಬ್ಬರಿ 1 ಸಾವಿರ ರೂಪಾಯಿ ದಂಡ ಕಟ್ಟಿಟ್ಟ ಬುತ್ತಿ.

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಇದರ ಜೊತೆಗೆ ಕಾರಿನ ಹಿಂಭಾಗ ಸೀಟುಗಳಲ್ಲಿ ಮಕ್ಕಳ ಮನರಂಜನೆಗಾಗಿ ಹಾಕಲಾಗುವ ಡಿವಿಡಿ ಸ್ಕ್ರೀನ್‌ಗಳು ಕೂಡಾ ಕಾನೂನು ಉಲ್ಲಂಘನೆಯಾಗಲಿದ್ದು, ಇವುಗಳಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಹೊಸ ನಿಯಮಕ್ಕೆ ಕಾರಣ ಏನು?

ಕೇಂದ್ರ ಸಾರಿಗೆ ಇಲಾಖೆಯು ಹೊಸ ನಿಯಮ ಜಾರಿಗೆ ತರುತ್ತಿರುವುದರ ಹಿಂದೆ ಹಲವಾರು ಕಾರಣಗಳಿದ್ದು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಉಂಟಾಗುವ ವಾಹನ ದಟ್ಟಣೆ ಮತ್ತು ಕೆಲವು ಅಪಘಾತ ಪ್ರಕರಣಗಳಿಗೆ ಕಾರು ಆಕ್ಸೆಸರಿಗಳನ್ನು ಖರೀದಿಸುವುದೇ ಕಾರಣ ಎನ್ನಲಾಗುತ್ತಿದೆ.

Trending On DriveSpark Kannada:

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಸದ್ಯ ರಾಜಧಾನಿ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಈ ನಿಯಮವನ್ನು ಜಾರಿ ಮಾಡಲಾಗಿದ್ದು, ತದನಂತರ ದೇಶದ ಎಲ್ಲಾ ಪ್ರಮುಖ ನಗರಗಳಲ್ಲೂ ಈ ಕಠಿಣ ನಿಯಮ ಜಾರಿಗೆ ಬರಲಿದೆ.

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಈ ಬಗ್ಗೆ ದೆಹಲಿ ಸಂಚಾರಿ ವಿಭಾಗದ ಪೊಲೀಸ್ ಮಾಹಾನಿರ್ದೇಶಕರು ಮಾತನಾಡಿದ್ದು 'ಟ್ರಾಫಿಕ್ ಸಿಗ್ನಲ್‌ನಲ್ಲಿ ನಡೆಯುವ ಚಿಲ್ಲರೆ ವ್ಯಾಪಾರದಿಂದ ವಾಹನ ಸವಾರರಿಗೆ ಕಿರಿಕಿರಿ ಆಗುವುದಲ್ಲದೇ ರಸ್ತೆ ಮಧ್ಯೆ ವ್ಯಾಪಾರದಿಂದಾಗಿ ವಾಹನ ದಟ್ಟಣೆ ಕೂಡಾ ಆಗುತ್ತಿರುವುದು ಹೊಸ ಸಮಸ್ಯೆ ಸೃಷ್ಟಿಸುತ್ತಿದೆ' ಎಂದಿದ್ದಾರೆ.

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಇದೇ ಕಾರಣಕ್ಕೆ ಹೊಸ ನಿಯಮ ಜಾರಿ ಮಾಡಲಾಗುತ್ತಿದ್ದು, ಕಾರು ಆಕ್ಸೆಸರಿ ಖರೀದಿಸುವರಿಗೆ, ಕಾರಿನ ಹಿಂಭಾಗದ ಸೀಟುಗಳಲ್ಲಿ ಮಕ್ಕಳಿಗಾಗಿ ಹಾಕುವ ಡಿವಿಡಿ ಸ್ಕ್ರೀನ್ ಬಳಕೆ ಮಾಡುವವರಿಗೆ ಮತ್ತು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಹಾಕುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ನಿಶ್ಚಿತ ಎಂದಿದ್ದಾರೆ.

Picture credit: Wiki Commons

News Source: Hindustan Times

ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ತಪ್ಪು ಮಾಡಿದ್ರೆ 1 ಸಾವಿರ ದಂಡ ಖಾಯಂ..!!

ಇದಕ್ಕಾಗಿ ವಿಶೇಷ ತಂಡವನ್ನು ಸಿದ್ದಗೊಳಿಸಿರುವ ಟ್ರಾಫಿಕ್ ಪೊಲೀಸರು ವಾಹನ ಸವಾರರ ವಿರುದ್ಧ ಮತ್ತೊಂದು ಗದಪ್ರಹಾರ ನಡೆಸಲು ಮುಂದಾಗಿದ್ದು, ಈ ಮೂಲಕ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿದೆ.

Trending On DriveSpark Kannada:

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Kannada
English summary
Buy car accessories at traffic signals? You can get a Rs 1000 fine.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more