ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

Posted By: Rahul TS
Recommended Video - Watch Now!
India Car Stunts Caught On Camera

ಹೊಸ ಕಾರು ಖರೀದಿಸುವುದಕ್ಕಿಂತಲೂ ಮಿಗಿಲಾಗಿ ಬಳಿಕ ಅದನ್ನು ಶುಚಿಯಾಗಿಡುವುದೇ ಹಲವರಿಗೆ ದೊಡ್ಡ ತಲೆನೋವು. ಅಷ್ಟಕ್ಕೂ ಇದು ಮನುಷ್ಯ ಸಹಜ ಗುಣ. ಕೆಲವರು ತಮ್ಮ ಕಾರನ್ನು ಶುಚಿಯಾಗಿಸುವ ಕೆಲಸದಲ್ಲಿ ಆನಂದವನ್ನು ಹುಡುಕುವುದಾದ್ದಲ್ಲಿ ಇನ್ನು ಕೆಲವರಿಗಿದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದೇ ಕಾರಣಕ್ಕೆ ಕಾರು ಶುಚಿಯಾಗಿಡಲು ಕೆಲವು ಸರಳ ಉಪಾಯಗಳನ್ನು ಇಲ್ಲಿ ನೀಡಲಾಗಿದೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

ನೀವು ದೊಡ್ಡ ಮೊತ್ತದ ಹಣ ಕೊಟ್ಟು ಖರೀದಿ ಮಾಡಿರುವ ಕಾರಿನ ಅಲಕ್ಷ್ಯ ಬೇಡ. ಇದೇ ಕಾರಣಕ್ಕೆ ಹೆಚ್ಚು ಶ್ರಮ ವಹಿಸದೇ ಅತಿ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕಾರನ್ನು ಹೇಗೆ ಶುಚಿಯಾಗಿಡಬಹುದು ಎಂಬುದಕ್ಕೆ ಸಂಬಂಧಪಟ್ಟಂತೆ ಕೆಲವು ಸರಳ ಉಪಾಯಗಳನ್ನು ನಾವಿಲ್ಲಿ ಚರ್ಚೆ ಮಾಡುತ್ತಿದ್ದೇವೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

1. ನಿರ್ವಹಣೆ

ಎರಡು ವಾರಗಳಿಗೊಮ್ಮೆ ನಿಮ್ಮ ಕಾರನ್ನು ತಪ್ಪದೇ ತೊಳೆಯಿರಿ. ಹಾಗೆಯೇ ಮಳೆಗಾಲದಲ್ಲಿ ಕಾರು ಚಲಾಯಿಸುವಾಗ ಕಾರಿನ ಮೇಲೆ ಕೆಸರು ಎಗುರುವುದು ಸಹಜ ಇಂತಹ ಸಮಯದಲ್ಲಿ ವಾರಕೊಮ್ಮೆ ನಿಮ್ಮ ಕಾರನ್ನು ತಪ್ಪದೇ ಶುಚಿಯಾಗಿಸುವುದನ್ನ ಮರೆಯಬೇಡಿ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

2. ವ್ಯಾಕ್ಸಿಂಗ್ (Waxing)

ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ನಿಮ್ಮ ಕಾರನ್ನು ವ್ಯಾಕ್ಸಿಂಗ್ ಮಾಡಿಸಿದ್ದೆ ಆದಲ್ಲಿ ನಿಮ್ಮ ಕಾರನ್ನು ತುಕ್ಕುಹಿಡಿಯುವುದರಿಂದ ಕಾಪಾಡಿಕೊಳ್ಳಬಹುದು. ನಿಮ್ಮ ಕಾರಿಗೆ ವ್ಯಾಕ್ಸಿಂಗ್ ಮಾಡಿಸುವುದರಿಂದ ಕಾರಿನ ಮೌಲ್ಯವನ್ನು ಕೂಡ ನೀವು ಸ್ಥಿರವಾಗಿ ಹೆಚ್ಚಿಸುತ್ತದೆ ಹಾಗು ಹೊಳಪನ್ನು ಕೂಡ ನೀಡುತ್ತದೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

3. ಕಾರಿನ ಇಂಟಿರಿಯರ್ ಶುಚಿಯಾಗಿಡಿ

ನಿಮ್ಮ ಕಾರು ಕೇವಲ ಸಾರಿಗೆಗೆ ಮಾತ್ರವಲ್ಲ ಅದು ಕೆಲವು ಬಾರಿ ನಿಮ್ಮ ಮನೆಯಾಗಿರುತ್ತದೆ. ಕುಡಿದ ಕಾಫಿ ಕಪ್, ಖಾಲಿ ಚಿಪ್ಸ್ ಅಥವ ಬಿಸ್ಕೆಟ್ ಪ್ಯಾಕೆಟ್ ಗಳನ್ನು ನೀವು ನಿಮ್ಮ ಕಾರಿನ ಒಳಗೆಯೆ ಬಿಸಾಡುತ್ತೀರಿ. ಕಾಫಿ ಅಥವಾ ಜ್ಯೂಸ್ ಕುಡಿದ ಕಪ್ ಗಳನ್ನು ದಿನಗಳವರೆಗೆ ನೀವು ಅದನ್ನು ಶುಚಿಮಾಡದಿದ್ದರೆ ಅವುಗಳು ಸೋರಲು ಶುರುಮಾಡಿ ನಿಮ್ಮ ಕಾರಿನಭಾಗಗಳನ್ನು ತುಕ್ಕು ಹಿಡಿಯುವ ಹಾಗೆ ಮಾಡುತ್ತದೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

4. ಲವಣಗಳು (Salt)

ನೀವು ಚಳಿಗಾಲದಲ್ಲಿ ಕರಾವಳಿ ಪ್ರದೇಶಗಳಲ್ಲಿ ಕಾರನ್ನು ಚಲಾಯಿಸುತ್ತಿದ್ದರೆ ಅದರಿಂದ ಬರುವ ಲವಣಾಂಶವು ನಿಮ್ಮ ಕಾರನ್ನು ತುಕ್ಕುಹಿಡಿಸಬಲ್ಲದು. ಕಾರನ್ನು ನಿಯಮಿತವಾಗಿ ತೊಳೆಯುವುದರಿಂದ ಅಂಟಿರುವ ಲವಣಗಳನ್ನು ತೊಲಗಿಸಬಹುದು.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

5. ಕಾರಿನ ಕೆಳಭಾಗವನ್ನು ಕೂಡ ಶುಚಿಯಾಗಿಡಿ

ನಿಮ್ಮ ಕಾರನ್ನು ಒಳಗೆ ಮತ್ತು ಹೊರಗೆ ತೊಳೆಯುವುದಲ್ಲದೆ ಕಾರಿನ ಕೆಳಭಾಗದಲ್ಲಿ ಕೂಡ ಶುಚಿಮಾಡವುದನ್ನು ಮರೆಯಬೇಡಿ. ಏಕೆಂದರೆ ಕಾರಿನ ಕೆಳಭಾಗದಲ್ಲಿಯೆ ಹೆಚ್ಚು ಧೂಳು, ಕೆಸರು ಮತ್ತು ಕೊಳೆ ತುಂಬಿರುತ್ತದೆ ಅದರಿಂದಾಗಿ ಕಾರಿನ ಕೆಳಭಾಗವನ್ನು ಕೂಡ ಶುಚಿಯಾಗಿಟ್ಟುಕೊಳ್ಳಬೇಕು.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

6. ಕಾರನ್ನು ತೊಳೆದನಂತರ ಒಣಗಿಸಿ

ನಿಮ್ಮ ಕಾರಿನ ಎಲ್ಲಾ ಭಾಗಗಳನ್ನು ತೊಳೆದನಂತರ ಎಲ್ಲಿಯೂ ನೀರು ಶೇಖರಣೆಯಾಗದಿರುವ ಹಾಗೆ ಅವುಗಳನ್ನು ಸ್ವಚ್ಚಗೊಳಿಸಿ ಹಾಗು ಒಳಗಿಸಿ. ಕಾರಿನ ಹಲವಾರು ಭಾಗಗಳು ಕಬ್ಬಿಣದಿಂದಲೇ ಮಾಡಲಾಗಿದ್ದು, ಕಾರಿನಲ್ಲಿ ಒಂದೆ ಕಡೆ ನೀರು ತುಂಬಿಕೊಂಡರು ಸಹ ನಿಮ್ಮ ಕಾರು ತುಕ್ಕು ಹಿಡಿಯುತ್ತವೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ಸುಲಭ ವಿಧಾನಗಳನ್ನು ತಪ್ಪದೇ ಅನುಸರಿಸಿ...

7. ಕಾರನ್ನು ಕವರ್ ಮಾಡಿ

ಕಾರನ್ನು ಬಳಸದಿರುವಾಗ ಅದನ್ನು ಬಿಸಿಲು, ಮಳೆ ಮತ್ತು ಗಾಳಿಯಿಂದ ಕಾಪಾಡಿಕೊಳ್ಳಿ. ಅದಕ್ಕಾಗಿ ಕಾರನ್ನು ಬ್ರಾಂಡೆಡ್ ಕಾರ್ ಕವರ್ ನಿಂದ ರಕ್ಷಿಸಿ. ಇದನ್ನು ಮಾಡುವುದರಿಂದ ನೀವು ನಿಮ್ಮ ಕಾರಿನ ಮೌಲ್ಯ ಕಾಪಾಡಿಕೊಳ್ಳುವುದಲ್ಲದೇ ಉತ್ತಮ ಕಾರ್ಯಕ್ಷಮತೆಗೂ ಅನುಕೂಲಕರವಾಗುತ್ತದೆ.

Trending On DriveSpark Kannada:

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು ಇರಲೇಬೇಕು...

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

English summary
Simple Guide To Prevent Rust In Your Car.
Story first published: Friday, February 2, 2018, 10:58 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark