ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಇಸುಜು ಮೋಟರ್ಸ್ ತಮ್ಮ ಡಿ ಮ್ಯಾಕ್ಸ್ ಪಿಕಪ್ ಶ್ರೇಣಿಯಲ್ಲಿನ ವಾಹನಗಳ ಮೇಲೆ ದೇಶವ್ಯಾಪ್ತಿಯಾಗಿ ಬೆಲೆಯನ್ನು ಏರಿಸಲಾಗಿದ್ದು, ಬೆಲೆ ಏರಿಕೆಯ ನಂತರ ಹೊಸ ಬೆಲೆಯು ಸೆಪ್ಟೆಂಬರ್ 1, 2018 ರಿಂದ ಜಾರಿಗೆ ಬರಲಿದೆ

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಇಸುಜು ಮೋಟರ್ಸ್ ತಮ್ಮ ಡಿ ಮ್ಯಾಕ್ಸ್ ಪಿಕಪ್ ಶ್ರೇಣಿಯಲ್ಲಿನ ವಾಹನಗಳ ಮೇಲೆ ದೇಶವ್ಯಾಪ್ತಿಯಾಗಿ ಬೆಲೆಯನ್ನು ಏರಿಸಲಾಗಿದ್ದು, ಬೆಲೆ ಏರಿಕೆಯ ನಂತರ ಹೊಸ ಬೆಲೆಯು ಸೆಪ್ಟೆಂಬರ್ 1, 2018 ರಿಂದ ಜಾರಿಗೆ ಬರಲಿದೆ ಎಂದು ಇಸುಜು ಸಂಸ್ಥೆ ಹೇಳಿಕೊಂಡಿದೆ.

ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಇಸುಜು ಇಂಡಿಯಾ ಲೈನ್‍ ಅಪ್‍‍ನಲ್ಲಿರುವ ಡಿ ಮ್ಯಾಕ್ಸ್ ಶ್ರೇಣಿಯಲ್ಲಿನ ರೆಗ್ಯುಲರ್ ಕ್ಯಾಬ್ ಮಾಡಲ್‍‍ಗಳಿಂದ 4x4 ಅಡ್ವೆಂಚರ್ ಪಿಕಪ್ ವೆಹಿಕಲ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾಡಲ್‍‍ನ ವರೆಗು ಎಲ್ಲಾ ಮಾಡಲ್‍‍ಗಳ ಮೇಲೆ ಬೆಲೆ ಏರಿಸಲಾಗಿದೆ. ಹೆಚ್ಚುತ್ತಿರುವ ವಿತರಣೆ ಮತ್ತು ಇನ್‍ಪುಟ್ ವೆಚ್ಚಗಳ ಕಾರಣದಿಂದಾಗಿ ವಾಹನಗಳಾ ಮೇಲೆ ಬೆಲೆ ಏರಿಸಲಾಗಿದೆ ಎನ್ನಲಾಗಿದೆ.

ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಇಸುಜು ಸಂಸ್ಥೆಯು ನೂತನವಾಗಿ ತೆಗೆದುಕೊಂಡ ತೀರ್ಮಾನದಿಂದ, ಎಲ್ಲಾ ಮಾಡಲ್‍‍ಗಳ ಮೇಲೆ ಸುಮಾರು ಶೇಕಡ ಎರಡರಿಂದ ಮೂರರಷ್ಟು ಬೆಲೆ ಅಧಿಕವಾಗಲಿದೆ ಎನ್ನಲಾಗಿದೆ. ಅಂದರೆ ಆ ಮಾಡಲ್‍‍ಗಳ ಪ್ರಸ್ಥುತ ಬೆಲೆಯ ಆಧಾರದ ಮೇಲೆ ರೂ.20,000 ಸಾವಿರದಿಂದ 30,000 ಸಾವಿರ ಅಧಿಕವಾಗಿರಲಿದೆ.

ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಇಸುಜು ಸಂಸ್ಥೆಯು ಈ ವರ್ಷದಲ್ಲಿ ತಮ್ಮ ಕಾರುಗಳ ಮೇಲೆ ಬೆಲೆ ಏರಿಸುತ್ತಿರುವುದು ಇದು ಎರಡನೆಯ ಬಾರಿ. ಈ ವರ್ಷದ ಪ್ರಾರಂಭದಲ್ಲಿ ಜನವರಿ ತಿಂಗಳಿನಲ್ಲಿ ಎಲ್ಲಾ ಮಾಡಲ್‍‍ಗಳ ಮೇಲೆ ಎರಡರಿಂದ ಮೂರರಷ್ಟು ಬೆಲೆ ಏರಿಸಿದೆ.

ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಇಸುಜು ಪಿಕಪ್ ಶ್ರೇಣಿಯಲ್ಲಿ ಮೂರು ವೇರಿಯಂಟ್‍‍ಗಳಿದ್ದು, ಅವು ಮ್ಯಾಕ್ಸ್ ಕ್ಯಾಬ್, ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಮತ್ತು ಹೈ ಎಂಡ್ ಮಾಡಲ್ ಡಿ ಮ್ಯಾಕ್ಸ್ ವಿ ಕ್ರಾಸ್. ಇಸುಜು ಡಿ ಮ್ಯಾಕ್ಸ್ ವಿ-ಕ್ರಾಸ್ ಸ್ಟ್ಯಾಂಡರ್ಡ್ ಹಾಗು ಹೈ ಎಂಡ್ ಎಂಬ ಎರಡು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಇಸುಜು ಸಂಸ್ಥೆಯ ಪ್ರಾರಂಭಿಕ ಮಾಡಲ್ ಡಿ-ಮ್ಯಾಕ್ಸ್ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.6.86 ಲಕ್ಷದಿಂದ ಪ್ರಾರಂಭಗೊಂಡು ಮತ್ತು ಹೈ ಎಂಡ ವೇರಿಯಂಟ್‍‍ಗಳ ಬೆಲೆಯು ಸರಾಸರಿ ರೂ.14.30 ಲಕ್ಷದ ವೆರೆಗು ಮತ್ತು 15.81 ಲಕ್ಷದ ವರೆಗು ಇದೆ.

ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಟಾಪ್ ಎಂಡ್ ವೇರಿಯಂಟ್ 4x4 ಅಡ್ವೆಂಚರ್ ಮಾಡಲ್ 2,999ಸಿಸಿ ಕೆಪಾಸಿಟಿ ಇರುವ ಟರ್ಬೋ-ಇಂಟರ್ ಕೂಲ್ಡ್ ಡೀಸೆಲ್ ಎಂಜಿ ಅನ್ನು ಹೊಂದಿದ್ದು, ಇದು 134ಬಿಹೆಚ್ ಮತ್ತು 320ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಇಸುಜು ಸಂಸ್ಥೆಯ ಈ ಕಾರುಗಳ ಮೇಲೆ ಮತ್ತೆ ಬೆಲೆ ಏರಿಕೆ..

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಇಸುಜು ಮೋಟರ್ಸ್ ತಮ್ಮ ಪಿಕಪ್ ವೆಹಿಕಲ್ ಶ್ರೇಣಿಯಲ್ಲಿನ ವಾಹನಗಳ ಮೇಲೆ ಬೆಲೆಯನ್ನು ಏರಿಸಿದೆ. ಪ್ರತೀ ವರ್ಷದ ಎರಡನೆಯ ಅರ್ಧ ವಾರ್ಶಿಕ ಮಾಸದಲ್ಲಿ ತಪ್ಪದೇ ಬೆಲೆಯನ್ನು ಏರಿಸುತ್ತದೆ. ದೇಶಿಯ ಮಾರುಕಟ್ಟೆಯಲ್ಲಿನ ಇನ್ನಿತರೆ ವಾಹನ ತಯಾರಕ ಸಂಸ್ಥೆಗಳಾದ ಮಾರುತಿ ಸುಜುಕಿ, ಮಹೀಂದ್ರಾ, ಟಾಟಾ ಮೋಟರ್ಸ್, ಹೋಂಡಾ ಕಾರ್ಸ್ ಮತ್ತು ಮರ್ಸಿಡೀಸ್ ಬೆಂಝ್ ಕೂಡಾ ತಮ್ಮ ಕಾರುಗಳ ಮೇಲೆ ಬೆಲೆಯನ್ನು ಏರಿಸಿದೆ.

Most Read Articles

Kannada
Read more on isuzu price hike
English summary
Isuzu Motors To Increase Prices Of D-Max Pickup Range From September.
Story first published: Saturday, August 25, 2018, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X