ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

Written By: Rahul TS

ಇಟಲಿಯ ಮೂಲದ ಸೂಪರ್ ಕಾರು ತಯಾರಿಕಾ ಸಂಸ್ಥೆಯಾದ ಲಂಬೋರ್ಗಿನಿಯು ತನ್ನ ಹೊಸ ಹುರಕಾನ್ ಪರ್ಫಾಮೆಂಟ್ ಸ್ಪೈಡರ್ ಕಾರು ಮಾದರಿಯನ್ನು 2018ರ ಜೆನೆವಾ ಮೋಟಾರ್ ಶೋನಲ್ಲಿ ಅನಾವರಣಗೊಳಿಸಿದ್ದು, ಇದು ಏರೋ ಡೈನಾಮಿಕ್‌-ಅಡ್ವಾನ್ಸ್ಡ್ ಹುರಕಾನ್ ಪರ್ಫಾಮೆಂಟ್ ಎಲ್‍‍ಪಿ 610-4 ಕಾರಿನ ಹೊಸ ಮಾದರಿಯಾಗಿದೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಲಂಬೋರ್ಗಿನಿ ನಿರ್ಮಾಣದ ಈ ಹೊಸ ಹುರಕಾನ್ ಪರ್ಫಾಮೆಂಟ್ ಸ್ಪೈಡರ್ ಕಾರು ರೂಫ್‍‍ಲೆಸ್ ಕಾರು ಮಾದರಿಯಾಗಿದ್ದು, ಸಂಪೂರ್ಣ ರೂಫ್ ಯಾಂತ್ರಿಕತೆಯು 125 ಕೆಜಿಯನ್ನು ಕಾರಿಗೆ ಸೇರಿಸಿದೆ. ಹೀಗಾಗಿ ಐಷಾರಾಮಿ ಸೂಪರ್ ಕಾರುಗಳ ಮಾದರಿಯಲ್ಲಿ ಉತ್ತಮ ಬೇಡಿಕೆ ಹೊಂದುವ ನೀರಿಕ್ಷೆಯಿದೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಈ ಸೂಪರ್‍‍ಕಾರ್ ಫ್ಯಾಬ್ರಿಕ್ ಸೂಕ್ಷ್ಮ ಟಾಪ್ ಕೇವಲ 17 ಸೆಕೆಂಡ್‍‍ನಲ್ಲಿ ತೆಗೆದು ಮುಚ್ಚಬಹುದಾಗಿದ್ದು, ಇನ್ನು ಈ ಕಾರು ಗಂಟೆಗೆ 50 ಕಿಲೋಮೀಟರ್ ಕನ್ವರ್ಷನ್ ಮಾಡಲಿದೆಯಂತೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಎಂಜಿನ್ ಸಾಮರ್ಥ್ಯ

5.2 ಲೀಟರ್ V10 ಎಂಜಿನ್ ಹೊಂದಿರುವ ಈ ಕಾರು 631 ಬಿಹೆಚ್‍ಪಿ ಮತ್ತು 601 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪದೆದಿದ್ದು, 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್‍ಮಿಷನ್ ಪಡೆದಿದೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಕಾರಿನ ಕರ್ಬ್ ತೂಕ 1507 ಕಿಲೋಗ್ರಾಂ ಆಗಿದ್ದು, ರೆಗ್ಯುಲರ್ ಮಾದರಿಗಿಂತ 25ಕಿಲೋಗ್ರಾಂ ಕಡಿಮೆಯೆ ಇದೆ. ಸಂಸ್ಥೆಯು ಈ ಕಾರಿನ ಏರೋಡೈನಾಮಿಕ್ಸ್ ವಿಚಾರದಲ್ಲಿ ಯಾವುದೇ ಸ೦ಧಾನ ಮಾಡಿಕೊಳ್ಳುವ ಅವಕಾಶವಿಲ್ಲವೆಂದು ಹೇಳಲಾಗಿದೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಲ್ಯಾಂಬೋರ್ಗಿನಿಯ ಆಟ್ಟಿವಾ ಏರೋಡೈನಾಮಿಕ್ಸ್ ಯಾಂತ್ರಿಕತೆಯನ್ನು ಏರೊಡೈನಾಮಿಕ್ ಲ್ಯಾಂಬೋರ್ಗಿನಿ ಅಟ್ಟಿವಾ ಎಂದು ಕರೆಯಲಾಗಿದ್ದು, ಇದನ್ನು ಹೊಸ ಕಾರಿನಲ್ಲಿ ಬಳಸಲಾಗಿದೆಯಂತೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಹೀಗಾಗಿಯೇ ಕೇವಲ 3.1 ಸೆಕೆಂಡಿಗೆ 0-100 ಗಂಟೆಗೆ ಕಿಲೋಮೀಟರ್ ಚಲಿಸುವ ಶಕ್ತಿ ಹೊಂದಿದ್ದು, ಹಾಗೆಯೇ 352 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆಕೊಂಡಿರಲಿದೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಪರ್ಫಾಮೆಂಟ್ ಸ್ಪೈಡರ್ ಕಾರು ತನ್ನ ರೆಗ್ಯುಲರ್ ಮಾದರಿಯಿಂದ ಸ್ಟ್ರಾಡ್ (ಕಂಫರ್ಟ್) , ಸ್ಪೋರ್ಟ್ ಮತ್ತು ಕೋರ್ಸಾ (ಟ್ರಾಕ್) ಮೋಡ್‍‍ಗಳನ್ನು ಪಡೆದುಕೊಂಡಿದ್ದು, ಈ ಸೂಪರ್ ಕಾರು ಪ್ರಿಯರನ್ನು ಸೆಳೆಯಿದೆ.

ಜಿನೆವಾ ಆಟೋ ಮೇಳದಲ್ಲಿ ಸದ್ದು ಮಾಡಿದ ಲ್ಯಾಂಬೋರ್ಗಿನಿ ಹುರಕಾನ್ ಪರ್ಫಾಮೆಂಟ್ ಸ್ಪೈಡರ್

ಹುರಾಕಾನ್ ಪರ್ಫಾಮೆಂಟ್ ಕೌಪ್ ಈಗಾಗಲೇ ಜರ್ಮನಿಯಲ್ಲಿ ನುರ್‍‍ಬರ್ಗ್ರಿಂಗ್ ಟ್ರಾಕ್ ನಲ್ಲಿ ಫಾಸ್ಟೆಸ್ಟ್ ಕಾರು ಮಾದರಿ ಎಂದು ಬಿರುದನ್ನು ಪಡೆದಿದ್ದು, ಓಪೆನ್ ರೂಫ್ ಆಯ್ಕೆಯು ರೈಡಿಂಗ್ ಅನುಭೂತಿಯನ್ನು ಇನ್ನಷ್ಟು ಥ್ರಿಲ್ಲಿಂಗ್ ಆಗಿಸಲಿದೆ.

Read more on lamborghini super car
English summary
Lamborghini Huracan Performante Spyder Unveiled — Specs, Features & Images.
Story first published: Wednesday, March 7, 2018, 13:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark