ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

Written By:

ನಿಮೆಗೆಲ್ಲಾ ಗೊತ್ತಿರುವ ಹಾಗೆ ಆಪ್ ರೋಡ್ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಮಹೀಂದ್ರಾ ಥಾರ್ ಸದ್ಯ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಳ್ಳುತ್ತಿದ್ದು, ಥಾರ್ ವಂಡರ್‌ಲಸ್ಟ್ ಎನ್ನುವ ಹೆಸರಿನೊಂದಿಗೆ ಕಾರು ಪ್ರಿಯರನ್ನು ಸೆಳೆಯುತ್ತಿದೆ.

ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

2018ರ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ಥಾರ್ ವಂಡರ್‌ಲಸ್ಟ್ ಮಾದರಿಯನ್ನು ಪ್ರದರ್ಶನ ಮಾಡಲಾಗಿದ್ದು, ಸದ್ಯದ ಥಾರ್ ಮಾದರಿಗಳಿಂತಲೂ ಕುತೂಹಕರ ವಿನ್ಯಾಸಗಳು ಮತ್ತು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಂಗೊಳಿಸುತ್ತಿದೆ.

ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಹೊಸ ಥಾರ್‌ನಲ್ಲಿ ಗುರುತರ ಬದಲಾವಣೆಗಳಾದ ಕಸ್ಟಮೈಜ್ಡ್ ಗುಲ್‌ವಿಂಗ್ ಸ್ಟೈಲ್ ಡೋರ್‌ಗಳು, ಸೆವೆನ್ ಸ್ಲಾಟ್ ಫ್ರಂಟ್ ಗ್ರಿಲ್, ಎಲ್ಇಡಿ ಹೆಡ್‌ಲೈಟ್ಸ್, ಎಲ್‌ಇಡಿ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ಅಳವಡಿಕೆ ಹೊಂದಿದೆ.

ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಜೊತೆಗೆ ಕಸ್ಟಮ್ ಫೆಂಡರ್, ಟ್ವಿನ್ ಎಕ್ಸಾಸ್ಟ್ ಪೈಪ್ಸ್, ವಿಶೇಷ ವಿನ್ಯಾಸದ ಬ್ಯಾನೆಟ್, 33 ಇಂಚಿನ ಟೈರ್‌ಗಳು, ಎಲೆಕ್ಟ್ರಿಕ್ ಬ್ಯೂ ಮ್ಯಾಟೆ ಪೇಂಟ್ ಸ್ಕೀಮ್, ಕಾರಿನ ಮೇಲ್ಭಾಗದಲ್ಲಿ ಮಾರ್ಕರ್ ಲೈಟ್‌ಗಳು ಹೊಸ ಕಾರಿಗೆ ಹೊಸ ಲುಕ್ ನೀಡಿವೆ.

ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಎಂಜಿನ್ ಸಾಮರ್ಥ್ಯ

2.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಥಾರ್ ವಂಡರ್‌ಲಸ್ಟ್ ಕಾರುಗಳು 105 ಬಿಎಚ್‌ಪಿ ಮತ್ತು 247ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಫೌರ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದುಕೊಂಡಿವೆ.

ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಇದರೊಂದಿಗೆ ಆಪ್ ರೋಡಿಂಗ್ ಚಾಲನೆಗೆ ಸಹಕಾರಿಯಾಗಬಲ್ಲ ಎಲ್ಲಾ ಅಂಶಗಳನ್ನು ಥಾರ್ ವಂಡರ್‌ಲಸ್ಟ್‌ನಲ್ಲಿ ಜೋಡಿಸಲಾಗಿದ್ದು, ಕಾರಿನ ಹಿಂಭಾಗದಲ್ಲಿ ನೀಡಲಾಗಿರುವ ರಿರ್ ಬಂಪರ್ ಕಾರಿನ ಖದರ್ ಹೆಚ್ಚಿಸಿದೆ ಎನ್ನಬಹುದು.

ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಬೆಲೆ ಮತ್ತು ಬಿಡುಗಡೆ

ಅಧಿಕೃತ ಮಾಹಿತಿ ಇಲ್ಲವಾದರೂ ಹೊಸ ಥಾರ್ ಕಾರುಗಳು 2019ರ ಮೊದಲಾರ್ಧದಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಸಾಮಾನ್ಯ ಥಾರ್ ಎಸ್‌ಯುವಿಗಿಂತಲೂ 1 ಲಕ್ಷಕ್ಕೂ ಅಧಿಕ ಬೆಲೆ ಹೊಂದಿರಲಿವೆ ಎನ್ನಲಾಗಿದೆ.

ಆಟೋ ಎಕ್ಸ್‌ಪೋ 2018: ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಆಪ್ ರೋಡ್ ಕಾರುಗಳ ಪೈಕಿ ಥಾರ್‌ಗೆ ಹೆಚ್ಚಿನ ಬೇಡಿಕೆಯಿದ್ದು, ಇದೇ ಬೇಡಿಕೆಯನ್ನು ದ್ವಿಗುಣಗೊಳಿಸಲು ಮುಂದಾಗಿರುವ ಮಹೀಂದ್ರಾ ಸಂಸ್ಥೆಯು ಥಾರ್ ವಂಡರ್‌ಲಸ್ಟ್‌ ಸಿದ್ದಗೊಳಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

Read more on mahindra auto expo 2018
English summary
Auto Expo 2018: Mahindra Thar Wanderlust Showcased - Specifications, Features & Images.
Story first published: Monday, February 12, 2018, 13:58 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark