ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಸಿಯಾಜ್ ಫೇಸ್‍‍ಲಿಫ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.8.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪದೆದುಕೊಂಡಿದೆ. ಹೊಸದಾಗಿ ಬಿಡುಗಡೆಗೊಂಡ ಈ ಕಾರು

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಸಿಯಾಜ್ ಫೇಸ್‍‍ಲಿಫ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.8.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪದೆದುಕೊಂಡಿದೆ. ಹೊಸದಾಗಿ ಬಿಡುಗಡೆಗೊಂಡ ಈ ಕಾರು ನೂತನವಾಗಿ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದ ವಿನ್ಯಾಸದಲ್ಲಿ ನವೀಕರಣವನ್ನು ಪಡೆದುಕೊಂಡಿದ್ದು, ಒಟ್ಟಾರೆ ವಿನ್ಯಾಸವು ಔಟ್‍‍ಗೋಯಿಂಗ್ ಮಾಡಲ್‍‍ನಂತೆಯೆ ಕಾಣಿಸುತ್ತದೆ. ತಾಂತ್ರಿಕವಾಗಿ ಈ ಕಾರಿನಲ್ಲಿ ಹೊಸ ಪೆಟ್ರೋಲ್ ಎಂಜಿನ್ ಅಳವಡಿಸಿರುವುದು ಹೈಲೈಟ್ ಎಂದೇ ಹೇಳಬಹುದು.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ನೂತನ ಪೆಟ್ರೋಲ್ ಎಂಜಿನ್

ಮೇಲೆ ಹೇಳಿರುವ ಹಾಗೆ ಹೊಸ ಪೆಟ್ರೋಲ್ ಎಂಜಿನ್ ಪಡೆದಿರುವುದು ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಹೈಲೈಟ್ ಆಗಿದ್ದು, ನೂತನ ಕೆ15 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 103ಬಿಹೆಚ್‍‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಅಲ್ಲದೇ ಜೊತೆಗೆ ಸಿಯಾಜ್ ಫೇಸ್‍‍ಲಿಫ್ಟ್ ಕಾರು ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಖರೀದಿಗೆ ಲಭವಿದ್ದು, ಇದರಲ್ಲಿರುವ 1.3 ಲೀಟರ್ ಡೀಸೆಲ್ ಎಂಜಿನ್ 88ಬಿಹೆಚ್‍‍ಪಿ ಮತ್ತು 200ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡುದುಕೊಂಡಿದೆ. ಹಾಗು ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಎಸ್‍‍ಹೆಚ್‍ವಿಎಸ್ ಟೆಕ್ನಾಲಜಿ

ಎಸ್‍‍ಹೆಚ್‍ವಿಎಸ್ (ಸ್ಮಾಲ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ) ಕೋಮಲವಾದ ಹೈಬ್ರಿಡ್ ಯೂನಿಟ್ ಆಗಿದ್ದು, ಇದು ಲಿಥಿಯಮ್ ಐಯಾನ್ ಹಾಗು ಲೀಡ್ ಆಸಿಡ್ ಡ್ಯುಯಲ್ ಬ್ಯಾಟರಿ ಸೆಟಪ್ ಅನ್ನು ಹೊಂದಿರಲಿದೆ. ಈ ಸಿಸ್ಟಮ್ ಮುಂಬರಲಿರುವ ಮಾರುತಿ ಸುಜುಕಿ ಸಂಸ್ಥೆಯ ಕಾರುಗಳಲ್ಲಿ ಬಳಸಬಹುದು ಎನ್ನಲಾಗಿದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಈ ಸಿಸ್ಟಮ್ 3 ಪ್ರಮುಖ ಕಾರ್ಯಗಳನ್ನು ಒದಗಿಸುತ್ತದೆ.

1. ಐಡಲ್ ಸ್ಟಾರ್ಟ್/ಸ್ಟಾಪ್

ಈ ಕಾರ್ಯವು ಕಾರಿನ ಎಂಜಿನ್ ಐಡಲ್‍‍ನಲಿದ್ದಾಗ ಆಟೋಮ್ಯಾಟಿಕ್ಆಫ್ ಆಗಿ ಮತ್ತೇ ಗೇರ್ ಮತ್ತು ಆಕ್ಸಿಲರೇಟರ್ ಇನ್‍‍ಫುಟ್‍‍ನ ಚಲನದ ನಂತರ ಆಟೋಮ್ಯಾಟಿಕ್ ಆಗಿ ಸ್ಟಾರ್ಟ್ ಆಗುತ್ತದೆ. ಇದು ಇಂಧನ ಆರ್ಥಿಕತೆಗೆ ಸಾಕಷ್ಟು ಸಹಾಯ ಮಾಡುತ್ತದೆ.

2.ಬ್ರೇಕ್ ಎನರ್ಜಿ ರೀಜನರೇಷನ್

ಈ ಸಿಸ್ಟಮ್ ಬ್ರೇಕ್ ಮತ್ತು ಎಲಕ್ಟ್ರಿಕ್ ಮೋಟರ್‍‍ಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಒಂದು ರಿಟಾರ್ಡ್ ಮಾಡುವ ಶಕ್ತಿ ಮೋಟರ್‍‍‍ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರತಿಯಾಗಿ, ಅದನ್ನು ಜನರೇಟರ್ ಆಗಿ ಉತ್ಪಾದಿಸುತ್ತದೆ. ಉತ್ಪತ್ತಿಯಾದ ಶಕ್ತಿಯನ್ನು ಲಿ-ಐಯಾನ್ ಬ್ಯಾಟರಿಯಲ್ಲಿ ಸಂಗ್ರಹಿಸಲಾಗುತ್ತದೆ.

3.ಟಾರ್ಕ್ ಅಸ್ಸಿಸ್ಟ್ ಫಂಕ್ಷನ್

ಇದರಲ್ಲಿನ ಎಲೆಕ್ಟ್ರಿಕ್ ಮೋಟರ್, ಲಿಯಾನ್ ಬ್ಯಾಟರಿಯಿಂದ ಶಕ್ತಿಯನ್ನು ಶೇಕರಿಸಿ, ಅಧಿಕ ಟಾರ್ಕ್ ಅನ್ನು ಸಡನ್ ಆಕ್ಸಿಲರೇಷನ್ ಸಮಯದಲ್ಲಿ ಎಂಜಿನ್‍‍ಗೆ ರವಾಸಿತುತ್ತದೆ.

ಇಂಧನ ದಕ್ಷತೆಯ ಮೇಲೆ ಹೆಚ್ಚು ರಾಜಿ ಮಾಡದೆಯೇ ಇದು ಕಾರು ಹೆಚ್ಚು ಕಾರ್ಯಕ್ಷಮತೆಯನ್ನು ನೀಡುತ್ತದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ನವೀಕರಿಸಲಾದ ಇಂಟೀರಿಯರ್

ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಒಳಭಾಗದಲ್ಲಿ ನವೀಕರಣವನ್ನು ಪಡೆದಿದ್ದು, ಈ ಬಾರಿ ವುಡೆನ್ ಪ್ಯಾನೆಲಿಂಗ್ ಡ್ಯುಯಲ್ ಟೋನ್ ಲೇಯೌಟ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಕಾರಿನ ಡ್ಯಾಶ್‍‍ಬೋರ್ಡ್ ಮತ್ತು ಡೋರ್ ಪ್ಯಾನೆಲ್‍‍ಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಮತ್ತು ಜೊತೆಗೆ ಲೆಧರ್‍‍ನಿಂದ ಸಜ್ಜುಗೊಂಡ ಸೀಟ್‍‍ಗಳು ಕಂಫರ್ಟ್ ನೀಡುತ್ತದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಮಲ್ಟಿ ಇನ್ಫರ್ಮೇಷನ್ ಇನ್ಸ್ಟ್ರೂಮೆಂಟ್ ಕಂಸೋಲ್

ಬಿಡುಗಡೆಗೊಂಡ ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ಅಳವಡಿಸಲಾಗಿದೆ. ಇದರಲ್ಲಿನ 4.2 ಟಿಎಫ್‍‍ಟಿ ಡಿಸ್ಪ್ಲೇ, ಕಾರಿನ ಫ್ಯುಯಲ್ ಕಂಸಂಪ್ಷನ್, ಎನರ್ಜಿ ಫ್ಲೋ, ಟ್ರಿಪ್ ಡೀಟೇಲ್ಸ್, ಡ್ರೈವಿಂಗ್ ರೇಂಜ್ ಮತ್ತು ಗೇರ್ ಶಿಫ್ಟ್ ಇಂಡಿಕೇಟರ್ ಅನ್ನು ತೋರಿಸುತ್ತದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಮತ್ತು ಟೈಲ್ ಲ್ಯಾಂಪ್ಸ್

ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳು ಈ ಬಾರಿ ಹೊಸ ಡಿಆರ್‍ಎಲ್‍‍ನೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್ ಅನ್ನು ಪಡೆದುಕೊಂಡಿದ್ದು, ಇದು ಕಾರಿನ ಹೊರ ವಿನ್ಯಾಸವನ್ನು ಆಕರ್ಷಕವಾಗಿ ಕಾಣಲು ಸಹಕರಿಸುತ್ತದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಇನ್ನು ಕಾರಿನ ಹಿಂಭಾಗದಲ್ಲಿಯು ಎಲ್ಇಡಿ ಪ್ರೇರಿತ ಟೈಲ್ ಲ್ಯಾಂಪ್ ಕ್ಲಸ್ಟರ್ ಅನ್ನು ನೀಡಲಾಗಿದ್ದು, ಇದು ಔಟ್‍ಗೋಯಿಂಗ್ ಕಾರಿನ ವಿನ್ಯಾಸವನ್ನೆ ಹೋಲುತ್ತದೆ. ಹಾಗು ಇದು ಕಾರಿಗೆ ಮಾಡರ್ನ್ ಟಚ್ ಅನ್ನು ನೀಡಲು ಸಹಕರಿಸುತ್ತದೆ.

ಹೊಸ ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಇನ್ನಿತರೆ ಪ್ರಮುಖ ವೈಶಿಷ್ಟ್ಯತೆಗಳು

ಮೇಲೆ ಹೇಳಿರುವ ವೈಶಿಷ್ಟ್ಯತೆಗಳಲ್ಲದೆ, ಈ ಕಾರು ಜೊತೆಗೆ

16 ಇಂಚಿನ ಅಲಾಯ್ ಚಕ್ರಗಳು

ಕ್ರೂಸ್ ಕಂಟ್ರೋಲ್

ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಿಚಬಹುದಾದ ಒಆರ್‍‍ವಿಎಮ್‍‍ಗಳು

ಕ್ಲೈಮೇಟ್ ಕಂಟ್ರೋಲ್

ವಾಯ್ಸ್ ಕಮಾಂಡ್

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

ಹಿಲ್ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್

Most Read Articles

Kannada
Read more on maruti suzuki new car sedan
English summary
Maruti Ciaz 2018 Facelift Top Features To Know.
Story first published: Wednesday, August 22, 2018, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X