ಜೆನ್ ಹೆಸರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯಿಂದ ಮತ್ತೊಂದು ಹೊಸ ಕಾರು.??

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಹೊಸ ವೈ1ಕೆ ಹ್ಯಾಚ್‍‍ಬ್ಯಾಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸುವ ಯೋಜನೆಯಲಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಹೊಸ ವೈ1ಕೆ ಹ್ಯಾಚ್‍‍ಬ್ಯಾಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸುವ ಯೋಜನೆಯಲಿದ್ದು, 2019ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ. ಹೊಸ ಹ್ಯಾಚ್‍‍ಬ್ಯಾಕ್ ಕಾರು ಸಂಸ್ಥೆಯ ಕಾರುಗಳ ಪಟ್ಟಿಯಲ್ಲಿ ಆಲ್ಟೊ ಕಾರಿನ ಮೇಲೆ ಸ್ಥಾನವನ್ನು ಪಡೆದುಕೊಳ್ಳಲಿದೆ.

ಜೆನ್ ಹೆಸರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯಿಂದ ಮತ್ತೊಂದು ಹೊಸ ಕಾರು.??

ಮಾಹಿತಿಗಳ ಪ್ರಕಾರ ಮಾರುತಿ ವೈ1ಕೆ ಹ್ಯಾಚ್‍‍ಬ್ಯಾಕ್ ಕಾರು ಫ್ಯುಚುರ್ ಎಸ್ ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯಾಗಿದ್ದು, ಈ ಕಾರು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು. ಹೊಸ ಕಾರು ಎಸ್‍‍ಯುವಿ ಕಾರಿನಂತೆ ವಿನ್ಯಾಸವನ್ನು ಪಡೆಯಲಿದ್ದು, ರೆನಾಲ್ಟ್ ಕ್ವಿಡ್ ಕಾರಿಗೆ ಪೈಪೋಟಿ ನೀಡಲಿದೆ.

ಜೆನ್ ಹೆಸರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯಿಂದ ಮತ್ತೊಂದು ಹೊಸ ಕಾರು.??

ಮಾರುತಿ ಆಲ್ಟೊ ಮತ್ತು ವ್ಯಾಗನ್‍ಆರ್ ಕಾರುಗಳ ನಡುವೆ ಸ್ಥಾನವನ್ನು ಪಡೆದುಕೊಂಡಿರಲಿರುವ ಈ ಕಾರು, ಫ್ಯೂಚರ್-ಎಸ್ ಕಾರಿನ ಪರಿಕಲ್ಪನೆಯಂತೆಯೆ ಇರಲಿದ್ದು ಅದೇ ಮಾದರಿಯ ಫ್ಲ್ಯಾಟ್ ಬಾನೆಟ್ ಅನ್ನು ಪಡೆದುಕೊಂಡಿರಲಿದೆ. ಹೊಸ ಕಾರು ಮಾರುತಿ ಆಲ್ಟೊ ಕಾರಿಗಿಂತ ಅಧಿಕವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿರಲಿದೆ.

ಜೆನ್ ಹೆಸರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯಿಂದ ಮತ್ತೊಂದು ಹೊಸ ಕಾರು.??

ಮೇಲೆ ಹೇಳಿರುವ ಹಾಗೆ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಸಣ್ಣ ಗಾತ್ರದ ಕಾರು ಮಾರುತಿ ಸಂಸ್ಥೆಯ ಎಂಟ್ರಿ ಲೆವೆಲ್ ಕ್ರಾಸ್‍ಓವರ್ ಇರಬಹುದಾಗಿದ್ದು, ಮಾರುತಿ ವೈ1ಕೆ ಆಲ್ಟೊ ಕಾರನ್ನು ಸ್ಥಳಾಂತರಿಸಲಿದೆ. ಮತ್ತು ಆಲ್ಟೋ ಕಾರಿನಲ್ಲಿದ್ದ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಕೂಡ ಇರಲಿದೆ.

ಜೆನ್ ಹೆಸರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯಿಂದ ಮತ್ತೊಂದು ಹೊಸ ಕಾರು.??

ಮಾರುತಿ ಸುಜುಕಿಯ ಸಣ್ಣ ಕಾರು ಕ್ರಾಷ್ ಟೆಸ್ಟಿಂಗ್ ನಿಯಮಗಳನ್ನು ಅನುಸರಿಸುವುದಕ್ಕಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್‍‍ನೊಂದಿಗೆ ಇಬಿಡಿ ಮತ್ತು ಇನ್ನಿತರೆ ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲ್ಲಿದೆ. ಮಾರುಕಟ್ಟೆಗೆ ಬರಲಿರುವ ಈ ಕಾರು ರೆನಾಲ್ಟ್ ಕ್ವಿಡ್ ಹಾಗು ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಜೆನ್ ಹೆಸರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯಿಂದ ಮತ್ತೊಂದು ಹೊಸ ಕಾರು.??

ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಎಂಜಿನಿಯರ್‍‍ಗಳು ವೈ1ಕೆ ಕಾರಿನ ಪ್ರೊಟೊಟೈಪ್ ಅನ್ನು 2020ರೊಳಗೆ ತಯಾರುಗೊಳಿಸುವ ಯೋಜನೆಯಲಿದ್ದು, ಅದೇ ವರ್ಷ ಕಾರನ್ನು ಬಿಡುಗಡೆಗೊಳಿಸಲು ಸಂಸ್ಥೆಯು ಯೋಜಿಸುತ್ತಿದೆ.

ಜೆನ್ ಹೆಸರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯಿಂದ ಮತ್ತೊಂದು ಹೊಸ ಕಾರು.??

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶದಲ್ಲಿ ಮಾರುತಿ ಸುಜುಕಿ ಅಧಿಕೃತ ಡೀಲರ್‍‍ಶಿಪ್ ಮತ್ತು ಸರ್ವೀಸ್ ನೆಟ್‍ವರ್ಕ್‍ನೊಂದಿಗೆ ಕಂಪನಿಯು ಹೊಸ ಹ್ಯಾಚ್‍‍ಬ್ಯಾಕ್ ಅನ್ನು ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಲಿದ್ದು, ಈ ಹೊಸ ಕಾರು, ದೇಶದಲ್ಲಿ 'ಝೆನ್' ನಾಮಪದವನ್ನು ಮರಳಿ ತರಲು ಸಾಧ್ಯವಿದೆ ಎಂದು ಊಹಿಸಲಾಗಿದೆ. ಈ ಕಾರು ಒಮ್ಮೆ ಬಿಡುಗಡೆಗೊಂಡಲ್ಲಿ, ಮಾರುತಿ ವೈ1ಕೆ ರೆನಾಲ್ಟ್ ಕ್ವಿಡ್‍‍ನಂತಹ ಹಾಗೆಯೇ ಹ್ಯುಂಡೈನಿಂದ ಬರುವ ಮುಂಬರುವ ಹ್ಯಾಚ್‍‍ಬ್ಯಾಕ್ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Maruti Y1K Hatchback Launch Confirmed.
Story first published: Tuesday, August 21, 2018, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X