ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಿ ಭಾರೀ ಜನಪ್ರಿಯತೆ ಗಳಿಸುತ್ತಿದ್ದು, ಸ್ವಿಫ್ಟ್ ಆರ್‍ಎಸ್ ಹೈಬ್ರಿಡ್ ಕಾರು ಕೂಡಾ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ.

By Rahul Ts

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಿ ಭಾರೀ ಜನಪ್ರಿಯತೆ ಗಳಿಸುತ್ತಿದ್ದು, ಸ್ವಿಫ್ಟ್ ಆರ್‍ಎಸ್ ಹೈಬ್ರಿಡ್ ಕಾರು ಕೂಡಾ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ. ಹಾಗಾದರೇ ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆಗೊಳಿಸುತ್ತಿರುವ ಹೈಬ್ರಿಡ್ ಕಾರಿನ ವೈಶಿಷ್ಟ್ಯಗಳು ಏನು? ಬಿಡುಗಡೆ ಯಾವಾಗ ಎನ್ನುವ ವಿವರಣೆ ಇಲ್ಲಿದೆ ನೋಡಿ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಮಾರುತಿ ಸುಜುಕಿ ಸಾಂಸ್ಥೆಯು ಭಾರತದಲ್ಲಿ ಇತರೆ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಮೊದಲು ಸ್ವಿಫ್ಟ್ ಆರ್‍‍ಎಸ್ ಕಾರಿನ ಹೈಬ್ರಿಡ್ ಮಾದರಿಯನ್ನು ಪರಿಚಯಿಸಲಿದೆ ಎನ್ನಲಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರುನ್ನು ಅಭಿವೃದ್ಧಿಗೊಳಿಸುತ್ತಿದೆ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಈಗಾಗಲೇ ಹಲವು ವಾಹನ ಉತ್ಪಾದಕರು ತಮ್ಮ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಮಾದರಿಯನ್ನು ಪರಿಚಯಿಸುವ ತವಕದಲ್ಲಿದ್ದು, ಈ ಹಿನ್ನೆಲೆ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೂ ಮುನ್ನ ಸ್ವಿಫ್ಟ್ ಆರ್‍ಎಸ್ ಕಾರಿನ ಹೈಬ್ರಿಡ್ ಮಾದರಿಯನ್ನು ಮಾರುಕಟ್ಟೆಗೆ ತರಲಾಗುತ್ತಿದೆ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿಯ ಕಾರ್ಯನಿರ್ವಾಹಕ ನಿರ್ದೇಶಕ ಸಿವಿ.ರಾಮನ್, "ಬದಲಾದ ಭಾರತೀಯ ಮಾರುಕಟ್ಟೆಯ ಸನ್ನಿವೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಪಡೆಯಲು ಸಮಯ ಬೇಕಾಗುತ್ತದೆ. ಆದರೂ ಇಂತಹ ಆಧುನಿಕತೆಗಳು ಮತ್ತು ತಂತ್ರಜ್ಞಾನಗಳು ಭಾರತಕ್ಕೆ ಬೇಕಾಗಿದ್ದು, ನಾವು ಕೂಡ ಅದಕ್ಕೆ ಸಹಕರಿಸಲಿದ್ದೇವೆ" ಎಂದಿದ್ದಾರೆ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಸ್ವಿಫ್ಟ್ ಆರ್‍ಎಸ್ ಹೈಬ್ರಿಡ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದ್ದು, ಎಲೆಕ್ಟ್ರಿಕ್ ಮೋಟಾರ್ ಸಹಾಯದಿಂದ ಎಸ್‍ಹೆಚ್‍ವಿಎಸ್ (ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಂ) ಸೌಲಭ್ಯವು ಫ್ಯುಯಲ್ ದಕ್ಷತೆ ಮತ್ತು ಎಮಿಷನ್ ಮಟ್ಟವನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಸುಧಾರಿತ ಎಸ್‍ಹೆಚ್‍ವಿಎಸ್ ಹೈಬ್ರಿಡ್ ವ್ಯವಸ್ಥೆಯು ಸಂಪೂರ್ಣ ವಿಭಿನ್ನವಾಗಿದ್ದು, ಶುದ್ಧ ವಿದ್ಯುತ್ ಶಕ್ತಿಯ ಮೂಲಕ ಕಾರು ಚಾಲನೆಯಲ್ಲಿ ಆರಂಭದಲ್ಲಿ ಬಲವಾದ ಶಕ್ತಿ ಒದಗಿಸುತ್ತದೆ. ಈ ಮೂಲಕ ಶೇ. 50 ರಷ್ಟು ಇಂಧನ ದಹನವನ್ನು ತಗ್ಗಿಸಲಿದ್ದು, ಈ ವ್ಯವಸ್ಥೆಯು ಮುಂಬರುವ ದಿನಗಳಲ್ಲಿ ಜನಪ್ರಿಯ ಸಿಯಾಜ್ ಮತ್ತು ಎರ್ಟಿಗಾದಲ್ಲೂ ಕಂಡುಬರಲಿದೆ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಪ್ರಸ್ಥುತ ಮಾರಾಟಗೊಳ್ಳುತ್ತಿರುವ ಮಾರುತಿ ಸ್ವಿಫ್ಟ್ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಇನ್ನು ಪೆಟ್ರೋಲ್ ಆವೃತ್ತಿಯಲ್ಲಿ ಎಸ್‍ಹೆಚ್‍ವಿಎಸ್ ತಂತ್ರಜ್ಞಾನವನ್ನು ಬಳಸುವುದರಲ್ಲಿ ಯಾವುದೇ ತೊಂದರೆ ಇಲ್ಲಾ ಎಂದು ಹೇಳಲಾಗಿದೆ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಹೀಗಾಗಿ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರಿನ ಪೆಟ್ರೋಲ್ ಹೈಬ್ರಿಡ್ ಆವೃತ್ತಿಯು ಪ್ರತಿ ಲೀಟರ್‍‍ಗೆ 32ಕಿಲೋಮೀಟರ್ ಮೈಲೇಜ್ ನೀಡಲಿದ್ದು, ಡೀಸೆಲ್ ಆವೃತ್ತಿಯು ಕೂಡಾ ಅತಿಹೆಚ್ಚು ಮೈಲೆಜ್ ಅನ್ನು ನೀಡಲಿದೆ ಎನ್ನಲಾಗಿದೆ.

ಸ್ವಿಫ್ಟ್ ಆರ್‌ಎಸ್ ಹೈಬ್ರಿಡ್ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ..

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಬೆಸ್ಟ್ ಸೆಲ್ಲಿಂಗ್ ಹ್ಯಾಚ್‍‍ಬ್ಯಾಕ್ ಕಾರಾಗಿದ್ದು, ಮೂರನೇ ತಲೆಮಾರಿನ ಮಾದರಿಯನ್ನು ಬಿಡುಗಡೆಗೊಳಿಸುವುದರೊಂದಿಗೆ ಇನ್ನಷ್ಟು ಜನಪ್ರಿಯತೆಯನ್ನು ಪಡೆದಿದೆ. ಹೀಗಾಗಿ ಹೈಬ್ರಿಡ್ ಆವೃತ್ತಿಯಲ್ಲಿ ಎಸ್‍ಹೆಚ್‍ವಿಎಸ್ ತಂತ್ರಜ್ಞಾನವನ್ನು ಬಳಸುವುದರಿಂದ ಇನ್ನಷ್ಟು ಜನಪ್ರಿಯತೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
Read more on maruti suzuki swift
English summary
Maruti Suzuki Considering Swift RS Hybrid For India.
Story first published: Wednesday, February 28, 2018, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X