ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

By Praveen Sannamani

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಸ್ವಿಫ್ಟ್ ಮತ್ತು ಡಿಜೈರ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದೆ. ಆದ್ರೆ ಇತ್ತೀಚೆಗೆ ಬಿಡುಗಡೆಯಾದ 2018ರ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಗ್ರಾಹಕರ ದೂರುಗಳ ಅನ್ವಯ ಹೊಸ ಕಾರುಗಳನ್ನು ಮಾರುತಿ ಸುಜುಕಿ ಹಿಂಪಡೆಯಲು ನಿರ್ಧರಿಸಿದೆ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ವರದಿಗಳ ಪ್ರಕಾರ 2018ರ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳಲ್ಲಿನ ಏರ್‌ಬ್ಯಾಗ್ ಯುನಿಟ್ ಕಂಟ್ರೊಲರ್ ವಿಭಾಗದಲ್ಲಿ ತಾಂತ್ರಿಕ ದೋಷಗಳಿಂದ ಕೂಡಿದ್ದು, ಮಾರಾಟವಾಗಿರುವ ಸುಮಾರು 1279 ಕಾರುಗಳಲ್ಲಿ ಇಂತಹ ಸಮಸ್ಯೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಸಮಸ್ಯೆ ಕುರಿತು ಗ್ರಾಹಕರ ದೂರುಗಳಿಗೆ ಸ್ಪಂದಿಸಿರುವ ಮಾರುತಿ ಸುಜುಕಿ ಸಂಸ್ಥೆಯು ದೋಷಪೂರಿತ ಕಾರುಗಳಲ್ಲಿನ ಸಮಸ್ಯೆಯನ್ನು ಈ ಕೂಡಲೇ ಪರಿಹರಿಸುವುದಾಗಿ ಭರವಸೆ ನೀಡಿದೆ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಜೊತೆಗೆ ಸಮಸ್ಯೆ ಕಂಡುಬಂದಿರುವ ಕಾರುಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಮಾರುತಿ ಸುಜುಕಿ, ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಬ್ರೇಕ್ ವಿಭಾಗವನ್ನು ಸರಿಪಡಿಸುವುದಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಮೇ 7ರಿಂದ ಜುಲೈ 5ರ ಮಧ್ಯೆ ಉತ್ಪಾದನೆಯಾಗಿರುವ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದ್ದು, ಈ ಅವಧಿಯಲ್ಲಿ ಮಾರಾಟವಾಗಿರುವ ಹೊಸ ಕಾರುಗಳನ್ನು ಹಿಂಪಡೆದು ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಿದೆಯಂತೆ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಾರುಗಳ ಅಧಿಕೃತ ಮಾರಾಟ ಸಂಸ್ಥೆಯಾದ ನೆಕ್ಸಾ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆಯಿರುವ ಕಾರುಗಳ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಬಹುದಾಗಿದ್ದು, ಕಾರಿನ ಚಾರ್ಸಿ ಸಂಖ್ಯೆಯ ಆಧಾರ ಮೇಲೆ ಉಚಿತ ಸರ್ವಿಸ್‌ಗಾಗಿ ಸದ್ಯದಲ್ಲೇ ಆಹ್ವಾನ ಮಾಡಲಿದೆ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಗುಜರಾತಿನಲ್ಲಿರುವ ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕದಲ್ಲಿ ತಯಾರಾದ ಕಾರುಗಳಲ್ಲಿ ಈ ಸಮಸ್ಯೆಯಾಗಿದ್ದು, ದೋಷರೂಪಿತ ಏರ್‌ಬ್ಯಾಗ್ ಯುನಿಟ್‌‌ನಿಂದಾಗಿ ಅಪಘಾತಗಳ ಸಂದರ್ಭಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಮಾಡದಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಇದರಿಂದ ಅಪಘಾತಗಳ ಸಂದರ್ಭದಲ್ಲಿ ಹೆಚ್ಚಿನ ಮಟ್ಟದ ಪ್ರಾಣಹಾನಿ ಆಗುವ ಸಾಧ್ಯತೆಗಳಿದ್ದು,ಇದರಿಂದ ಎಚ್ಚೆತ್ತುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ನಿಗದಿತ ಅವಧಿಯಲ್ಲಿ ಏರ್‌ಬ್ಯಾಗ್ ಯುನಿಟ್ ವಿಭಾಗವನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಒಂದು ವೇಳೆ ನೀವು ಕೂಡಾ ಮೇ 7ರಿಂದ ಜುಲೈ 5 ರ ಮಧ್ಯೆದಲ್ಲಿ ಸ್ವಿಫ್ಟ್ ಮತ್ತು ಡಿಜೈರ್ ಖರೀದಿ ಮಾಡಿದಲ್ಲಿ ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆಯಿದ್ದು, ಹೊಸ ಕಾರುಗಳಲ್ಲಿ ಹೊಸ ಕಾರುಗಳಲ್ಲಿ ಈ ಕಂಡುಬಂದಿದ್ದ ಬ್ರೇಕ್ ಬೂಸ್ಟರ್ ತೊಂದರೆಯು ಕಂಡುಬಂದಲ್ಲಿ ಈ ಕೂಡಲೇ ನಿಮ್ಮ ಹತ್ತಿರದ ಮಾರುತಿ ಸುಜುಕಿ ಅಧಿಕೃತ ಡೀಲರ್ಸ್‌ಗಳ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಇದರ ಹೊರತಾಗಿ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳು ಗ್ರಾಹಕರ ಸ್ನೇಹಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಏರ್‌ಬ್ಯಾಗ್ ಯುನಿಟ್‌ನಲ್ಲಿ ಕಂಡುಬಂದಿರುವ ತಾಂತ್ರಿಕ ದೋಷ ಗಂಭೀರ ಸಮಸ್ಯೆ ಅಲ್ಲದಿದ್ದರೂ ನೀರ್ಲಕ್ಷ್ಯ ವಹಿಸದಲ್ಲಿ ಅಪಾಯ ತಪ್ಪಿದ್ದಲ್ಲ.

ತಾಂತ್ರಿಕ ದೋಷ- ಸ್ವಿಫ್ಟ್ ಮತ್ತು ಡಿಜೈರ್ ಹಿಂಪಡೆದ ಮಾರುತಿ ಸುಜುಕಿ

ಇನ್ನು ಆಟೋ ಉದ್ಯಮದಲ್ಲಿ ಇಂತಹ ಸಮಸ್ಯೆಗಳು ಸಾಮನ್ಯವಾಗಿದ್ದು, ಕಾರು ಉತ್ಪಾದನೆ ಸಂದರ್ಭದಲ್ಲಿ ಆಗುವ ಕೆಲವು ತಾಂತ್ರಿಕ ದೋಷಗಳಿಂದಾಗಿ ಹೀಗೆ ಆಗುವುದು ಸಹಜ. ಒಂದು ವೇಳೆ ನಿಮ್ಮ ಕಾರಿನಲ್ಲೂ ಇಂತಹ ಸಮಸ್ಯೆ ಇದ್ದಲ್ಲಿ ಈ ಕೂಡಲೇ ಅಧಿಕೃತ ಮಾರಾಟಗಾರರ ಬಳಿ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಿ- ಹ್ಯಾಪಿ ಜರ್ನಿ.....

Most Read Articles

Kannada
English summary
Maruti Suzuki Issues Recall Of Swift And Dzire Models In India.
Story first published: Wednesday, July 25, 2018, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X