ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿದ್ದು, ಮಾರಾಟಕ್ಕೆ ಲಭ್ಯವಿರುವ 15ಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಬಹುತೇಕ ಮಾದರಿಗಳು ಜನಪ್ರಿಯತೆ ಸಾಧಿಸಿವೆ. ಅದರಲ್ಲೂ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಎನ್ನಿಸುವ ವಿಟಾರಾ ಬ್ರೆಝಾ ಕಾರುಗಳು ನೋಡುವುದಕ್ಕೆ ಅಷ್ಟೇ ಅಲ್ಲ ಸುರಕ್ಷತೆಯಲ್ಲೂ ಉತ್ತಮ ಮಾದರಿಯಾಗಿ ಹೊರಹೊಮ್ಮಿದೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಕೇಂದ್ರ ಸರ್ಕಾರವು ಮುಂಬರುವ 2019ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೆ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದರಲ್ಲಿ ಮಾರುತಿ ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಕಾರುಗಳು ಉತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಅದಕ್ಕಾಗಿಯೇ ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಕ್ರ್ಯಾಶ್ ಟೆಸ್ಟ್‌ಗಳನ್ನು ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಯುರೋ ಕ್ರ್ಯಾಶ್ ಟೆಸ್ಟಿಂಗ್‌ಗಳು ಕಾರುಗಳಲ್ಲಿನ ಸುರಕ್ಷತೆಗಾಗಿ ರೇಟಿಂಗ್ ನೀಡುತ್ತವೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಇದೇ ಮೊದಲ ಬಾರಿಗೆ #SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿನ ಕಾರು ಮಾದರಿಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ. ಇದರಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರುಗಳು 4 ಸ್ಟಾರ್ ಪಡೆದುಕೊಂಡಿರುವುದು ಖರೀದಿಗೆ ಯೋಗ್ಯವಾದ ಕಾರು ಮಾದರಿಯಾಗಿದೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಅಂದರೆ, ಕಾರಿನಲ್ಲಿರುವ ಏರ್‌ಬ್ಯಾಗ್, ಎಬಿಎಸ್, ಗುಣಮಟ್ಟದ ಬಾಡಿ ಕಿಟ್, ಉತ್ತಮ ಬಾಳಿಕೆಯ ಬೀಡಿಭಾಗಗಳ ಆಧಾರದ ಮೇಲೆ ಕಾರಿನ ರೇಟಿಂಗ್ ನಿರ್ಧಾರವಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಎಷ್ಟರ ಮಟ್ಟಿಗೆ ಸುರಕ್ಷೆ ನೀಡುತ್ತವೆ ಎನ್ನುವುರ ಮೇಲೆ ಕಾರಿನ ಗುಣಮಟ್ಟವನ್ನು ಅಳೆಯಲಾಗುತ್ತದೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಇನ್ನು 2016ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು 29 ತಿಂಗಳ ಅವಧಿಯಲ್ಲಿ ಬರೋಬ್ಬರಿ 3 ಲಕ್ಷ ಹೆಚ್ಚು ಕಾರುಗಳು ಈಗಾಗಲೇ ಮಾರಾಟಗೊಂಡಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ಮೂಲಕ ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಅಗ್ರಸ್ಥಾನದತ್ತ ಹೆಜ್ಜೆಹಾಕುತ್ತಿದೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

2016ರ ಮಾರ್ಚ್‌ನಿಂದ ಇದುವರೆಗೆ ಪ್ರತಿ ತಿಂಗಳು ಸರಾಸರಿ 11 ಸಾವಿರ ಕಾರುಗಳು ಮಾರಾಟಗೊಂಡಿದ್ದು, ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಗರಿಷ್ಠವಾಗಿ 15,243 ಕಾರುಗಳು ಮಾರಾಟಗೊಳ್ಳುವ ಮೂಲಕ ಹೊಸ ದಾಖಲೆಯನ್ನು ಹುಟ್ಟುಹಾಕಿತ್ತು.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಇದಕ್ಕೆಲ್ಲಾ ಪ್ರಮುಖ ಕಾರಣ ಏನೆಂದರೆ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಜನಪ್ರಿಯ ಎಸ್‌ಯುವಿಗಳಲ್ಲಿ ವಿಟಾರಾ ಬ್ರೆಝಾ ಮುಂಚೂಣಿಯಲ್ಲಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿರುವ ಕಾರು ಮಾದರಿ ಇದಾಗಿದೆ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಎಂಜಿನ್ ಸಾಮರ್ಥ್ಯ

ಡಿಸೇಲ್ ಎಂಜಿನ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ವಿಟಾರಾ ಬ್ರೇಝಾ ಕಾರುಗಳು 1.3-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 88-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವರ್ಷನಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ಲೀಟರ್ ಡಿಸೇಲ್‌ಗೆ 24.3 ಮೈಲೇಜ್ ನೀಡಬಲ್ಲವು.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಹೀಗಾಗಿ ತಾಂತ್ರಿಕವಾಗಿಯೂ ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಉತ್ತಮ ಗುಣಮಟ್ಟ ಹೊಂದಿರುವ ವಿಟಾರಾ ಬ್ರೇಝಾ ಕಾರುಗಳು ಬೆಲೆ ವಿಚಾರದಲ್ಲೂ ಗ್ರಾಹಕರನ್ನು ಸೆಳೆಯದೇ ಇರಲಾರವು.

ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ನಡೆಸಿದ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ.

ಸುರಕ್ಷಾ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಂಡ ಮಾರುತಿ ಸುಜುಕಿ ಬ್ರೆಝಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಒಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಣೆ ಹಾಗೂ ಬ್ರ್ಯಾಂಡ್ ಮೌಲ್ಯದೊಂದಿಗೆ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ವಿಟಾರಾ ಬ್ರೆಝಾ ಹಲವು ವಿಶೇಷತೆ ಹೊಂದಿದೆ. ಹೀಗಾಗಿ ಟಾಟಾ ಮೋಟಾರ್ಸ್ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೇಟಾ ಎಸ್‌ಯುವಿ ಆವೃತ್ತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

Most Read Articles

Kannada
Read more on maruti suzuki crash test
English summary
Maruti Brezza Global NCAP Crash Test Results Revealed — Gets An Impressive Four-Star Safety Rating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X