TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮಾರುಕಟ್ಟೆಗೆ ಲಗ್ಗೆಯಿಟ್ಟ ಮರ್ಸಿಡೀಸ್-ಬೆಂಝ್‍ನ ಮತ್ತೊಂದು ಹೊಸ ಕಾರು..
ಪ್ರಪಂಚದಲ್ಲಿನ ಹಲವಾರು ಐಷಾರಾಮಿ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಮರ್ಸಿಡೀಸ್ ಬೆಂಝ್ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ಇ-ಕ್ಲಾಸ್ ಆಲ್- ಟೆರ್ರೈನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 75 ಲಕ್ಷದ ಮಾರಾಟದ ಬೆಲೆಯನ್ನು ನಿಗದಿಪಡಿಸಲಾಗಿದೆ.
ಇ ಕ್ಲಾಸ್ ಆಲ್ ಟೆರ್ರೈನ್ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡೀಸ್ ಸಂಸ್ಥೆಯು ನೀಡುತ್ತಿರುವ ಉತ್ಪನ್ನಗಳಲ್ಲಿ ನೂತನವಾಗಿದ್ದು, ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಿಂದ ಮಾರುಕಟ್ಟೆಗೆ ಬಂದ ಮೊದಲನೆಯ ಎಸ್ಟೇಟ್ ಅಥವಾ ಸ್ಟೇಷನ್ ವ್ಯಾಗನ್ ಕಾರಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಇ-ಕ್ಲಾಸ್ ಪೋರ್ಟ್‍ಫೋಲಿಯೊ ಲಾಂಗ್ ವ್ಹೀಲ್‍ಬೇಸ್ (ಸ್ಟ್ಯಾಂಡರ್ಡ್ ಇ-ಕ್ಲಾಸ್ ಸೆಡಾನ್) ಸ್ಟ್ಯಾಂಡರ್ಡ್-ವ್ಹೀಲ್‍ಬೇಸ್ (ಇ63 ಎಎಂಜಿ ಸೆಡಾನ್) ಮತ್ತು ಎಸ್ಟೇಟ್ (ಆಲ್-ಟೆರ್ರೈನ್) ಎಂಬ ಮೂರು ವಿವಿಧ ಬಾಡಿ ಸ್ಟೈಲ್‍ಗಳಲ್ಲಿ ಮಾರಾಟಗೊಳ್ಳುತ್ತಿದೆ.
ಇದೀಗ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಆಲ್-ಟೆರ್ರೈನ್ ಉತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ತನ್ನ ಸ್ಟ್ಯಾಂಡರ್ಡ್ ಮಾಡಲ್‍ಗಿಂತ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ. ಕಾರಿನ ಮುಂಭಾಗದಲ್ಲೆರಡು ಸಿಲ್ವರ್ ಗ್ರಿಲ್ ಸ್ಲಾಟ್ಸ್, ಮತ್ತು ಬಂಪರ್‍ಗೆ ಸಿಲ್ವರ್ ಸ್ಕಿಡ್ ಪ್ಲೇಟ್‍ಗಳನ್ನು ಅಳವಡಿಸಲಾಗಿದೆ.
ಇ-ಕ್ಲಾಸ್ ಆಲ್-ಟೆರ್ರೈನ್ ಕಾರಿನ ಬದಿಗಳಲ್ಲಿ ವ್ಹೀಲ್ ಆರ್ಚ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ರೂಫ್‍ಲೈನ್ ಅನ್ನು ಸಿಲ್ವರ್ ರೈಲ್ಸ್ ಒಂದಿಗೆ ಜೋಡಿಸಲಾಗಿದೆ. ಆಲ್ ಟೆರ್ರೈನ್ ಮಾಡಲ್ 19 ಇಂಚಿನ 5 ಸ್ಪೋಕ್ ಅಲಾಯ್ ವ್ಹೀಲ್‍ಗಳನ್ನು ಒದಗಿಸಲಾಗಿದೆ.
ವ್ಹೀಲ್ ಆರ್ಚ್‍ನ ಮೇಲೆ ಕಪ್ಪು ಹೊದಿಕೆಯು ಹಿಂಭಾಗದ ಬಂಪರ್ಗೆ ವಿಸ್ತರಿಸಲಾಗಿದ್ದು, ಅದು ಹಿಂದಿನ ಸ್ಕಿಡ್ ಪ್ಲೇಟ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್‍ಗಳನ್ನು ತೆಳು ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕಿಸಲಾಗಿದೆ.
ಇ-ಕ್ಲಾಸ್ ಆಲ್-ಟೆರ್ರೈನ್ ಕಾರು ತನ್ನ ಸ್ಟ್ಯಾಂಡರ್ಡ್ ಮಾದರಿಗಿಂತ 116ಎಂಎಂ ಉದ್ದ, 158ಎಂಎಂನಷ್ಟು ಕದಿಮೆ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದೆ. ವಿಸ್ತರಿಸಲಾದ ಆಯಾಮಗಳೊಂದಿಗೆ 640 ಲೀಟರ್‍ನಷ್ಟು ಅಧಿಕಗೊಳಿಸಲು ಸಹಾಯಕವಾಗಿದ್ದು, ಒಟ್ಟಾರೆಯಾಗಿ 1,820 ಲೀಟರ್‍ನ ಬೂಟ್ ಸ್ಪೇಸ್ ಅನ್ನು ಒದಗಿಸಲಾಗಿದೆ.
ಹೊಸ ಕಾರಿನ ಒಳಭಾಗದಲ್ಲಿ ಕಮ್ಯಾಂಡ್ ಇನ್ಫೋಟೈನ್ಮೆಂಟ್ ಸಿಸ್ಟಂ, ಏರ್ ಸಸ್ಪೆಂಷನ್, ಪ್ಯಾನರಮಿಕ್ ಸನ್‍ರೂಫ್, ಏಂಬಿಯಂಟ್ ಲೈಟಿಂಗ್, 3 ಜೋನ್ ಕ್ಲೈಮೆತ್ ಕಂಟ್ರೋಲ್ ಮತ್ತು ವಿದ್ಯುತ್‍ನಿಂದ ಆಪರೇಟ್ ಮಾಡಬಹುದಾದ ಟೈಲ್‍ಗೇಟ್ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
ಎಂಜಿನ್ ಸಾಮರ್ಥ್ಯ
ಮರ್ಸಿಡೀಸ್-ಬೆಂಝ್ ಇ-ಕ್ಲಾಸ್ ಆಲ್-ಟೆರ್ರೈನ್ ಕಾರು 2.0 ಲೀಟರ್ 4 ಸಿಲೆಂಡರ್ ಎಂಜಿನ್ ಸಯಾಹದಿಂದ 194ಬಿಹೆಚ್‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದು ಎಂಜಿನ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮರ್ಸಿಡೀಸ್ ಬೆಂಝ್ ಇ-ಕ್ಲಾಸ್ ಟೆರ್ರೈನ್ ಕಾರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು. ಇದು ಸಂಸ್ಥೆಯಿಂದ ಮಾರುಕಟ್ಟೆಗೆ ಬಂದ ಮೊದಲನೆಯ ಎಸ್ಟೇಟ್ ಅಥವಾ ಸ್ಟೇಷನ್ ವ್ಯಾಗನ್ ಕಾರಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ವೊಲ್ವೊ ವಿ90 ಕ್ರಾಸ್ ಕಂಟ್ರಿ ಕಾರಿಗೆ ಪೈಪೋಟಿ ನೀಡಲಿದೆ.