ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತಮ್ಮ ಹೊಸ ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಅನಾವರಣಗೊಳಿಸಿದ್ದು, ಈ ಬಾರಿ ಹೆಚ್ಚು ಬದಲಾವಣೆಗಳನ್ನು ಹೊತ್ತು ಹೊಸ ಪ್ಲಾಟ್‍‍ಫಾರ್ಮ್‍‍ನಲ್ಲಿ ಬರಲಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತಮ್ಮ ಹೊಸ ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಅನಾವರಣಗೊಳಿಸಿದ್ದು, ಈ ಬಾರಿ ಹೆಚ್ಚು ಬದಲಾವಣೆಗಳನ್ನು ಹೊತ್ತು ಹೊಸ ಪ್ಲಾಟ್‍‍ಫಾರ್ಮ್‍‍ನಲ್ಲಿ ಬರಲಿದೆ. ಪ್ರಸ್ಥುತ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್5 ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 74.30 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಮುಂದಿನ ವರ್ಷ ನಡೆಯಲಿರುವ ಬಿಎಮ್‍‍ಡಬ್ಲ್ಯೂ ಸಂಸ್ಥೆಯ 20ನೇ ವಾರ್ಷಿಕೋತ್ಸವದ ಪ್ರಯುಕ್ತ ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಬಿಡುಗಡೆಗೊಳಿಸುವುದಾಗಿ ಸಂಸ್ಥೆಯು ಹೇಳಿಕೊಂಡಿದೆ. 2019ರ ಹೊಸ ಎಕ್ಸ್5 ಮುಂಭಾಗದಲ್ಲಿ ದೊಡ್ಡದಾದ ಕಿಡ್ನಿ ಗ್ರಿಲ್, ಫ್ರಂಟ್ ಬಂಪರ್ ಮತ್ತು ಲಾರ್ಜ್ ಏಯಿರ್ ಇನ್‍‍ಟೇಕರ್ ಕಾರಿನ ಲುಕ್ ಅನ್ನು ಹೆಚ್ಚಿಸಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಯ ಕಾರಿಗಿಂತ ಸ್ಪಷ್ಟತೆಯನ್ನೊಳಗೊಂಡ ಕ್ಯಾರೆಕ್ಟರ್ ಲೈನ್ಸ್ ಇದ್ದು ಜೊತೆಗೆ ಎಕ್ಸ್5 ಕಾರು ಹಿಂದಿನ ತಲೆಮಾರಿಗಿಂತ 35ಎಮ್ಎಮ್ ಉದ್ದ, 32ಎಮ್ಎಮ್ ಅಗಲ ಮತ್ತು 11ಎಮ್ಎಮ್ ಎತ್ತರವನ್ನು ಪಡೆದಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಎಕ್ಸ್5 ಕಾರಿನ ಹಿಂಭಾದಲ್ಲಿ ಮರು ವಿನ್ಯಾಸಗೊಳಿಸಲಾಗಿರುವ ಹೊಸ ಟೈಲ್ ಲ್ಯಾಂಪ್ಸ್ ಮತ್ತು ಬಂಪರ್ ಅನ್ನು ಅಳವಡಿಸಲಾಗಿದ್ದು, ಸ್ಪಾಯ್ಲರ್ ಮತ್ತು ಶಾರ್ಕ್ ಫಿನಿಯನ್ನು ಕೂಡ ಅಳವಡಿಸಲಾಗಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಬಿಎಮ್‍‍ಡಬ್ಲ್ಯೂ ಎಕ್ಸ್5 ಎಸ್‍‍ಯುವಿ ಕಾರನ್ನು ಅಲ್ಯೂಮೀನಿಯಮ್ ನಿಂದ ಸಜ್ಜುಗೊಳಿಸಿದ್ದು, ಹಿಂದಿನ ತಲೆಮಾರಿನ ಕಾರಿಗಿಂತ 33 ಹೆಚ್ಚು ಬಲಿಷ್ಠತೆಯನ್ನು ಪಡೆದುಕೊಂಡಿದೆ. ನಾಯ್ಸ್, ವೈಬ್ರೇಶನ್ ಮತ್ತು ಹಾರ್ಷ್‍‍ನೆಸ್ ಅನ್ನು ಕೂಡ ಎಲ್ಲವನ್ನು ಕಡಿಮೆಗೊಳಿಸಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಹೊಸ ತಲೆಮಾರಿನ ಎಕ್ಸ್5 ಎಸ್‍‍ಯುವಿ ಕಾರನ್ನು ಮೂರನೆಯ ತಲೆಮಾರಿನ್ಸ್ ಎಕ್ಸ್6 ಮತ್ತು ಎಕ್ಸ್7 ಪ್ಲಾಟ್‍‍ಫಾರ್ಮ್‍ ಅನ್ನು ಆಧರಿಸಿದೆ. ಹೊಸ ಎಕ್ಸ್5 ಎಸ್‍‍ಯುವಿ ಕಾರು 2019ರ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸುವ ಅವಕಾಶಗಳಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕೂಡ ಅದೇ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಕಾರಿನ ಒಳಭಾಗದಲ್ಲಿನ ಡ್ಯಾಶ್‍‍ಬೋರ್ಡ್ ಅನ್ನು ಆಧುನಿಕವಾಗಿ ತಯಾರಿಸಲಾಗಿದು, ಇದಲ್ಲದೆ ಬಿಎಮ್‍‍ಡಬ್ಲ್ಯೂ ಲೈನ್‍ಅಪ್‍‍ಣಲ್ಲಿನ ಲೈವ್ ಕಾಕ್‍‍ಪಿಟ್ ಪ್ರೊಫೆಷನಲ್ ಯೂನಿಟ್ ಅನ್ನು ಕೂಡ ಅಳವಡಿಸಲಾಗಿರುವ ಸಂಸ್ಥೆಯ ಮೊದಲ ಕಾರು ಕೂಡ ಇದೆ. ಇದರಲ್ಲಿ 12.3 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಕ್ಲಸ್ಟರ್ ಅನ್ನು ಕೂಡಾ ಅಳವಡಿಸಲಾಗಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

ಎಕ್5 ಕಾರಿನಲ್ಲಿನ ಇನ್ಫೋಟೈನ್ಮೆಂಟ್ ಸಿಸ್ಟಮ್ 20ಜಿಬಿ ಇಂಟರ್ನಲ್ ಸ್ಟೋರೇಜ್, ಯುಎಸ್‍ಬಿ ಮತ್ತು ಬ್ಲೂಟೂತ್ ಅನ್ನು ಸಹಕರಿಸುವ ಆಯ್ಕೆಯನ್ನು ಹೊಂದಿದ್ದು, ಜೊತೆಗೆ ವಾಹನಕ್ಕೆ ಸಂಭಂದಿಸಿದ ರಿಯರ್ ಟೈಮ್ ಡೆಟಾ ಅನ್ನು ಕೂಡ ಪಡೆದುಕೊಂಡಿದೆ.

ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

2019 ಬಿಎಮ್‍‍ಡಬ್ಲ್ಯೂ ಎಕ್ಸ್5 ಕಾರಿನ ಇನ್ನಿತರೆ ವೈಶಿಷ್ಟ್ಯತೆಗಳು

  • ಆಪ್ಷನಲ್ ಆಫ್-ರೋಡ್ ಪ್ಯಾಕೇಜ್
  • ಟೂ-ಪಿನ್ ಟೈಲ್ ಗೇಟ್‍‍ಗಾಗಿ ಆಪ್ಷನಲ್ ಎಲೆಕ್ಟ್ರಾನಿಕ್ ಕಂಟ್ರೋಲ್ಸ್
  • ಆಪ್ಷನಲ್ ಲೇಜರ್ ಹೆಡ್‍‍ಲ್ಯಾಂಪ್ಸ್
  • ಅತ್ಯುತ್ತಮ ಅಂಡರ್ ಬಾಡಿ ಪ್ರೊಟೆಕ್ಷನ್
  • ಬೋಯರ್ಸ್ ಮತ್ತು ವಿಲ್ಕಿನ್ಸ್ ಆಡಿಯೊ ಸಿಸ್ಟಮ್
  • ಸ್ವಿಚ್ ರಿಕಗ್ನಿಷನ್ ಮತ್ತು ಗೆಸ್ಚುರ್ ಕಂಟ್ರೋಲ್ಸ್
  • ಅಪ್ಗ್ರೇಡೆಡ್ ಎಕ್ಸ್ ಡ್ರೈವ್ ಆಲ್ ವೀಲ್ ಡ್ರೈವ್ ಸಿಸ್ಟಮ್
  • ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

    ಎಂಜಿನ್ ಸಾಮರ್ಥ್ಯ

    ಹೊಸ ಬಿಎಮ್‍‍ಡಬ್ಲ್ಯೂ ಎಕ್ಸ್5 ಎಸ್‍‍ಯುವಿ ಕಾರು ಎಕ್ಸ್ ಡ್ರೈವ್40ಐ ವೇರಿಯಂಟ್‍‍ನಲ್ಲಿ ಮಾತ್ರ ಮೊದಲಿಗೆ ಲಭ್ಯವಿರಲಿದ್ದು, ತಾಂತ್ರಿಕವಾಗಿ ಇದರಲ್ಲಿ 340 ಬಿಹೆಚ್‍‍ಪಿ ಮತ್ತು 500ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಬಲ್ಲ 3.0 ಲೀಟರ್, 6 ಸಿಲೆಂಡರ್ ಇನ್-ಲೈನ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

    ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

    ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಇನ್-ಲೈನ್ 6 ಸಿಲೆಡರ್ 3.0 ಲೀಟರ್ ಡೀಸೆಲ್ ಎಂಜಿನ್ ಬರಲಿದೆ. ಇದು 265ಬಿಹೆಚ್‍‍ಪಿ ಮತ್ತು 620ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಎಂಜಿನ್ ಅನ್ನು ಕೂಡಾ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

    ನಾಲ್ಕನೆಯ ತಲೆಮಾರಿನ ಎಕ್ಸ್5 ಕಾರನ್ನು ಆನಾವರಣಗೊಳಿಸಿದ ಬಿಎಮ್‍‍ಡಬ್ಲ್ಯೂ

    ಬಿಎಮ್‍‍ಡಬ್ಲ್ಯೂ ಎಕ್ಸ್5 ಕಾರು ಒಮ್ಮೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಆಡಿ ಕ್ಯೂ7, ಮೆರ್ಸಿಡೀಸ್ ಬೆಂಜ್ ಜಿಎಲ್‍ಎಕ್ಸ್, ಜಾಗ್ವಾರ್ ಎಫ್-ಎಸ್ ಮತ್ತು ವೋಲ್ವೊ ಎಕ್ಸ್ ಸಿ90 ಕಾರುಗಳಿಗೆ ಪೈಪೋಟಿ ನೀಡಲಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 80 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on bmw luxury cars suv
English summary
New 2019 bmw x5 specs features launch details.
Story first published: Monday, June 11, 2018, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X