ಎಂಪಿವಿ ಕಾರು ಪ್ರಿಯರನ್ನು ಸೆಳೆಯಲಿರುವ ಮಾರುತಿ ಸುಜುಕಿ ಹೊಸ ಎರ್ಟಿಗಾ ವಿಶೇಷತೆ ಏನು?

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಪ್ಯಾಸ್ಸೆಂಜರ್ ಕಾರುಗಳು ಅಧಿಕವಾಗಿ ಮಾರಾಟಗೊಳ್ಳುತ್ತಿದೆ. ಈ ಹಿಂದೆ ಬಿಡುಗಡೆಗೊಂಡ ಮಾರುತಿ ಸುಜುಕಿ ಎರ್ಟಿಗಾ ಕಾರು ಎಮ್‍‍ಪಿವಿ ಕಾರುಗಳ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕಂಡಿದೆ. ಈ ನಿಟ್ಟಿನಲ್

By Rahul Ts

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಪ್ಯಾಸೆಂಜರ್ ಕಾರುಗಳು ಅಧಿಕವಾಗಿ ಮಾರಾಟಗೊಳ್ಳುತ್ತಿದ್ದು, ಈ ಹಿಂದೆ ಬಿಡುಗಡೆಗೊಂಡ ಎರ್ಟಿಗಾ ಕಾರು ಎಂಪಿವಿ ಕಾರುಗಳು ಅತಿಹೆಚ್ಚು ಜನಪ್ರಿಯತೆಯನ್ನು ಕಂಡಿದೆ. ಹೀಗಾಗಿ ಹೊಸ ಎರ್ಟಿಗಾ ಎಂಪಿವಿ ಕಾರುಗಳು ಇದೀಗ ಬಿಡುಗಡೆಗಾಗಿ ಸಿದ್ದವಾಗಿದ್ದು, ಕಾರಿನ ವಿಶೇಷತೆಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಮಾರುತಿ ಸುಜುಕಿ ಸಂಸ್ಥೆಯು ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳನ್ನು ಈಗಾಗಲೇ ನವೀಕರಣಗೊಳಿಸಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದ್ದು, ತಮ್ಮ ಮಾರಾಟದ ಶ್ರೇಣಿಯನ್ನು ಅಧಿಕಗೊಳಿಸಲು ಶೀಘ್ರವೇ ಮಾರುಕಟ್ಟೆ ಹೊಸ ಎರ್ಟಿಗಾ ಕಾರನ್ನು ಬಿಡುಗಡೆಗೊಳಿಸಲಿದೆ. ಇಂದಿನ ಲೇಖನದಲ್ಲಿ ಹೊಸ ಎರ್ಟಿಗಾ ಕಾರಿನ ಕುರಿತಾದ ಟಾಪ್ 10 ಇಂಟ್ರಸ್ಟಿಂಗ್ ವಿಚಾರಗಳನ್ನು ತಿಳಿಸಲಿದ್ದೇವೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ನೆಕ್ಸಾ ಶೋರಂ‍ನಲ್ಲಿ ಮಾತ್ರ ಲಭ್ಯ

ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಎಮ್‍‍ಪಿವಿ ಕಾರುಗಳು ನೆಕ್ಸಾ ಶೋರಂನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಇಗ್ನಿಸ್, ಬಲೆನೊ, ಬಲೆನೊ ಆರ್‍‍ಎಸ್, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳ ಜೊತೆಗೆ ಮಾರಾಟಗೊಳ್ಳಲಿದೆ. ಹಿಂದಿನ ತಲೆಮಾರಿನ ಎರ್ಟಿಗಾ ಕಾರುಗಳನ್ನು ಗ್ರಾಹಕರು ಸಂಸ್ಥೆಯ ಅಧಿಕೃತ ಡೀಲರ್‍‍ಗಳ ಬಳಿ ಖರೀದಿಸಬಹುದಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಹೊಸ ವಿನ್ಯಾಸ

ಎರ್ಟಿಗಾ ಎಮ್‍‍ಪಿವಿ ಕಾರು ಈ ಬಾರಿ ಹೊಸ ವಿನ್ಯಾಸವನ್ನು ಪಡೆದುಕೊಂಡಿರಲಿದೆ. ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿರಲಿದೆ. ಕಾರಿನ ಸೈಡ್‍‍ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದ್ದು, ಒಟ್ಟಾರೆಯಾಗಿ ಈ ಕಾರು ಎಮ್‍‍ಪಿವಿ ಕಾರಿಗಿಂತಲೂ ಎಸ್‍‍ಯುವಿ ಮಾದರಿಯ ವಿನ್ಯಾಸವನ್ನು ಪಡೆದಿರಲಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ವಿಶಾಲವಾದ ಆಕಾರ

ಹಳೆಯ ಮಾಡೆಲ್ ಎರ್ಟಿಗಾ ಕಾರಿಗೆ ಹೋಲಿಸಿದರೆ ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಕಾರು 110ಎಮ್ಎಮ್ ಉದ್ದ, 50ಎಮ್ಎಮ್ ಅಗಲ ಮತ್ತು 5ಎಮ್ಎಮ್ ಎತ್ತರ ಅಧಿಕವಾದ ಸುತ್ತಳತೆಯನ್ನು ಪಡೆದುಕೊಂಡಿರಲಿದೆ. ಈ ಬದಲಾವಣೆಯು ಮೂರನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರು ಆರಾಮವಾಗಿ ಕೂರಬಹುದು.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಹೊಸ ಇಂಟೀರಿಯರ್

ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‍‍ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ನೀಡಲಾಗಿದೆ. ಇನ್ನು ಕಾರಿನ ಟಾಪ್ ಎಂಡ್ ಟ್ರಿಮ್‍‍ನಲ್ಲಿ ಲೆಧರ್ ಸೀಟ್‍‍ಗಳನ್ನು ನೀಡುವ ಭರವಸೆ ಇದೆ ಎನ್ನಲಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಉಪಕರಣಗಳು

ಕಳೆದ ದಿನಗಳ ಹಿಂದೆ ಬಿಡುಗಡೆಗೊಂಡ ಡಿಜೈರ್ ಕಾರಿನಲ್ಲಿ ಬಳಸಲಾದ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ. ಈ ಉಪಕರಣವು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಬ್ಲೂತೂತ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳುಳ್ಳ ಲೆಧರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಅನ್ನು ಜೋಡಿಸಲಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಎಮ್‍‍ಪಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಬಿಡುಗಡೆಗೊಳ್ಳಲಿರುವ ಎರ್ಟಿಗಾ ಕಾರು ಹಳೆಯ ಮಾದರಿಯಲ್ಲಿನ 1.3 ಲೀಟರ್ ಮಲ್ಟಿ ಜೆಟ್ ಎಂಜಿನ್‍‍ನ ಜಾಗದಲ್ಲಿ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೊಸ ಎಂಜಿನ್ ಅನ್ನು ಹೊರತು ಪಡಿಸಿ, ಸಿಯಾಜ್ ಕಾರಿನಲ್ಲಿ ಬಳಸಲಾದ 103 ಬಿಹೆಚ್‍‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಜೊತೆಗೆ ಎರಡು ಎಂಜಿನ್‍‍ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಹೈಬ್ರೀಡ್ ಸಿಸ್ಟಮ್ ಅನ್ನು ಒದಗಿಸಲಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಗೇರ್ ಬಾಕ್ಸ್

ಸ್ಪೈ ಚಿತ್ರಗಳಲ್ಲಿ ಗಮಸಿದ್ದಲ್ಲಿ ಈ ಕಾರು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಇದು ಕೇವಲ ಡಿಸೆಲ್ ಮಾದರಿಯ ಕಾರಿನಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಿರಲಿದೆ ಎನ್ನಲಾಗಿದೆ. ಆದರೆ ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಬಿಡುಗಡೆಯ ಅವಧಿ (ಅಂದಾಜು)

ಈಗಾಗಲೆ ಇಂಡೋನೇಶಿಯಾದ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಎಮ್‍‍ಪಿವಿ ಕಾರು, ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡಾ ಶೀಘ್ರದಲ್ಲೆ ಬಿಡುಗಡೆಗೊಳಿಸಲಿದೆ. ಮಾಹಿತಿಗಳ ಪ್ರಕಾರ ಈ ಕಾರನ್ನು ದೀಪಾವಳಿಯ ನಂತರ ಅಥವಾ ಹಬ್ಬದ ಪ್ರಯುಕ್ತ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಎಮ್‍‍ಪಿವಿ ಕಾರು ಪ್ರಿಯರನ್ನು ಸೆಳೆಯಲಿದೆಯೆ ಮಾರುತಿ ಸುಜುಕಿ ಎರ್ಟಿಗಾ.?

ಹೊಸ ಕಾರಿನ ಬೆಲೆ (ಅಂದಾಜು)

ಬಿಡುಗಡೆಗೊಳ್ಳಲಿರುವ ಹೊಸ ಎರ್ಟೀಗಾ ಎಮ್‍‍ಪಿವಿ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಮಹೀಂದ್ರಾ ಮರಾಜೊ ಎಮ್‍‍ಪಿವಿ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New 2019 Maruti Suzuki Ertiga: 10 Things To Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X