ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..

Written By: Rahul TS

ಬ್ರಿಟಿಷ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬೆಂಟ್ಲಿ ತನ್ನ 2018ರ ಕಾಂಟಿನೆಂಟಲ್ ಜಿಟಿ ಕಾರನ್ನು ಭಾರತಕ್ಕೆ ಪರಿಚಯಿಸುತ್ತಿದ್ದು, ಇದೇ ತಿಂಗಳು 24 ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಹೊಸ ಕಾಂಟಿನೆಂಟಲ್ ಜಿಟಿ ಬೆಂಟ್ಲಿ ಸಂಸ್ಥೆಯ ಸ್ಪೋರ್ಟಿ ಗ್ರಾಂಡ್ ಟೂರರ್ ಕಾರ್ ಎಂಬ ಖ್ಯಾತಿಯನ್ನು ಪಡೆದಿದೆ.

ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..

ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ಮೂರನೇ ತಲೆಮಾರಿನ ವೈಶಿಷ್ಟ್ಯತೆಯ ಕಾರಾಗಿದ್ದು, 2015ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಇಎಕ್ಸ್‌ಪಿ ಕಾರಿನ ಸ್ಪೀಡ್ 6 ಪರಿಕಲ್ಪನೆಯ ಪ್ರೇರಣೆ ಪಡೆದಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..

ಇನ್ನು ಈ ಕಾರು ಸುಧಾರಿತ ತಂತ್ರಜ್ಞಾನ ಮತ್ತು ಐಷಾರಾಮಿ ಒಳ ವಿನ್ಯಾಸವನ್ನು ಪಡೆದಿದೆ ಎನ್ನಲಾಗಿದ್ದು, 2018ರ ಬೆಂಟ್ಲಿ ಜಿಟಿ ಕಾರು ಇನ್ನಿತರೆ ನಿರ್ಗಮಿತ ಕಾರುಗಳಿಗಿಂತ ವಿಭಿನ್ನವಾಗಿದ್ದು, ಉದ್ದವಾದ ಬ್ಯಾನೆಟ್ ಮತ್ತು ಲೋವರ್ಡ್ ನೋಸ್ ಜೊತೆಗೆ ಅಗಲವಾದ ವೀಲ್‍ಬೇಸ್ ಅನ್ನು ಪಡೆದಿದೆ.

ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..

ಎಂಜಿನ್ ಸಾಮರ್ಥ್ಯ

ಹೊಸ ಬೆಂಟ್ಲಿ ಜಿಟಿ ಕಾರುಗಳು 6 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ W12 ಏಂಜಿನ್ ಹೊಂದಿದ್ದು, ಇವು 635-ಬಿಹೆಚ್‍ಪಿ ಮತ್ತು 900-ಎನ್ಎಂ ಟಾರ್ಕ್‍ ಉತ್ಪಾದಿಸುವುದಲ್ಲದೇ 8 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಣೆ ಪಡೆದಿವೆ.

ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..

ಬೆಂಟ್ಲಿ ಸಂಸ್ಥೆಯ ಈ ಹೊಸ ಎಂಜಿನ್ ಅನ್ನು ವಿಶ್ವದ ಅತ್ಯಂತ ಮುಂದುವರಿದ 12-ಸಿಲಿಂಡರ್ ಎಂಜಿನ್ ಎಂದು ಹೇಳಲಾಗುತ್ತಿದ್ದು, ಇನ್ನು ಈ ಕಾರು ಸ್ಟಾಂಡರ್ಡ್ ಡ್ರೈವ್‍ಟ್ರೈನ್ (MSB) ಫ್ಯಾಟ್‍ಫಾರ್ಮ್ ನ ಆಧರಿಸಿದ್ದು, ಹೊಸ ತಲೆಮಾರಿನ ಪೋರ್ಷೆ ಪನಾಮೆರಾ ಕಾರನ್ನು ಹಿಂದಿಕ್ಕಲಿದೆ.

ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..

ಕಾರಿನ ವೈಶಿಷ್ಟ್ಯತೆಗಳು

2018ರ ಬೆಂಟ್ಲಿ ಜಿಟಿ ಕಾರಿನ ಒಳವಿನ್ಯಾಸವು ಪ್ರೀಮಿಯಂ ಡೈಮಂಡ್ ಮತ್ತು ಡೈಮಂಡ್ ಲೆದರ್‍‍ನಿಂದ ಸಜ್ಜುಗೊಂಡಿದ್ದು, ವಿನೀರ್ಸ್ ಮತ್ತು ಕ್ರೋಮ್ ಡೀಟೆಲಿಂಗ್ ಅನ್ನು ಹೊಂದಿರಲಿದೆ. ಕಾರಿನ ಎಂಜಿನ್ ಆನ್ ಆದಲ್ಲಿ ಕಾರಿನ ವಿನೀರ್ ತಿರುಗಲಿದ್ದು, ನಂತರ 12.3 ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ತೋರಿಸುತ್ತದೆ.

ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..

ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಒಳಭಾಗ ಮತ್ತು ಎಂಜಿನ್ ಅನ್ನು ನವಿಕರಿಸಲಾಗಿದ್ದು, ಇದರ ಬೆಲೆಯು ಸುಮಾರು ರೂ 4 ಕೋಟಿಗಿಂತ ಹೆಚ್ಚಿರಲಿದೆ ಎಂದು ಅಂದಾಜಿಸಲಾಗುತ್ತಿದೆ. ಒಮ್ಮೆ ಈ ಕಾರು ಮಾರುಕಟ್ಟೆಗೆ ಬಿಡುಗಡೆಗೊಂಡಲ್ಲಿ ಎಸ್ಟ್ರೋನ್ ಮಾರ್ಟಿನ್ ಡಿಬಿ11 ಮತ್ತು ರೋಲ್ಸ್ ರಾಯ್ಸ್ ವಾಯ್ಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Read more on bentley luxury car
English summary
2018 Bentley Continental GT India Launch Date Revealed; Expected Price, Specs, Features & Images.
Story first published: Wednesday, March 21, 2018, 18:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark