ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ 2014ರಲ್ಲಿ ತಮ್ಮ ಮೊದಲನೆ ತಲೆಮಾರಿನ ಎಕ್ಸ್4 ಕಾರನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾತ್ರ ಬಿಡುಗಡೆಗೊಳಿಸಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ 2014ರಲ್ಲಿ ತಮ್ಮ ಮೊದಲನೆ ತಲೆಮಾರಿನ ಎಕ್ಸ್4 ಕಾರನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾತ್ರ ಬಿಡುಗಡೆಗೊಳಿಸಿದ್ದು, ಇದೀಗ ಸಂಸ್ಥೆಯು ಎಕ್ಸ್4 ಕಾರಿನ ಎರಡನೆಯ ತಲೆಮಾರಿನ ಎಕ್ಸ್4 ಕಾರನ್ನು ಭಾರತದ ಮಾರುಕಟ್ಟೆಗೆ ಮುಂದಿನ ವರ್ಷದಲ್ಲಿ ಪರಿಚಯಿಸಲಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಭಾರತಕ್ಕೆ ಬರಲಿರುವ ಹೊಸ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರುಗಳು ಸಂಸ್ಥೆಯ ಎಕ್ಸ್ ಸರಣಿಯ ಕಾರುಗಳಲ್ಲಿ ಎಕ್ಸ್3 ಮತ್ತು ಎಕ್ಸ್5 ಕಾರುಗಳ ನಡುವಲ್ಲಿ ಸ್ಥಾನಪಡೆದಿದ್ದು, ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಹೊಸ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು ಮೊದಲ ಬಾರಿಗೆ 2018ರ ಜೆನೆವಾ ಮೋಟಾರ್ ಶೋನಲ್ಲಿ ಅನಾವರಣಗೊಂಡಿತ್ತು. ಹೊಸ ತಲೆಮಾರಿನ ಎಕ್ಸ್4 ಕಾರುಗಳು ಸಂಸ್ಥೆಯ ಕ್ಲಾರ್ ಆರ್ಕಿಟೆಕ್ಚುರ್ ಅನ್ನು ಪಡೆದಿದ್ದು ಹಿಂದಿನ ತಲೆಮಾರಿನ ಕಾರುಗಳಿಗಿಂತ ತೂಕದಲ್ಲಿ 50 ಕಿಲೋಗ್ರಾಂ ಕಡಿಮೆ ಇರಲಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಎರಡನೆಯ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರುಗಳು 4725ಎಂಎಂ ಉದ್ದ, 1918ಎಂಎಂ ಅಗಲ ಮತ್ತು 1621ಎಂಎಂ ಎತ್ತರವನ್ನು ಪಡೆದಿದ್ದು, 2864ಎಂಎಂ ವೀಲ್‍‍ಬೇಸ್ ಆಕಾರವನ್ನು ಪಡೆದಿರಲಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರುಗಳು ಎಕ್ಸ್3 ಕಾರಿನಂತೆಯೆ ಮುಂಭಾಗದ ವಿನ್ಯಾಸವನ್ನು ಪಡೆದಿದ್ದು, ಸಂಸ್ಥೆಯ ಚಿಹ್ನೆಯನ್ನು ಕಾರಿನ ಕಿಡ್ನಿ ಗ್ರಿಲ್‍‍ನ ಮೇಲೆ ಅಳವಡಿಸಲಾಗಿದೆ. ಇದಲ್ಲದೆ ಡ್ಯುಯಲ್ ಬ್ಯಾರೆಲ್ ಎಲ್ಇದಿ ಹೆಡ್‍‍ಲ್ಯಾಂಪ್ಸ್ ಮತ್ತು ಅಗಲವಾದ ಏರ್ ಡ್ಯಾಮ್‍‍ಗಳನ್ನು ಅಳವಡಿಸಲಾಗಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಇನ್ನು ಕಾರಿನ ಹಿಂಭಾಗದಲ್ಲಿ ಕ್ಯೂಪೆ ಆಕರವನ್ನು ಪಡೆದಿದ್ದು, ಎಕ್ಸ್6 ಕಾರಿನ ವಿನ್ಯಾಸವನ್ನೆ ಹೋಲಲಿದೆ. ಜೊತೆಗೆ 20 ಇಂಚಿನ ಅಲಾಯ್ ಚಕ್ರಗಳನ್ನು ಕೂಡ ಪಡೆದಿರಲಿವೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರಿನ ಒಳಭಾಗದಲ್ಲಿ ಸೆಂಟ್ರಲ್ ಕಂಸೋಲ್, 6.5 ಇಂಚಿನ ಫ್ಲೋಟಿಂಗ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಮೂರು ಪದರಗಳ ಕ್ಲಮೇಟ್ ಕಂಟ್ರೋಲ್, 3 ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 12 ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂತ್ ಕ್ಲಸ್ಟರ್‍‍ನಿಂದ ಸಜ್ಜುಗೊಂಡಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಇದಲ್ಲದೆ ಫುಲ್ ಕಲರ್ ಹೆಡ್ಸ್ ಅಪ್ ಡಿಸ್ಪ್ಲೇ, ಹಾರ್ಮೊನ್ ಕಾರ್ಡೊನ್ ಸೌಂಡ್ ಸಿಸ್ಟಂ, ಪ್ಯಾನೊರಮಿಕ್ ಸನ್‍‍ರೂಫ್ ಮತ್ತು 8 ಏರ್‍‍ಬ್ಯಾಗ್ ಅನ್ನು ಪಡೆದುಕೊಂಡಿರಲಿದೆ. ಹಾಗೆಯೆ ಡ್ರೈವಿಂಗ್ ಅಸ್ಸಿಸ್ಟ್ ಪ್ಲಸ್, ಲೇನ್ ಕಂಟ್ರೋಲ್ ಅಸ್ಸಿಸ್ಟ್ ಮತ್ತು 10.3 ಇಂಚಿನ ಇನ್ಫೋಟೈನ್ಮೆಂಟ್ ಡಿಸ್ಪ್ಲೆಯನ್ನು ಕೂಡ ಪಡೆದುಕೊಂಡಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಬಿಎಮ್‍‍ಡಬ್ಲ್ಯೂ ಎಕ್4 ಕಾರು 2.0 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 188ಬಿಹೆಚ್‍ಪಿ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮಾದರಿಯ ಕಾರುಗಳನ್ನು ಕೂಡ ಪರಿಚಯಿಸಲಿ ಸಂಸ್ಥೆಯು ಯೋಜನೆಯಲ್ಲಿದೆ.

ಭಾರತಕ್ಕೆ ಬರಲಿದೆ ಮುಂದಿನ ತಲೆಮಾರಿನ ಬಿಎಮ್‍‍ಡಬ್ಲ್ಯೂ ಎಕ್ಸ್4 ಕಾರು..

ಇನ್ನು ಈ ಕಾರಿನ ಬೆಲೆಯ ಬಗ್ಗೆ ಯಾವುದೆ ಮಾಹಿತಿ ಲಭ್ಯವಿಲ್ಲವಾದರೂ, ಮಾರುಕಟ್ಟೇಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಸಿ ಮತ್ತು ರೇಂಜ್ ರೋವರ್ ಎವೊಕ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on bmw luxury cars sedan
English summary
New 2019 BMW X4 India Launch Confirmed.
Story first published: Saturday, May 5, 2018, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X