ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಉತ್ಪಾದಕ ಸಂಸ್ಥೆಗಳು ಪೈಪೋಟಿಯಲ್ಲಿದ್ದು ಗ್ರಾಹಕರಿಗೆ ಉತ್ತಮ ಕಾರುಗಳನ್ನು ಪರಿಚಯಿಸುತ್ತಿದ್ದು, ಕಳೆದ ಮೇ ತಿಂಗಳಲ್ಲಿ ಬರೊಬ್ಬರಿ 14 ವಿವಿದ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಉತ್ಪಾದಕ ಸಂಸ್ಥೆಗಳು ಪೈಪೋಟಿಯಲ್ಲಿದ್ದು ಗ್ರಾಹಕರಿಗೆ ಉತ್ತಮ ಕಾರುಗಳನ್ನು ಪರಿಚಯಿಸುತ್ತಿದ್ದು, ಕಳೆದ ಮೇ ತಿಂಗಳಲ್ಲಿ ಬರೊಬ್ಬರಿ 14 ವಿವಿದ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಈ ಕುರಿತಾದ ಬಿಡುಗಡೆಗೊಂಡ 14 ಕಾರುಗಳ ಬಗ್ಗೆ ಮಾಹಿತಿ ಇಂದಿನ ಲೇಖನದಲ್ಲಿ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

1. ಟಾಟಾ ನೆಕ್ಸಾನ್ ಎ‍ಎಮ್‍ಟಿ

ಟಾಟಾ ಮೋಟಾರ್ಸ್ ತಮ್ಮ ನೆಕ್ಸಾನ್ ಎಎಮ್‍‍ಟಿ ಕಾರನ್ನು ಕಳೆದ ತಿಂಗಳು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.41 ರಿಂದ 10.38 ಲಕ್ಷದ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದೆ. ಇದು ದೇಶದಲ್ಲಿನ ಮೊದಲ ಎ‍ಎಮ್‍‍ಟಿ ಕಾರಿನಲ್ಲಿ ಡ್ರೈವಿಂಗ್ ಮೋಡ್ ಅನ್ನು ಪಡೆದಿರುವ ಕಾರಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಬಿಡುಗದೆಗೊಂಡ ಹೊಸ ಟಾಟಾ ನೆಕ್ಸಾನ್ ಎ‍ಎಮ್‍ಟಿ ಕಾರು ಎಟ್ನಾ ಆರೆಂಜ್ ಮತ್ತು ಸೋನಿಕ್ ಸಿಲ್ಲ್ವರ್ ಬಣ್ಣದ ಎಟ್ನಾ ಬಣ್ಣದಲ್ಲಿ ಲಭ್ಯವಿದ್ದು, ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‍‍ಗಳನ್ನು ಪಡೆದುಕೊಂಡಿದೆ. ಇನ್ನು ಈ ಕಾರು 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದಿದ್ದು, ಎರಡು ಎಂಜಿನ್‍‍ಗಳನ್ನು 6 ಸ್ಪೀಡ್ ಆಟೋಮೇಟೆಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

2. ಮಿನಿ ಕಂಟ್ರಿಮ್ಯಾನ್

2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮೊದಲು ಕಾಣಿಸಿಕೊಂಡು ಮೇ 3 ರಂದು ಬಿಡುಗಡೆಗೊಂಡ ಮಿನಿ ಕಂಟ್ರಿಮ್ಯಾನ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 34.90 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ. ಈ ಕಾರು ಕೂಪರ್ ಎಸ್, ಕೂಪರ್ ಎಸ್‍‍ಡಿ ಮತ್ತು ಕೂಪರ್ ಎಸ್ ಜೆಸಿಡಬ್ಲ್ಯೂ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಬಿಡುಗಡೆಗೊಂಡ ಮಿನಿ ಕಂಟ್ರಿಮ್ಯಾನ್ ಕಾರು ಮರ್ಸಿಡಿಸ್ ಬೆಂಜ್ ಜಿಎಲ್ಎ, ಆದಿ ಕ್ಯೂ3 ಮತ್ತು ವೋಲ್ವೊ ವಿ40 ಕ್ರಾಸ್ ಕಾರುಗಳಿಗೆ ಪೈಪೋಟಿ ನೀಡುತ್ತಿದ್ದು, 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಪೆಟೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು 8 ಸ್ಪೀಡ್ ಸ್ಟೆಫ್ಟ್ರಾನಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

3. ಮರ್ಸಿಡಿಸ್ ಎಎಮ್‍ಜಿ ಇ63 ಎಸ್4 ಮೇಟಿಕ್+

ಮರ್ಸಿಡಿಸ್ ಬೆಂಝ್ ಸಂಸ್ಥೆಯ ಎಎಂಜಿ ಸರಣಿಯಲ್ಲಿ ಮತ್ತೊಂದು ಹೊಸ ಕಾರು ಸೇರ್ಪಡೆಯಾಗಿದ್ದು, ಪವರ್‌ಫುಲ್ ಎಂಜಿನ್ ಪ್ರೇರಿತ ಎಎಂಜಿ ಇ63 ಎಸ್ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 1.50 ಕೋಟಿ ಬೆಲೆ ಹೊಂದಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಪ್ರಾಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ 9 ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಲಾಗಿದ್ದು, 4.0-ಲೀಟರ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಹೊಂದಿರುವ ಎಎಂಜಿ ಇ63 ಎಸ್ ಕಾರುಗಳು 9-ಸ್ಪೀಡ್ ಎಎಂಜಿ ಸ್ಪೀಡ್‌ಸಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

4. ನಿಸಾನ್ ಟೆರ್ರನೊ ಸ್ಪೋರ್ಟ್ ಎಡಿಷನ್

ನಿಸ್ಸಾನ್ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿನೂತನ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಎಸ್‌‌ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 12.22 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಟೆರಾನೊ ಸ್ಪೋರ್ಟ್ ಸ್ಪೆಷನ್ ಎಡಿಷನ್ ಕಾರುಗಳು 1.6-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಎಂಜಿನ್‍‍ಗಳನ್ನು 6 ಸ್ಪೀಡ್ ಮ್ಯಾನುವಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

5. ಮಾರುತಿ ಸುಜುಕಿ ವಿಟಾರ ಬ್ರೇಝಾ

ಮೊದಲ ಬಾರಿಗೆ ಬಿಡುಗಡೆಯಾದಾಗ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದ್ದ ವಿಟಾರಾ ಬ್ರೇಝಾ ಕಾರುಗಳು ಇದೀಗ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸೌಲಭ್ಯದೊಂದಿಗೆ ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಎಎಂಟಿ ವರ್ಷನ್ ವಿಟಾರಾ ಬ್ರೇಝಾ ಕಾರುಗಳನ್ನು ಆರಂಭಿಕವಾಗಿ ರೂ.8.54 ಲಕ್ಷಕ್ಕೆ ಬಿಡುಗಡೆಗೊಳಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಈ ಕಾರಿನ ಪ್ರತಿ ಆವೃತ್ತಿಯಲ್ಲೂ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಅನ್ನು ಅಳವಡಿಸಲಾಗಿದೆ. ಡಿಸೇಲ್ ಮಾದರಿಯಲ್ಲಿ ಮಾತ್ರ ಲಭ್ಯವಿರುವ ವಿಟಾರಾ ಬ್ರೇಝಾ ಕಾರುಗಳು 1.3-ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

6. ಮಾರುತಿ ಎರ್ಟಿಗಾ ಲಿಮಿಟೆಡ್ ಎಡಿಷನ್

ದೇಶದ ನಂ.1 ಕಾರು ಉತ್ಪಾದಕ ಸಂಸ್ಥೆಯಾದ ಮಾರುತಿ ಸುಜುಕಿ ಕಳೆದ ತಿಂಗಳು ತಮ್ಮ ಜನಪ್ರಿಯ ಎರ್ಟಿಗಾ ಕಾರಿನ ಲಿಮಿಟೆಡ್ ಎಡಿಶನ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ವಿಎಕ್ಸ್ಐ ಮತ್ತು ವಿಡಿಐ ವೇರಿಯಂಟ್‍‍‍ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.79 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿರುವ ಈ ಕಾರುಗಳು 1.4 ಲೀಟರ್ ಕಿ ಸಿರೀಸ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

7. ಫೋರ್ಡ್ ಇಕೊಸ್ಪೋರ್ಟ್ ಎಸ್

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತನ್ನ ಇಕೊಸ್ಪೋರ್ಟ್ ಕಾರಿನ ಎಸ್ ವೇರಿಯಂಟ್ ಅನ್ನು ಕಳೆದ ತಿಂಗಳು 14 ರಂದು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 11.37 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪದೆದುಕೊಂಡಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ವೇರಿಯಂಟ್ ಕಾರುಗಳು 1 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಕಾರುಗಳು ಪ್ರಸ್ಥುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡುತ್ತಿವೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

8. ಹೋಂಡಾ ಅಮೇಜ್

ಎರಡನೆಯ ತಲೆಮಾರಿನ ಹೋಂಡಾ ಅಮೇಜ್ ಕಾರುಗಳು ಮೇ 16ರಂದು ಬಿಡುಗಡೆಗೊಂಡಿದ್ದು, ಪೆಟ್ರೋಲ್ ಆವೃತ್ತಿಯ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.59 ಲಕ್ಷದಿಂದ ಮತ್ತು ಡೀಸೆಲ್ ಆವೃತಿಯ ಕಾರುಗಳು ರೂ 6.69 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಹೊಸ ಅಮೇಜ್ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪದೆದಿದ್ದು, ಎರಡೂ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಕಾರುಗಳು ಇ,ಎಸ್, ವಿ ಮತ್ತು ವಿಎಕ್ಸ್ ಎಂಬ ನಾಲ್ಕು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

9. ಟೊಯೊಟಾ ಯಾರಿಸ್

ಜೆ, ಜಿ, ವಿ ಮತ್ತು ವಿಎಕ್ಸ್ ಎಂಬ ನಾಲ್ಕು ವೇರಿಯಂಟ್‍‍ಗಳಲ್ಲಿ ಮೇ 18ರಂದು ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಅಕರುಗಳು ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಮಾರುತಿ ಸಿಯಾಜ್, ಫೋಲ್ಕ್ಸ್ ವ್ಯಾಗನ್ ಮತ್ತು ಸ್ಕೋಡಾ ರ್‍ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 8.75 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಕಾರುಗಳು 1.5 ಲೀಟರ್ ವಿವಿಟಿ-ಐ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವ 7 ಸ್ಪೀಡ್ ಆಟೋಮ್ಯಾತಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಯಾರಿಸ್ ಕಾರುಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

10. ಹ್ಯುಂಡೈ ಐ20 ಸಿವಿಟಿ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕಳೆದ ಆಟೋ ಎಕ್ಸ್‌ಪೋದಲ್ಲಿ 2018ರ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಸಿಟಿವಿ ಸೌಲಭ್ಯದ ಎಲೈಟ್ ಐ20 ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.04 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಎಲೈಟ್ ಐ20 ಸಿಟಿವಿ ಕಾರು ಮಾದರಿಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದೆ. ಜೊತೆಗೆ ಗ್ರಾಹಕರ ಬೇಡಿಕೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಆವೃತ್ತಿಯನ್ನು ಸಹ ಆಯ್ಕೆ ಮಾಡಬಹುದು.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

11. ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್

ಹ್ಯುಂಡೈ ಇಂಡಿಯಾ ಸಂಸ್ಥೆಯು ಕಳೇದ ತಿಂಗಳು ಮೇ 21ರಂದು ತನ್ನ ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 15.03 ಲಕ್ಷಕ್ಕೆ ನಿಗದಿಗೊಳಿಸಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಪೆಟ್ರೋಲ್ ಮತ್ತು ಡೀಸೆಲ್ ಮಾದರಿ ಸೇರಿಸಿ ಒಟ್ಟು 15 ವೇರಿಯಂಟ್‍‍ಗಳಲ್ಲಿ ಈ ಕಾರು ಖರೀದಿಗೆ ಲಭ್ಯವಿದ್ದು, 1.4 ಲೀಟರ್ ಡೀಸೆಲ್, 1.6 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲೆ ಎಂಜಿನ್ ಅನ್ನು ಪಡೆದಿದ್ದು, ಎಂಜಿನ್‍‍ಗಳನ್ನು 6 ಸ್ಪೀಡ್ ಮ್ಯಾನುವಲ್ ಅತವ ಆಟೋಮ್ಯಾಟಿಕ್ ಗೆರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

12. ಲೆಕ್ಸಸ್ ಎಲ್ಎಕ್ಸ್ 570

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಲೆಕ್ಸಸ್ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಅಧಿಕಗೊಳಿಸಲು ವಿನೂತನ ಮಾದರಿಯ ಲೆಕ್ಸಸ್ ಎಲ್ಎಕ್ಸ್570 ಐಷಾರಾಮಿ ಫ್ಲಾಗ್‍‍‍ಶಿಪ್ ವೇರಿಯಂಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಭಾರತದ ಎಕ್ಸ್ ಶೋರಂ ಪ್ರಕಾರ ಈ ಕಾರಿನ ಬೆಲೆಯನ್ನು ರೂ.2.32 ಕೋಟಿ ನಿಗದಿಗೊಳಿಸಿದೆ. ಲೆಕ್ಸಸ್ ಎಲ್ಎಕ್ಸ್570 ಕಾರುಗಳು ಟೊಯೊಟಾ ಸಂಸ್ಥೆಯ 5.7 ಲೀಟರ್ ವಿ8 ಎಂಜಿನ್ ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

13. ಮರ್ಸಿಡಿಸ್ ಎಎಮ್‍ಜಿ ಎಸ್‍ಎಲ್ಸಿ 43 ರೆಡ್ ಆರ್ಟ್ ಮತ್ತು ಆರೆಂಜ್ ಆರ್ಟ್

ಮರ್ಸಿಡಿಸ್ ಬೆಂಝ್ ಸಂಸ್ಥೆಯು ಎಎಂಜಿ ಸರಣಿಯ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿಎಲ್ಇ 43 4ಮ್ಯಾಟಿಕ್ ಕೂಪೆ ಕಾರುಗಳು ರೂ. 1.02 ಕೋಟಿ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಕಾರುಗಳು ರೂ. 87.48 ಲಕ್ಷ ಬೆಲೆ ಪಡೆದುಕೊಂಡಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 3-ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ವಿ6 ಡೈರೆಕ್ಟ್ ಎಂಜಿನ್ ಹೊಂದಿದ್ದು, 361-ಬಿಎಚ್‌ಪಿ ಮತ್ತು 520-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

14.ಮಿನಿ ಕೂಪರ್ ಫೇಸ್‍‍ಲಿಫ್ಟ್

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆ ಬಿಎಮ್‍‍ಡಬ್ಲ್ಯೂ ಒಡೆತನದ ಮಿನಿ ತನ್ನ ಹೊಸ ಮಿನಿ ಕೂಪರ್ ಫೇಸ್‍‍ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದೆ. 3 ಮತ್ತು 5 ಬಾಗಿಲುಗಳನ್ನೊಳಗೊಂಡ 4 ವೇರಿಂಯಂಟ್‍‍ಗಳಲ್ಲಿ ಈ ಕಾರುಗಳು ಮೇ 24 ರಂದು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 29.70 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಂಡ ಕಾರುಗಳಿವು..

ಮಿನಿ 3 ಡೋರ್ ಕೂಪರ್ ಎಸ್ ಮತ್ತು ಕನ್ವರ್ಟಿಬಲ್ ಎಸ್ ಕಾರುಗಳು 2.0 ಲೀಟರ್ 4 ಸಿಲೆಂಡರ್ ಮಿನಿ ಟ್ವಿನ್‍ಪವರ್ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು ಮಿನಿ 3 ಡೋರ್ ಕೂಪರ್ ಡಿ ಮತ್ತು 5 ಡೋರ್ ಕೂಪರ್‍ ಕಾರುಗಳು 1.5 ಲೀಟರ್ 3 ಸಿಲೆಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದಿದ್ದು, ಪಟ್ರೋಲ್ ಎಂಜಿನ್ ಅನ್ನು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
New cars launched in India last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X