ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಪ್ರಸ್ತುತ ತಲೆಮಾರಿನ ಆಸ್ಪೈರ್ ಸೆಡಾನ್ ಕಾರಿನ ಉತ್ಪಾದನೆಯನ್ನು ನಿಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದ ಫೋರ್ಡ್ ಸಂಸ್ಥೆಯು ಅದರ ಬೆನ್ನೆಲ್ಲೇ ನ್ಯೂ ಜನರೇಷನ್ ಮಾದರಿಯ ಆಸ್ಪೈರ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

By Praveen Sannamani

ಅಮೆರಿಕ ಮೂಲದ ಪ್ರಸಿದ್ದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಸ್ತುತ ತಲೆಮಾರಿನ ಆಸ್ಫೈರ್ ಸೆಡಾನ್ ಕಾರಿನ ಉತ್ಪಾದನೆಯನ್ನು ನಿಲ್ಲಿಸುತ್ತಿರುವುದಾಗಿ ಹೇಳಿಕೊಂಡಿತ್ತು. ಇದರ ಬೆನ್ನೆಲ್ಲೇ ನ್ಯೂ ಜನರೇಷನ್ ಮಾದರಿಯ ಆಸ್ಪೈರ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಮಾಹಿತಿಗಳ ಪ್ರಕಾರ ಫೋರ್ಡ್ ಸಂಸ್ಥೆಯು ನ್ಯೂ ಜನರೇಷನ್ ಮಾದರಿಯ ಆಸ್ಫೈರ್ ಕಾರಿನ ಉತ್ಪಾದನೆಯನ್ನು ಶೀಘ್ರದಲ್ಲೇ ಶುರುಮಾಡಲಿದ್ದು, ಇದೇ ವರ್ಷ ಜೂನ್ ತಿಂಗಳಿನಲ್ಲಿ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದೆ. ಹೀಗಾಗಿ ಹೊಸ ಕಾರನ್ನು ಅಧಿಕೃತ ಕಾರು ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಹೊಸ ಕಾರಿನ ಗುಣವಿಶೇಷತೆಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಹೊಸ ಫೋರ್ಡ್ ಆಸ್ಫೈರ್ ಸೆಡಾನ್ ಕಾರು ಪ್ರಸ್ತುತ ತಲೆಮಾರಿನೊಂದಿಗೆ ಹೋಲಿಸಿದರೆ ಹಲವಾರು ಹೊಸ ನವೀಕರಣಗಳೊಂದಿಗೆ ಸಿದ್ದಗೊಂಡಿದ್ದು, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್ ಮತ್ತು ಟ್ವೀಕ್ಡ್ ರಿಯರ್ ಪ್ರೊಫೈಲ್ ಹಾಗೆಯೇ ಅಲಾಯ್ ಚಕ್ರಗಳನ್ನೂ ಕೂಡಾ ಪಡೆದಿರಲಿವೆ.

ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಇನ್ನು ಕಾರಿನ ಒಳಭಾಗದಲ್ಲಿ ಫೋರ್ಡ್ ಇಕೋ ಸ್ಪೋರ್ಟ್ ಮಾದರಿಯಲ್ಲೇ ಮೊದಲ ಬಾರಿಗೆ ಎಸ್‍ವೈಎನ್‍ಸಿ3 ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಬಳಸಲಾಗಿದ್ದು, ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಅಂಶಗಳನ್ನು ಕೂಡಾ ಅಳವಡಿಸಲಾಗಿದೆ.

ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಹೊಸದಾಗಿ ಬಿಡುಗಡೆಗೊಳ್ಳಲಿರುವ ಆಸ್ಫೈರ್ ಕಾರು, ಎಕೋ ಸ್ಪೋರ್ಟ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಬಳಸಲಾದಂತೆ 1.5 ಲೀಟರ್ ಮೂರು ಸಿಲಿಂಡರ್ ಡ್ರಾಗನ್ ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 121 ಬಿಹೆಚ್‍ಪಿ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಹಾಗೆಯೇ ಡೀಸೆಲ್ ಆವೃತ್ತಿಯು 1.5 ಲೀಟರ್ ಡೀಸೆಲ್ ಎಂಜಿನ್ 98.9 ಬಿಹೆಚ್‍ಪಿ ಮತ್ತು 215ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು, ಈ ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಕೂಡ ಪಡೆದಿರಲಿದೆ.

ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಹೊಸ ಅವತಾರದಲ್ಲಿ ಬಿಡಗಡೆಗೊಳ್ಳಲಿರುವ ಫೋರ್ಡ್ ಆಸ್ಪೈರ್ ಕಾರಿನ ಬಗ್ಗೆ ಸಂಸ್ಥೆಯು ಇನ್ನು ಹೆಚ್ಚು ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದರೂ, ಪವರ್‌ಫುಲ್ ಎಂಜಿನ್ ಬಳಕೆ ಹಿನ್ನೆಲೆ ಸೆಡಾನ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಬರಲಿರುವ ಫೋರ್ಡ್ ಆಸ್ಪೈರ್ ಫೆೇಸ್‌ಲಿಫ್ಟ್ ಸೆಡಾನ್ ಕಾರು ಇದೇ ಅದು....

ಒಟ್ಟಿನಲ್ಲಿ ಹೊಸದಾಗಿ ನವೀಕರಣಗೊಂಡ ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ ಸೆಂಟ್, ಫೋಕ್ಸ್‌ವ್ಯಾಗನ್ ಎಮಿಯೊ ಮತ್ತು ಮುಂದಿನ ತಲೆಮಾರಿನ ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on ford sedan
English summary
New 2018 Ford Aspire Facelift Spotted — Launch Expected Soon.
Story first published: Tuesday, May 8, 2018, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X