ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಫೋರ್ಡ್ ಇಂಡಿಯಾ ತಮ್ಮ ಜನಪ್ರಿಯ ಆಸ್ಫೈರ್ ಸೆಡಾನ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಮಾರುಕಟ್ಟೆಗೆ ಅಕ್ಟೋಬರ್ 4ರಂದು ಪರಿಚಯಿಸಲಿದ್ದು, ಇದೀಗ ಸಂಸ್ಥೆಯು ಹೊಸ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿದೆ. ಹೊಸ ಫೋರ್ಡ್ ಆಸ್ಫೈರ್ ಕಾರು ಹೊಸ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬಿಡುಗಡೆಗೊಳ್ಳಲಿದೆ.

ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು ದೇಶದಲ್ಲಿನ ಎಲ್ಲಾ ಅಧಿಕೃತ ಫೋರ್ಡ್ ಡೀಲರ್‍‍ಗಳಲ್ಲಿ ಹೊಸ ಕಾರಿನ ಖರೀದಿಗಾಗಿ ರೂ. 11,000 ಸವಿರದ ಹಣವನ್ನು ಮುಂಚುಣಿಯಾಗಿ ಪಾವತಿಸಬೇಕಾಗಿದ್ದು, ಜೊತೆಗೆ ಸಂಸ್ಥೆಯು ಈ ಕಾರಿನ ಅಧಿಕೃತ ಚಿತ್ರಗಳನ್ನು ಬಹಿರಂಗಗೊಳಿಸಿದೆ.

ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಬಿಡುಗಡೆಗೊಳ್ಳಲಿರುವ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಬಂಪರ್, ಫಾಗ್‍ ಲ್ಯಾಂಪ್‍‍ನ ಸುತ್ತ ಸಿ ಆಕಾರದ ಬೆಜೆಲ್‍‍ಗಳನ್ನು ಅಳವಡಿಸಲಾಗಿದೆ. ಕಾರಿನ ಹೆಡ್‍‍ಲ್ಯಾಂಪ್ ಹಳೆಯ ಮಾದರಿಯ ಕಾರಿನಂತೆಯೆ ಹೋಲುತಿದ್ದು, 15 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಂಡಿದೆ.

ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆಯನ್ನು ಪಡೆದ 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿದ್ದು, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ಸ್ ಮತ್ತು ಯುಎಸ್‍‍ಬಿ ಪೋರ್ಟ್‍‍ಗಳನ್ನು ಒದಗಿಸಲಾಗಿದೆ.

ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಎಂಜಿನ್ ಸಾಮರ್ಥ್ಯ

ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಆಧಾರಿತ ಕಾರುಗಳು 1.2 ಲೀಟರ್ ಡ್ರಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 95ಬಿಹೆಚ್‍‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಇನ್ನು ಡೀಸೆಲ್ ಆಧಾರಿತ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರುಗಳು 1.5 ಲೀಟರ್ ಎಂಜಿನ್ ಸಹಾಯದಿಂಡ 98.6ಬಿಹೆಚ್‍‍ಪಿ ಮತ್ತು 215ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಸಂಸ್ಥೆಯು ತಮ್ಮ ಆಸ್ಫೈರ್ ಫೇಸ್‍‍ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಹಿಂದಿನ ತಲೆಮಾರಿನ ಕಾರಿಗಿಂತಾ ಹೆಚ್ಚು ನವೀಕರಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಕಾರಿನ ಬೆಲೆಗಳ ಕುರಿತಾಗಿ ಮಹಿತಿ ಇನ್ನು ಲಭ್ಯವಾಗಿಲ್ಲವಾದರೂ ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಮಾರುತಿ ಡಿಜೈರ್, ಹೋಂಡಾ ಅಮೇಜ್, ಟಾಟಾ ಟಿಗೋರ್ ಮಯ್ಯು ಹ್ಯುಂಡೈ ಎಕ್ಸ್ ಸೆಂಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ford sedan new car
English summary
New Ford Aspire Facelift Bookings Open Ahead Of Launch.
Story first published: Monday, September 24, 2018, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X