ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿ ತಮ್ಮ ಮುಂದಿನ ತಲೆಮಾರಿನ ಎ8 ಫ್ಲ್ಯಾಗ್‍‍ಶಿಪ್ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುವುದರ ಬಗ್ಗೆ ಸುಳಿವು ನೀಡಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿ ತಮ್ಮ ಮುಂದಿನ ತಲೆಮಾರಿನ ಎ8 ಫ್ಲ್ಯಾಗ್‍‍ಶಿಪ್ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುವುದರ ಬಗ್ಗೆ ಸುಳಿವು ನೀಡಿದ್ದು, 2019ರ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗಿಯಿಡಲಿದೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಈ ಮಾಹಿತಿಯನ್ನು ಆಡಿ ಇಂಡಿಯಾ ಸಂಸ್ಥೆಯ ರಹಿಲ್ ಅನ್ಸಾರಿಯವರು ಕೆಲದಿನಗಳ ಮೊನ್ನೆಯಷ್ಟೆ ಬಿಡುಗಡೆಗೊಂಡ ಆಡಿ ಕ್ಯೂ5 ಪೆಟ್ರೋಲ್ ವರ್ಷನ್ ಕಾರಿನ ಬಿಡುಗಡೆಯ ಸಮಾರಂಭದಲ್ಲಿ ಬಹಿರಂಗಗೊಳಿಸಿದ್ದಾರೆ. ರಹಿಲ್ ಅನ್ಸಾರಿಯವರು ಮುಂದಿನ ತಲೆಮಾರಿನ ಎ8 ಕಾರು ಇನ್ನು 12 ತಿಂಗಳೊಳಗೆ ಬಿಡಗುಗಡೆಗೊಳಿಸುವ ಬಗ್ಗೆ ಹೋಳಿಕೊಂಡಿದ್ದಾರೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ನಾಲ್ಕನೆಯ ತಲೆಮಾರಿನ ಆಡಿ ಎ8 ಕಾರು 2017 ಜುಲೈ ತಿಂಗಳಲ್ಲಿ ಬಹಿರಂಗಗೊಂಡಿದ್ದು, ಬರ್ಸಿಲೋನನಲ್ಲಿ ನಡೆದ ಆಡಿ ಸಮ್ಮಿತ್ ಸಮಾರಂಭದಲ್ಲಿ ಇದನ್ನು ಪ್ರದರ್ಶಿಸಲಾಯಿತು. ಆಡಿ ಸಂಸ್ಥೆಯು ಭಾರತೀಯ ರಸ್ತೆಗಳಿಗೆ ಸರಿತೂಗುವಂತೆ ಮತ್ತು ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ಕೂಡ ಶುರುಮಾಡಿವೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಮುಂದಿನ ತಲೆಮಾರಿನ ಆಡಿ ಎ8 ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿರಲಿದ್ದು, ಪ್ರೋಲಾಗ್ ಪರಿಕಲ್ಪನೆಯನ್ನು ಆದರಿಸಲಿದೆ ಮತ್ತು ಸ್ಪೋರ್ಟಿ ಲುಕ್ ಅನ್ನು ಕೂಡ ಪಡೆದುಕಂಡಿದೆ. ಎ8 ಸೆಡಾನ್ ಕಾರು ಅಪ್‍‍ರೈಟ್ ಫ್ರಂಟ್ ಎಂಡ್, ಹೈ ಶೋಲ್ಡರ್ ಲೈನ್ ಮತ್ತು ವಾಹನದ ಕೊನೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಪಡೆದಿದೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಇನ್ನು ಕಾರಿನ ಹೊರಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ ಸಿಂಗಲ್ ಫ್ರೇಮ್ ಕ್ರೋಮ್ ಗ್ರಿಲ್, ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಮತ್ತು ಒಎಲ್‍ಇಡಿ ಟೆಕ್ನಾಲಜಿಯನ್ನು ಹೊಂದಿರುವ ಸ್ಪೋರ್ಟಿ ಟೈಲ್ ಲ್ಯಾಂಪ್ಸ್ ಅನ್ನು ಕೂಡ ಅಳವಡಿಸಲಾಗಿದೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಆಡಿ ಎ8 ಸೆಡಾನ್ ಕಾರಿನ ಒಳಭಾಗದಲ್ಲಿ ಕೊಂಚ ಬದಲಾವಣೆಗಳನ್ನು ಪಡೆದಿದ್ದು, ಸ್ಮಾರ್ಟ್ ಮತ್ತು ಆಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ. ಇದರಲ್ಲಿ ಅಭಿವೃದ್ಧಿಗೊಳಿಸಲಾದ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಆಡಿ ವರ್ಚುವಲ್ ಕಾಕ್‍‍ಪಿಟ್ ಅನ್ನು ಅಳವಡಿಸಲಾಗಿದೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಕೇಂದ್ರ ಕನ್ಸೋಲ್‍‍ನಲ್ಲಿರುವ ಎರಡು ಪರದೆಯ ಮೂಲಕ ಬಹುತೇಕ ಎಲ್ಲವನ್ನೂ ಪ್ರವೇಶಿಸಬಹುದು ಮತ್ತು ಅದು ಯಾವುದೇ ಗುಂಡಿಗಳು ಅಥವಾ ಉಬ್ಬುಗಳನ್ನು ಪಡೆಯುವುದಿಲ್ಲ. ಇದಲ್ಲದೆ ಈ ಕಾರಿನ ಮುಂಭಾಗದಲ್ಲಿ ಅದಾರಮದಾಯಕ ಫೂಟ್‍‍ರೆಸ್ಟ್ ಹೊಂದಿರುವ ಸೀಟ್‍‍ಗಳನ್ನು ಪಡೆದಿದೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಆಡಿ ಎ8 ಕಾರು 3 ಲೀಟರ್ ವಿ6 ಪೆಟ್ರೋಲ್, 3 ಲೀಟರ್ ವಿ6 ಡೀಸೆಲ್ ಮತ್ತು 4 ಲೀಟರ್ ವಿ8 ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಭಾರತಕ್ಕೆ ಬರಲಿರುವ ಕಾರುಗಳು ಕೂಡಾ ಮೂರು ಎಂಜಿನ್ ಮಾದರಿಗಳಲ್ಲಿ ಬರಲಿದ್ದು ವಿ6 ಪೆಟ್ರೋಲ್ ಮತ್ತು ಡಿಸೆಲ್ಎಂಜಿನ್‍‍ಗಳನ್ನು ಮೊದಲು ಬಿಡುಗಡೆಗೊಳಿಸಲಿದೆ.

ಭಾರತಕ್ಕೆ ಬರಲಿದೆ ಹೊಸ ತಲೆಮಾರಿನ ಆಡಿ ಎ8 ಕಾರು..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಆಡಿ ಸಂಸ್ಥೆಯು ಸುಮಾರು 1 ವರ್ಷದ ನಂತರ ತಮ್ಮ ಮುಂದಿನ ತಲೆಮಾರಿನ ಎ8 ಫ್ಲ್ಯಾಗ್‍‍ಶಿಪ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ನಾಲ್ಕನೆಯ ತಲೆಮಾರಿನ ಎ8 ಕಾರುಗಳು ಈ ಬಾರಿ ನವೀಕರಿಸಲಾದ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ಹೊತ್ತೆ ಮುಂದಿನ ವರ್ಷದ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ.

Most Read Articles

Kannada
Read more on audi luxury cars sedan
English summary
New-Gen Audi A8 India Launch Details Revealed.
Story first published: Saturday, June 30, 2018, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X