ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

Written By: Rahul TS

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಇಂದು ತಮ್ಮ ಹೊಸ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಲಭ್ಯವಿರಲಿವೆ. ಪೆಟ್ರೋಲ್ ಆವೃತ್ತಿಯ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.59 ಲಕ್ಷದಿಂದ ಮತ್ತು ಡೀಸೆಲ್ ಆವೃತಿಯ ಕಾರುಗಳು ರೂ 6.69 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಪೆಟ್ರೋಲ್ ಎಂಜಿನ್ ಮಾದರಿಯ ಅಮೇಜ್ ಕಾರು 1.2 ಲೀಟರ್ ಎಂಜಿನ್ ಸಹಾಯದಿಂದ 89ಬಿಹೆಚ್‍‍ಪಿ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಎಂಜಿನ್ ಸಹಯಾದಿಂದ 99ಬಿಹೆಚ್‍‍ಪಿ ಮತ್ತು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಹೊಸ ಹೋಂಡಾ ಅಮೇಜ್ ಕಾರುಗಳು ಇ,ಎಸ್, ವಿ ಮತ್ತು ವಿಎಕ್ಸ್ ಎಂಬ ನಾಲ್ಕು ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡಿದ್ದು, ಪ್ರತೀ ವೇರಿಯಂಟ್‍‍ನ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಅಮೇಜ್ ಕಾರಿನ ಎಲ್ಲಾ ವೇರಿಯಂಟ್‍‍ಗಳ ಬೆಲೆ

Variants Petrol Diesel
V CVT ₹7,99,900 ₹8,99,900
S CVT ₹7,39,900 ₹8,39,900
VX MT ₹7,57,900 ₹8,67,900
V MT ₹7,09,900 ₹8,19,900
S MT ₹6,49,900 ₹7,59,900
E MT ₹5,59,900 ₹6,69,900
ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಹೋಂಡಾ ಅಮೇಜ್ 'ಇ ವೇರಿಯಂಟ್'

ಹೋಂಡಾ ಅಮೇಜ್ 'ಇ' ವೇರಿಯಂಟ್ ಕಾರುಗಳಲ್ಲಿ, ಫ್ರಂಟ್ ಡ್ಯುಯಲ್ ಏರ್‍‍ಬ್ಯಾಗ್ಸ್, ಐಎಸ್‍‍ಒಫಿಕ್ಸ್ ಚೈಲ್ಡ್ ಸೀಟ್ ಆನ್ಕೋರೇಜ್, ಎಬಿಎಸ್‍‍ನೊಂದಿಗೆ ಇಬಿಡಿ, ಕ್ರೋಮ್ ಗ್ರಿಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಉನ್‍‍‍ಲಾಕ್, ಪವರ್ ವಿಂಡೋ ಮತ್ತು ಲೋಟ್ ಲಿಮಿಟರ್‍‍‍ನೊಂದಿಗೆ ಡೈವರ್ ಸೀಟ್ ಪ್ರಿಟೆನ್ಷನರ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಹೋಂಡಾ ಅಮೇಜ್ 'ಎಸ್ ವೇರಿಯಂಟ್'

ಹೋಂಡಾ ಅಮೇಜ್ 'ಎಸ್' ವೇರಿಯಂಟ್ ಕಾರುಗಳಲ್ಲಿ ಪವರ್ ಅಡ್ಜಸ್ಟಬಲ್ ಒ‍ಆರ್‍‍ವಿಎಂ, ಇಂಟಿಗ್ರೇಟೆಡ್ ಎಲ್‍ಇಡಿ ಟರ್ನ್ ಇಂಡಿಕೇಟರ್ಸ್, ಶಾರ್ಕ್ ಫಿನ್ ಆಂಟೆನಾ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ರಿಯರ್ ಸೆಂಟರ್ ಫೋಲ್ಡೆಬಲ್ ಆರ್ಮ್‍‍ರೆಸ್ಟ್, ಇಂಟೀರಿಯರ್ ಡೆಕೊರೇಶನ್ ಪ್ಯಾಕೇಜ್ ಮತ್ತು ಟಿಲ್ಟ್ ಸ್ಟೀರಿಂಗ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಹೋಂಡಾ ಅಮೇಜ್ 'ವಿ ವೇರಿಯಂಟ್'

ಹೋಂಡಾ ಅಮೇಜ್ 'ವಿ' ವೇರಿಯಂಟ್ ಕಾರುಗಳು ಎಲ್‍ಇಡಿ ಪೊಸಿಶನ್ ಹೆಡ್‍‍ಲ್ಯಾಂಪ್ಸ್, ಮಲ್ಟಿ ಸ್ಪೋಕ್ ಆರ್15 ಅಲಾಯ್ ಚಕ್ರಗಳು, ಮುಂಭಾಗದಲ್ಲಿ ಫಾಗ್ ಲ್ಯಾಂಪ್ಸ್, ಒನ್ ಪುಶ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ವಿಂಡ್‍‍ಶೀಲ್ಡ್ ಡೆಫಾಗರ್, ಪ್ಯಾಡಲ್ ಶಿಫ್ಟರ್, ಎಂಐಡಿ ಸ್ಕ್ರೀನ್, ಔಟ್‍‍ಸೈಡ್ ಟೆಂಪ್ರೇಚುರ್ ಮತ್ತು ಮೈಲೇಜ್ ಡಿಸ್ಪ್ಲೇ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಹೋಂಡಾ ಅಮೇಜ್ 'ವಿಎಕ್ಸ್ ವೇರಿಯಂಟ್'

ಹೋಂಡಾ ಅಮೇಜ್ 'ವಿಎಕ್ಸ್' ವೇರಿಯಂಟ್ ಕಾರುಗಳು 7 ಇಂಚಿನ ಅಡ್ವಾನ್ಸ್ಡ್ ಟಚ್‍‍ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ, ಇಂಟಿಗ್ರೇಟೆಡ್ ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ, ರಿಯರ್ ಕ್ಯಾಮೇರಾ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ವಾಯ್ಸ್ ಕಂಟ್ರೋಲ್ಸ್, ವಾಯ್ಸ್ ಕಮ್ಯಾಂಡ್ ಮತ್ತು ಐಆರ್ ರಿಮೊಟ್ ಕಂಟ್ರೋಲ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಬಿಡುಗಡೆಗೊಂಡ ಹೊಸ ಹೋಂಡಾ ಅಮೇಜ್ ಕಾರಿನ ವೇರಿಯಂಟ್‍‍ಗಳಲ್ಲಿ ಯಾವುದು ಬೆಸ್ಟ್..?

ಮೈಲೇಜ್

ಹೊಸ ಹೋಂಡಾ ಅಮೇಜ್ ಕಾರಿನ ಪೆಟ್ರೋಲ್ ವೇರಿಯಂಟ್‍‍ಗಳು ಪ್ರತೀ ಲೀಟರ್‍‍ಗೆ 19 ಮತ್ತು 19.5 ಕಿಲೋಮೀಟರ್ ಮೈಲೇಜ್ ನೀಡಲಿದ್ದು, ಡೀಸೆಲ್ ವೇರಿಯಂಟ್‍‍ಗಳು ಪ್ರತೀ ಲೀಟರ್‍‍ಗೆ 27.4 ಮತ್ತು 23.8 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿವೆ.

Read more on honda sedan new launch
English summary
New Honda Amaze 2018 Variants In Detail.
Story first published: Wednesday, May 16, 2018, 18:30 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark