ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಜಪಾನ್ ಪ್ಯಾಸ್ಸೆಂಜರ್ ಕಾರು ತಯಾರಕ ಸಂಸ್ಥೆಯಾದ ಹೋಂಡಾ ಮೋಟರ್ಸ್ 2018ರ ಇಂಡೋನೇಷಿಯಾ ಇಂಟರ್‍‍ನ್ಯಾಷನಲ್ ಆಟೋ ಮೇಳದಲ್ಲಿ ತಮ್ಮ ಎರಡನೆ ತಲೆಮಾರಿನ ಬ್ರಿಯೊ ಕಾರನ್ನು ಅನಾವರಣಗೊಳಿಸಿದೆ.

By Rahul Ts

ಜಪಾನ್ ಪ್ಯಾಸ್ಸೆಂಜರ್ ಕಾರು ತಯಾರಕ ಸಂಸ್ಥೆಯಾದ ಹೋಂಡಾ ಮೋಟರ್ಸ್ 2018ರ ಇಂಡೋನೇಷಿಯಾ ಇಂಟರ್‍‍ನ್ಯಾಷನಲ್ ಆಟೋ ಮೇಳದಲ್ಲಿ ತಮ್ಮ ಎರಡನೆ ತಲೆಮಾರಿನ ಬ್ರಿಯೊ ಕಾರನ್ನು ಅನಾವರಣಗೊಳಿಸಿದ್ದು, ಜಕಾರ್‍ತಾ ವೇದಿಕೆಯಲ್ಲಿ ನಡೆದ ಗೈಕಿಂಡೊ ಇಂಡೋನೇಷಿಯನ್ ಇಂಟರ್‍‍ನ್ಯಾಷನಲ್ ಆಟೋ ಶೋ‍‍ನಲ್ಲಿ ಹೋಂಡಾ ಸ್ಮಾಲ್ ಆರ್‍ಎಸ್ ಕಾನ್ಸೆಪ್ಟ್ ಬ್ರಿಯೊ ಕಾರನ್ನು ಅನಾವರಣಗೊಳಿಸಿದೆ.

ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಎರಡನೆ ತಲೆಮಾರಿನ ಹೋಂಡಾ ಬ್ರಿಯೊ ಹ್ಯಾಚ್‍‍ಬ್ಯಾಕ್‍‍ನ ಒಟ್ಟಾರೆ ವಿನ್ಯಾಸವು ಹೋಂಡಾ ಸ್ಮಾಲ್ ಆರ್‍ಎಸ್ ಕಾನ್ಸೆಪ್ಟ್ ವಿನ್ಯಾಸವನ್ನೆ ಹೋಲುತ್ತದೆ. ಹೋಂಡಾ ಮೋಟರ್ಸ್ ಬ್ರಿಯೊ ಕಾರನ್ನು ಸ್ಟ್ಯಾಂಡರ್ಡ್ ಮತ್ತು ಬ್ರಿಯೊ ಸ್ಟ್ಯಾಂಡರ್ಡ್ ಎಂಬ ಎರಡು ವೇರಿಯಂಟ್‍‍ಗಳನ್ನು ಪರಿಚಯಿಸಲಿದೆ.

ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಹೊಸ ತಲೆಮಾರಿನ ಬ್ರಿಯೊ ಬ್ರೆಝಾ ಕಾರಿನ ಮುಂಭಾಗದ ವಿನ್ಯಾಸದಲ್ಲಿ ಇಂಟಿಗ್ರೇಟೆಡ್ ಹೆಡ್‍‍ಲ್ಯಾಂಪ್ ಹೊಂದಿರುವ ಫ್ರಂಟ್ ಗ್ರಿಲ್ ಅಳವಡಿಸಲಾಗಿದೆ. ಬ್ರಿಯೊ ಕಾರಿನ ಫ್ರಂಟ್ ಡಿಸೈನ್ ಇಂಡೋನೇಷಿಯಾದಲ್ಲಿ ಮಾರಾಟವಾಗುತ್ತಿರುವ ಹೋಂಡಾ ಮೊಬಿಲಿಯಾ ಎಮ್‍‍ಪಿವಿ ಕಾರನ್ನು ಹೋಲುತ್ತದೆ. ದೊಡ್ಡ ಗಾತ್ರದ ಬಾಗಿಲುಗಳು ಮತ್ತು ಉದ್ದನೆಯ ದೇಹವುಳ್ಳ ಬ್ರಿಯೊ ಪ್ರಸ್ಥುತ ಇರುವ ಮಾಡಲ್ ಅನ್ನು ಹೋಲಿಸಿದರೆ ಬಹಳ ವಿಭಿನ್ನವಾಗಿದೆ.

ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಬ್ರಿಯೊ ಹ್ಯಾಚ್‍‍ಬ್ಯಾಕ್‍‍ನ ಸ್ಪೋರ್ಟಿವ್ ವರ್ಷನ್ ಬ್ರಿಯೊ ಆರ್‍ಎಸ್ ಕಾರಿನಲ್ಲಿ ಹಲವು ಬಗೆಯ ಮತ್ತು ವಿಭಿನ್ನವಾದ ಡಿಸೈನ್ ಎಲಿಮೆಂಟ್‍‍ಗಳಿವೆ. ಬ್ಲಾಕ್ ಕಲರ್ ಫಿನಿಷಿಂಗ್ ಹೊಂದಿರುವ ಫ್ರಂಟ್ ಎಂಡ್ ಪಿಲ್ಲರ್, ಸ್ಪೋರ್ಟಿವ್ ಅಲಾಯ್ ವ್ಹೀಲ್ಸ್, ಆಕ್ರಮಣಕಾರಿ ಬಂಪರ್ ವಿನ್ಯಾಸ ಮತ್ತು ಬ್ರೆಝಾ ಆರ್‍ಎಸ್‍‍ನ ಅತ್ಯಂತ ಶಕ್ತಿಯುತವಾದ ಎಂಜಿನ್ ಅನ್ನು ಹೊಂದಿರಲಿದೆ.

ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಹೋಂಡಾ ಮೋಟರ್ಸ್ ಬ್ರಿಯೊ ಹ್ಯಾಚ್‍‍ಬ್ಯಾಕ್ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಯಾವುದೇ ಮಾಹಿತಿ ಹೊರ ಬರಲಿಲ್ಲ. ಇಂಡೋನೇಷಿಯಾ ಮಾರುಕಟ್ಟೆಯಲ್ಲಿನ ಮೊದಲ ತಲೆಮಾರಿನ ಬ್ರೆಝಾ ಕಾರಿನಲ್ಲಿ 88ಬಿಹೆಚ್‍‍ಪಿ ಮತ್ತು 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಬಲ್ಲ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಬಹುಶಹ ಎರಡನೆಯ ತಲೆಮಾರಿನ ಬ್ರಿಯೊ ಕಾರಿನಲ್ಲಿಯೂ ಇದೇ ಎಂಜಿನ್ ಅನ್ನು ಬಳಸುವ ಅವಕಾಶಗಳಿವೆ.

ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಎರಡನೆಯ ತಲೆಮಾರಿನ ಹೋಂಡಾ ಬ್ರಿಯೊ ದೇಶಿಯಾ ಮಾರುಕಟ್ಟೆಗೆ ಬರುವ ಅವಕಾಶಗಳು ಕಡಿಮೆಯಿದೆ. ಮೊದಲನೆಯ ತಲೆಮಾರಿನ ಬ್ರಿಯೊ ಕಾರು ಊಹಿಸಿದಷ್ಟು ಜನಪ್ರಿಯತೆಯನ್ನು ಪಡೆದಿಲ್ಲದ ಕಾರಣದಿಂದಾಗಿ ಎಂದುಕೊಳ್ಳಬಹುದು. ಆದರೇ ಭಾರಿ ಬದಲಾವಣೆಯನ್ನೊಳಗೊಂಡ ಹೋಂಡಾ ಬ್ರಿಯೊ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡರೆ ಒಳ್ಳೆಯ ಮಟ್ಟದಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.

ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಹೋಂಡಾ ಈ ವರ್ಷದಲ್ಲಿ ಎರಡನೆಯ ತಲೆಮಾರಿನ ಹೋಂಡಾ ಅಮೇಜ್ ಕಾರನ್ನು ಬಿಡುಗಡೆಗೊಳಿಸಿದೆ. ಹೋಂಡಾ ಸಿಟಿ ಡಿಸೈನ್ ಶೈಲಿಯಲ್ಲಿ, ಭಾರೀ ಬದಲಾವಣೇಯೊಂದಿಗೆ ಆಧುನಿಕ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಅಮೆಜ್ ಕಂಪ್ಯಾಕ್ಟ್ ಸೆಡಾನ್ ಸಂಸ್ಥೆಗೆ ಒಳ್ಳೆಯ ಮಾರಾಟದ ಮೊತ್ತವನ್ನು ನೀಡಿದೆ.

ಹೊಸ ಬ್ರಿಯೊ ಕಾರನ್ನು ಅನಾವರಣಗೊಳಿಸಿದ ಹೋಂಡಾ..

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಎರಡನೆಯ ತಲೆಮಾರಿನ ಹೋಂಡಾ ಬ್ರಿಯೊ ಕೊಂಚ ಹೋಂಡಾ ಅಮೇಜ್ ಕಾರಿನ್ನೆ ಹೋಲುತ್ತದೆ. ಇದಲ್ಲದೆ ಬ್ರಿಯೊ ಸ್ಟಾಂಡರ್ಡ್ ಮತ್ತು ಬ್ರಿಯೊ ಆರ್‍ಎಸ್ ಸ್ಪೋರ್ಟಿವ್ ವೇರಿಯಂಟ್‍‍ಗಳನ್ನು ಅನಾವರಣಗೊಂಡಿದೆ. ಈ ಎರಡೂ ಮಾಡಲ್‍‍ಗಳು ಪೂರ್ತಿಯಾಗಿ ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿನ ಸ್ವಿಫ್ಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
Read more on honda brio new car hatchback
English summary
New Honda Brio Revealed At 2018 Indonesia International Auto Show.
Story first published: Thursday, August 2, 2018, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X