ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಸಲುವಾಗಿ ಬರೋಬ್ಬರಿ 8 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

By Praveen Sannamani

ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಸಲುವಾಗಿ ಬರೋಬ್ಬರಿ 8 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ತನ್ನ ಬಹುನೀರಿಕ್ಷಿತ ಟಿ-ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯ ಟೀಸರ್ ಬಿಡುಗಡೆ ಮಾಡಿದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಬೃಹತ್ ಬಂಡವಾಳದೊಂದಿಗೆ ವಿವಿಧ ಮಾದರಿಯ 19 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತದಲ್ಲೂ ತನ್ನ ಹೊಸ ಶಕೆ ಆರಂಭಿಸಲು ಸಜ್ಜಾಗುತ್ತಿದೆ. ಇದರಲ್ಲಿ ಟಿ-ಕ್ರಾಸ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಹ್ಯುಂಡೈ ಕ್ರೇಟಾ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳೇ ಇದರ ಮೊದಲ ಟಾರ್ಗೇಟ್ ಎನ್ನಲಾಗಿದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಬಿಡುಗಡೆಗೊಳಿಸಲಿರುವ 19 ಹೊಸ ಎಸ್‌ಯುವಿಗಳಲ್ಲಿ ಟಿ-ಕ್ರಾಸ್ ಕಾರು ಪ್ರಮುಖವಾಗಿದ್ದು, ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಲಾಗುತ್ತದೆ ಎನ್ನಲಾಗಿದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಸದ್ಯ ಕಾರಿನ ವಿನ್ಯಾಸಗಳ ಕುರಿತಾದ ಟೀಸರ್ ಮಾತ್ರ ಬಿಡುಗಡೆ ಮಾಡಿದ್ದು, ಟಿ-ರೋಕ್ ಎಸ್‌ಯುವಿಗೆ ಹೋಲಿಕೆ ಹೊಂದಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿಯು ಟಿ-ಕ್ರಾಸ್ ಕಾರು ಹೆಸರಿನೊಂದಿಗೆ ಪರಿಕಲ್ಪನೆಯ ಶೈಲಿ ಮತ್ತು ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಿದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಜೊತೆಗೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರುಗಳ ಯಾಂತ್ರಿಕ ಘಟಕ, ಬಾಹ್ಯ ಮತ್ತು ಒಳಾಂಗಣ ಅಂಶಗಳನ್ನು ಹೊಸ ಪೊಲೊ ಮತ್ತು ವರ್ಟಸ್ ಕಾರುಗಳೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದ್ದು, ಈ ಕಾರು ಸುಮಾರು 4.1 ಮೀಟರ್ ಉದ್ದಳತೆಯೊಂದಿಗೆ ಸುಮಾರು 2.5 ಮೀಟರ್‌ಗಳಷ್ಟು ವೀಲ್ ಬೇಸ್ ಹೊಂದಿದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಟಿ-ಕ್ರಾಸ್ ಪರಿಕಲ್ಪನೆಯ ಆವೃತ್ತಿಯಲ್ಲಿ ಅಳವಡಿಸಿರುವ ಎಂಜಿನ್ ಈ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರು 1.0- ಲೀಟರ್ ಇಲ್ಲವೇ 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಈ ಎಂಜಿನ್ 175 ಎನ್ಎಂ ತಿರುಗುಬಲದಲ್ಲಿ 110 ಬಿಎಚ್‌ಪಿ ಉತ್ಪಾದಿಸುತ್ತದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಮುಂದಿನ ಚಕ್ರಗಳಿಗೂ ಶಕ್ತಿ ಪೂರೈಸುವ 7-ಸ್ಪೀಡ್ ಡುಯಲ್ ಕ್ಲಚ್ ಗೇರ್‌ಬಾಕ್ಸ್ ಸೌಲಭ್ಯ ಪಡೆದುಕೊಂಡಿರುವ ಈ ಫೋಕ್ಸ್‌ವ್ಯಾಗನ್ ಈ ಹೊಸ ಕಾರು ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುವ ಸಾಧ್ಯತೆ ಇದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಸಂಸ್ಥೆಯು ದಕ್ಷಿಣ ಅಮೆರಿಕದಂತಹ ಉದಯೋನ್ಮುಖ ಮಾರುಕಟ್ಟೆಗಳಿಗಾಗಿ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ನೀಡಲು ಸಾಧ್ಯತೆ ಇದ್ದು, ಭಾರತದಲ್ಲಿ ಈ ಕಾರಿನ ವೆಚ್ಚ ತಗ್ಗಿಸಲು ಕೆಲವು ವಿಶೇಷತೆಗಳನ್ನು ಕಡಿಮೆಗೊಳಿಸುವ ಸಂಭವ ಕೂಡಾ ಇದೆ.

ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಟೀಸರ್ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ತ್ವರಿತವಾಗಿ ಬೆಳವಣಿಗೆಯಾಗುತ್ತಿದ್ದು, ಇದೇ ವೇಳೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಬಿಡುಗಡೆಯಾಗುತ್ತಿರುವುದು ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಬ್ರೆಝಾ, ಫೋರ್ಡ್ ಇಕೋ ಸ್ಪೋರ್ಟ್, ರೆನಾಲ್ಟ್ ಕ್ಯಾಪ್ಟರ್ ಕಾರುಗಳ ಮಾರಾಟಕ್ಕೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಫೋಕ್ಸ್‌ವ್ಯಾಗನ್ ಜನಪ್ರಿಯ MQB ಪ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದವಾಗಿರುವ ಟಿ-ಕ್ರಾಸ್ ಕಾರಿನ ಟೀಸರ್ ಇಲ್ಲಿದೆ ನೋಡಿ.

Most Read Articles

Kannada
English summary
Volkswagen has released official teaser of all new SUV that will rival the likes of Hyundai Creta in India.
Story first published: Wednesday, July 4, 2018, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X