ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಲಿಮಿಟೆಡ್ ಎಡಿಷನ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ.

By Praveen Sannamani

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಸ್ಪೋರ್ಟ್ ಕಾರು ಆವೃತ್ತಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಲಿಮಿಟೆಡ್ ಎಡಿಷನ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಈಗಾಗಲೇ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟಗೊಳ್ಳುತ್ತಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಇದೇ ವರ್ಷ ಭಾರತದಲ್ಲೂ ಬಿಡುಗಡೆಯಾಗಲಿದ್ದು, ಸ್ಪಿಫ್ಟ್ ಸ್ಪೋರ್ಟ್ ಮಾದರಿಯಗಳಲ್ಲಿ ಹೊಸ ಒದಗಿಸಲಾಗುತ್ತಿರುವ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಮಾದರಿಗಳಲ್ಲಿ ಯೆಲ್ಲೊ ಮತ್ತು ದುಬೈ ಬ್ಲ್ಯಾಕ್ ಮೆಟಾಲಿಕ್ ಬಣ್ಣವು ಕಾರಿನ ಅಂದವನ್ನು ಹೆಚ್ಚಿಸಿದ್ದು, ಸಾಮಾನ್ಯ ಸ್ವಿಫ್ಟ್ ಕಾರುಗಳಿಂತಲೂ ಸಾಕಷ್ಟು ವಿಭಿನ್ನತೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಇದಲ್ಲದೇ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರುಗಳು ಫ್ರಂಟ್ ಎಂಡ್‌ನಲ್ಲಿ ಲಾರ್ಜ್ ಹನಿಕೊಂಬ್ ಗ್ರಿಲ್ ಫ್ಲಕ್ಸ್‌ನೊಂದಿಗೆ ಬೂಟ್ ಲಿಪ್ ಸ್ಪಾಯ್ಲರ್, ಸ್ಪೈಡರ್ ಇಂಟಿರಿಯರ್ ಹಾಗೂ ಎಕ್ಸ್‌ಟಿರಿಯರ್‌ನೊಂದಿಗೆ ವಿಭಿನ್ನತೆಯನ್ನು ಪಡೆದುಕೊಂಡಿದೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಜೊತೆಗೆ ಗ್ರಾಹಕರ ಬೇಡಿಕೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಕೂಡಾ ಖರೀದಿಗೆ ಲಭ್ಯವಿರಲಿದ್ದು, 17 ಇಂಚಿನ ಡ್ಯುಯಲ್ ಟೋನ್ ಥೀನ್ ಸ್ಪೋಕ್ ಅಲಾಯ್ ಚಕ್ರಗಳು, ಡ್ಯುಯಲ್ ಏರ್‌ಬ್ಯಾಗ್ ಕಿಟ್ ಮತ್ತು ಸ್ಪೋರ್ಟ್ ಸ್ಟೈನ್‌ಲೆಸ್ ಸ್ಟಿಲ್ ಪೆಡಲ್ ಅಳವಡಿಕೆ ಸಹ ಇರಲಿದೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ವಿಶೇಷವಾಗಿ ಹೊಸ ಕಾರಿನಲ್ಲಿ ಸ್ಪೋರ್ಟ್ ಆವೃತ್ತಿಯ ಚಿಹ್ನೆ ಕೂಡಾ ಕಾರಿನ ಲುಕ್‌ನ್ನು ಮತ್ತಷ್ಟು ಹೆಚ್ಚಳ ಮಾಡಿದ್ದು, ರೂಫ್ ಮೌಟೆಂಡ್ ಸ್ಪಾಯ್ಲರ್, ಡ್ಯುಯಲ್ ಎಕ್ಸಾಸ್ಟ್ ಟ್ರಿಪ್ಸ್, ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲ್ಯಾಡಿಂಗ್ ವಿನ್ಯಾಸಗಳು ಮತ್ತು ಕಾರಿನ ಸೀಟುಗಳು ಸಹ ಸ್ಪೋರ್ಟಿ ಲುಕ್ ಹೊಂದಿರಲಿವೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಎಂಜಿನ್ ಸಾಮರ್ಥ್ಯ

ಸ್ವಿಫ್ಟ್ ಸ್ಪೋರ್ಟ್ ಕಾರುಗಳು 1.4-ಲೀಟರ್ ನಾಲ್ಕು ಸಿಲಿಂಡರ್ ಬೂಸ್ಟರ್ ಜೆಟ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 138 ಬಿಎಚ್‌ಪಿ ಮತ್ತು 230 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಪವರ್ ಟು ಫ್ರಂಟ್ ವೀಲ್ಹ್ ಸೌಲಭ್ಯ ಹಿನ್ನೆಲೆ ಸ್ವಿಫ್ಟ್ ಸ್ಪೋರ್ಟ್ ಕಾರುಗಳು ಕೇವಲ 8.1 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆಯಬಲ್ಲ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಹೊಂದಿವೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಆದ್ರೆ ಕೆಲವು ವರದಿಗಳ ಪ್ರಕಾರ ಹೊಸ ಸುಜುಕಿ ಸ್ವಿಫ್ಟ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗಾಗಿ 1.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗುತ್ತಿದೆ ಎನ್ನಲಾಗಿದೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಇನ್ನು ಸ್ಪಿಫ್ಟ್ ಆವೃತ್ತಿ ವೈಶಿಷ್ಟ್ಯತೆಗಳು ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೊ ಆರ್‌ಎಸ್, ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಮತ್ತು ಫಿಯೆಟ್ ಅಬಾರ್ತ್ ಕಾರಿನಲ್ಲಿ ಲಭ್ಯವಿದ್ದು, ಇವುಗಳಿಂತ ಹೇಗೆ ಭಿನ್ನತೆ ಹೊಂದಲಿದೆ ಎಂಬುವುದೇ ಚರ್ಚೆಗೆ ಕಾರಣವಾಗಿದೆ.

ರೇಸಿಂಗ್ ಪ್ರಿಯರನ್ನು ರಂಜಿಸಲು ಬರಲಿದೆ ಸ್ವಿಫ್ಟ್ ಸ್ಪೋರ್ಟ್ ಬೀ ರೇಸಿಂಗ್ ಎಡಿಷನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವ ಸುಜುಕಿ ಸಂಸ್ಥೆಯು ಬಹುನೀರಿಕ್ಷಿತ ಹ್ಯುಂಡೈ ಐ30 ಕಾರಿಗೆ ಪ್ರತಿ ಸ್ಪರ್ಧಿಯಾಗುವ ತವಕದಲ್ಲಿದೆ.

Most Read Articles

Kannada
Read more on suzuki
English summary
Suzuki Swift Sport BeeRacing Limited Edition Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X