ಅನಾವರಣಗೊಂಡ 2019ರ ಹೊಸ ಸುಜುಕಿ ವಿಟಾರ ಫೇ‍‍ಸ್‍‍‍ಲಿಫ್ಟ್ ಕಾರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್ ಕಾರ್ಪೊರೇಷನ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ 2019ರ ವಿಟಾರ ಫೇಸ್‍‍ಲಿಫ್ಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಿದ್ದು, ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪದೆದುಕೊಂಡಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್ ಕಾರ್ಪೊರೇಷನ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ 2019ರ ವಿಟಾರ ಫೇಸ್‍‍ಲಿಫ್ಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಿದ್ದು, ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪದೆದುಕೊಂಡಿದೆ.

ಅನಾವರಣಗೊಂಡ 2019ರ ಹೊಸ ಸುಜುಕಿ ವಿಟಾರ ಫೇ‍‍ಸ್‍‍‍ಲಿಫ್ಟ್ ಕಾರು..

ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲದೇ ಟೆಕ್ನಾಲಜಿಯಲ್ಲಿ ಕೂಡಾ ಬದಲಾವಣೆಗಳನ್ನು ಪದೆದಿದೆ. 2015ರಿಂದಲೂ ಯುಕೆ ರಾಷ್ಟ್ರದ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಜಾಗತಿಕವಾಗಿ ವಿಟಾರ ಕಾರು ಸುಜುಕಿ ಸಂಸ್ಥೆಯ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಹೊಸ ಸುಜುಕಿ ವಿಟಾರ ಎಸ್‍‍ಯುವಿ ಕಾರು ಎರಡು ಪೆಟ್ರೋಲ್ ಎಂಜಿನ್‍ ಆಯ್ಕೆಗಳಲ್ಲಿ ಬರಲಿದ್ದು, 1.0 ಲೀಟರ್ ಟರ್ಬೋಚಾರ್ಜ್ಡ್ ಮತ್ತು 1.4 ಲೀಟರ್ ಬೂಸ್ಟರ್‍‍ಜೆಟ್ ಟರ್ಬೋಚಾರ್ಜ್ಡ್ ಎಂಜಿನ್‍‍ಗಳಲ್ಲಿ ದೊರೆಯಲಿದೆ. ಎರಡೂ ಎಂಜಿನ್‍‍ಗಳು 109ಬಿಹೆಚ್‍‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅನಾವರಣಗೊಂಡ 2019ರ ಹೊಸ ಸುಜುಕಿ ವಿಟಾರ ಫೇ‍‍ಸ್‍‍‍ಲಿಫ್ಟ್ ಕಾರು..

ಎರಡೂ ಎಂಜಿನ್‍‍ಗಳು ಪ್ರೀ-ಫೇಸ್‍‍ಲಿಫ್ಟ್ ವಿಟಾರ ಎಸ್‍‍ಯುವಿ ಕಾರಿನಲ್ಲಿನ 1.6 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಭರ್ತಿ ಮಾಡಲಿದ್ದು, ಈ ಕಾರು ಡೀಸೆಲ್ ಎಂಜಿನ್ ಅನ್ನು ಪಡೆದಿರುವುದಿಲ್ಲ ಎನ್ನಲಾಗಿದೆ. ಮತ್ತು ಡ್ರೈವಿಂಗ್ ಅನುಭವವನ್ನು ಅಭಿವೃದ್ಧಿಗೊಳಿಸಲು ಆಲ್‍‍ಗ್ರಿಪ್ ಫೋರ್-ವ್ಹೀಲ್-ಡ್ರೈವ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಹೊರಭಾಗದಲ್ಲಿ ಕ್ರೋಮ್ ಗಾರ್ನಿಷಿಂಗ್‍‍ಣೊಂದಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್, ಅಗಲವಾದ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳು, ಎಲ್ಇಡಿ ಡಿಆರ್‍ಎಲ್ ಮತ್ತು ಸ್ಕಲ್ಪ್ಟೆಡ್ ಬಂಪರ್ ಅನ್ನು ಪಡೆದುಕೊಂಡಿರಲಿದೆ.

ಅನಾವರಣಗೊಂಡ 2019ರ ಹೊಸ ಸುಜುಕಿ ವಿಟಾರ ಫೇ‍‍ಸ್‍‍‍ಲಿಫ್ಟ್ ಕಾರು..

ಇದಲ್ಲದೆ ಸುಜುಕಿ ವಿಟಾರ ಫೇಸ್‍‍ಲಿಫ್ಟ್ ಕಾರು ಅಲಾಯ್ ಚಕ್ರಗಳು, ವಿಸಿಬಲ್ ಮಸ್ಕ್ಯೂಲರ್ ಟೋನ್ ಮತ್ತು ಬ್ಲಾಕ್ ಕ್ಲೇಡಿಂಗ್ ಅನ್ನು ಪಡೆದಿದ್ದು, ಹಿಂಭಾಗದಲ್ಲಿ ಎಲ್‍ಇಡಿ ಅಧಾರಿತ ಶಾರ್ಪ್ ಲುಕಿಂಗ್ ಟೈಲ್‍‍ಲೈಟ್‍‍ಗಳನ್ನು ಪಡೆದುಕೊಂಡಿದೆ.

ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೇ ಒಳಭಾಗದಲ್ಲಿಯೂ ಕೂಡ ನವೀಕರಿಸಲಾದ ಡ್ಯಾಶ್‍‍ಬೋರ್ಡ್, ಸೀಟ್, ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಒಳಭಾಗವನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇನ್ನುಳಿದ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲದಿದ್ದರೂ ಸುಜುಕಿ ಸಂಸ್ಥೆಯು ಹೈ ಎಂಡ್ ವೈಶಿಷ್ಟ್ಯತೆಗಳನ್ನು ಆಳವಡಿಸಲಿದೆ ಎಂಬ ಭರವಸೆ ಇದೆ.

ಅನಾವರಣಗೊಂಡ 2019ರ ಹೊಸ ಸುಜುಕಿ ವಿಟಾರ ಫೇ‍‍ಸ್‍‍‍ಲಿಫ್ಟ್ ಕಾರು..

ಪ್ರಸ್ಥುತ ಸುಜುಕಿ ವಿಟಾರ ಎಸ್‍‍ಯುವಿ ಕಾರು 191 ರಾಷ್ಟ್ರದ ಮಾರುಕಟ್ಟೆಗಳಲ್ಲಿ ಮಾರಾಟವಾಗಿದ್ದು, ಸುಮಾರು 3.7 ಮಿಲಿಯನ್ ಯೂನಿಟ್‍‍ಗಳಿಗಿಂತಲೂ ಹೆಚ್ಚಾಗಿ ಮಾರಾಟವಾಗಿದೆ.

ಆದರೆ ಭಾರತದಲ್ಲಿ 2015ರ ವರೆಗು ಗ್ರ್ಯಾಂಡ್ ವಿಟಾರ ಕಾರು ಮಾರಾಟಗೊಂಡಿತ್ತು, ಮರುತಿ ಸುಜುಕಿ ಈ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಯೋಜನೆ ಹೊಂದಿದ್ದರೆ, ವಿಟಾರಾ ಫೇಸ್‍‍ಲಿಫ್ಟ್ ಎಸ್‍‍ಯುವಿ ಕಾರುಗಳು ಮಾರುಕಟ್ಟೆಯಲ್ಲಿನ ಹ್ಯುಂಡೈ ಕ್ರೆಟಾ, ಮಹೀಂದ್ರಾ XUV500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on suzuki new car suv
English summary
2019 Suzuki Vitara Facelift Unveiled Ahead Of Launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X