ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

By Praveen Sannamani

ಕೇಂದ್ರ ಸರ್ಕಾರವು ಇತ್ತೀಚೆಗೆ ಆಟೋ ಉದ್ಯಮದ ಮೇಲೆ ಬಲವಾದ ಹಿಡಿತ ಸಾಧಿಸುತ್ತಿದ್ದು, ವಾಹನ ಸವಾರರ ಸುರಕ್ಷತೆಗಾಗಿ ಕೆಲವು ಕಡ್ಡಾಯ ನಿಯಮಗಳನ್ನು ಸಹ ಜಾರಿಗೆ ತಂದಿದೆ. ಈ ಹಿಂದೆ ಭಾರತ್ ಸ್ಟೇಜ್-4 ವಿಚಾರದಲ್ಲಿ ಮಹತ್ವದ ಹೆಜ್ಜೆಯಿರಿಸಿದ್ದ ಕೇಂದ್ರವು, ಈ ಬಾರಿ ಹೊಸ ವಾಹನಗಳ ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರವಾಗಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ರಸ್ತೆ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ವಾಹನ ಮಾಲೀಕ ನೀಡಬೇಕಾದ "ಥರ್ಡ್ ಪಾರ್ಟಿ ವಿಮಾ ಪಾಲಿಸಿ"ಯು ಕಡ್ಡಾಯವಾಗಿ ಎಲ್ಲ ವಾಹನ ಮಾಲೀಕ ಹೊಂದಿರಬೇಕಾದ ನಿಯಮವು ಈಗಾಗಲೇ ಜಾರಿಯಲ್ಲಿದ್ದು, ಕೇಂದ್ರ ಸರ್ಕಾರವು ಇದೀಗ ಜಾರಿ ಮಾಡಿರುವ ಮತ್ತೊಂದು ಕಡ್ಡಾಯ ನಿಯಮದಿಂದಾಗಿ ಹೊಸ ವಾಹನಗಳ ಖರೀದಿ ಮತ್ತಷ್ಟು ದುಬಾರಿ ಎನ್ನಿಸಲಿದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಕೇಂದ್ರ ಸರ್ಕಾರದ ಹೊಸ ನಿಯಮವು ತುಸು ಆರ್ಥಿಕ ಹೊರೆ ಎನ್ನಿಸಿದರೂ ಪ್ರಸ್ತುತ ದಿನಗಳಲ್ಲಿ ಇದರ ಅವಶ್ಯಕತೆ ಇದೆ ಎನ್ನಬಹುದಾಗಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರವು ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ ಹೊಸ ನಿಯಮಕ್ಕೆ ಅಸ್ತು ಎಂದಿದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಹೊಸ ವಾಹನಗಳಿಗೆ ಈ ರೂಲ್ಸ್ ಕಡ್ಡಾಯ

ಸದ್ಯ ಚಾಲ್ತಿಯಲ್ಲಿರುವ ನಿಯಮ ಪ್ರಕಾರ ಕಾರು ಅಥವಾ ಬೈಕ್ ಖರೀದಿಸುವ ಪ್ರತಿ ವಾಹನ ಮಾಲೀಕರು ಸಹ ವಾಹನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ 1 ವರ್ಷದ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರಿಮಿಯಂ ಖರೀದಿ ಮಾಡಬೇಕಿತ್ತು. ಆದ್ರೆ ಇದು ಇನ್ಮುಂದೆ ಬೈಕ್‌ಗಳಿಗೆ 5 ವರ್ಷ ಹಾಗೂ ಕಾರುಗಳಿಗೆ 3 ವರ್ಷದ ಕಡ್ಡಾಯ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರಿಮಿಯಂ ಖರೀದಿ ಮಾಡಲೇಬೇಕಿದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಅಂದರೇ, ಹೊಸ ಬೈಕ್ ಖರೀದಿಸುವವರು 5 ವರ್ಷಗಳ ಥರ್ಡ್ ಪಾರ್ಟಿ ಇನ್ಸುರೆನ್ಸ್ ಅನ್ನು ಖರೀದಿ ಮಾಡಬೇಕಿದ್ದರೆ, ಕಾರು ಖರೀದಿಸುವ ಗ್ರಾಹಕರು 3 ವರ್ಷದ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರಿಮಿಯಂ ಅನ್ನು ಕಡ್ಡಾಯವಾಗಿ ಖರೀದಿ ಮಾಡಲೇಬೇಕಿದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಇತ್ತೀಚೆಗೆ ಥರ್ಡ್ ಪಾರ್ಟಿ ಇನ್ಸುರೆನ್ಸ್ ಅನ್ನು ಕಡ್ಡಾಯ ಮಾಡಿದ್ದರೂ ಕೆಲವು ವಾಹನ ಮಾಲೀಕರು ಇದರ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿಯೇ ಹಲವಾರು ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯಸಮ್ಮತ ಪರಿಹಾರ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಇದರಿಂದಾಗಿಯೇ ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಈ ಕಡ್ಡಾಯ ನಿಯಮವನ್ನು ಜಾರಿ ಮಾಡಲಾಗಿದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಹೊಸ ವಾಹನಗಳ ಇನ್ನಷ್ಟು ದುಬಾರಿ

ಕೇಂದ್ರವು ಜಾರಿಗೆ ತಂದಿರುವ ಹೊಸ ನಿಯಮದಿಂದಾಗಿ ಹೊಸ ವಾಹನಗಳ ಖರೀದಿಯು ದುಬಾರಿಯಾಗಲಿದ್ದು, ಒಂದೇ ಬಾರಿಗೆ 5 ವರ್ಷಗಳ ಥರ್ಡ್ ಪಾರ್ಟಿ ಇನ್ಸುರೆನ್ಸ್ ಶುಲ್ಕ ಹಾಗೂ ಕಾರು ಮಾಲೀಕರು 3 ವರ್ಷದ ಥರ್ಡ್ ಪಾರ್ಟಿ ಇನ್ಸುರೆನ್ಸ್ ಶುಲ್ಕ ಪಾವತಿ ಮಾಡಬೇಕಿರುವುದು ಗ್ರಾಹಕರಿಗೆ ಕಷ್ಟ ಎನ್ನಿಸದೇ ಇರಲಾದರು.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಆದರೂ ಪ್ರಸ್ತುತ ದಿನಗಳಲ್ಲಿ ಈ ನಿಯವು ಅಪಘಾತದ ಸಂತ್ರಸ್ತರ ನೆರವಿಗೆ ಬರಲಿದ್ದು, 5 ವರ್ಷದ ಹಾಗೂ ಮೂರು ವರ್ಷದ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರಿಮಿಯಂ ಖರೀದಿ ನಂತರವೇ ನಿಮ್ಮ ಬೈಕ್ ಮತ್ತು ಕಾರಿನ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಮೋಟಾರು ವಿಮೆ ಏಕೆ ಬೇಕು?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕುದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಇದರಿಂದ ಮೂರನೇ ವ್ಯಕ್ತಿಗೆ ನೈಸರ್ಗಿಕ ರಕ್ಷಣೆಯೂ ಸಿಗುತ್ತದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಕಾರು ವಿಮಾ ಪಾಲಿಸಿಯಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ಮೂರನೇ ವ್ಯಕ್ತಿ ವಿಮಾ ಹಾಗೂ ಸಮಗ್ರ ಪಾಲಿಸಿ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಬಂಪರ್ ಟು ಬಂಪರ್

ಇವೆರಡ ಹೊರತಾಗಿ ಇನ್ನೊಂದು ಬಗೆಯ ಬಂಪರ್ ಟು ಬಂಪರ್ ಎಂಬ ಹೊಸ ರೂಪದ ವಿಮಾ ಸೌಲಭ್ಯ ಕೂಡಾ ಇದೆ. ಬಂಪರ್ ಟು ಬಂಪರ್ ವಿಮೆ ಏಕರೂಪದ ಪಾಲಿಸಿಯಾಗಿದ್ದು, ಸಮಗ್ರ ವಿಮೆಯಲ್ಲಿ ಪರಿಗಣಿಸಲಾಗದ ಟೈರ್, ಬೆಲ್ಟ್, ಟ್ರಾನ್ಸ್‌ಮಿಷನ್ ಮುಂತಾದ ಬಿಡಿಭಾಗಗಳನ್ನು ಹೊಂದಿರುತ್ತದೆ. ಹೊಸ ಹಾಗೂ ದುಬಾರಿ ಕಾರುಗಳಿಗೆ ಇದು ಮಾಡಿಸಿದರೆ ಉತ್ತಮ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಯಾವುದು ಉತ್ತಮ?

ಹೆಸರಲ್ಲೇ ಸೂಚಿಸಿರುವಂತೆಯೇ ಎಲ್ಲ ಬಗೆಯ ನಷ್ಟಗಳನ್ನು ಭರಿಸುವ ಸಮಗ್ರ ವಿಮಾ ಪಾಲಿಸಿ ಮಾಡಿಸುವುದು ಉತ್ತಮ. ಆದರೆ ಇದು ದುಬಾರಿಯೂ ಹೌದು. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ವಾಹನಕ್ಕಾಗುವ ನಷ್ಟ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಏನೆಲ್ಲ ಅಗತ್ಯವಿದೆ?

ವಿಮಾ ಪಾಲಿಸಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು. ಅಂದರೆ ವಿಮಾ ಕಂಪನಿಗಳು ನೀಡುವ ಫಾರ್ಮ್ ನಲ್ಲಿ ನೀವಿರುವ ಜಾಗ, ಯಾವ ಉದ್ದೇಶಕ್ಕಾಗಿ ವಾಹನ ಬಳಸುತ್ತೀರಿ, ಆಫೀಸ್ ಬಳಕೆಗಾಗಿ ಅಥವಾ ವಾಣಿಜ್ಯ ಬಳಕೆಗಾಗಿ ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದಲ್ಲಿ ಹಲವು ವಿನಾಯಿತಿಗಳು ನಿಮ್ಮ ಪಾಲಾಗುತ್ತವೆ.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಕಂಪನಿನಿಂದ ಕಂಪನಿಗೆ ಪ್ರೀಮಿಯಂ ವಿಭಿನ್ನ

ವಿಮಾ ಕಂಪನಿಗಳು ಗ್ರಾಹಕರಿಗೆ ನೀಡುವ ವಿಮಾರಕ್ಷಣೆ ಕಂಪನಿಯಿಂದ ಕಂಪನಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಗ್ರಾಹಕರು ತಮ್ಮ ಕಾರುಗಳಿಗೆ ಪಡೆಯುವ ವಿಮೆಗಾಗಿ ಲಭ್ಯವಿರುವ ವಿಮಾ ಕಂಪನಿಗಳಿಂದ ತಮಗಾಗುವ ಲಾಭ ಕುರಿತು ಸಮಗ್ರ ಮಾಹಿತಿ ಹೊಂದಿರಬೇಕು.

ದಯವಿಟ್ಟು ಗಮನಿಸಿ: ಹೊಸ ವಾಹನಗಳ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

ಒಟ್ಟಿನಲ್ಲಿ ಅಪಘಾತ ಸಂದರ್ಭದಲ್ಲಿ ಚಾಲಕರ ಸೇರಿದಂತೆ ಸಹ ಪ್ರಯಾಣಿಕರ ಹಿತ ಕಾಪಾಡುವ ವಿಮೆಯನ್ನು ಮಾಡಿಸಿದರೆ ಉತ್ತಮ. ಕೇವಲ ಅಪಘಾತ ಮಾತ್ರವಲ್ಲ, ಕಳ್ಳತನ, ಬೆಂಕಿ ಆಕಸ್ಮಿಕ ಇತ್ಯಾದಿ ಅನಾಹುತಗಳಿಗೂ ವಿಮಾ ರಕ್ಷಣೆ ದೊರಕುತ್ತಿದೆ.

Most Read Articles

Kannada
Read more on auto news insurance
English summary
Three And Five Year Third Party Insurance Mandatory, Says Supreme Court.
Story first published: Monday, July 23, 2018, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X