ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಮೇ 18ರಂದು ಬಿಡುಗಡೆಯಾಗಿದ್ದ ಟೊಯೊಟಾ ಹೊಚ್ಚ ಹೊಸ ಯಾರಿಸ್ ಸೆಡಾನ್ ಕಾರುಗಳು ವಿನೂತನ ತಂತ್ರಜ್ಞಾನ ಪ್ರೇರಣೆಯಿಂದಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

By Praveen Sannamani

ಮೇ 18ರಂದು ಬಿಡುಗಡೆಯಾಗಿದ್ದ ಟೊಯೊಟಾ ಹೊಚ್ಚ ಹೊಸ ಯಾರಿಸ್ ಸೆಡಾನ್ ಕಾರುಗಳು ವಿನೂತನ ತಂತ್ರಜ್ಞಾನ ಪ್ರೇರಣೆಯಿಂದಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮೇ ಅವಧಿಯಲ್ಲಿನ ಟೊಯೊಟಾ ಸಂಸ್ಥೆಯ ಕಾರುಗಳ ಮಾರಾಟ ಪ್ರಮಾಣದಲ್ಲೂ ಸಹ ಭಾರೀ ಬದಲಾವಣೆಗೆ ಕಾರಣವಾಗಿದೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಯಾರಿಸ್ ಕಾರುಗಳು ಬಿಡುಗಡೆಯಾದ ಕೇವಲ 12 ದಿನಗಳ ಅವಧಿಯಲ್ಲಿ 4 ಸಾವಿರ ಕಾರುಗಳು ಮಾರಾಟವಾಗಿದ್ದು, ಈ ಮೂಲಕ ಮೇ ಅವಧಿಯಲ್ಲಿನ ಟೊಯೊಟಾ ಕಾರುಗಳ ಮಾರಾಟ ಪ್ರಮಾಣದಲ್ಲಿ ಶೇ.20ರಷ್ಟು ಬೆಳವಣಿಗೆ ದಾಖಲಿಸಿದೆ. ಜೊತೆಗೆ 827 ಇಟಿಯಾಸ್ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿರುವ ಟೊಯೊಟಾ ಸಂಸ್ಥೆಯು ಜೂನ್ ಅವಧಿಯಲ್ಲಿ ಯಾರಿಸ್ ಕಾರುಗಳ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುವ ತವಕದಲ್ಲಿದೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಯಾರಿಸ್ ಕಾರುಗಳ ಬೆಲೆಯನ್ನು ಆರಂಭಿಕವಾಗಿ ರೂ.8.75 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 14.07 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಹೊಸ ಕಾರುಗಳ ಖರೀದಿಗಾಗಿ ಇದುವರೆಗೆ ಬರೋಬ್ಬರಿ 8 ಸಾವಿರ ಗ್ರಾಹಕರು ರೂ.50 ಸಾವಿರ ಮುಂಗಡ ಪಾವತಿಸಿ ಬುಕ್ಕಿಂಗ್ ಮಾಡಿದ್ದಾರೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಹೀಗಾಗಿ ಹೊಸ ಕಾರುಗಳ ಕಾಯುವಿಕೆ ಅವಧಿಯು ಹೆಚ್ಚುತ್ತಿದ್ದು, ಇದೀಗ ಹೊಸ ಕಾರಿಗಾಗಿ ಬುಕ್ಕಿಂಗ್ ಮಾಡಿದಲ್ಲಿ ಮುಂದಿನ 2 ತಿಂಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಯಾರಿಸ್ ಕಾರುಗಳ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಟೊಯೊಟಾ ಸಂಸ್ಥೆಯು ಕಾರು ಉತ್ಪಾದನಾ ಕಾರ್ಯವನ್ನು ತೀವ್ರಗೊಳಿಸಿದ್ದು, ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಹೊಸ ಕಾರುಗಳನ್ನು ವಿತರಣೆ ಮಾಡುವ ಭರವಸೆ ನೀಡಿದೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಇದಲ್ಲದೇ ಹೊಸ ಕಾರುಗಳಿಗಾಗಿ ಬುಕ್ಕಿಂಗ್ ಮಾಡುವ ಗ್ರಾಹಕರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದ್ದು, ಗ್ರಾಹಕರ ಸ್ನೇಹಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಯಾರಿಸ್ ಕಾರುಗಳು ಅತ್ಯುತ್ತಮ ಸೆಡಾನ್ ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಯಾರಿಸ್ ಎಂಜಿನ್ ಸಾಮರ್ಥ್ಯ

ಟೊಯೊಟಾ ಯಾರಿಸ್ ಕಾರುಗಳು 1.5-ಲೀಟರ್ ಡ್ಯುಯಲ್ ವಿವಿಟಿ-ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಮೂಲಕ 108-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳು ಆಯ್ಕೆಗೆ ಲಭ್ಯವಿರಲಿವೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಕಾರಿನ್ ಇಂಟಿರಿಯರ್ ಡಿಸೈನ್

ಟೊಯೊಟಾ ಯಾರಿಸ್ ಕಾರುಗಳು ಸ್ಮಾರ್ಟ್ ಕನೆಕ್ವಿಟಿ ಜೊತೆಗೆ ಅತ್ಯುತ್ತಮ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಹೊಂದಿದ್ದು, ಸಾಫ್ಟ್ ಟಚ್ ಕ್ಲೈಮೆಟ್ ಕಂಟ್ರೊಲರ್ ಬಟನ್‌ಗಳು, ವಾಟರ್ ಫಾಲ್ ಮಾದರಿಯ ಸೆಂಟರ್ ಕನ್‌ಸೊಲ್ ಡಿಸೈನ್‌ಗಳು ಸೆಡಾನ್ ಮಾದರಿಯ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಹಾಗೆಯೇ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕೂಡಾ ಇದ್ದು, ಸಂಜ್ಞೆಯ ಮೂಲಕವೇ ಕಾರಿನ ಸ್ಮಾರ್ಟ್ ಕನೆಕ್ಟಿವಿಟಿಗಳನ್ನು ನಿಯಂತ್ರಿಸಬಹುದಾಗಿದೆ. ಅದಾಗ್ಯೂ ಯಾರಿಸ್ ಕಾರುಗಳಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೋಡಣೆ ಹೊಂದಿಲ್ಲ ಎನ್ನುವುದು ಮುಖ್ಯ ವಿಚಾರ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಇನ್ನು ಮ್ಯಾನುವಲ್ ಕಾರುಗಳ ಗೇರ್ ಸ್ಟೀಕ್‌ಗಳು ಪ್ರಿಮಿಯಂ ಬ್ಲ್ಯಾಕ್ ಲೆದರ್ ವ್ಯಾರ್ಪ್ಡ್ ಹೊಂದಿರಲಿದ್ದು, ಆಟೋಮ್ಯಾಟಿಕ್ ಗೇರ್ ಸ್ಟಿಕ್‌ಗಳು ಸಹ ಮೆಟಲ್ ಕ್ರೋಮ್ ಮಾದರಿಯ ಲೆದರ್ ಕಾಂಬಿನೇಷನ್ ಡಿಸೈನ್ ಪಡೆದುಕೊಂಡಿರಲಿವೆ. ಜೊತೆಗೆ ಕಪ್ ಹೋಲ್ಡರ್ ಸಹ ಕಾರಿನ ಇಂಟಿರಿಯರ್ ವಿನ್ಯಾಸಕ್ಕೆ ಮೆರಗು ತಂದಿವೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಕಾರಿನ ಮೈಲೇಜ್

ಯಾರಿಸ್ ಕಾರುಗಳು 42 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಸಿವಿಟಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 17.8 ಕಿ.ಮೀ ಮತ್ತು ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 17.1 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಸುರಕ್ಷಾ ಸೌಲಭ್ಯಗಳು

ಯಾರಿಸ್ ಕಾರುಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಸ್ಟ್ಯಾಬಿಲಿಟಿ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಫೋರ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹೈ ಸೋಲಾರ್ ಎನರ್ಜಿ ಅಬ್ ಸಾರ್ಬಿಂಗ್, ಇನ್‌ಫ್ರಾ ರೆಡ್ ಕಿರಣಗಳಿಗೆ ತಡೆಯೊಡ್ಡುವ ತಂತ್ರಜ್ಞಾನ, ವೈಬ್ರೇಷನ್‌ ಮುಕ್ತ ಗ್ಲಾಸ್‌ಗಳಿಂದಾಗಿ ನಿಶ್ಯಬ್ಧ ಕ್ಯಾಬಿನ್ ಸೌಲಭ್ಯ ಇದರಲ್ಲಿದೆ.

ಟೊಯೊಟಾ ಸಂಸ್ಥೆಗೆ ಲಕ್ಕಿಯಾದ ಯಾರಿಸ್ ಸೆಡಾನ್..

ಲಭ್ಯಲಿರುವ ಬಣ್ಣಗಳು

ಸೂಪರ್ ವೈಟ್, ಪರ್ಲ್ ವೈಟ್, ಸಿಲ್ವರ್, ವೈಲ್ಡ್‌ಫೈರ್ ರೆಡ್, ಫ್ಯಾಂತಮ್ ಬ್ರೌನ್ ಮತ್ತು ಗ್ರೇ ಬಣ್ಣಗಳಲ್ಲಿ ಯಾರಿಸ್ ಕಾರುಗಳನ್ನು ಖರೀದಿಸಬಹುದು.

Most Read Articles

Kannada
Read more on toyota sedan
English summary
Toyota Domestic Sales Grow By 20 Percent In May 2018; Yaris Sells 4,000 Units Since Launch.
Story first published: Friday, June 1, 2018, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X