ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಕಳೆದ 2 ದಿನಗಳ ಹಿಂದಷ್ಟೆ ಯಾರಿಸ್ ಸೆಡಾನ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿರುವ ಟೊಯೊಟಾ ಇಂಡಿಯಾ ಸಂಸ್ಥೆಯು ತನ್ನದೇ ಮತ್ತೊಂದು ಜನಪ್ರಿಯ ಯಾರಿಸ್ ಹ್ಯಾಚ್‌ಬ್ಯಾಕ್ ಕಾರನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು.

By Praveen Sannamani

ಕಳೆದ 2 ದಿನಗಳ ಹಿಂದಷ್ಟೆ ಯಾರಿಸ್ ಸೆಡಾನ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿರುವ ಟೊಯೊಟಾ ಇಂಡಿಯಾ ಸಂಸ್ಥೆಯು ತನ್ನದೇ ಮತ್ತೊಂದು ಜನಪ್ರಿಯ ಯಾರಿಸ್ ಹ್ಯಾಚ್‌ಬ್ಯಾಕ್ ಕಾರನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಇದೀಗ ಹ್ಯಾಚ್‌ಬ್ಯಾಕ್ ಆವೃತ್ತಿಯ ಬಿಡುಗಡೆ ವಿಚಾರವನ್ನು ಕೈಬಿಟ್ಟಿದ್ದು, ಅದರ ಬದಲಾಗಿ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸುವುದಾಗಿ ಸುಳಿವು ನೀಡಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಭಾರತದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಅತಿ ಹೆಚ್ಚು ಕಾರು ಮಾರಾಟ ಮಾಡುವ ಜನಪ್ರಿಯ ಟೊಯೊಟಾ ಸಂಸ್ಥೆಯು ಈಗಾಗಲೇ ಹಲವು ಮಾದರಿ ಕಾರುಗಳನ್ನು ಬಿಡುಗಡೆ ಮಾಡಿದಲ್ಲದೇ ಅದರಲ್ಲಿ ಯಶಸ್ವಿ ಕೂಡಾ ಆಗಿದೆ. ಹೀಗಾಗಿ ಯಾರಿಸ್ ಸೆಡಾನ್ ಪರಿಚಯಿಸಿದ ನಂತರ ಹ್ಯಾಚ್‌ಬ್ಯಾಕ್ ಬಿಡುಗಡೆಗೊಳಿಸಲಾಗುತ್ತೆ ಎಂಬ ಸುದ್ದಿಯಿಂದ ಫುಲ್ ಖುಷಿಯಾಗಿದ್ದ ಕಾರು ಪ್ರಿಯರಿಗೆ ಇದೀಗ ನಿರಾಸೆ ಉಂಟಾಗಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಕಾರುಗಳು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡುವ ಮಾದರಿಯಾಗಿದ್ದು, ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ತುಸು ದುಬಾರಿ ಎನ್ನಿಸಲಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಇದೇ ಕಾರಣಕ್ಕೆ ಟೊಯೊಟಾ ಸಂಸ್ಥೆಯು ಯಾರಿಸ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದು ಬೇಡವೆಂದು ತೀರ್ಮಾನಿಸಿದ್ದು, ಯಾರಿಸ್ ಸೆಡಾನ್ ಆವೃತ್ತಿಗಳನ್ನೇ ಮತ್ತಷ್ಟು ಜನಪ್ರಿಯಗೊಳಿಸುವತ್ತ ಯೋಜನೆ ರೂಪಿಸುತ್ತಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್ ಆವೃತ್ತಿಗಳು ರೂ.5.50 ಲಕ್ಷದಿಂದ ರೂ. 10 ಲಕ್ಷ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ಸಂದರ್ಭದಲ್ಲಿ ರೂ.11 ಲಕ್ಷ ದಿಂದ ರೂ.15 ಲಕ್ಷ ಬೆಲೆ ಹೊಂದಿರುವ ಯಾರಿಸ್ ಹ್ಯಾಚ್‌ಬ್ಯಾಕ್ ಇಲ್ಲಿ ವರ್ಕೌಟ್ ಆಗುವುದಿಲ್ಲ ಎನ್ನುವುದು ಮಾರುಕಟ್ಟೆಯಲ್ಲಿನ ವಾಸ್ತವ ಸ್ಥಿತಿ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಇನ್ನು ಯಾರಿಸ್ ಕಾರುಗಳು ಹ್ಯಾಚ್‌ಬ್ಯಾಕ್ ಕಾರುಗಳು ನೋಡಲು ಯಾರಿಸ್ ಸೆಡಾನ್ ಮಾದರಿಯಲ್ಲೇ ಇದ್ದು, ಸೆಡಾನ್ ಮಾದರಿಯ ಬಹುತೇಕ ಡಿಸೈನ್‌ಗಳನ್ನು ಇಲ್ಲೂ ಕೂಡಾ ಸೇರಿಸಲಾಗಿದೆ. ಆದರೂ ಸೆಡಾನ್ ಆವೃತ್ತಿಗಿಂತಲೂ ಹ್ಯಾಚ್‌ಬ್ಯಾಕ್ ಆವೃತ್ತಿಯಲ್ಲಿ ಸಾಕಷ್ಟು ಮುಂದುವರಿದ ತಂತ್ರಜ್ಞಾನ ಮಾಡಿರುವುದೇ ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಸ್ಪೋರ್ಟಿ ಲುಕ್‌ನೊಂದಿಗೆ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್‌ನೊಂದಿಗೆ ಲಾರ್ಜ್ ಬ್ಲ್ಯಾಕ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫ್ರಂಟ್ ಬಂಪರ್, ಫಾಗ್ ಲೈಟ್ಸ್, ಸೈಡ್ ಪ್ರೋಫೈಲ್‌ನಲ್ಲಿ ಫ್ಲೋಟಿಂಗ್ ರೂಫ್ ಡಿಸೈನ್, ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್ ಸೌಲಭ್ಯ ಹೊಂದಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಕಾರಿನ ಒಳ ವಿನ್ಯಾಸವು ಸಹ ಪ್ರಿಮಿಯಂ ಲುಕ್ ಹೊಂದಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಕೀ ಲೆಸ್ ಎಂಟ್ರಿ, ಏಳು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಕಂಟ್ರೊಲರ್, ಟ್ರಾನ್ಷನ್ ಕಂಟ್ರೋಲರ್, ಹಿಲ್ ಸ್ಟಾರ್ಟ್ ಅಸಿಸ್ಟ್ ಸೌಲಭ್ಯ ಹೊಂದಿರುವುದು ಕಾರಿನ ಮೌಲ್ಯವನ್ನು ಹೆಚ್ಚಿಸಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಎಂಜಿನ್ ಸಾಮರ್ಥ್ಯ

1.2-ಲೀಟರ್ ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಯಾರಿಸ್ ಹ್ಯಾಚ್‌ಬ್ಯಾಕ್ ಕಾರುಗಳು, 87-ಬಿಎಚ್‌ಪಿ ಮತ್ತು 108-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದಿವೆ. ಜೊತೆಗೆ ಎಲ್ಲಾ ಕಾರು ವೆರಿಯೆಂಟ್‌ಗಳಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆಯಿದೆ.

ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಬಿಡುಗಡೆ ಇಲ್ವಂತೆ..!!

ಒಟ್ಟಿನಲ್ಲಿ ಲಗ್ಷುರಿ ಫೀಚರ್ಸ್ ಮೂಲಕ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಜನಪ್ರಿಯ ಹೊಂದಿರುವ ಯಾರಿಸ್ ಹ್ಯಾಚ್‌ಬ್ಯಾಕ್ ಭಾರತಕ್ಕೆ ಬಂದಲ್ಲಿ ಹಲವು ಕಾರು ಮಾದರಿಗಳನ್ನು ಹಿಂದಿಕ್ಕುವ ಗುಣಹೊಂದಿದ್ದರೂ ಬೆಲೆ ವಿಚಾರವಾಗಿ ಹಿನ್ನೆಡೆ ಅನುಭವಿಸುವ ಸಾಧ್ಯತೆಗಳಿವೆ. ಆದರೂ ಮುಂಬರುವ ದಿನಗಳಲ್ಲಿ ಬದಲಾಗುವ ಮಾರುಕಟ್ಟೆಯ ಸನ್ನಿವೇಶಗಳಲ್ಲಿ ಯಾರಿಸ್ ಹ್ಯಾಚ್‌ಬ್ಯಾಕ್ ಬಿಡುಗಡೆಯಾಗುವುದನ್ನು ಅಲ್ಲಗಳೆಯುವಂತಿಲ್ಲ.

Most Read Articles

Kannada
Read more on toyota hatchback
English summary
Toyota Yaris Hatchback Is Not Coming To India — Here’s Why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X