ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಟೊಯೊಟಾ ಮೋಟಾರ್ಸ್ ಎಪ್ರಿಲ್ 2018ರಲ್ಲಿ ತಮ್ಮ ಎಲ್ಲಾ ಕಾರುಗಳ ಮಾಡಲ್ ಮೇಲೆ ಬೆಲೆ ಏರಿಕೆಯನ್ನು ಮಾದಿದ್ದು, ಮೇ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರುಗಳಿಗೆ ಪೈಪೋಟಿ ನೀಡಲು ತಮ್ಮ ಯಾರಿಸ್ ಮಿಡ್‍ ಸೈಜ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು.

By Rahul Ts

ಟೊಯೊಟಾ ಮೋಟಾರ್ಸ್ ಎಪ್ರಿಲ್ 2018ರಲ್ಲಿ ತಮ್ಮ ಎಲ್ಲಾ ಕಾರುಗಳ ಮಾಡಲ್ ಮೇಲೆ ಬೆಲೆ ಏರಿಕೆಯನ್ನು ಮಾದಿದ್ದು, ಮೇ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರುಗಳಿಗೆ ಪೈಪೋಟಿ ನೀಡಲು ತಮ್ಮ ಯಾರಿಸ್ ಮಿಡ್‍ ಸೈಜ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಟೊಯೊಟಾ ಸಂಸ್ಥೆಯ ಮೊದಲ ಮಿಡ್‍ ಸೈಜ್ ಸೆಡಾನ್ ಕಾರಾಗಿದ್ದು, ಹೊಸ ಕಾರುಗಳ ಕಾಯುವಿಕೆ ಅವಧಿಯು ಹೆಚ್ಚುತ್ತಿರುವ ಕಾರಣ ಕಾರಿಗಾಗಿ ಬುಕ್ಕಿಂಗ್ ಮಾಡಿದಲ್ಲಿ ಮುಂದಿನ 2 ತಿಂಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಟೊಯೊಟಾ ಇಂಡಿಯಾ ಯಾರಿಸ್ ಕಾರುಗಳು 7,200 ಯೂನಿಟ್ ಬುಕ್ಕಿಂಗ್ ಆಗಿದ್ದು, ಇವುಗಳಲ್ಲಿ ದಕ್ಷಿಣ ಭಾರತದಿಂದ ಹೆಚ್ಚು ಬುಕ್ಕಿಂಗ್‍‍ಗಳು ಬಂದಿರುವುದೆ ವಿಶೇಷ. ಈ ನಿಟ್ಟಿನಲ್ಲಿ ದೇಶದಿಂದ ಬರುತ್ತಿರುವ ಈ ಕಾರಿನ ಡಿಮ್ಯಾಂಡ್ ಅನು ದೃಷ್ಟಿಯಲ್ಲಿ ಇಟ್ಟುಕೊಂಡು ಕರ್ನಾಟಕದ ಬಿಡದಿಯಲ್ಲಿನ ಪ್ಲಾಂಟ್‍‍ನಲ್ಲಿ 40,000 ಯೂನಿಟ್‍ ಕಾರುಗಳನ್ನು ಉತ್ಪಾದಿಸಲು ಮುಂದಾಗಿದೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಮೇ 2018ರ ಅಂಕಿ ಅಂಶಗಳ ಪ್ರಕಾರ ಟೊಯೊಟಾ ಯಾರಿಸ್ 2,843 ಯೂನಿಟ್ ಕಾರುಗಳು ಮಾರಾಟಗೊಂಡಿದ್ದರೆ ಇನ್ನು ಇದರ ಎದುರಾಳಿಯಾದ ಹೋಂಡಾ ಸಿಟಿ ಕಾರುಗಳು 2,763 ಯೂನಿಟ್ ಕಾರುಗಳು ಮಾರಾಟಗೊಂಡಿದೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಆದ್ರೆ ಮಿಡ್‍ ಸೈಜ್ ಸೆಡಾನ್ ಸೆಗ್ಮೆಂತ್ ಕಾರುಗಳಲ್ಲಿ ಮಾರುತಿ ಸಿಯಾಜ್ 4,024 ಯೂನಿಟ್ ಕಾರುಗಳು ಮಾರಾಟಗೊಂಡು ಮೊದಲನೆಯ ಸ್ಥಾನವನ್ನು ಪಡೆದಿದ್ದು, ಹ್ಯುಂಡೈ ವೆರ್ನಾ 3,801 ಯೂನಿಟ್ ಮಾರಾಟಗೊಂಡು ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಟೊಯೊಟಾ ಯಾರಿಸ್ ಸೆಡಾನ್ ಕಾರಿನ ಡೀಸೆಲ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಇಲ್ಲ. ಏಕೆಂದರೆ ಈ ಸೆಗ್ಮೆಂಟ್ ಕಾರುಗಳಲ್ಲಿ ಹೆಚ್ಚುರಿ ಶೇಕಡ 80 ರಷ್ಟು ಪೆಟ್ರೋಲ್ ಕಾರುಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಡೀಸೆಲ್ ಮಾದರಿಯನ್ನು ಪರಿಚಯಿಸುವುದಿಲ್ಲ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಯಾರಿಸ್ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.8.75 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 14.07 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಟೊಯೊಟಾ ಯಾರಿಸ್ ಕಾರುಗಳು 1.5-ಲೀಟರ್ ಡ್ಯುಯಲ್ ವಿವಿಟಿ-ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಮೂಲಕ 108-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳು ಆಯ್ಕೆಗೆ ಲಭ್ಯವಿರಲಿವೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಟೊಯೊಟಾ ಯಾರಿಸ್ ಕಾರುಗಳು ಸ್ಮಾರ್ಟ್ ಕನೆಕ್ವಿಟಿ ಜೊತೆಗೆ ಅತ್ಯುತ್ತಮ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಹೊಂದಿದ್ದು, ಸಾಫ್ಟ್ ಟಚ್ ಕ್ಲೈಮೆಟ್ ಕಂಟ್ರೊಲರ್ ಬಟನ್‌ಗಳು, ವಾಟರ್ ಫಾಲ್ ಮಾದರಿಯ ಸೆಂಟರ್ ಕನ್‌ಸೊಲ್ ಡಿಸೈನ್‌ಗಳು ಸೆಡಾನ್ ಮಾದರಿಯ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಹಾಗೆಯೇ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕೂಡಾ ಇದ್ದು, ಸಂಜ್ಞೆಯ ಮೂಲಕವೇ ಕಾರಿನ ಸ್ಮಾರ್ಟ್ ಕನೆಕ್ಟಿವಿಟಿಗಳನ್ನು ನಿಯಂತ್ರಿಸಬಹುದಾಗಿದೆ. ಅದಾಗ್ಯೂ ಯಾರಿಸ್ ಕಾರುಗಳಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೋಡಣೆ ಹೊಂದಿಲ್ಲ ಎನ್ನುವುದು ಮುಖ್ಯ ವಿಚಾರ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಇನ್ನು ಮ್ಯಾನುವಲ್ ಕಾರುಗಳ ಗೇರ್ ಸ್ಟೀಕ್‌ಗಳು ಪ್ರಿಮಿಯಂ ಬ್ಲ್ಯಾಕ್ ಲೆದರ್ ವ್ಯಾರ್ಪ್ಡ್ ಹೊಂದಿರಲಿದ್ದು, ಆಟೋಮ್ಯಾಟಿಕ್ ಗೇರ್ ಸ್ಟಿಕ್‌ಗಳು ಸಹ ಮೆಟಲ್ ಕ್ರೋಮ್ ಮಾದರಿಯ ಲೆದರ್ ಕಾಂಬಿನೇಷನ್ ಡಿಸೈನ್ ಪಡೆದುಕೊಂಡಿರಲಿವೆ. ಜೊತೆಗೆ ಕಪ್ ಹೋಲ್ಡರ್ ಸಹ ಕಾರಿನ ಇಂಟಿರಿಯರ್ ವಿನ್ಯಾಸಕ್ಕೆ ಮೆರಗು ತಂದಿವೆ.

ಯಾರಿಸ್ ಕಾರು ಕೊಳ್ಳುವ ಯೋಜನೆಯಲ್ಲಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..

ಯಾರಿಸ್ ಕಾರುಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಸ್ಟ್ಯಾಬಿಲಿಟಿ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಫೋರ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹೈ ಸೋಲಾರ್ ಎನರ್ಜಿ ಅಬ್ ಸಾರ್ಬಿಂಗ್, ಇನ್‌ಫ್ರಾ ರೆಡ್ ಕಿರಣಗಳಿಗೆ ತಡೆಯೊಡ್ಡುವ ತಂತ್ರಜ್ಞಾನ, ವೈಬ್ರೇಷನ್‌ ಮುಕ್ತ ಗ್ಲಾಸ್‌ಗಳಿಂದಾಗಿ ನಿಶ್ಯಬ್ಧ ಕ್ಯಾಬಿನ್ ಸೌಲಭ್ಯ ಇದರಲ್ಲಿದೆ.

Most Read Articles

Kannada
Read more on toyota sedan sales
English summary
Two month waiting period for toyota yaris
Story first published: Tuesday, June 26, 2018, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X