ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

Written By: Rahul

ಸ್ವಿಡನ್ ಮೂಲದ ಯುನಿಟಿ ಒನ್ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ಈ ಕಾರಿನ ಬೆಲೆಯನ್ನ ರೂ. 7.14 ಲಕ್ಷಕ್ಕೆ ನಿಗದಿಪಡಿಸಲಾಗಿದೆ, ಬುಕ್ಕಿಂಗ್ ಗಾಗಿ 10,000 ಸಾವಿರ ಹಣವನ್ನು ನೀಡಬೇಕಾಗಿದ್ದು, ಹಾಗೆಯೇ ಸಂಸ್ಥೆಯು ಶೇಕಡ 100 ರಷ್ಟು ರೀ ಫಂಡ್ ಕೂಡ ನೀಡಲಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

ಯುನಿಟಿ ಒನ್ ಸಾಧಾರಣ ಹಾಗೂ ನಯವಾದ ವಿನ್ಯಾಸಗಳನ್ನು ಹೊಂದಿದ್ದು, ಸಂಪೂರ್ಣವಾಗಿ ಮುಚ್ಚಿದ ಚಕ್ರಗಳುಳ್ಳ ವಾಯುಬಲ ವೈಜ್ಞಾನಿಕ ವಿನ್ಯಾಸದೊಂದಿಗೆ ಮಹಿಂದ್ರಾ ಇ2ಒ ಕಾರನ್ನು ಹೋಲುತ್ತದೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

ಇಬ್ಬರು ಕೂರಬಹುದಾದ ಕಾರನ್ನು ಮಾತ್ರ ಪ್ರದರ್ಶನಗೊಳಿಸಿದ್ದು, 5 ಸೀಟರ್ ಕಾರನ್ನು ವರ್ಚುವಲ್ ರಿಯಾಲಿಟಿ ಮಾದರಿಯಲ್ಲಿ ಪ್ರದರ್ಶನಗೊಳಿಸಲಾಗಿದೆ. 2 ಆಸನವುಳ್ಳ ಕಾರನ್ನು 2019ರಲ್ಲಿ ಮಾರುಕಟ್ಟೆಗೆ ಪರಿಚಯಿಸಲ್ಲಿದ್ದು, 5 ಆಸನವುಳ್ಳ ಕಾರನ್ನು 2020ರಲ್ಲಿ ಪರಿಚಯಿಸುತ್ತೇವೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

ಯುನಿಟಿ ಒನ್ ಸಂಸ್ಥೆಯು ದೆಹಲಿಯ ಬರ್ಡ್ ಗ್ರೂಪ್ ನೊಂದಿಗೆ ಕೈಜೋಡಿಸಿದ್ದು, ಹೊಸ ಕಾರು 22 ಕಿಲೋ ವ್ಯಾಟ್ಸ್ ನ ಲಿಥಿಯಂ-ಇಯಾನ್ ಬ್ಯಾಟರಿಯ ಸಹಾಯದಿಂದ 200 ಕಿಲೋ ಮೀಟರ್ ಮೈಲೇಜ್ ಸಾಮರ್ಥ್ಯ ಹೊಂದಿವೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

ಹೊಸ ಕಾರಿನ ಬ್ಯಾಟರಿಯು 20 ನಿಮಿಷಗಳ ಅವಧಿಯಲ್ಲಿ ಶೇಕಡ 90ರಷ್ಟು ಚಾರ್ಜಿಂಗ್ ಆಗುವ ಸಾಮರ್ಥ್ಯವನ್ನು ಹೊಂದಿದ್ದು, 40 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಪಡೆದುಕೊಳ್ಳುತ್ತವೆ. ಇದಲ್ಲದೆ ಕಾರಿನಲ್ಲಿ ಸ್ಟೀರಿಂಗ್ ವೀಲ್ ಬದಲಿಗೆ ಎರಡು ಜಾಯ್-ಸ್ಟಿಕ್ ಗಳನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರುಗಳಲ್ಲಿ ಜಾಯ್ ಸ್ಟಿಕ್ ಬದಲಿಗೆ ಸ್ಟೀರಿಂಗ್ ವೀಲನ್ನು ಆಳವಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

ಯುನಿಟಿ ಒನ್ ಜಾಯ್-ಸ್ಟಿಕ್ ಗಳ ನಡುವೆ 7 ಇಂಚಿನ ಟಚ್-ಸ್ಕ್ರೀನ್ ಹೊಂದಿದ್ದು, ವಿನೂತನ ಮಾದರಿಯ ಇನ್ಫೋಟೈನ್ಮೆಂಟ್ ಸಿಸ್ಟಂ ಕಾರು ಚಾಲನೆಗೆ ಸಹಕಾರಿಯಾಗಲಿವೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

'ನಮ್ಮ ಸಂಸ್ಥೆಯ ವಾಹನಗಳು ಭಾರತದಲ್ಲಿ ಬರ್ಡ್ ಗ್ರೂಪ್ ಸಂಸ್ಥೆಯಿಂದ ಗುರುತಿಸಲಾಗಿದ್ದು, ಭಾರತೀಯ ಗ್ರಾಹಕರಿಗೆ ಅನುಕೂಲವಾಗುವ ಹಾಗೆ ಈ ಕಾರನ್ನು ವಿನ್ಯಾಸಗೊಳಿಸಿದ್ದು, ಎಲ್ಲಾ ವರ್ಗದ ಜನರು ಈ ಕಾರನ್ನು ಕೊಳ್ಳಬಹುದಾದ ಬೆಲೆಯಲ್ಲಿ ಭಾರತದಲ್ಲಿ ಮಾರಾಟಗೊಳಿಸಲು ನಾವು ಪ್ರಯತ್ನಿಸುತ್ತೆವೆ' ಎಂದು ಯುನಿಟಿ ಒನ್ ಸಂಸ್ಥೆಯ ಸಿಎಒ ಲೆವಿಸ್ ಹಾರ್ನ್ ಹೇಳಿಕೊಂಡಿದ್ದಾರೆ.

ಆಟೋ ಎಕ್ಸ್ ಪೋ 2018: ಹಲವು ವಿಶೇಷತೆಗಳಿಗೆ ಕಾರಣವಾದ ಯುನಿಟಿ ಒನ್..

ಭಾರತೀಯ ಮಾರುಕಟ್ಟೆಯಲ್ಲಿ ಮಹಿಂದ್ರಾ ಇ2ಒ ಕಾರಿಗೆ ಯುನಿಟಿ ಒನ್ ಎಲೆಕ್ಟ್ರಿಕ್ ಕಾರುಗಳು ಎಲ್ಲಾ ಆಯಾಮಗಳಲ್ಲೂ ಪೈಪೋಟಿ ನೀಡುವ ಗುಣಲಕ್ಷಣ ಹೊಂದಿವೆ.

English summary
Uniti One Electric Vehicle Launched At Rs 7.14 Lakh; Booking Amount, Specs & More.
Story first published: Monday, February 12, 2018, 15:10 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark