ಹೊಸ ಎಸ್‌ಯುವಿ ಕಾರು ಖರೀದಿಯ ಪ್ಲ್ಯಾನ್ ಇದೆಯಾ? ಹಾಗಾದ್ರೆ ಹೊಸ ಕಾರುಗಳು ಯಾವವು ಇಲ್ಲಿವೆ ನೋಡಿ....

Written By: Rahul TS

ಫ್ಯಾಮಿಲಿ ಜೊತೆ ತಮ್ಮ ಸ್ವಂತ ಕಾರಿನಲ್ಲಿ ಹೊರಸಂಚಾರಕ್ಕೆ ಹೋಗಲು ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಆದ್ದರಿಂದ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಕಾರುಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ವಾಹನ ತಯಾರಕ ಸಂಸ್ಥೆಗಳು ಒಂದರ ಮೇಲೊಂದು ವಿವಿಧ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಸ್‍‍ಯುವಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಈ ನಿಟ್ಟಿನಲ್ಲಿ ಮಾರುಕಟ್ಟೆಗೆ 2018 ಮತ್ತು 2019ರ ಅವಧಿಯಲ್ಲಿ ಬಿಡುಗಡೆಗೊಳ್ಳಲ್ಲಿರುವ ಬಹುನಿರೀಕ್ಷಿತ 5 ಆಸನವುಳ್ಳ ಎಸ್‍‍ಯುವಿ ಕಾರುಗಳ ಬೆಲೆ, ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮ್ಮ ಡ್ರೈವ್‌ಸ್ಪಾಕ್ ತಂಡ ಇಲ್ಲಿ ಪ್ರಕಟಿಸಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

1. ಮಾರುತಿ ಸುಜುಕಿ ವಿಟಾರಾ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಎರಡು ವರ್ಷಗಳ ಹಿಂದೆ ತಮ್ಮ ವಿಟಾರಾ ಬ್ರೆಝಾ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ವಿಟಾರಾ ಎನ್ನುವ ಮತ್ತೊಂದು ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿ ನೀಡಲಿರುವ ಈ ಕಾರು ಪ್ರೀಮಿಯಂ ಸರಣಿಯಲ್ಲಿ ಎಂಟ್ರಿ ಕೊಡಲಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

5 ಆಸನವುಳ್ಳ ಈ ಪ್ರೀಮಿಯಂ ಎಸ್‍‍ಯುವಿ ಕಾರು ದೊಡ್ಡ ಪ್ರೊಜೆಕ್ಟರ್ ಹೆಡ್‍‍‍ಲ್ಯಾಂಪ್ಸ್, ಗ್ರಿಲ್, ಸ್ಕಿಡ್ ಪ್ಲೇಟ್ಸ್ ಅನ್ನು ಕಾರಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪಡೆದಿದ್ದು, ಕಾರಿನ ಬಂಪರ್ ವಿನ್ಯಾಸವು ಆಕರ್ಷಿತವಾಗಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಮಾರುತಿ ಸುಜುಕಿ ವಿಟಾರಾ ಕಾರುಗಳು 1.6 ಲೀಟರ್ ಫಿಯೆಟ್ ಡಿಸೆಲ್ ಎಂಜಿನ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿರಲಿದ್ದು, ಮಾರುತಿ ಸುಜುಕಿ ಬ್ರೆಝಾ ಕಾರಿನಂತೆಯೇ ಹತ್ತು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಬೆಲೆ (ಅಂದಾಜು) - ರೂ 11 ರಿಂದ 15 ಲಕ್ಷ

ನಿರೀಕ್ಷಿತ ಬಿಡುಗಡೆಯ ಅವಧಿ - 2019ರ ಮೊದಲ ತ್ರೈಮಾಸಿಕ ಅವಧಿ

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

2. ರೆನಾಲ್ಟ್ ಡಸ್ಟರ್

ರೆನಾಲ್ಟ್ ಸಂಸ್ಥೆಯು ಕಳೆದ ವರ್ಷ ತಮ್ಮ ಎರಡನೆಯ ತಲೆಮಾರಿನ ಡಸ್ಟರ್ ಕಾರನ್ನು ಬಹಿರಂಗಗೊಳಿಸಿದ್ದು, ಗ್ರಾಹಕರು ಮೊದಲನೆಯ ತಲೆಮಾರಿನ ಕಾರಿನ ವಿನ್ಯಾಸಕ್ಕೆ ಆಕರ್ಷಿತರಾಗಿರುವ ಕಾರಣದಿಂದಾಗಿ ಎರಡನೆಯ ತಲೆಮಾರಿನ ಕಾರುಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡದೆ ಹೊಸ ಕಾರು ಬಿಡುಗಡೆ ಮಾಡುತ್ತಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಹೊಸ ರೆನಾಲ್ಟ್ ಡಸ್ಟರ್ ಕಾರುಗಳು ವಿನೂತನವಾದ ಹೆಡ್‍‍ಲ್ಯಾಂಪ್ ಡಿಸೈನ್ ಮತ್ತು ಬಂಪರ್ ಅನ್ನು ಪಡೆದಿರಲಿದ್ದು, ಕಾರಿನ ಹಿಂಭಾಗದಲ್ಲಿ ಅಪ್ಡೇಟೆಡ್ ಟೈಲ್‍‍ಗೇಟ್ ಮತ್ತು ಬಂಪರ್ ಅನ್ನು ಅಳವಡಿಸಲಾಗಿದೆ. ಇದಲ್ಲದೆ ಪ್ರಸ್ತುತ ಔಟ್ ಗೋಯಿಂಗ್ ಮಾಡಲ್‍‍ಗಿಂತ ಹೆಚ್ಚು ವಿಭಿನ್ನತೆಯನ್ನು ಪಡೆದುಕೊಂಡಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಎರಡನೆಯ ತಲೆಮಾರಿನ ರೆನಾಲ್ಟ್ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 85 ಬಿಹೆಚ್‍‍ಪಿ ಮತ್ತು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು ಜೊತೆಗೆ 110 ಬಿಹೆಚ್‍‍ಪಿ ಮತ್ತು 248ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ. ಇನ್ನು ಕಾರಿನ 1.5 ಲೀಟರ್ ಹೆಚ್‍4ಕೆ ಯೂನಿಟ್ ಎಂಜಿನ್ ಸಹಾಯದಿಂದ 106 ಬಿಹೆಚ್‍‍ಪಿ ಮತ್ತು 142ಎನ್ಎಮ್ ಟಾರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ. ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬೆಲೆ (ಅಂದಾಜು) - ರೂ. 9 ಲಕ್ಷದಿಂದ 13 ಲಕ್ಷ

ನಿರೀಕ್ಷಿತ ಬಿಡುಗಡೆಯ ಅವಧಿ - 2018ರ ಎರಡನೆಯ ತ್ರೈಮಾಸಿಕ ಅವಧಿ

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

3. ಫೋರ್ಡ್ ಕೂಗಾ

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಇಕೊ ಸ್ಪೋರ್ಟ್ ಮತ್ತು ಎಂಡೀವರ್ ನಡುವೆ ಕೂಗಾ ಕಾರನ್ನು ಪರಿಚಯಿಸುತ್ತಿದ್ದು, ಈ ಕುರಿತು ಅಧ್ಯಯನ ನಡೆಸಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಬೇಡಿಕೆ ಹೊಂದಿರುವ ಕೂಗಾ ಎಸ್‌ಯುವಿ ಕಾರುಗಳು ಇದೀಗ ಭಾರತದಲ್ಲಿ ಮೂರನೆಯ ತಲೆಮಾರಿನ ವಿನ್ಯಾಸಗಳೊಂದಿಗೆ ಎಂಟ್ರಿ ಕೊಡಲು ಸಿದ್ಧವಾಗಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಮಿಡ್ ಫೇಸ್‍‍ಲಿಫ್ಟ್ ಕೂಗಾ ಕಾರುಗಳ ಮುಂಭಾಗದಲ್ಲಿ ಗ್ರಿಲ್ ಮತ್ತು ಬಾಟಮ್‍‍ನಲ್ಲಿ ಚಿಕ್ಕದಾದ ಗ್ರಿಲ್ ಅನ್ನು ಅಳವಡಿಸಲಾಗಿದ್ದು, ಇಂಟಿಗ್ರೇಟೆಡ್ ಹೆಡ್‍‍ಲ್ಯಾಂಪ್ ಡಿಆರ್‍ಎಲ್‍‍‍ಗಳನ್ನು ಕೂಡ ಪಡೆದುಕೊಂಡಿವೆ. ಅಲ್ಲದೆ ಸಂಸ್ಥೆಯು ಈ ಕಾರಿಗೆ ಹೊಸ ಬಂಪರ್ ಮತ್ತು ಫಾಗ್ ಲ್ಯಾಂಪ್‍‍ಗಳನ್ನು ಅಳವಡಿಸಿದ್ದು, ಅಲಾಯ್ ವೀಲ್ಸ್, ಟೈಲ್‍ ಲ್ಯಾಂಪ್ಸ್, ಬಂಪರ್ 3 ಸ್ಪೋಕ್ ಅಲಾಯ್ ವೀಲ್ಸ್, ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಸಿಂಕ್ 3 ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಇನ್ನು ಹೊಸ ಫೋರ್ಡ್ ಕೂಗಾ ಕಾರುಗಳು 1.5 ಲೀಟರ್ ಟಿಡಿಸಿಐ ಎಂಜಿನ್ ಸಹಾಯದಿಂದ 120 ಬಿಹೆಚ್‍ಪಿ, 2.0 ಲೀಟರ್ ಟಿಡಿಸಿಐ ಎಂಜಿನ್ 150 ಬಿಹೆಚ್‍‍ಪಿ, 1.5 ಲೀಟರ್ ಎಕೊಬೂಸ್ಟ್ ಎಂಜಿನ್‍‍ಗಳು 150 ಬಿಹೆಚ್‍ಪಿ ಮತ್ತು 182 ಬಿಹೆಚ್‍‍ಪಿ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 2 ವೀಲ್ ಡ್ರೈವ್ ಮತ್ತು 4 ವೀಲ್ ಡ್ರೈವ್ ಆಯ್ಕೆಯಲ್ಲಿ ಬರಲಿದೆ.

ಬೆಲೆ (ಅಂದಾಜು) - ರೂ. 11 ಲಕ್ಷದಿಂದ 15 ಲಕ್ಷ

ನಿರೀಕ್ಷಿತ ಬಿಡುಗಡೆಯ ಅವಧಿ - 2019ರ ಎರಡನೆಯ ತ್ರೈಮಾಸಿಕ ಅವಧಿ

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

4. ನಿಸ್ಸಾನ್ ಕಿಕ್ಸ್

ನಿಸ್ಸಾನ್ ಸಂಸ್ಥೆಯು 2016ರಲ್ಲಿ ತಮ್ಮ ಹೊಸ ತಲೆಮಾರಿನ ಕಿಕ್ಸ್ ಕಾರನ್ನು ಬಿಡುಗಡೆಗೊಳಿತ್ತು. ಭಾರತಕ್ಕೆ ಬರಲಿರುವ ಹೊಸ ತಲೆಮಾರಿನ ನಿಸ್ಸಾನ್ ಕಿಕ್ಸ್ ಕಾರುಗಳು ರೆನಾಲ್ಟ್ ಡಸ್ಟರ್/ನಿಸ್ಸಾನ್ ಟೇರ್ರಾನೊ ಪ್ಲಾಟ್‍‍ಫಾರ್ಮ್ ಅನ್ನು ಹೊತ್ತು ಬರಲಿವೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ನಿಸ್ಸಾನ್ ಕಿಕ್ಸ್ ಸಂಸ್ಥೆಯ ಚಿಕ್ಕದಾದ ಎಸ್‍‍ಯುವಿ ಕಾರಾಗಿದ್ದು, ಇದರಲ್ಲಿ 'ವಿ' ಶೇಪ್ಡ್ ಗ್ರಿಲ್, ಫ್ರಂಟ್ ಗ್ರಿಲ್, ಹೆಡ್‍‍ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್, ಏರ್‍ ವೆಂಟ್ಸ್, 17 ಇಂಚಿನ 10 ಸ್ಪೋಕ್ ಅಲಾಯ್ ಚಕ್ರಗಳು, ಟೈಲ್‍‍ಲ್ಯಾಂಪ್ಸ್, ಸಿ ಪಿಲ್ಲರ್, ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಡಿಜಿಟಲ್ ಎನಾಲಾಗ್, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೂಲ್ಡ್ ಗ್ಲೊವ್ ಬಾಕ್ಸ್, ಲೆದರ್ ಸೀಟ್ಸ್, ವರ್ಚುವಲ್ 360 ಡಿಗ್ರಿ ಬರ್ಡ್ ಐ ವ್ಯೂ ಕ್ಯಾಮೆರಾ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ನಿಸ್ಸಾನ್ ಕಿಕ್ಸ್ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 110 ಬಿಹೆಚ್‍‍ಪಿ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್‍‍ಗಳು 106 ಬಿಹೆಚ್‍‍ಪಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು, ಎರಡೂ ಎಂಜಿನ್‍‍ಗಳನ್ನು ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬೆಲೆ (ಅಂದಾಜು) - ರೂ. 9 ರಿಂದ 14 ಲಕ್ಷ

ನಿರೀಕ್ಷಿತ ಬಿಡುಗಡೆಯ ಅವಧಿ - 2019

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

5. ಹೋಂಡಾ ಬಿಆರ್-ವಿ

ಹೋಂಡಾ ಸಂಸ್ಥೆಯು ತಮ್ಮ ಬಿಆರ್-ವಿ ಕಾರನ್ನು ಕ್ರೆಟಾ ಕಾರಿಗೆ ಎದುರಾಳಿಯಾಗಿ ಪರಿಚಯಿಸಿತ್ತು. ಆದ್ರೆ ಅದು ಸಾಧ್ಯವಾಗದೆ ಇದೀಗ ಮತ್ತೊಮ್ಮೆ ಹೊಸ ವೈಶಿಷ್ಟ್ಯತೆಗಳು ಮತ್ತು ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಹೋಂಡಾ ಬಿಆರ್-ವಿ ಕಾರಿನಲ್ಲಿ ಹೊಸ ಬಂಪರ್, ರಿಯರ್ ಡೋರ್ ಹ್ಯಾಂಡಲ್, ಟೈಲ್‍ ಲ್ಯಾಂಪ್ಸ್, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ರೋಮ್ ಸ್ಟ್ರಿಪ್, ಸನ್ ರೂಫ್, ಕ್ರೂಸ್ ಕಂಟ್ರೋಲ್, ಲೆದರ್ ಸೀಟ್ಸ್, 3 ಸ್ಪೋಕ್ ಸ್ಟೀರಿಂಗ್ ವೀಲ್ಸ್, ಟಚ್‍‍ಸ್ಕ್ರೀನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿವೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಹೋಂಡಾ ಬಿಆರ್-ವಿ ಕಾರುಗಳು 1.6 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 158 ಬಿಹೆಚ್‍‍ಫಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇನ್ನು 1.8 ಲೀಟರ್ ಐ-ಟೆಕ್ ಎಂಜಿನ್ 140 ಬಿಹೆಚ್‍‍ಪಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಬೆಲೆ (ಅಂದಾಜು) - ರೂ.9 ಲಕ್ಷದಿಂದ 14 ಲಕ್ಷ

ನಿರೀಕ್ಷಿತ ಬಿಡುಗಡೆಯ ಅವಧಿ - 2019 ಕೊನೆಯ ತಿಂಗಳು

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

6. ಟಾಟಾ ಹೆಚ್5ಎಕ್ಸ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಹೊಸ ಹೆಚ್5ಎಕ್ಸ್ ಫ್ಲ್ಯಾಗ್‍ಶಿಫ್ ಎಸ್‍ಯುವಿ ಕಾರು ಪರಿಕಲ್ಪನೆಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಇದೀಗ ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಟಾಟಾ ಹೆಚ್5ಎಕ್ಸ್ ಕಾರು ಫ್ಲೇರ್ಡ್ ವೀಲ್ ಆರ್ಚೆಸ್, ಬಂಪರ್‍‍ಗಳಿಗೆ ಟ್ರಿ ಆರೋ ಡಿಸೈನ್, ಸ್ಕಿಡ್ ಪ್ಲೇಟ್ಸ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್ ಮತ್ತು ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಕ್ಲಸ್ಟರ್‍‍ಗಳನ್ನು ಪಡೆದಿರಬಹುದು ಎನ್ನಲಾಗಿದೆ.

ಎಸ್‍‍ಯುವಿ ಕಾರು ಕೊಳ್ಳುವ ಯೋಚನೆಯಿದೆಯೆ..? ಹಾಗದರೆ ಸ್ವಲ್ಪ ದಿನ ಕಾಯಲೇಬೇಕು..

ಕಾರಿನ ಒಳಭಾಗವು ವಿಶಾಲವಾದ ಹಾಗೂ ಐಷಾರಾಮಿ ಸೌಲಭ್ಯಗಳನ್ನು ಪಡೆದಿದ್ದು, ಫಿಯೆಟ್ ಕಾರಿನಲ್ಲಿ ಬಳಸಲಾಗಿರುವ 2 ಲೀಟರ್ ಮಲ್ಟಿಜೆಟ್ 2 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಇನ್ನು ಜೆಡ್ಎಫ್ 9 ಸ್ಪೀಡ್ ಆಟೋಮ್ಯಾಟಿಮ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಣೆ ಮಾಡಿರಬಹುದೆಂದು ಊಹಿಸಲಾಗಿದೆ.

ಬೆಲೆ (ಅಂದಾಜು) - ರೂ.12ಲಕ್ಷದಿಂದ 16 ಲಕ್ಷ

ನಿರೀಕ್ಷಿತ ಬಿಡುಗಡೆಯ ಅವಧಿ - 2019ರ ಮೊದಲನೆಯ ತ್ರೈಮಾಸಿಕ ಅವಧಿ

Read more on new car suv top 5
English summary
Upcoming 5-Seater SUVs In India in 2018, 2019.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark