ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು.

By Praveen Sannamani

ಮಹೀಂದ್ರಾ ಸಂಸ್ಥೆಯು ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ನೀರಿಕ್ಷೆಗಳೊಂದಿಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಮಹೀಂದ್ರಾ ಬಿಡುಗಡೆ ಮಾಡುತ್ತಿರುವ ಬಹುತೇಕ ಕಾರು ಉತ್ಪನ್ನಗಳು ಗ್ರಾಹಕರನ್ನ ಸೆಳೆಯುತ್ತಿವೆ. ಈ ಹಿನ್ನೆಲೆ ಮಹೀಂದ್ರಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ಮಾಹಿತಿಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಪ್ರಯಾಣಿಕರ ವಾಹನ ವಿಭಾಗಕ್ಕೆ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲು ಉದ್ದೇಶಿಸಿರುವ ಮಹೀಂದ್ರಾ ಸಂಸ್ಥೆಯು 2018-19ರ ಆರ್ಥಿಕ ವರ್ಷದಲ್ಲಿ ನಾಲ್ಕು ಪ್ರಮುಖ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರುಗಳ ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

9 ಸೀಟರ್ ಟಿಯುವಿ300 ಪ್ಲಸ್

ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ನಂತರ ಹೊಸ ಟಿಯುವಿ300 ಪ್ಲಸ್ ಪರಿಚಯಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಆಕರ್ಷಕ ಬೆಲೆಗಳಿಗೆ ಹೊಸ ಕಾರನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಹೊಸ ಕಾರುಗಳು ಅಧಿಕೃತ ಡೀಲರ್ಸ್‌ಗಳಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಇದೇ ತಿಂಗಳು ಕೊನೆಯಲ್ಲಿ ಇಲ್ಲವೇ ಜುಲೈ ಮೊದಲ ವಾರ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಪ್ರಸ್ತುತ ಮಾರುಕಟ್ಟೆಯಲ್ಲಿನ ಟಿಯುವಿ300 ಮಾದರಿಗಿಂತ ಪ್ಲಸ್ ಆವೃತ್ತಿಯು ಅತಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದ್ದು, ಕ್ಯಾಬಿನ್ ಭಾಗ ಮತ್ತು ಕಾರಿನ ಎಡ್ಜ್‌ಗಳಲ್ಲಿ ವಿಶೇಷ ವಿನ್ಯಾಸವನ್ನು ಕೈಗೊಂಡಿರುವುದು ಹೊಸ ಕಾರಿನ ಹೊರ ನೋಟಕ್ಕೆ ಮೆರಗು ತಂದಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಎಂಜಿನ್ ಸಾಮರ್ಥ್ಯ ಈ ಹಿಂದಿನ ಮಾದರಿಯಂತೆ ಟಿಯುವಿ300 ಪ್ಲಸ್ ಮಾದರಿಯು 2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 119-ಬಿಎಚ್‌ಪಿ ಉತ್ಪಾದಿಸಬಲ್ಲ ಗುಣಹೊಂದಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಕಾರಿನ ಬೆಲೆಗಳು

ವರದಿಯೊಂದರ ಪ್ರಕಾರ, ಟಿಯುವಿ300 ಪ್ಲಸ್ ಬೆಲೆಯನ್ನು ರೂ.9.69 ಲಕ್ಷಕ್ಕೆ ನಿಗದಿ ಮಾಡುವ ಮೂಲಕ ಇನ್ಸುರೆನ್ಸ್ ಮತ್ತು ಲೈಫ್ ಟ್ಯಾಕ್ಸ್, ರಿಜಿಸ್ಟೇಷನ್ ಸೇರಿ ಆನ್ ರೋಡ್ ಬೆಲೆಯನ್ನು ರೂ.11.15 ಲಕ್ಷಕ್ಕೆ ಮಾರಾಟ ಮಾಡಲಿದೆ ಎಂಬ ಮಾಹಿತಿ ದೊರೆತಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಯು321 ಎಂಪಿವಿ

ಮಹೀಂದ್ರಾ ನಿರ್ಮಾಣದ ಹೊಸ ಎಂಪಿವಿ ಕಾರನ್ನು ಯು321 ಕೋಡ್‌ನೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಇದೀಗ ಮತ್ತೆ ಬಿಳಿ ಬಣ್ಣದ ಆಯ್ಕೆಯನ್ನು ಹೊಂದಿರುವ ಮಾದರಿಯು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಚೆನ್ನೈ ಬಳಿ ಕಾಣಿಸಿಕೊಂಡಿದೆ. ಇದರೊಂದಿಗೆ ಮೊದಲ ಬಾರಿಗೆ ಹೊಸ ಕಾರಿನ ಬಣ್ಣದ ಆಯ್ಕೆಗಳು ಬಹಿರಂಗವಾಗಿದ್ದು, ಇನೋವಾ ಕಾರುಗಳನ್ನು ಗುರಿಯಾಗಿಸಿ ಯು321 ಕಾರನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರುಗಳಲ್ಲೊಂದು ಯು 081 ಮತ್ತು ಇನ್ನೊಂದು ಕಾರು ಯು-079 ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿದೆ. ಹೊಸ ಯು321 ಎಂಪಿವಿ ಕಾರು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕ್ಯೂ ಬಾಡಿ ಕಿಟ್ ಹೊಂದಿರುವ ಕಾರಾಗಿದ್ದು, ಪ್ರಸ್ತುತ ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತ ವಿಭಿನ್ನವಾಗಿರಲಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಎಂಜಿನ್ ಸಾಮರ್ಥ್ಯ ಮತ್ತು ಬೆಲೆಗಳು

ಮಹಿಂದ್ರಾ ಯು321 ಕಾರುಗಳು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರಿನ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 10 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಟಿವೊಲಿ ಹ್ಯಾಚ್‌ಬ್ಯಾಕ್

ದಕ್ಷಿಣ ಕೊರಿಯಾದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಯಾಂಗ್‌ಯಾಂಗ್‌ ಸಂಸ್ಥೆಯು ಮಹೀಂದ್ರಾ ಜೊತೆಗೂಡಿ ದೇಶಿಯ ಮಾರುಕಟ್ಟೆಗಾಗಿ ವಿನೂತನ ಎಸ್‌ಯುವಿ ಮಾದರಿಯನ್ನು ಸಿದ್ಧಗೊಳಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸುವ ಉದ್ದೇಶದಿಂದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಸುಧಾರಿತ ಕಾರು ಮಾದರಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಂಗ್‌ಯಾಂಗ್‌ ಸಂಸ್ಥೆಯು ಟಿವೊಲಿ ಎಂಬ ವಿನೂತನ ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದ್ದು, ತಮಿಳುನಾಡಿನ ಕೊಯಮತ್ತೂರು ಬಳಿ ಸ್ಟಾಟ್ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಹೊಸ ಕಾರಿನ ಚಿತ್ರಗಳು ಸೆರೆ ಸಿಕ್ಕಿವೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಎಂಜಿನ್ ಸಾಮರ್ಥ್ಯ

ವರದಿಗಳ ಪ್ರಕಾರ ಟಿವೊಲಿ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಕಾರು ಖರೀದಿಗೆ ಲಭ್ಯವಿರಲಿದ್ದು, ಸ್ಪೋರ್ಟ್ ಕಾರ್ ಮಾದರಿಯ ಡ್ಯುಯಲ್ ಟೊನ್ ಡ್ಯಾಶ್‌ಬೋರ್ಡ್, ಟಚ್ ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ಪೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಡೇ ಟೈಮ್ ಎಲ್ಇಡಿ ರನ್ನಿಂಗ್ ಲೈಟ್ ಸೌಲಭ್ಯವನ್ನು ಪಡೆದುಕೊಂಡಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಬಿಡುಗಡೆ ಮತ್ತು ಬೆಲೆಗಳು

2018ರ ಅಂತ್ಯದಲ್ಲಿ ಬಿಡುಗಡೆಯಾಗಲಿರುವ ಟಿವೊಲಿ ಕಾರುಗಳು ಹ್ಯಾಚ್‌ಬ್ಯಾಕ್ ಕಾರು ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.11 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ನೀರಿಕ್ಷೆ ಮಾಡಲಾಗಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಕೆಯುವಿ100 ನೆಕ್ಸ್ಟ್ ಎಎಂಟಿ

ಸಣ್ಣ ಗಾತ್ರದ ಎಸ್‌ಯುವಿ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಆಟೋ ಮ್ಯಾಟಿಕ್ ಮಾದರಿಯು ಬಿಡುಗಡೆಗೊಳ್ಳಲು ಸಿದ್ದವಾಗಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಗಳಲ್ಲೂ ಎಎಂಟಿ ಸೌಲಭ್ಯ ದೊರೆಯುವ ಸಾಧ್ಯತೆಗಳಿವೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿ ಎಂಜಿನ್ ಅಭಿವೃದ್ಧಿ ಮಾಡಲಾಗತ್ತಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2-ಲೀಟರ್ ಡೀಸೆಲ್ ಎಂಜಿನ್ ಹೊಂದಿವೆ. ಇವುಗಳಲ್ಲಿ ಪೆಟ್ರೋಲ್ ಮಾದರಿಗಳು 82-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಗಳು 77-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

5-ಸ್ಪೀಡ್ ಮ್ಯಾನುವಲ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಒದಗಿಸುವ ಸಾಧ್ಯತೆಗಳಿದ್ದು, ಸದ್ಯ ಲಭ್ಯವಿರುವ ಮ್ಯಾನುವಲ್ ಕಾರಗಳಲ್ಲಿ ಕ್ರೋಮ್ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್‌ಇಡಿ ಡಿಆರ್‌ಎಲ್ಎಸ್, ಕ್ಲಿಯರ್ ಲೆನ್ಸ್ ಟೈಲ್‌ಮ್ಯಾಪ್, ಡ್ಯುಯಲ್ ಏರ್‌ಬ್ಯಾಗ್, ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.

ಕಾರು ಪ್ರಿಯರನ್ನು ಸೆಳೆಯಲಿವೆ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಕಾರುಗಳು

ಇನ್ನು ಈ ಹೊಸ ಕಾರುಗಳು ಬೆಳಕಿನ ಹಬ್ಬ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದ್ದು, ಸದ್ಯ ಲಭ್ಯವಿರುವ ಮ್ಯಾನುವಲ್ ಆವೃತ್ತಿಗಿಂತಲೂ ತುಸು ದುಬಾರಿ ಎನ್ನಿಸಲಿವೆ. ಹೀಗಾಗಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರುಗಳು ರೂ. 4.75 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.75 ಲಕ್ಷಕ್ಕೆ ಬಿಡುಗಡೆಯಾಗುವ ನೀರಿಕ್ಷೆಯಿದೆ.

Most Read Articles

Kannada
English summary
Upcoming Mahindra Cars in India.
Story first published: Wednesday, June 13, 2018, 13:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X