2017ರಲ್ಲಿ ಫೋಕ್ಸ್‌ವ್ಯಾಗನ್ ಉತ್ಪಾದನೆ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?

Written By:

ಹಲವು ಏಳು-ಬೀಳುಗಳೊಂದಿಗೆ 2017ಕ್ಕೆ ಗುಡ್ ಬೈ ಹೇಳುತ್ತಾ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಆದ್ರೆ ಹೊಸ ವರುಷಗಳ ಸಂಭ್ರಮದಲ್ಲಿ ಕಳೆದು ಹೋದ ದಿನಗಳಲ್ಲಿನ ಮಹತ್ವರ ಬದಲಾವಣೆಗಳನ್ನು ಮರೆಯಲು ಹೇಗೆ ಸಾಧ್ಯ ಹೇಳಿ. ಫೋಕ್ಸ್‌ವ್ಯಾಗನ್ ಕೂಡಾ ಕಳೆದ ವರ್ಷ ವಿಶೇಷ ಸಾಧನೆಗೆ ಸಾಕ್ಷಿಯಾಗಿದ್ದು, ಬೃಹತ್ ಪ್ರಮಾಣದ ಕಾರು ಉತ್ಪಾದನೆಯಲ್ಲಿ ದಾಖಲೆ ಸೃಷ್ಠಿಸಿದೆ.

2017ರಲ್ಲಿ ಫೋಕ್ಸ್‌ವ್ಯಾಗನ್ ಉತ್ಪಾದನೆ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?

ಭಾರತೀಯ ಆಟೋ ಉದ್ಯಮದಲ್ಲಿ ತನ್ನದ ಆದ ಜನಪ್ರಿಯತೆ ಸಾಧಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಕಳೆದ 2017ರಲ್ಲಿ ಹಲವು ವಿಶೇಷತೆಗಳಿಗೆ ಕಾರಣಾಗಿದ್ದು, ಎಲ್ಲ ವರ್ಗದ ಗ್ರಾಹಕರನ್ನು ಸೆಳೆಯುವ ಮೂಲಕ ಕಾರು ಉತ್ಪಾದನೆಯಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ.

2017ರಲ್ಲಿ ಫೋಕ್ಸ್‌ವ್ಯಾಗನ್ ಉತ್ಪಾದನೆ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?

2017ರ ಪ್ರಾರಂಭದಿಂದ ವರ್ಷಾಂತ್ಯಕ್ಕೆ ಬರೋಬ್ಬರಿ 60 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಿದ್ದು, ಈ ಮೂಲಕ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಸ್‌ಯುವಿ ಕಾರುಗಳ ಮಾರಾಟದಲ್ಲೂ ಮುನ್ನಡೆ ಸಾಧಿಸಿದೆ.

Recommended Video - Watch Now!
Shocking Car Accident That Happened In Karunagappally, Kerala
2017ರಲ್ಲಿ ಫೋಕ್ಸ್‌ವ್ಯಾಗನ್ ಉತ್ಪಾದನೆ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?

ಆದರೂ ಕಳೆದ ವರ್ಷದಲ್ಲಿ ಡಿಸೇಲ್ ಕಾರುಗಳ ನಿರ್ಮಾಣದಲ್ಲಿನ ಕೆಲವು ಹಗರಣಗಳಿಂದ ವಿಶ್ವಮಟ್ಟದಲ್ಲಿ ಟೀಕೆಗೆ ಗುರಿಯಾಗಿ ಆಟೋ ಉದ್ಯಮದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದ ಫೋಕ್ಸ್‌ವ್ಯಾಗನ್ ಮಾಡಿದ ತಪ್ಪಿಗೆ ಕಾರು ಮಾರಾಟದಲ್ಲೂ ಮುಗ್ಗರಿಸಿದ್ದು ಸುಳ್ಳಲ್ಲ.

2017ರಲ್ಲಿ ಫೋಕ್ಸ್‌ವ್ಯಾಗನ್ ಉತ್ಪಾದನೆ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?

ಇದಾದ ಕೆಲ ದಿನಗಳಲ್ಲೇ ಎಚ್ಚೆತ್ತುಕೊಂಡ ಫೋಕ್ಸ್‌ವ್ಯಾಗನ್ ಸಂಸ್ಥೆಯು ಹೊಸ ಕಾರುಗಳ ಉತ್ಪಾದನೆ ಮೂಲಕ ಗ್ರಾಹಕರ ನಂಬಿಕೆಯನ್ನು ನಂಬಿಕೆ ಉಳಿಸಿಕೊಳ್ಳುವ ಕಾರ್ಯಕ್ಕೆ ಕೈಹಾಕಿದ್ದಲ್ಲದೇ ಉತ್ತಮ ಕಾರ್ಯಕ್ಷಮತೆಯ ಉತ್ಪನ್ನಗಳು ಪರಿಚಯಿಸುವ ಮೂಲಕ ಜನಮನ್ನಣೆ ಗಳಿಸುತ್ತಿದೆ.

ತಪ್ಪದೇ ಓದಿ-ವೇಗದಲ್ಲಿದ್ದ ಕಾರಿಗೆ ಅಡ್ಡ ಬಂದ ಬಾಲಕಿ- ಬಚಾವ್ ಮಾಡಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣ

2017ರಲ್ಲಿ ಫೋಕ್ಸ್‌ವ್ಯಾಗನ್ ಉತ್ಪಾದನೆ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?

ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಫೋರ್ಕ್ಸ್‌ವ್ಯಾಗನ್ ನಿರ್ಮಾಣದ ಕಾರುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಇದೇ ಕಾರಣಕ್ಕೆ ಮೊದಲ ಬಾರಿಗೆ ಒಂದು ವರ್ಷದ ಅವಧಿಯಲ್ಲಿ 60 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಲು ಸಾಧ್ಯವಾಗಿದೆ.

2017ರಲ್ಲಿ ಫೋಕ್ಸ್‌ವ್ಯಾಗನ್ ಉತ್ಪಾದನೆ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಲವು ಏಳು-ಬೀಳುಗಳೊಂದಿಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಅಷ್ಟೇ ಅಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲೂ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಹೊಂದಿದ್ದು, ಇತ್ತೀಚೆಗೆ ನಡೆದ ಕೆಲವು ಹಗರಣಗಳು ಕಾರು ಮಾರಾಟದ ಮೇಲೆ ಪರಿಣಾಮ ಬೀರಿತ್ತು. ಆದ್ರೆ ಮಾಡಿದ ತಪ್ಪನ್ನು ಕೆಲವೇ ದಿನಗಳಲ್ಲಿ ಸರಿಪಡಿಸಿಕೊಂಡ ಫೋಕ್ಸ್‌ವ್ಯಾಗನ್ ಸದ್ಯ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಬೃಹತ್ ಯೋಜನೆಯತ್ತ ದೃಷ್ಠಿ ನೆಟ್ಟಿದೆ.

ತಪ್ಪದೇ ಓದಿ- ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Read in Kannada about Volkswagen Produces Record Number Of Vehicles In 2017.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark