ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

Written By: Rahul TS

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ತನ್ನ ವೆಂಟೊ ಕಾರಿನ ಸ್ಪೋರ್ಟ್ಸ್ ಆವೃತ್ತಿಯನ್ನು ಬಹಿರಂಗಗೊಳಿಸಿದ್ದು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ಹೊಸ ಕಾರಿನ ವೈಶಿಷ್ಟ್ಯತೆಗಳು

ವೆಂಟೊ ರೆಗ್ಯುಲರ್ ಆವೃತ್ತಿಗಿಂತ ಸ್ಪೋರ್ಟ್ಸ್ ಆವೃತ್ತಿಯು ಹಲವಾರು ಹೊಸ ವಿನ್ಯಾಸಗಳನ್ನು ಪಡೆದಿದ್ದು, ಕಾರ್ಬನ್ ಫಿನಿಶ್ ಔಟ್‍‍ಸೈಡ್ ರೀರ್ ವ್ಯೂ ಮಿರರ್ಸ್, ಕಾರಿನ ಮುಂಭಾಗದ ಫೆಂಡರ್‍‍ಗಳಿಗೆ ಕ್ರೋಮ್ 'ಸ್ಪೋರ್ಟ್ಸ್' ಬ್ಯಾಡ್ಜಿಂಗ್, ಗ್ಲೋಸಿ ಬ್ಲಾಕ್ ರೂಫ್ ವ್ಯಾರ್ಫ್, 16 ಇಂಚಿನ ಪೋರ್ಟಾಗೊ ಅಲಾಯ್ ವೀಲ್‍‍ಗಳು, ಬ್ಲಾಕ್‍‍ಸೈಡ್ ಫಾಯಿಲ್ಸ್ ಮತ್ತು ಗ್ಲೋಸಿ ಬ್ಲಾಕ್ ರೀರ್ ಸ್ಪಾಯ್ಲರ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ಅಪ್‍‍ಗ್ರೇಡ್ ಆದ ವೆಂಟೊ ಸ್ಪೋರ್ಟ್ಸ್ ಕಾರಿನ ಒಳಭಾಗದ ವಿನ್ಯಾಸದ ಮಾಹಿತಿವು ತಿಳಿದುಬಂದಿಲ್ಲವಾದರೂ, ಟಾಪ್ ಆಫ್ ದಿ ಲೈನ್ ಹೈಲೈನ್ ಪ್ಲಸ್ ವೇರಿಯಂಟ್ ಪಡೆದಿರಲಿವೆ ಎನ್ನಲಾಗಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ವೆಂಟೊ ಹೈಲೈನ್ ಪ್ಲಸ್ ವೇರಿಯಂಟ್ ಸೀಟ್‍‍ಗಳಿಗೆ ಫೌಕ್ಸ್ ಲೆದರ್, ಲೆಧರ್ ಸುತ್ತುವರೆದ ಸ್ಟೀರಿಂಗ್ ವೀಲ್ಸ್, ಗೇರ್‍‍ಶಿಫ್ಟ್ ಕ್ನೋಬ್, ವಿದ್ಯುತ್ ಸಹಾಯದಿಂದ ಫೋಲ್ಡ್ ಮಾಡಬಹುದಾದ ORVMs, ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಜೊತೆಗೆ ರಿವರ್ಸ್ ಕ್ಯಾಮೆರಾ ಮತ್ತು ಮಿರರ್‍‍ಲಿಂಕ್ ಕನೆಕ್ಟಿವಿಟಿಯನ್ನು ಪಡೆದಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ಇವುಗಳ ಜೊತೆಗೆ, ಡ್ಯುಯಲ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ನೊಂದಿಗೆ ಎಎಸ್‍ಪಿ, ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಜೊತೆಗೆ ಡೇಟೈಮ್ ರನ್ನಿಂಗ್ ಲೈಟ್ಸ್ ಪಡೆದಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ಎಂಜಿನ್ ಸಾಮರ್ಥ್ಯ

ವೆಂಟೊ ಸ್ಪೋರ್ಟ್ಸ್ ಆವೃತ್ತಿಯು ತನ್ನ ರೆಗ್ಯುಲರ್ ಆವೃತ್ತಿಯ ಎಂಜಿನ್ ಹೋಲಲಿದ್ದು, 1.2 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ 103 ಬಿಹೆಚ್‍‍ಪಿ ಮತ್ತು 174 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 7 ಸ್ಪೀಡ್ ಡಿಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್‌ಗೆ ಜೋಡಿಸಲಾಗಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ಇದಲ್ಲದೇ 1.6 ಲೀಟರ್ ಎಮ್‍‍ಪಿಐ ಪೆಟ್ರೋಲ್ ಎಂಜಿನ್, 103 ಬಿಹೆಚ್‍‍ಪಿ ಮತ್ತು 153 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ಪೆಟ್ರೋಲ್ ಅಲ್ಲದೆ ಡೀಸೆಲ್ ಆವೃತ್ತಿಯಲ್ಲೂ ಕೂಡಾ ಲಭ್ಯವಿದ್ದು, 1.5 ಲೀಟರ್ ಟಿಡಿಐ ಎಂಜಿನ್ ಮಾದರಿಯು 108 ಬಿಹೆಚ್‍‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 7 ಸ್ಪೀಡ್ ಡಿಎಸ್‍‍ಜಿ ಗೇರ್‍‍ಬಾಕ್ಸ್ ಜೊತೆಗೆ ಜೋಡಿಸಲಾಗಿದೆ.

ಬರಲಿದೆ ಫೋಕ್ಸ್‌ವ್ಯಾಗನ್ ವೆಂಟೊ ಹೊಸ ಸ್ಪೋರ್ಟ್ಸ್ ಆವೃತ್ತಿ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ವೆಂಟೊ ಹೈಲೈನ್ ಪ್ಲಸ್ ಪೆಟ್ರೋಲ್ ವೇರಿಯಂಟ್‌ಗಳು ಎಕ್ಸ್ ಶೋರಂ ಪ್ರಕಾರ 8.19 ಲಕ್ಷದಿಂದ 10.53 ಲಕ್ಷ ಬೆಲೆ ಹೊಂದಿದ್ದು, ವೆಂಟೊ ಸ್ಪೋರ್ಟ್ಸ್ ಆವೃತ್ತಿಯು ಎಕ್ಸ್ ಶೂರಂ ಪ್ರಕಾರ 10 ಲಕ್ಷದಿಂದ 14 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ.

English summary
Volkswagen Vento Sport Edition Revealed.
Story first published: Monday, March 5, 2018, 15:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark