ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ನಾವೆಲ್ಲಾ ನೋಡಿರುವ ಪ್ರಕಾರ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ,ಎಂಪಿವಿ ಕಾರುಗಳಲ್ಲಿ ಮಾತ್ರ ರಿಯರ್ ವೈಪರ್ ಬಳಕೆ ಮಾಡಲಾಗುತ್ತಿದ್ದು, ಸೆಡಾನ್ ಕಾರುಗಳಲ್ಲಿ ಮಾತ್ರ ರಿಯರ್ ವೈಪರ್ ಬಳಕೆ ಮಾಡದಿರುವುದು ಕೆಲವರಿಗೆ ಕುತೂಹಲ ಹುಟ್ಟುಹಾಕದೇ ಇರಲಾರದು.

By Praveen Sannamani

ಬಹುತೇಕ ವಾಹನ ಪ್ರಿಯರಿಗೆ ಈ ರೀತಿಯಾದ ಸಹಜ ಪ್ರಶ್ನೆಗಳು ಕಾಡದೇ ಇರಲಾರದು. ಹೌದು.. ನಾವೆಲ್ಲಾ ನೋಡಿರುವ ಪ್ರಕಾರ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ, ಎಂಪಿವಿ ಕಾರುಗಳಲ್ಲಿ ಮಾತ್ರ ರಿಯರ್ ವೈಪರ್ ಬಳಕೆ ಮಾಡಲಾಗುತ್ತಿದ್ದು, ಸೆಡಾನ್ ಕಾರುಗಳಲ್ಲಿ ಮಾತ್ರ ರಿಯರ್ ವೈಪರ್ ಬಳಕೆ ಮಾಡದಿರುವುದು ಕೆಲವರಿಗೆ ಕುತೂಹಲ ಹುಟ್ಟುಹಾಕದೇ ಇರಲಾರದು.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಹಾಗಾದ್ರೆ ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಯಾಕೆ ಮಾಡುವುದಿಲ್ಲ. ಇಂತಹ ಪ್ರಶ್ನೆ ನಿಮ್ಮನ್ನು ಅಷ್ಟೇ ಅಲ್ಲಾ ನಮಗೂ ಕೂಡಾ ಮೊದಮೊದಲು ಕಾಡಿತ್ತು. ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಹೋದಾಗ ಸಿಕ್ಕ ಕೆಲವು ಉತ್ತರಗಳು ವಾಸ್ತವಾಂಶದ ಜೊತೆ ಜೊತೆಗೆ ಕುತೂಹಲ ಹುಟ್ಟುಹಾಕಿದ್ದು ಮಾತ್ರ ಸುಳ್ಳಲ್ಲ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಮಾರುಕಟ್ಟೆಯಲ್ಲಿರುವ ಕೆಲವು ಕಾರುಗಳನ್ನೇ ತೆಗೆದುಕೊಳ್ಳಿ. ಮಾರುತಿ ಸುಜುಕಿ ನಿರ್ಮಾಣದ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಕಂಡುಬರುವ ರಿಯರ್ ವೈಪರ್‌ಗಳನ್ನು ಡಿಜೈರ್ ಸೆಡಾನ್ ಕಾರುಗಳಲ್ಲಿ ನೋಡಲು ಸಾಧ್ಯವೇ ಇಲ್ಲಾ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಅದೇ ರೀತಿಯಾಗಿ ಫೋಕ್ಸ್‌ವ್ಯಾಗನ್ ಪೊಲೊದಲ್ಲಿ ರಿಯರ್ ವೈಪರ್ ಕಂಡುಬಂದ್ರೆ ವೆಂಟೋ ಸೆಡಾನ್‌ನಲ್ಲಿ ಈ ಸೌಲಭ್ಯ ಸಿಗಲಾರದು. ಇನ್ನು ಟಾಟಾ ಟಿಯಾಗೋ-ಟಿಗೋರ್, ಫೋರ್ಡ್ ಫಿಗೊ- ಆಸ್ಪೈರ್ ಸೆಡಾನ್‌ಗಳಲ್ಲೂ ಅದೇ ರೀತಿ ಇರುವುದು ಸಾಮಾನ್ಯ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಹೀಗಾಗಿ ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಯಾಕೆ ಮಾಡುತ್ತಿಲ್ಲ ಎನ್ನುವ ಬಗ್ಗೆ ಹಲವು ಆಯಾಮಗಳಲ್ಲಿ ಚರ್ಚಿಸಿದಾಗ ಮೊದಲಿಗೆ ಬಂದ ಉತ್ತರ ಇದೇನಾ ಅದಕ್ಕೆ ಕಾರಣ ಅಂತಾ ಅಚ್ಚರಿ ಆಗಿತ್ತು.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಸಾಮಾನ್ಯವಾಗಿ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ಕಾರುಗಳ ವಿಂಡ್‌ಸ್ಕ್ರೀನ್ ವಿನ್ಯಾಸವು 90ಡಿಗ್ರಿ ಮಾದರಿಯಲ್ಲಿ ಮೇಲ್ಮುಖವಾಗಿರುವುದನ್ನು ನೀವು ನೋಡಿದ್ದಿರಿ. ಹೀಗಿರುವಾಗ ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳಲ್ಲಿನ ವಿಂಡ್‌ಸ್ಕೀನ್‌ಗಳಲ್ಲಿ ರಿಯರ್ ವೈಪರ್ ಬಳಕೆ ಸೂಕ್ತವಾಗಿದೆ ಎನ್ನಬಹುದು.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಅದೇ ನೀವು ಸೆಡಾನ್ ಕಾರುಗಳ ವಿಂಡ್‌ಸ್ಕ್ರೀನ್ ವಿನ್ಯಾಸವನ್ನು ಗಮನಸಿ. ಅದು ಕಾರಿನ ಬೂಟ್ ಸ್ಪೇಸ್ ಮತ್ತು ರೂಫ್ ಟಾಪ್‌ಗೆ ಹೊಂದಿಕೊಂಡಂತೆ ಇಳಿಮುಖವಾಗ ವಿನ್ಯಾಸವನ್ನು ಪಡೆದಿರುತ್ತೆ. ಇದೇ ಕಾರಣಕ್ಕೆ ಸೆಡಾನ್ ವಿಂಡ್‌ಸ್ಕ್ರಿನ್‌ಗಳಲ್ಲಿ ಮಳೆ ನೀರು ಮತ್ತು ಧೂಳನ್ನು ಅಷ್ಟಾಗಿ ಹಿಡಿಯುದಿಲ್ಲ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಇದೇ ಕಾರಣಕ್ಕಾಗಿ ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಧೂಳು ಮತ್ತು ಮಳೆ ನೀರಿನಿಂದಾಗಿ ಹಿಂಬದಿಯ ನೋಟಕ್ಕೆ ತೊಂದರೆಯಾಗುವ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ಕಾರುಗಳಲ್ಲಿ ರಿಯರ್ ವೈಪರ್ ಹೆಚ್ಚು ಸೂಕ್ತವಾಗಿದೆ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಸೆಡಾನ್ ಕಾರುಗಳಲ್ಲಿ ಒಂದು ವೇಳೆ ರಿಯರ್ ವೈಪರ್ ಬಳಕೆ ಮಾಡಬೇಕು ಎಂದಾದಲ್ಲಿ ಅದು ತಾಂತ್ರಿಕ ಅಡಚಣೆಗೂ ಕಾರಣವಾಗಬಲ್ಲದು. ಈ ಕಾರಣಕ್ಕೂ ಕೂಡಾ ರಿಯರ್ ವೈಪರ್ ಬಳಕೆಯಿಂದ ಹಿಂದೆ ಸರಿಯಲಾಗಿದೆ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಇಂಧನ ಕಾರ್ಯಕ್ಷಮತೆ ಮೇಲೆ ಪರಿಣಾಮ

ಸೆಡಾನ್ ಕಾರುಗಳಲ್ಲಿ ಏಕೆ ರಿಯರ್ ವೈಪರ್ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆಗೆ ಇದು ಕೂಡಾ ಒಂದು ಪ್ರಮುಖ ವಿಚಾರ. ಒಂದು ವೇಳೆ ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡಿದಲ್ಲಿ ಅದು ಕಾರಿನ ಮೈಲೇಜ್ ಮೇಲೂ ಹೊಡೆತ ಬಿಳುತ್ತೆ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಹಾಗಾದ್ರೆ ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡಿದ್ರೆ ಇಂಧನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬಿರುವುದುದಿಲ್ಲವೇ ಎಂದು ನೀವು ಕೇಳಬಹುದು. ಅದಕ್ಕೂ ಇಲ್ಲಿ ಉತ್ತರವಿದೆ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್‌ಗಳಲ್ಲಿ ರಿಯರ್ ವೈಪರ್ ಬಳಕೆ ಮಾಡುವ ಆಟೋ ಉತ್ಪಾದಕರು ಇಂಧನ ದಕ್ಷತೆಗೆಗಾಗಿ ಕೆಲವು ಸೌಲಭ್ಯಗಳನ್ನು ಕಡಿತ ಮಾಡಿರುತ್ತಾರೆ. ಇದೇ ಕಾರಣಕ್ಕೆ ಸೆಡಾನ್ ಕಾರುಗಳ ಮೈಲೇಜ್ ಪ್ರಮಾಣವು ಅಗತ್ಯವಾಗಿ ಎಸ್‌ಯುವಿ ಕಾರುಗಳಿಂತ ಹೆಚ್ಚಿರುತ್ತೆ.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಅದೇ ನೀವು ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರುಗಳನ್ನು ಹೋಲಿಕೆ ಮಾಡಿದಾಗ ಹ್ಯಾಚ್‌ಬ್ಯಾಕ್ ಕಾರುಗಳ ಇಂಧನ ಕಾರ್ಯಕ್ಷಮತೆ ಹೆಚ್ಚಿರುತ್ತಲ್ಲದೇ ಸೆಡಾನ್ ಮಾದರಿಗಳಿಂತ ಕಡಿಮೆ ಮಟ್ಟದ ಸೌಲಭ್ಯಗಳನ್ನು ಹೊಂದಿರುವುದನ್ನು ಕಾಣಬಹುದು.

ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆ ಮಾಡೊದೇ ಇಲ್ಲಾ- ಹಾಗಾದ್ರೆ ಇದಕ್ಕೆ ಕಾರಣ ಏನು?

ಒಟ್ಟಿನಲ್ಲಿ ಸೆಡಾನ್ ಕಾರುಗಳಲ್ಲಿ ರಿಯರ್ ವೈಪರ್ ಬಳಕೆಯು ಅನಗತ್ಯ ಎಂಬ ಕಾರಣಕ್ಕೆ ಆಟೋ ಉತ್ಪಾದಕರು ರಿರಯರ್ ವೈಪರ್ ಬಳಕೆ ಕೈಬಿಟ್ಟಿದ್ದು, ಇತ್ತೀಚೆಗೆ ಕೆಲವು ಮಾಡಿಫೈ ವಾಹನ ಪ್ರಿಯರು ಕಾರಿನ ಅಂದವನ್ನು ಹೆಚ್ಚಿಸಲು ರಿಯರ್ ವೈಪರ್ ಬಳಕೆ ಮಾಡುತ್ತಿರುವುದನ್ನ ನಾವು ಅಲ್ಲಗಳೆಯುವಂತಿಲ್ಲ.

Most Read Articles

Kannada
Read more on auto tips
English summary
Why Don't Sedans Have Rear Wipers?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X