ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಮಯವಾಗಲು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖ್ರೀದಿ ಮಾದುವವರಿಗೆ ಮತ್ತು ಉತ್ಪಾದನೆ ಮಾಡುವವರಿಗೆ ಹಲವಾರು ಸ್ಕೀಮ್‍ಗಳನ್ನು ತರುತ್ತಿದೆ. ಆದುದರಿಂದ ಹಲವಾರು ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಸ್ಕೂಟರ್‍‍ಗಳನ್ನು ಬಿಡುವುದಕ್ಕು ಮುನ್ನ ಸಾರ್ವಜನಿಕರ ಸಾರಿಗೆಗಾಗಿ ನಾವು ದಿನನಿತ್ಯ ಬಳಸುವ ಬಸ್ಸುಗಳು ಮತ್ತು ಆಟೋ ರಿಕ್ಷಾಗಳಿ ಎಲೆಕ್ಟ್ರಿಕ್ ಮಾದರಿಯಲ್ಲಿ ಮಾರ್ಪಾಡಗಬೇಕಿವೆ. ಇವುಗಳು ಮೊದಲಿಗೆ ವಿದ್ಯುತ್ ವಾಹನಗಳಾಗಿ ಬದಲಾದರೆ ಅಧಿಕವಾಗುತ್ತಿರುವ ವಾಯು ಮಾಲಿನ್ಯವನ್ನು ಒಂದು ಮಟ್ಟಕ್ಕೆ ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಕಳೆದ ವರ್ಷ ಮಹೀಂದ್ರಾ ಸಂಸ್ಥೆಯು ತಮ್ಮ ಟ್ರಿಯೋ ಎಂಬ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಬಿಡುಗಡೆ ಮಾಡಿತ್ತು.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಬಜಾಜ್ ಆಟೋ ಸಂಸ್ಥೆಯು ಸಹ ತಮ್ಮ ಹೊಸ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಬಿಡುಗಡೆ ಮಾಡುವ ಕಾತುರದಲಿದ್ದು, ಮಹೀಂದ್ರಾ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಟಾಂಗ್ ನೀಡಲು ನಮ್ಮ ಬೆಂಗಳೂರು ನಗರದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಈ ಎಲೆಕ್ಟ್ರಿಕ್ ರಿಕ್ಷಾವನ್ನು ಮೊದಲ ಬಾರಿಗೆ ಕಳೆದ ವರ್ಷ ನಡೆದ 2018ರ 'ಮೂವ್ ಸಮ್ಮಿತ್' ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಮುಂಬೈನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ನಂತರ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುವುದಕ್ಕು ಒಂದು ಕಾರಣವಿದೆ. ಅದೇನೆಂದರೆ ಬಾಷ್, ಕಾಂಟಿನೆಂಟಲ್ ಸೇರಿದಂತೆ ಇನ್ನು ಹಲವಾರು ಎಲೆಕ್ಟ್ರಿಕ್ ಆಟೋಮೋಟಿವ್ ಸಂಸ್ಥೆಗಳು ನಮ್ಮ ಬೆಂಗಳೂರಿನಲ್ಲೆಯೆ ಇರುವುದರಿಂದ ಇಲ್ಲಿಯೆ ಎಲೆಕ್ಟ್ರಿಕ್ ತಮ್ಮ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದರ ಕಡೆಗೆ ಬಜಾಜ್ ಸಂಸ್ಥೆಯು ಯೋಜಿಸುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ಆಟೋ ಸಾಧಾರಣ ಬಜಾಜ್ ಆಟೋ ರಿಕ್ಷಾಗಳಂತೆಯೆ ಕಾಣಿಸುತ್ತಿದ್ದು, ಆಕಾರದಲ್ಲಿ ಕೊಂಚ ಚಿಕ್ಕದಾಗಿರುವ ಹಾಗೆ ಕಾಣಿಸುತ್ತದೆ. ಹಾಗೆಯೆ ಸಧಾರಣ ಎಲೆಕ್ಟ್ರಿಕ್ ಆಟೋಗಳಲ್ಲಿರುವ ಹಗೆ ಟೈಲ್ ಪೈಪ್ ಈ ರಿಕ್ಷಾಗಳಲ್ಲಿ ಇರುವುದಿಲ್ಲ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಬಜಾಜ್ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಸಾಫ್ಟ್ ಟಾಪ್, ಹೆಚ್ಚು ಗೋಚರಿಸುವ ಟೈಲ್ ಲ್ಯಾಂಪ್ಸ್ ಮತ್ತು ಇನ್ನಿತರೆ ಉಪಕರಣಗಳನ್ನು ಪಡೆದಿರಲಿದ್ದು, ಇವುಗಳ ಜೊತೆಗೆ ಡಿಜಿಟಲ್ ಇನ್ಸ್ಟ್ರೂಮೆಂಟ್, ಫೈರ್ ಎಕ್ಸ್ಟಿಂಗ್ಯೂಶರ್ ಮತ್ತು ಪವರ್‍‍‍ಫುಲ್ ಹೆಡ್‍ಲೈಟ್ಸ್ ಸೇರಿದಂತೆ ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಬಜಾಜ್ ಆರ್‍ಇ ಎಲೆಕ್ಟ್ರಿಕ್ ರಿಕ್ಷಾಗಳು ಗಂಟೆಗೆ 45 ಕಿಲೋಮೀಟರ್‍‍ನ ಟಾಪ್ ಸ್ಪೀಡ್ ಅನು ಪಡೆದುಕೊಂಡಿದ್ದು, ಒಂದು ಬಾರಿಯ ಚಾರ್ಜ್‍ಗೆ ಸುಮಾರು 120 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು. ಡ್ರೈವರ್ ಮತ್ತು 3 ಪ್ಯಾಸೆಂಜರ್‍‍ಗಳು ಕೂರಬಹುದಾದ ಸ್ಥಳಾವಕಾಶವಿದ್ದು, ಸುಮಾರು 400 ಕಿಲೋಗ್ರಾಂನ ತೂಕವನ್ನು ಈ ಆಟೋಗಳು ಹೊರಬಲ್ಲದು.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಈ ಎಲೆಕ್ಟ್ರಿಕ್ ರಿಕ್ಷಾಗಳಲ್ಲಿ ನೀಡಲಾದ 48 ವೋಲ್ಟ್ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ತೆಗೆದುಹಾಕಬಹುದಾಗಿದ್ದು, ಇವುಗಳು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 6 ರಿಂದ 7 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಎಲೆಕ್ಟ್ರಿಕ್ ರಿಕ್ಷಾ

ಬಜಾಜ್ ಎಲೆಕ್ಟ್ರಿಕ್ ಆಟೊ ರಿಕ್ಷಾಗಳು ಕಳೆದ ತಿಂಗಳು ಬಿಡುಗಡೆಗೊಂಡ ಮಹೀಂದ್ರಾ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಪೈಪೋಟಿ ನೀಡಲಿದ್ದು, ಇನ್ನಿತರೆ ವಾಹನ ತಯಾರಕ ಸಂಸ್ಥೆಗಳು ಸಹ ಎಲೆಕ್ಟ್ರಿಕ್ ಆಟೋಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿದ್ದಾರೆ. ಒಟ್ಟಿನಲ್ಲಿ ಈ ಎಲೆಕ್ಟ್ರಿಕ್ ಆಟೋಗಳು ಬಿಡುಗಡೆಗೊಂಡರೆ ಮೆಟ್ರೋ ಪಾಲಿಟನ್ ನಗರಗಳಲ್ಲಿರುವ ಬೇರೆ ರಿಕ್ಷಾಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಕಾಯ್ದು ನೋಡಬೇಕಿದೆ.

Soucre: Rushlane

Most Read Articles

Kannada
English summary
Bajaj ElecTric Rikshaw Spotted In Bengaluru - Rival To Mahindra Treo. Read In Kannada
Story first published: Monday, April 1, 2019, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X